Skip to main content

ಮರೆತೇನೆಂದರೂ ಮರೆಯಲಿ ಹ್ಯಾಂಗಾ?

ಬರೆದಿದ್ದುJune 13, 2013
2ಅನಿಸಿಕೆಗಳು

ಬಿಗಿದ ತುಟಿಗಳು , ಚಿರತೆ ಕಂಗಳೂ ಅವನ ಮುಖ್ಯ ಆಕರ್ಷಣೆಯಾಗಿತ್ತು, ತಿರುಗಿ ನೋಡುವಂತಹ ವ್ಯಕ್ತಿತ್ವವಲ್ಲದಿದ್ದರೂ ಸಹಜತೆ ಒಲ್ಲೆ ಅನ್ನಲ್ಲೊಲ್ಲದ ವ್ಯಕ್ತಿ ಆತ ಎತ್ತರದ ಆಳಾದರೂ ಸಾಧಾರಣವಾಗಿ ಶೋಭಿಸುತ್ತಿದ್ದನು,ಇಷ್ಟೆಲ್ಲಾ ಪುರಾಣ ಯಾಕೆ ಅಂತೀರಾ ವಿಷಯ ಇದೆ ? ಸರಿ ಸುಮಾರು ೧೦ - ೧೫ ದಿನಗಳಿಂದ ಆಫೀಸಿನ ಎದುರು ಸರಿಯಾಗಿ ಕಾಣಸಿಗುತ್ತಿದ್ದ ವ್ಯಕ್ತಿಯನ್ನು ಎಲ್ಲೋ ನೋಡಿರ ಬಹುದೆಂದು ಊಹಿಸಿದರೂ  ಎಲ್ಲಿ ಎಂದು ನೆನೆಸಿಕೊಳ್ಳಲಾರದೆ ತಲೆ ಕೆರೆದು ಕೊಂಡಿದ್ದಷ್ಟೇ ಬಂತು ನೆನಪಾಗಿರಲಿಲ್ಲ, ಅದೂ ಅಲ್ಲದೇ ಪರಿಚಯವಿಲ್ಲದವರೊಡನೆ ಮಾತು ಕತೆ, ನೋಟ, ಮುಗುಳ್ನಗೆ ಇನ್ನೂ ದೂರದ ಮಾತೇ ಸರಿ , ಹಾಗೇ ಆಫೀಸು ಶುರುವಾಗುವ ಮುನ್ನ ಬಂದು ನಿಂತು ನೋಡಿ ಹೋಗುತ್ತಿದ್ದ ಅನ್ನುವುದು ಬಿಟ್ಟರೆ ಬೇರೇನೂ ವಿಶೇಷವಿರಲಿಲ್ಲ , ದಿನಾ ನಿಲ್ಲುತ್ತಿದ್ದ ವ್ಯಕ್ತಿ ನನ್ನನ್ನೇ ಗಮನಿಸುತ್ತಿದ್ದಾನೋ ಇಲ್ಲ ಬೇರೇ ಯಾರಾದರನ್ನೋ ಎಂದೂ ಸುಮ್ಮನಾಗಲೂ ಆತ ನನ್ನನ್ನು ನೋಡಿ ನಾ ಒಳಗೆ ಹೋದ ಕೂಡಲೇ ಹೊರಟು ಹೋಗುತ್ತಿದ್ದ , ಸಹಜವಾಗಿಯೋ ಅಸಹಜವಾಗಿಯೋ ನೋಟ ಅತ್ತ ವಾಲುತ್ತಿತ್ತೆಂದರೆ ತಪ್ಪಾಗಲಾರದು ಮಾನವ ಸಹಜ ಕುತೂಹಲವೆಂದಾದರೂ ಮನಸ್ಸು ಮತ್ತಿನ್ನೇನನ್ನೋ ಒತ್ತಿ ಹೇಳುತಿತ್ತು. ಆದರೆ ಬುದ್ಧಿ ಒಪ್ಪುತ್ತಿರಲಿಲ್ಲ, ಕಾರಣ ಮೊದಲ ನೋಟದಲ್ಲೇ ಅವನನ್ನು ತೆಗೆದು ಹಾಕಬಹುದಿತ್ತು. ಹೀಗೆ ಸುಮಾರು ದಿನ ಕಳೆದರು  ಅಂತ ಭಾರೀ ಬದಲಾವಣೆಗಳೇನು ಆಗಲಿಲ್ಲ, ಎಂದಿನಂತೆ ನಾನೂ ಸುಮ್ಮನಾದೆ ಆದರೆ ಇದ್ದಕ್ಕಿದಂತೆ ಆ ವ್ಯಕ್ತಿ ಕಾಣೆಯಾದ ಅರಿವಿಲ್ಲದೇ ಒಂದು ಬಗೆಯ ತಳಮಳ ಮೂಡಿದರು ಒಳ್ಳೆಯದೇ ಆಯಿತೆಂದು ಸುಮ್ಮನಾದರೂ ಮನಸ್ಸೇಕೋ ಒದ್ದಾಡಿತು, ಬೇರೆ ದಾರಿಯಿಲ್ಲದೇ ಸುಮ್ಮನಾದೇ , ಕೆಲ ದಿನ ಉರುಳಿತು ಸಹಜ ಜೀವನದತ್ತ ಮುಖಮಾಡಿದ ನನಗೆ ಒಂದು ದಿನ ಸರ್ಪೈಸ್ ಕಾದಿತ್ತು ಆ ವ್ಯಕ್ತಿ ತನ್ನ ಜಾಗದಲ್ಲಿ ನಿಂತಿದ್ದ ಅದೇಕೋ ಸುಮ್ಮನೆ ಹೋಗುತ್ತಿದ್ದ ನನ್ನ ಕಾಲುಗಳು ಮುಂದೆ ಅಡಿಯಿಡಲಾರದೆ ನಿಂತವು , ಆದರೂ ಮುನ್ನುಗ್ಗ ತೊಡಗಿದ ನನ್ನನ್ನು ಆತ ಮುಗುಳ್ನಕ್ಕು ಹಾಯ್ ಹೇಳಿದಾಗ ಹಿಂದೆ ಮುಂದೆ ನೋಡಿ ಹೊರಡು ಹೋದೆ, ಆತ ಮಾತ್ರ ನಗುತ್ತಿರುವುದನ್ನು ನಾನು ಗಮನಿಸದಿರಲಾಗಲಿಲ್ಲ. 


ಅಂದೇ ಸಂಜೆ ಹೊರ ಬಂದಾಗ ಕಂಡ ಆತ ನನ್ನೆಡೆಗೆ ಬಂದು ನೀವು ಇಷ್ಟು ಪುಕ್ಕಲು ಅಂತ ಗೊತ್ತಿರಲಿಲ್ಲ !! ಅನ್ನುವುದೇ . ಯಾರು , ಯಾಕೆ, ನೀವ್ಯಾರು ? ಎಲ್ಲಾ ಒಟ್ಟಿಗೆ ಕೇಳಿದಾಗ ಹೇಳುತ್ತೀನಿ ಇರಿ . ಅಷ್ಟು ದಿನದಿಂದ ಬರುತ್ತಿದ್ದೇನೆ ಒಂದಿನಾದರೂ ಮಾತಾಡಿಸ ಬೇಕು ಅನ್ನಿಸಲಿಲ್ಲವಲ್ಲಾ ನಿಮಗೆ,  ಬರೋದು ಬೇಡ ನನ್ನ ಕಂಡರೆ ಆಗೋಲ್ಲವೇನು ಅಂತ ೨-೩ ದಿನ ಸುಮ್ಮನಾದೆ ಆದರೆ ಹಾಳು ಮನಸ್ಸು ಕೇಳಬೇಕಲ್ಲ ಬಂದೆ ಅಂದ ? ನಗು ಬಂದರು ತಡೆದು ನೀವ್ಯಾರು ಅದು ಮೊದಲು ಹೇಳಿ ಅಂದೆ ? ಕೇಳಬೇಕಾದ್ದೆ ಬಿಡಿ. 


ಇತ್ತೀಚೆಗೆ ಸಕಲೇಶಪುರದ ಕಡೆ ಬರಲಿಲ್ಲ ಅಂದಾಗ ನಾನು ಅದಾ ಅದೂ ಬೇರಿಯವರಿಗೆ ಅಲಾಟ್ ಆಗಿದೆ ಅದಕ್ಕೆ  ಅಂದು ಬಿಟ್ಟೆ  ಯಾರೋ ತುಂಬಾ ಪರಿಚಿತರೊಂದಿಗೆ ಮಾತನಾಡಿಬಿಟ್ಟಂತೆ ಮತ್ತೆ ನಾಲಿಗೆ ಕಚ್ಚಿ ಕೊಂಡೆ, ನಂತರ ಅವನು ನಗ ತೊಡಗಿದ ,  ಈಗಲಾದರೂ ನೆನಪಿಸಿಕೊಳ್ಳಿ ಎಂದ, ತಲೆ ಕೆರೆದು ಕೊಂಡಿದ್ದಷ್ಟೇ ಬಂತು ನೆನಪಾಗಲಿಲ್ಲ, ಬೇರೆಯವರಾಗಿದ್ದರೆ ಮಾತಾಡುತ್ತಿದ್ದ ರೀತಿ ಬೇರೆ ಇರುತ್ತಿತೇನೋ ಆದರೆ ಅದೇಕೋ ಯಾರು ಅಂತ ತಿಳಿಯದಿದ್ದರೂ ಸಹ ಇವನ ಮುಂದೆ ತುಟಿತಪ್ಪಿ ಮಾತಾಡಲು ಮನವೇಕೋ ಒಪ್ಪುತ್ತಿಲ್ಲ. ಭಾರವಾದ ಮನಸ್ಸಿನಿಂದ ಹಾಗೂ ಮೌನವಾಗಿ ಹೆಚ್ಚೆ ಹಾಕ ತೊಡಗಿದೆ ಬಹುದಿನಗಳ ನಂತರ ಸಕಲೇಶಪುರದ  ನನ್ನ ನೆನೆಪುಗಳನ್ನು ಅವನು ಕೆದಕ್ಕಿದ್ದ , ಅವನಾವ ಸ್ಥಿತಿಯಲ್ಲಿದ್ದ ಎಂಬುದರ ಅರಿವು ನನಗಿರಲಿಲ್ಲ ನನ್ನ ಮನಸ್ಸು ಮಾತ್ರ ಮೌನದ ಮರೆ ಹೊಕ್ಕಿತ್ತು. ಅಲ್ಲಿಂದ ಬಂತು ಬಿಟ್ಟೆ ಅವನ ಪ್ರತಿಕ್ರಿಯೆಗೆ ಕಾಯುವ ಮನಸ್ಸಿರಲಿಲ್ಲ , ಮನಸ್ಸು ವಿವ್ಹಲವಾಗಿತ್ತು.


ಸಹಜವಾಗಿಯೇ ನಾನು ಪ್ರಕೃತಿಪ್ರಿಯೆ, ಸಾಹಿತ್ಯ ಪ್ರಿಯೆ , ಇನ್ನೂ ಭಾವಗೀತೆಗಳೆಂದರೆ ಪ್ರಾಣ ಇಂತಹ ನನಗೆ ಸಕಲೇಶಪುರಕ್ಕೆ ಆಡಿಟ್ ಹೋಗಲು ಅವಕಾಶ ಸಿಕ್ಕರೆ ಬಿಟ್ಟವರುಂಟೆ ಆ ಹಸಿರು ಮಳೆ , ತುಂಬಾ ಮುಖ್ಯವಾದ ನನ್ನ ಜೀವದಗೆಳತಿ ಅಲ್ಲಿದ್ದಳು 


೧೫ ದಿನಗಳ ಆಡಿಟ್ ಅದು ಇದು ೩ನೇ ಬಾರಿ ಹ್ಯಾಟ್ರಿಕ್ ನನ್ನ ಪಾಲಿಗೆ ನನ್ನ ಕೆರಿಯರ್ ನಲ್ಲಿ ವಿಶೇಷವು ಹೌದು. ಪರಿಸರದ ಜೊತೆಗೆ, ಸ್ನೇಹ, ಕೆರಿಯರ್ ಅವಕಾಶ ಎಲ್ಲ ಒಟ್ಟೊಟ್ಟಿಗೆ ಸೇರಿ ನನಗೊಂದು ಸುವರ್ಣ ಅವಕಾಶ ಒದಗಿಸಿದ್ದವು. 


ಕಾಲೇಜಿನ ಆಡಿಟ್ ಆದ್ದರಿಂದ ಮೊದ ಮೊದಲು ಸಹಜವಾಗಿ ಮೈದಾನದತ್ತ ಹೊರಳುತ್ತಿದ್ದ ಕಣ್ಣು ಅಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಸ್ಟಂಟ್ ಬಾಯ್ಸ್ ಗಳನ್ನು ನೋಡುತ್ತಾ ಕೂರುತ್ತಿದ್ದೆವು , ಅಲ್ಲಿನವಳೇ ಆದ ನನ್ನ ಸ್ನೇಹಿತೆ ಅಲ್ಲಿಯೇ ನನ್ನ ಕೆಲಸಕ್ಕೆ ಜೊತೆಯಾಗುತ್ತಿದ್ದಳು, ನನ್ನ ಈ ಬೈಕ್ ಹುಚ್ಚುನೋಡಿ ಕೆಲಮೊಮ್ಮೆ ಅವಳು ಗೇಲಿ ಮಾಡಿದ್ದು ಇದೆ ಆದರೂ ಅವಳಿಂದ ಉಪಕಾರವು ಆಗಿತ್ತು ಕಾರಣ ಅವಳೇ ಹೇಳಿದ್ದು ಅವರೂ ಯಾವುದೋ ರೇಸ್ ಗಾಗಿ ಬೆಳಗ್ಗೆ ಸಂಜೆ ಪ್ರಾಕ್ಟಿಸ್ ಮಾಡುತ್ತಾರೆಂದು ಅವತ್ತಿನಿಂದ  ಬೆಳಗ್ಗೆ ಸಂಜೆ ನಾನು ಅವರಿಗೆಲ್ಲಾ ಖಾಯಂ ಅಭಿಮಾನಿಯಾಗಿಬಿಟ್ಟೆ.  ಅವರು ಹೋಗುವವರೆಗೂ ನಾನು ಬರುತ್ತಿರಲಿಲ್ಲ . ಇಲ್ಲಿ ನನಗೆ ಬೈಕ್ ಸ್ಟಂಟ್ ಗಿಂತ ಆ ಬ್ಲ್ಯೂ ಜಸ್ಸಿ ನನ್ನ ಮುಖ್ಯ ಆಕರ್ಷಣೆಯಾಗಿತ್ತು. ಕಾರಣಗೊತ್ತಿಲ್ಲ.


ಪ್ರೀತಿಯೆಂಬುದು ಕೆಲವರಿಗೆ ಒಂದು ಕ್ಷಣದಲ್ಲಾದರೆ, ಕೆಲವರಿಗೆ ೨ -೩ ವರುಷ ಜೊತೆಗ ಸುತ್ತಿದರು ಆ ಪುಣ್ಯ ಸಿಗುವುದಿಲ್ಲ , ಆದರೆ ನಮ್ಮದು ಮೊದಲ ನೋಟದ ಪ್ರೀತಿ( ಬ್ಲ್ಯೂ ಜರ್ಸಿಯೊಂದಿಗೆ) , ಸಾರಿ ನನ್ನದು (ಒನ್ ವೇ ಲವ್) ನನಗೆ ಬೈಕ್ ಸ್ಟಂಟ್ ಅಂದರೆ ಇಷ್ಟ , ಮೊದಲು ಇಷ್ಟ  ಆಗಿತ್ತು ಆಮೇಲೆ ತುಂಬಾ ಇಷ್ಟವಾಗ ತೊಡಗಿತ್ತು ಯಾವ ಮಟ್ಟಿಗೆ ಎಂದರೆ ನಾನೆಲ್ಲಿದ್ದೇನೆ ಎಂಬುದರ ಅರಿವು ಇಲ್ಲದೇ ಅತ್ತ ಕಣ್ಣು ಹೊರಳುತ್ತಿತ್ತು . 


ಪ್ರಾಕ್ಟಿಸಿಗೇ ಬರುವಾಗಲೇ ತುಂಬಾ ತುಂಬಾ ಪ್ಯಾಕ್ ಆಗಿಬರುತ್ತಿದ್ದರಿಂದ ಅವರನ್ನು ಅವರ ಜರ್ಸಿ ಅಥವಾ ಬೈಕ್ಗಳಿಂದ ಮಾತ್ರ ಗುರುತು ಹಿಡಿಯುತ್ತಿದ್ದೆವು ಬರುತ್ತಿದ್ದ ೫ -೬ ಜನರಲ್ಲಿ ಒಬ್ಬ ಮಾತ್ರ ಅವರೆಲ್ಲಾ ಹೋದರು ಹೋಗುತ್ತಿರಲ್ಲಿಲ್ಲ, ಅದೇ ಬ್ಲ್ಯೂ ಜರ್ಸಿ ಅವರೆಲ್ಲಾ ನಡಿಲೀ ನಡಿಲೀ ಅಂದು ನಗುತ್ತಾ ಹೋಗುತ್ತಿದ್ದರೂ , ನಾನು ಮಾತ್ರ ಅವರನ್ನೆಲ್ಲಾ ಶಪಿಸುತ್ತಿದ್ದೆ , ಪ್ರಾಕ್ಟಿಸ್ ಮಾಡುವವರನ್ನು ಕಂಡರು ಇವರಿಗೆ ಆಗೋಲ್ಲ ಅಂತ, ಅವನೋ  ವಿಧ ವಿಧವಾದ ಸ್ಟಂಟ್ ಮಾಡುತ್ತಲೇ ಇರುತ್ತಿದ್ದ ನಾ ಅವನು ಹೋಗುವವರೆಗೇ ನಾನು ಬರುತ್ತಿರಲಿಲ್ಲ ಮೊದಲು ಮೊದಲು ತುಂಬಾ ಆಸಕ್ತಿ ಇರಬೇಕೆನಿಸುತ್ತಿದ್ದ ನನಗೇ ಒಂದು ದಿನ ನನ್ನ ಗೆಳತಿ ಬಂದು ಬಾರೆ ಎಂದು ಎಳೆದೊಯ್ಯು ವಾಗಲೆ ಗೊತ್ತಾಗಿದ್ದು ಅವನು ನನಗಾಗಿಯೇ ಅಲ್ಲಿದ್ದ ಎಂದು ಕಾರಣ ನಾ ಏಳುತ್ತಿದ್ದಂತೆ ಅವನ ಬೈಕ್ ನಿಂತಿತು, ನೀ ಬರೋವರೆಗೂ ಅವನು ನಿಲ್ಲಿಸೊಲ್ಲ ನೀ ಬರೊಲ್ಲ ಅಂತ ಇವಳು ರೇಗಿದಳು , ನಿನಗವರೂ ಗೊತ್ತೆನೇ ಅಂದದ್ದಕ್ಕೆ ಅವನು ಗೊತ್ತು , ಅವರಪ್ಪನೂ ಗೊತ್ತು ಅಂದಳು ನಾ ಪೆಚ್ಚಾಗಿದೆ 


ಹಸುವನ್ನು ಬಿಟ್ಟು ಎಳೆದೊಯ್ಯದ್ದ ಕರುವಿನಂತಾಗಿತ್ತು ನನ್ನ ಸ್ಥಿತಿ ದೂರದ ಆ ಮೈದಾನದಲ್ಲಿ ಬೈಕ್ ಮೇಲೆ ಕುಳಿತು ನನ್ನತ್ತ ನೋಡುತ್ತಿದ್ದ ಅವನ ಕಥೆ ಕೂಡ ಅದೇ ಆಗಿತ್ತೆಂದರೆ ಸುಳ್ಳಾಗಲಾರದೂ , 


ಮತ್ತೆ ಮುಂಜಾನೆ ಹಾಜರ್ ಆಗಿದ್ದ ನನ್ನ ಬ್ಲ್ಯೂ ಜಸ್ಸಿಬಾಯ್ , ಹೋಂಡಾ ಸಿಬಿಆರ್ ಜೊತೆಗೆ ಅಭ್ಯಾಸದಲ್ಲಿ ಮುಳುಗಿದ್ದ ನಾನು ಅಲ್ಲಿ ಇರುವುದು ಆಡಿಟ್ ನ ಕೊನೆಯ ದಿನವಾಗಿತ್ತು ಸಂಜೆಗೆ ಬೆಂಗಳೂರಿಗೆ ಟಿಕೆಟ್ ರೆಡಿಯಾಗಿದ್ದರಿಂದ ಕೆಲಸ ಮುಗಿಸಲೇ ಬೇಕಾಗಿತ್ತು ಅಲ್ಲದೇ ಸಂಜೆ ಬೇಕಾದರೆ ಸ್ವಲ್ಪ ಹೊತ್ತು ನೋಡುವಿಯಂತೆ ಮೊದಲು ಕೆಲಸ ಮುಗಿಸು ಮಾರಾಯಿತಿ ಎಂದು ನನ್ನ ಗೆಳತಿ ಗಂಟು ಬಿದ್ದಳು. ತರಾತುರಿಯಲ್ಲೇ ಕೆಲಸ ಮುಗಿಸಿದರೂ ಸಂಜೆ ತುಂಬಾ ತಡವಾಯಿತು ಅಲ್ಲದೇ ೯ ಕ್ಕೆ ಬಸ್ಸಿದ್ದರಿಂದ ಅಲ್ಲಿಗೆ ಹೋಗಬೇಕಿತ್ತು ನನಗೆ ಸಿಕ್ಕ ೧೦-೧೫ ದಲ್ಲೇ ಒಮ್ಮೆ ಅಲ್ಲಿಗೆ ಹೋಗಿಬರಬೇಕಿನ್ನಿಸು, ಅವಳನ್ನೊಪ್ಪಿಸಿ ಅಲ್ಲಿಗೆ ಓಡಿದೆ ನನ್ನ ಕಂಡು ಹಿಗ್ಗಿದವನಂತೆ ಮತ್ತಷ್ಟು ಜೋರಾಗಿ ತಿರುಗತೊಡಗಿದ ಇನ್ನೇನು ಹೊರಡಲು ನಿಂತ ನನ್ನ ನೋಡಿ ಬೈಕ್ ನಿಲ್ಲಿಸಿ ನನ್ನತ್ತ ಬರತೊಡಗಿದವನು ಮಬ್ಬು ಗತ್ತಲಲ್ಲಿ ಅಷ್ಟಾಗಿ ಕಾಣಬರುತ್ತಿದ್ದ ಹತ್ತಿರ ಬಂದವನು ಬೆಳಗ್ಗೇನು ಬಂದಿರಲಿಲ್ಲ ಆಗಲೇ ಹೊರಡುತ್ತಿದ್ದಿಯ ಎಂದ ಅದೆಷ್ಟೋ ವರುಷಗಳ ಪರಿಚಯದಂತೆ !!! ಸಣ್ಣದೊಂದು ನಡುಕ ನನ್ನಲ್ಲಿ ಉಂಟಾಯಿತು ನಾ ಮೊದಲ ಬಾರಿಗೆ ಮೌನವಾಗಿದ್ದೆ , ಕೀಲು ಕೊಟ್ಟ ಬೊಂಬೆಯಂತೆ , ಅವನ ಮಾತು ನನ್ನನ್ನು ಹಿಡಿದಿಟ್ಟಿತು ಈ ಧ್ವನಿ ನನಗೆ ಸುಪರಿಚಿತ ಆದರೆ ನೆನಪಾಗುತ್ತಿಲ್ಲ,, ಮತ್ತೇ ಅವನ ಧ್ವನಿ ,ನನ್ನ ರೇಸ್ಗೆ ಬರುವುದಿಲ್ಲವಾ ನೀನು ಎಂದ ?


ಇಲ್ಲ ಬೆಂಗಳೂರಿಗೆ ಹೋಗಬೇಕು ಟಿಕೆಟ್ ಬುಕ್ ಆಗಿದೇ ಎಂದೇ? ಅವನು ಶೂನ್ಯದತ್ತ ನೋಡುತ್ತಿದ್ದ?  ಯಾವತ್ತು ಅಂದೆ ?ಭಾನುವಾರ ಅಂದ, ಟ್ರಯ್ ಮಾಡುತ್ತೇನೆ ಎಂದು ಹೊರಟು ನಿಂತೆ,  ಅವನು ನನ್ನ ಕೈ ಹಿಡಿದು ನೀನು ಬರದಿದ್ದರೇ ನಾನು ಬೈಕ್ ಹತ್ತೋದೇ ಇಲ್ಲ ಅಂದ , ಮುಂದೇ ಮಾತಾಡ ಬೇಕಾದ ನಾನು ಅವನ ವರ್ತನೆಯಿಂದ ಮೂಕಳಾಗಿದ್ದೇ,ಈ ಸ್ಪರ್ಶ ನನಗೆ ಸುಪರಿಚಿತ ಆದರೆ ನೆನಪಾಗುತ್ತಿಲ್ಲ,  ಒಬ್ಬರನ್ನೊಬ್ಬರು ಅದೆಷ್ಟೋ ಜನ್ಮಗಳಿಂದ ಅರಿತವರಂತೇ ಮಾತಿಲ್ಲದೇ ಇಂತಿಷ್ಟು ದಿನಗಳಲ್ಲಿ ಬೆಸೆದು ಕೊಂಡಿದ್ದೆವು  , ಅಷ್ಟರಲ್ಲಾಗಲೇ ನನ್ನ ಗೆಳತಿ ಬಂದು ಟೈಮ್ ಆಯಿತು ಅಂದಾಗಲೇ , ಎಚ್ಚೆತ್ತು ಬರುತ್ತೇನೆ ಎಂದೇ, ಅದಕ್ಕವನು ನನ್ನಾಣೇಗೂ ಬರುತ್ತಿಯಾ ಅಂದ , ಹೂ: ಎಂದು ಅವನಿಂದ ಕೈಕೊಸರಿಕೊಂಡು ಬಂದೇ ಅವನಿಗಾಗಲೇ ಆ ಕಡೆ ಭುಲಾವ್ ಬಂದಿತ್ತು , ಬಾರಲೋ  ಮಜ್ನು ಅಂತಾ , ಇಲ್ಲಿವಳು ಗುರ್ ಅನ್ನುತ್ತಿದ್ದರೂ ಆದರೂ ಅವಳಿಗೆ ನಾನೆಂದರೇ ಪ್ರೀತಿ ನನ್ನೊಟ್ಟಿಗೆ ಬಂದು ಬಸ್ಸ್ ಹತ್ತಿಸಿ ನಾನೇ ಕಾಲ್ ಮಾಡುತ್ತೀನಿ ಯಾವಾಗ ಅಂತ ಕೇಳೀ ಟಿಕೆಟ್ ಕಳುಹಿಸುತ್ತೇನೆ ಬರುವಿಯಂತೆ ಎಂದಳು , ಆಕಾಶಕ್ಕೆ ಮೂರೇ ಗೇಣು ಎಂಬಂತೆ ನಾ ಎಲ್ಲಿದ್ದೇ ಎಂಬ ಅರಿವಿಲ್ಲದೇ ಅವಳನ್ನಪ್ಪಿ ಮುತ್ತಿಟ್ಟು ಹೊರಟು ನಿಂತಿದ್ದ ಬಸ್ ಹತ್ತಿದೆ , ಅವಳು ಛೀ ಪೋಲಿ ಅಂದದ್ದು ಗಾಳಿಯಲ್ಲಿ ತೇಲಿ ಹೋಯಿತು. 


ಕನಸುಗಳ ಅಂಬಾರಿ ಹತ್ತಿ ಹೊರಟ ನನಗೇ ಕಣ್ಣೂ ಬಿಡಲು ಮನಸ್ಸೇ ಆಗುತ್ತಿರಲಿಲ್ಲ, ಆಕಾಶದ ಮೋಡದಂತಾಗಿದ್ದೆ ನಾನು ಅಷ್ಟರಲ್ಲೇ ಬೈಕ್ ಸದ್ದು ಕೇಳಿಸಿತು ಅದು ನನಗೆ ಪರಿಚಿತ ಕಿಟಕಿಯಿಂದ ತಲೆ ಹೊರಗೆ ಹಾಕಿದೆ ಅವನೇ ನನ್ನ ಬ್ಲ್ಯೂ ಜಸ್ಸಿಬಾಯ್ , ಹೋಂಡಾ ಸಿಬಿಆರ್ ಜೊತೆಗೆ  ಬಸ್ಸು ಹೊರಟು ೧/೨ ತಾಸು ಆಗಿತ್ತು ಆಗಿನಿಂದನು ಬರುತ್ತಿರಬೇಕು, ಛೇ! ನನಗೇ ಗೊತ್ತೇ ಆಗಲಿಲ್ಲ ಅವನು ಬಸ್ಸಿನ ಹತ್ತಿರ ಬರುತ್ತಾ ಬರುತ್ತಾ ಭಾನುವಾರ ಬರುತ್ತಿಯಾ ತಾನೇ ಅಂದಾ ??  , ಹೂ: ಎಂದೇ ಮತ್ತವನೂ ನನ್ನಾಣೆಗೂ ಅಂದ !!! ಮತ್ತೇ ಮೌನ


ಬಸ್ಸು ಮತ್ತಷ್ಟು ವೇಗವಾಗಿ ಹೊರಟಿತು ಬಸ್ಸು ಹತ್ತುವಾಗಲೇ ನನ್ನಿಂದ ಕಿರಿಕಿರಿ ಅನುಭವಿಸಿದ್ದ ಅವರು ಬಸ್ಸು ನಿಲ್ಲಿಸುವುದಿಲ್ಲ ಎಂದು ನನಗೇ ಗೊತ್ತಿತ್ತು , ಬೈಕ್ ನ ಸದ್ದು ದೂರಾಯಿತು , ಬಹುಶ: ಸಂಪೂರ್ಣವಾಗಿ ನಿಂತಿತು ಅನ್ನಿಸಿತು. ಜೋರಾಗಿ ಅಳಬೇಕೆನಿಸಿತು ಸುತ್ತಲಿನ ಪರಿಸರದ ಅರಿವಾದರೂ ಕಣ್ಣಲ್ಲಿ ಧಾರಾಕಾರವಾಗಿ ಬರ ತೊಡಗಿತು . ಅಷ್ಟರಲ್ಲೇ  ಇವಳು ಕಾಲ್ ಮಾಡಿದಳು ಅಳುತ್ತಿರುವುದು ಗೊತ್ತಾದ ಕೂಡಲೇ ದೊಡ್ಡ ಲೈಲಾ ಮಜ್ನುತರ ಆಡ ಬೇಡಿ ಭಾನುವಾರ ಬರುತ್ತಿಯಲ್ಲಾ ಇನ್ನೇನು ಅಂದಳು ತಟ್ಟನೇ ಅಳು ನಿಂತಿತು , ನಾನು ಸಮಾಧಾನ ಆಗುವವರೆಗೂ ನನ್ನೊಟ್ಟಿಗೆ ಮಾತನಾಡಿದಳು. 


೨ ದಿನಗಳನ್ನು ಒಳ್ಳೇ ಯುಗಗಳನ್ನು ಕಳೆದ ಅನುಭವ ನನಗೆ , ಅವನಾರು  ಅದು ಹೇಗೆ ನನಗೆ ಇಷ್ಟು ಹತ್ತಿರವಾದ, ತುಂಬಾ ಪರಿಚಯದ ಆ ಥ್ವನಿ, ಸ್ಪರ್ಶ , ಯಾರವನು ? ??????? ಉತ್ತರವಿಲ್ಲದ ಪ್ರಶ್ನೆಗಳೂ ?


 ಭಾನುವಾರ ಬೆಳಗ್ಗೆ ಹೊರಟರೆ ರೇಸ್ ಇರುವುದು ಸಂಜೆ ೩ಕ್ಕೆ ಅಷ್ಟರಲ್ಲಿ ಅಲ್ಲಿರ ಬಹುದೆಂದು ಪ್ಲಾನ್ ಮಾಡಿ ಹೊರಟೆ ದಾರಿ ಯಲ್ಲಾದ ತೊಂದರೆ ಯಿಂದಾಗಿ ರೇಸ್ ಜಾಗಕ್ಕೆ ಸೇರುವುದು ಸರಿಯಾಗಿ ೩ ಘಂಟೆಯಾಯಿತು, ಇಂದಾದರೂ ಅವನ ಮುಖ ನೋಡ ಬಹುದೆಂದು ಕೊಂಡಿದ್ದ ನನಗೇ ನಿರಾಸೆ ಕಾದಿತ್ತು ಅವನಾಗಲೇ ಸವಾರಿಗೆ ರೆಡಿಯಾಗಿಯೇ ನಿಂತಿದ್ದ, ಆದರೆ ಅವನ ಮಾತಿನಂತೆ ಬೈಕ್ ಮಾತ್ರ ಏರಿರಲಿಲ್ಲ ನನ್ನ ನೋಡುತ್ತಿದ್ದಂತೆ ನನ್ನಡೆಗೆ ಕೈ ಬೀಸಿ ಬೈಕ್ ಏರಿಕೂತ ನನಗಾಗಿ ಜಾಗ ಕಾದಿರಿಸಿದ್ದ ಗೆಳತಿಯೊಂದಿಗೆ ಕುಳಿತಾಗ ಅವಳೇ ನೀನು ಹತ್ತು ನಿಮಿಷ ಲೇಟಾಗಿದ್ದರೂ ನಿನ್ನ ಹೀರೋ ಬೈಕ್ ಎರುತ್ತಿರಲಿಲ್ಲ ಕಣೆ , ಪೋನ್ ಮಾಡಿದೆ ಯಾದ್ದರಿಂದ ರೆಡಿಯಾಗಿದ್ದ ಅಷ್ಟೇ, ಥ್ಯಾಂಕ್ ಗಾಡ್, ನೀ ಬಂದಿಯಲ್ಲಾ  ಅಂದಳು .


ಆ ಎರಡು ದಿನಗಳ ನನ್ನ ಯೋಚನೆ , ಆ ಯಾತನೆ ಯಾರಿಗೂ ಬೇಡ, ತುಂಬಾ ಬಳಲಿದ್ದ ನಾನು ,ಅವನ ನೋಡುತ್ತಿದ್ದಂತೆ ಮಿಂಚಿನ ಸಂಚಾರವಾದವಳಂತೆ ಪುಳಕಗೊಂಡಿದ್ದೆ, ಹಾ ಹಿರೋ ನೇ ಹೆಸರು ಗೊತ್ತಿಲ್ಲ ! ಮುಖ ನೂ ನೋಡಿಲ್ಲ ಅಂದೆ! ಅವಳೂ ನನ್ನೆಡೇಗೆ ವಿಚಿತ್ರವಾಗಿ ನೋಡಿದಳು, ಅಂದರೇ ಅಂದಳು ನನಗೆ ಅವನ ಹೆಸರು ಗೊತ್ತಿಲ್ಲ, ಇನ್ನೂ ಮುಖ ನೋಡೋಕೆ ನಾ ನೋಡಿದಾಗಲೆಲ್ಲಾ ಅವ ಜೆರ್ಸಿ , ಎಲ್ಮೆಟ್ ನಲ್ಲೇ ಇರುತ್ತಿದ್ದ ಅಂದೇ, ಆದರೂ ಲವ್ವಾ ಅಂದಳು ಎನ್ ಮಾಡೋದು, ಮಾಡ ಬೇಕಂತೆನೂ ಇರಲಿಲ್ಲ , ಆಗೋಗಿದೆ ಅಂತಾ ನಿಧಾನಕ್ಕೆ ಗೊತ್ತಾಯಿತಷ್ಟೆ, ಆದರೂ ಅದೇನೋ ಅದೆಷ್ಟೊ ಜನುಮಗಳ ಸಂಗಾತಿ ಅನಿಸುತ್ತೆ, ಅವನು ನನ್ನ ಏಕವಚನದಲ್ಲಿ ಮಾತನಾಡಿಸಿದ, ಕೈ ಹಿಡಿದ ಆದರೂ ಅವನನ್ನು ದೂರ ಇಡ ಬೇಕು ಅನ್ನಿಸಲಿಲ್ಲ, ಈ ಮಾತು, ಈ ಸ್ಪರ್ಶ ಅದೆಷ್ಟೋ ವರ್ಷಗಳಿಂದ ಗೊತ್ತು ಅನ್ನಿಸುತ್ತೆ, ಅದೇನೋ ಒಂದು ಗೊತ್ತಾಗುತ್ತಿಲ್ಲ ಅಂದೇ , ತುಂಬಾ ಗೊಂದಲ ಅರೇ !!!!!! ಹೌದಾ ಅವನು ಹಾಗೇ ಅಂದಾ  , ಏನ್ ಅಂದಾ ನೀನ್ ಹೇಳಿದ್ದನ್ನೇ ಅಂದಾ , ನಿನಗೆ ಹೇಳಿದನಾ ಯಾವಾಗ ಅಷ್ಟರಲ್ಲಿ ಅನೌಸ್ ಮೆಂಟ್ ಬಂತು ಪ್ರಶಾಂತ್ ಎಲ್ಲರಿಗಿಂತ ಮುಂದಿದ್ದಾರೆ ಎಂದು , ಅವಳು ಕೈ ತಟ್ಟಿದಳು ಯಾಕೆ ಅಂದೆ ಅರೆ ನಿನ್ನ ಹೀರೋ ಕಣೇ ಅಂದಳು , ಅರೇ ಅವರ ಹೆಸರು ಪ್ರಶಾಂತ ಅಂದೇ? 


ಅವಳು ನಕ್ಕು ಸುಮ್ಮನಾದಳೂ , ಇಂದಾದರೂ ನೋಡಿ ಮಾತಾಡೋಣ ಅಂದರೆ ಇವತ್ತೇ ಲೇಟ್ ಆಯಿತು ಅಂದೆ, ಅವಳೂ ಹೋಗಲಿ ಬಿಡು ರೇಸ್ ಮುಗಿದ ಮೇಲೆ ಮನೆಯಲ್ಲಿಯೇ ಮೀಟ್ ಆಗುವಿಯಂತೆ , ಮನೆನಾ ? ಅದಿರಲಿ ಅವರ ಮೂಡ್ ಹೇಗಿರುತ್ತದೋ , ರೇಸ್ ಎನ್ ಆಗುತ್ತೋ ಅಂದೆ ಯಾಕೆ? ಗೆಲ್ಲಲ್ಲಾ ಅಂತಾನಾ ಹಾಗಲ್ಲ ಯಾಕೋ ಒಂದು ತರಹದ ತಳಮಳ ಅಂದೆ, ಹೋಗಲಿ ಬಿಡು ಈ ರೇಸ್ ಇರಲಿ ಜೀವನದ ರೇಸನ್ನೇ ಗೆದ್ದು ಬಿಟ್ಟಿದ್ದಾನಲ್ಲ ನಿನ್ನ ಹಿರೋ ಎಂದು ಕಣ್ಣೋಡೆದಳು. ಆಗಾಗ ರೇಸ್ ನ ಅಪ್ಡೇಡ್ಸ್ ಬರುತ್ತಿತ್ತು. ಪ್ರಶಾಂತ್ ಮುಂದಿದ್ದ ಮೈಕಾಸುರನ ಪ್ರಕಾರವೇ ಅವನು ಎಂದಿಗಿಂತ ಹೆಚ್ಚು ಉತ್ಸುಕನಾಗಿದ್ದಾನೆ ಎಂದು ತಿಳಿದು ಬರುತ್ತಿತ್ತು. ಇವಳೂ ನನ್ನತ್ತ ನೋಡಿ ನಗುತ್ತಿದ್ದಳೂ.


ಆದರೆ  ನನ್ನ ಮನಸ್ಸುಮಾತ್ರ ಮುದಗೊಳ್ಳಲಿಲ್ಲ, ಅರಿಯದ ವೇದನೆಯೊಂದು ನನ್ನೊಳಗೆ ಕೋಲಾಹಲವೆಬ್ಬಿಸಿತ್ತು ಆತುರ ಪಟ್ಟೆನೇನೋ ಎಂದು ಒಮ್ಮೆ ಎನಿಸಿದರೆ ಅವನ ಸೆಳೆತ ನನ್ನಲ್ಲಿ ಎಷ್ಟಿತ್ತೆಂದರೆ ನನ್ನನ್ನೇ ನಾ ಹತೋಟಿಯಲ್ಲಿಡಲಾಗದೆ ಹೋಗಿದ್ದೆ, ಅವನನ್ನು ನಾನು ಅದೆಷ್ಟೋ ವರುಷಗಳಿಂದ ಬಲ್ಲೆ ಎಂದು ಅವನ ಮೊದಲ ಮಾತಿನಿಂದಲೇ ಮನ ಚೀರಿ ಚೀರಿ ಹೇಳುತ್ತಿತ್ತು . ಬುದ್ದಿ ಮಾತ್ರ ತಪ್ಪು ಮಾಡುತ್ತಿರುವೆ ಅಂತ ಎಚ್ಚರದ ಘಂಟೆ ಮೊಳಗಿಸುತ್ತಲೇ ಇತ್ತು. ಅತ್ತ ಧರಿ ಇತ್ತ ಪುಲಿ ಮನೆಯಲ್ಲಿನ್ನು ವಿಷಯ ತಿಳಿಸಿಲ್ಲ , ಎನು ಮಾಡುವುದು? ಇನ್ನೂ ಇವನು ಮಾತು ಮಾತಿಗೂ ನನ್ನಾಣೆ ಎನುತ್ತಿದ್ದರೆ ಹೃದಯ ಬಾಯಿಗೆ ಬಂದಂತಾಗುವುದು. ಇವನಿಗಾಗಿ ಮನಸ್ಸು ಮಾತ್ರ ಯಾವುದಕ್ಕು ಸೈ ಎಂದು ರಚ್ಚೆ ಬಿಡದ ಮಗುವಂತಾಗಿ ನನ್ನನ್ನು ಇಲ್ಲಿ ತಂದು ಕೂರಿಸಿತ್ತು . 


ಇನ್ನೇನು ಮುಗಿಯಿತು ರೇಸ್ ಇಂದು ಎಲ್ಲಾ ಇತ್ಯರ್ಥವಾಗಿ ಬಿಡಬೇಕು, ಅವನೊಟ್ಟಿಗೆ ಮಾತನಾಡ ಬೇಕು ಇಲ್ಲಿಯವರೆಗೂ ನೋಡಿರದ ಅವನ ಮುಖವನ್ನೊಮ್ಮೆ ನೋಡಿದರೂ ಈ ಜೀವ ಇಲ್ಲೆ ಕೊನೆಯಾದರೂ ಸರಿ ಎನಿಸ ತೊಡಗಿದು, ನನ್ನೆಲ್ಲಾ ಗೊಂದಲಗಳಿಗೆ ಅವನೇ ಉತ್ತರ. 


ಉಗುರು ಕಚ್ಚುತ್ತಾ ಛೇರ್ ನ ತುದಿಯಲ್ಲಿಯೇ ಕುಳಿತ್ತಿದ್ದ ನನ್ನನ್ನು ನೋಡಿ ಅವಳು ಮುಸಿ ಮುಸಿ ನಕ್ಕಾಗಲೇ ನನ್ನ ಪರಿಸ್ಥಿತಿ ಅರಿವಾಗಿ ಸರಿಯಾಗಿ ಕುಳಿತು ಮೈಕಾಸುರನತ್ತ ಗಮನ ಹರಿಸಿದೇ,  ಇನ್ನೂ ಇವನು ನನ್ನ ಮುಂದೆ ಬಂದರೇನು ಗತಿ ಏನು ಮಾತಾಡಲಿ ಅವನ ಮುಂದೇ ಅದೇಕೋ ಕೀಲು ಕೊಟ್ಟ ಬೊಂಬೆ ಯಂತಾಗಿ ಹೋಗುತ್ತೇನಲ್ಲಾ ಎಂದು ನನ್ನನ್ನು ನಾನೇ ಶಪಿಸಿ ಕೊಂಡೇ , ಮಾತೋ ಮೌನವೋ ಒಟ್ಟಿನಲ್ಲಿ ಅವ ನನ್ನೊಟ್ಟಿಗಿದ್ದರೆ ಸಾಕೆನಿಸ ತೊಡಗಿದ್ದು. ಆ ಕ್ಷಣವನ್ನು ನೆನೆದೇ ಮನಹಿಗ್ಗುತ್ತಿತ್ತು.


ತಾನೊಂದು ಬಗೆದರೆ ದೈವ ಇನ್ನೊಂದು ಬಗೆವುದು ಅನ್ನುವುದು ಆ ದೈವ ಅಕ್ಷರ ಸಹ ನಿಜವಾಗಿಸಿತ್ತು , ಊಹೆಗೂ ನಿಲುಕದ ಸುದ್ದಿ ಯೊಂದು ನನ್ನ ಕಿವಿಗೆ ಬಿತ್ತು ಪ್ರಶಾಂತ್ ರೇಸ್ ನಲ್ಲಿ ಮುಂದಿದ್ದ ಎಂದು ಆ ವರೆಗೆ ಕಿರುಚುತ್ತಿದ್ದ ಮೈಕಾಸುರ ಪ್ರಶಾಂತ್ ಬೈಕ್ ಅಫಘಾತಕ್ಕೊಳಗಾಗಿ ತಲೆಗೆ ಬಾರಿ ಪೆಟ್ಟು ಬಿದ್ದಿದೆ ಇನ್ನವನೂ ಉಳಿಯುವುದೇ ಇಲ್ಲ ಎನ್ನುವ ಮಟ್ಟಕ್ಕೆ ಸಂತಾಪ ಸೂಚಿಸ ತೊಡಗಿದ ನಾನು ನಿಶ್ಚಲವಾಗಿದ್ದೆ. ತಲೆಯ ಮೇಲೊಂದು ಬೆಟ್ಟ ಹೇರಿದಂತಿತ್ತು ನನ್ನ ಸ್ಥಿತಿ, ಇತ್ತ ನನ್ನ ಗೆಳತಿ ಅಳುತ್ತಾ ಬಾರೇ ಹೋಗಿ ನೋಡೋಣ ಎಂದರೂ ಚಲಿಸಲಾಗದಾಗಿದ್ದೆ, ಸ್ವಲ್ಪಹೊತ್ತಿನ ನಂತರ ನಾ ನನ್ನ ತಹಬದಿಗೆ ತಂದು ಕೊಂಡೆ ಅವಳಿರಲಿಲ್ಲ , ತಂದಿದ್ದ ಲಗೇಜು ಅಲ್ಲಿಯೇ ಪಕ್ಕದಲ್ಲಿತ್ತು, ಸುತ್ತ ಮುತ್ತ ನನ್ನವರಾರು ಇರಲಿಲ್ಲ ಎದ್ದು ಬಸ್ ನಿಲ್ದಾಣದತ್ತ ಹೊರಟು ಬಂದೆ ಮೊದಲ ಬಾರಿಗೆ ಮನಸ್ಸಿನ ಮಾತಿಗೆ ಮಣೆದಿದ್ದೆ. ಕನಸೊಂದು ಕಣ್ಣೆದುರೇ ಚೂರಾಗಿತ್ತು , ಮುಖ ನೋಡ ಬಹುದಿತ್ತೇನೊ ಮಾನವೀಯತೆಯಾದರೂ ಬೇಡವೇ ನಿನನ್ಗೆ ಎಂದು ಮನಸ್ಸು ಚುಚ್ಚುತ್ತಿತ್ತು. ಆದರೆ ಬದುಕಿನಲ್ಲಿ ಉಳಿಸಿಕೊಳ್ಳಲಾಗದವನನ್ನು ಕನಸಿನಲ್ಲಾದರೂ ಉಳಿಸಿಕೊಳ್ಳುವ ಸ್ವಾರ್ಥನನ್ನದಾಗಿತ್ತು. ಉಸಿರಿಲ್ಲದ ದೇಹ ಬೆಂಗಳೂರಿನ ಬಸ್ಸು ಹತ್ತಿತ್ತು. ಮತ್ತೆ ನನ್ನ ನಾ ಉಳಿಸಿ ಕೊಳ್ಳಬೇಕಾಗಿತ್ತು ನನಗಾಗಲ್ಲದಿದ್ದರು ನನ್ನವರಿಗಾಗಿ ಬೆಂಗಳೂರಿಗೆ ಬಂದ ಮೇಲೆ ೧೦-೧೨ ದಿನಗಳ ನನ್ನ ಮೌನ ಮನೆಯವರೆಲ್ಲರನ್ನೂ ನನ್ನ ಮಂಚದ ಸುತ್ತೇ ಕೂರಿಸುವಂತೆ ಮಾಡಿತು. ಅರಗಿಣೆಯಂತೆ  ಬೆಳದಿದ್ದ ನನಗೆ ನನಗಾಗಿ ಹಲುಬುವ ಜೀವಗಳಿಗೆ ನೋವುಕೊಡಲಾರದೆ ಮುಂಚಿನ ಜೀವನಕ್ಕೆ ಮರಳಿದರು ನೀ ಮೊದಲಿನಂತಿಲ್ಲ ಅನ್ನುವ ಮಾತು ಸರಿ ಸುಮಾರು ೬ ತಿಂಗಳೂ ಗಳಿಂದಲೂ ಕೇಳುತ್ತಲೇ ಬಂದಿತ್ತು. 


ಇತ್ತೀಚಿಗಿನ ಆಫೀಸ್ ಮುಂದೆ ಬಂದು ನಿಲ್ಲುತ್ತಿದ್ದ ವ್ಯಕ್ತಿ ಬರುವ ವರೆಗೂ ಬದುಕಿನಲ್ಲೇನೂ ಅಂತಹ ಬದಲಾವಣೆಗಳಾಗಿರಲಿಲ್ಲ, ಮದುವೆ ಪ್ರಸ್ತಾಪಗಳು ೨-೩ ವರ್ಷಗಳೇ ಮುಂದೆ ಹಾಕಿದ್ದಾಗಿತ್ತು.ನನ್ನನಾಗಲೇ ಅವನಲ್ಲಿ ನಾ ಕಳೆದು ಕೊಂಡದ್ದಾಗಿತ್ತು. ನನ್ನ ಮನಸ್ಸು ಅಂದೇ ಸತ್ತು ಹೋಗಿತ್ತು.ಇನ್ನು ಮದುವೆ ಮುಂಜಿ ದೂರದ ಮಾತು, ಜಗತ್ತಿನೆನ್ನ ನಿರ್ಭಾವುಕತೆ ನನ್ನೊಳಗೆ ಓಡಮೂಡಿತ್ತು, ಯಾಂತ್ರಿಕವಾಗಿ ಕೆಲಸಮಾಡುತ್ತಿದ್ದೆ ಅನ್ನುವುದು ಬಿಟ್ಟರೆ,   ಮೊದಲು ನಾನು ನಾನಾಗ ಬೇಕಿತ್ತು ಅಂತಹುದರಲ್ಲಿ ಇವನೇಕೆ ಬಂದ, ಭೂಗರ್ಭದಲ್ಲಿ ಮುಚ್ಚಿಡಬೇಕೆಂದಿದ್ದ ನನ್ನ ನೆನಪುಗಳನ್ನೇಕೆ ಕೆದಕುತ್ತಿದ್ದಾನೆ, ಸರಿ ಸುಮಾರು ೬-೭ ತಿಂಗಳುಗಳ ನಂತಹ ಮನಸ್ಸಿನ ಮೂಕ ವೇದನೆ ಕಂಬನಿಯಾಗಿ ಇಳಿಯ ತೊಡಗಿತ್ತು. ನೆನಪೆಂದರೇನು  ಅವುಗಳ ಬೆಲೆಯೇನೆಂದು ಇವನಿಗೆ ಹೇಗೆ ತಿಳಿಯಬೇಕು,  ನಾಳೆ ಬರಲಿ ಅವನೂ ಮಾಡುತ್ತೀನಿ ಅಂತ ಶಪಿಸುತ್ತಲೇ ಮಲಗಿದೆ. 


ಆದರೆ ಬಹುಶ: ಬಲಭಾಗದಲ್ಲೇದ್ದಿದ್ದ ಅನ್ನಿಸುತ್ತದೆ ಪುಣ್ಯಾತ್ಮ ಬಂದಿರಲಿಲ್ಲ , ಮೊದಲ ನಗು ಮಿಂಚಿ ಮರೆಯಾಗಲು ನಿಮಿಷ ಸಾಕಾಗಿತ್ತು ಸಕಲೇಶಪುರದ ನನ್ನ ಗೆಳತಿ ಬಂದಿದ್ದಳು, ಆಗಲೇ ಅಪ್ಪಣೆ ಪಡೆದವಳಂತೆ ನಡಿ ಹೋಗೋಣ ಅಂತಾ ನನ್ನ ಏಳೆದೊದ್ಯಳು ಸದ್ದಿಲ್ಲದೇ ಅವಳಿಂದೇ ನಡೆದಿದ್ದೇ ಅಂದು ಅವಳೊಡನೆ ಹೋಗದೆ ಇದ್ದ ನನ್ನ ತಪ್ಪಿತಸ್ಥ ಭಾವ ನನ್ನನ್ನು ಮೂಕಳಾಗಿಸಿತ್ತು. ಅರಿವಿಲ್ಲದೇ ತಳಮಳ ಶುರುವಾಯಿತು. ಅಲ್ಲಿಂದ ಇಲ್ಲಿಯವರೆ ಒಂದು ಫೋನ್ ಕೂಡ ಮಾಡದವಳೂ ಹೀಗೆ ಅಜಾನಕ್ಕಾಗಿ , ದೇವರೆ ಯಾಕೆ ಇವರಲ್ಲಾ ನನ್ನ ಜೀವ ಹಿಂಡುತ್ತಿದ್ದಾರೆ, ಮರೆಯ ಬೇಕೆಂಬುದನ್ನು ಮತ್ತೆ ಮತ್ತೆ ಏಕೆ ಕೆದಕುತ್ತಾರೆ, ಅವನು ನೆನಪಾದರೆ ನಾನು ಸತ್ತೇ ಹೋಗಬೇಕೆನಿಸುತ್ತದೆ, ಹೃದಯದ ಕೋಲಾಹಲ ಇವರುಗಳಿಗೇಕೆ ತಿಳಿಯಲ್ಲೊಲ್ಲದು ಎಂದು ಮರುಗುತ್ತಿದೆ. ಹತ್ತಿರದ ಕಾಫಿಡೇ ನಲ್ಲಿ ಹೋಗಿ ಕುಳಿತ ನಾವು ಸದ್ದೇ ಇಲ್ಲದೇ ೧೦-೨೦ ನಿಮಿಷ ಕುಳಿತೆವು ಆ ಸ್ಮಶಾನ ಮೌನ ನನ್ನನ್ನು ಮತ್ತಷ್ಟು ಕೊಲ್ಲ ತೊಡಗಿತು ನಾನೇ ಮಾತಿಗೆ ಮುಂದಾದೆ, ಸಾರಿ ಅಂದೇ ,,,,,,,,,, ಅದಕ್ಕವಳು ನನಗಲ್ಲ ಹೇಳಬೇಕಾದದ್ದು ಅವನಿಗೆ ಅಂತ ಅತ್ತ ಬೆರಳು ತೋರಿದಳು. 


ನನ್ನ ಕಣ್ಣೂಗಳನ್ನು ನಾನೇ ನಂಬದಾಗಿತ್ತೇ , ಹೃದಯ ಸ್ತಬ್ಧವಾಗಿತ್ತು , ಮೈ ತಣ್ಣಗಾಗ ತೊಡಗಿತು ಕಾಲುಗಳು ನಡುಗ ತೊಡಗಿದವು ಬಾಯಿಂದ ಯಾವುದೇ ಶಬ್ದ ಬರದಾಗಿತ್ತು ಅವನೇ ಆ ನನ್ನ ಹೀರೋ ಅದೇ ಬ್ಲ್ಯೂ ಜಸ್ಸಿಬಾಯ್ , ಹೋಂಡಾ ಸಿಬಿಆರ್ ಜೊತೆಗೆ ಓ ಗಾಡ್ ಬಿಕ್ಕಿ , ಬಿಕ್ಕಿ ಅಳ ತೊಡಗಿದೆ, ಹತ್ತಿರಕ್ಕೆ ಬಂದು ಹೆಲ್ಮೆಟ್ ತೆಗೆದಾಗ ಮತ್ತೊದ್ದು ಆಘಾತ ನಮ್ಮ ಆಫೀಸ್ ಮುಂದೆ ನಿಲ್ಲುತ್ತಿದ್ದವ ಇವನೇನೆ , ದೇವರೆ ಏನಿದು ಕನಸಾ, ನನಸಾ, ಇಬ್ಬರೂ ಸೇರಿ ಆಡಿದ ಆಟವಾ ಎಂದು ಸಂವೇದನೆಯನ್ನೇ ಕಳೆದು ಕೊಂಡವಳಂತೆ ನಿಶ್ಚಳವಾಗಿ ಕೂತೇ , ಹತ್ತಿರ ಬಂದವನೇ ಕೈ ಹಿಡಿದ ಅದೇ ಸ್ಪರ್ಶ ನಾ ಮತ್ತದೇ ಕೀ ಕೊಟ್ಟ ಬೊಂಬೆಯಾಗಿದ್ದೆ, ನೀ ಯಾಕೆ ಬರಲಿಲ್ಲ ಅಂದು ನನ್ನ ನೋಡಲು ಅಂದಾಗ ಸದ್ದಿಲ್ಲದಾಗಿದ್ದೆ. ಏನು ಹೇಳಲಿ ಇಲ್ಲಿ ನೋಡು ಅಂದು ಏಟಾಗಿದ್ದಾಗ ಹಾಕಿದ ಹೊಲಿಗೆಗಳೂ ಎಂದು ತಲೆ ಹಿಂದಿನ ಭಾಗದಲ್ಲಿ ಹಾಕಿದ್ದ ಹೊಲಿಗೆಗಳನ್ನು ತೋರಿಸಿದ ನಡುಗುವ ಕೈಯಲ್ಲಿಯೇ ಅವನ್ನು ಮುಟ್ಟಿದೆ , ಅವಳು ಹೊರಟು ನಿಂತಳು , ಇವನು ಇರು ಅಮ್ಮು ಅಂದ , ಇಲ್ಲ ಅಣ್ಣ ನೀ ಈ ದಿನಕ್ಕಾಗಿ ೮ ತಿಂಗಳಿಂದ ಕಾದಿದ್ದಿ , ಬರುತ್ತೀನಿ, 


ನಿನ್ನನ್ನ ನನಗಿಂತ ಇವನೇ ಜಾಸ್ತಿ ತಿಳಿದು ಕೊಂಡಿದ್ದಾನೆ , ನಿನ್ನ ಹಠ , ನಿನ್ನ ನಿರ್ಥಾರ, ನಿನ್ನ ನೋವು, ನಿನ್ನ ಕನಸು, ನಿನ್ನ ಭವಿಷ್ಯ ಕಾಲ, ನಿನ್ನ ಭೂತ ಕಾಲ , ನಿನ್ನ ವರ್ತಮಾನವನ್ನು ನಿನಗೆ ಒಪ್ಪಿಸುತ್ತಿದ್ದೇನೆ. ಕಷ್ಟ ಪಟ್ಟು ಇಷ್ಟು ದಿನ ಕಾಪಾಡಿದ್ದೇವೆ, ಆಸ್ಪತ್ರೆಯಿಂದ ಬಂದೊಡನೆಯೇ ನಿನ್ನ ನೋಡಲು ಬಂದಿದ್ದ ನೀ ಇಷ್ಟು ದಿನವಾದರೂ ಅವನನ್ನು ಗುರುತು ಹಿಡಿಯಲಾರೆಯಾದ್ದರಿಂದ ನಾನು ಬಂದೆ, ನಿನ್ನಂತೆ ನೆನಪುಗಳು ಇವನಿಗೂ ಕಾಡಿದೆ, ಉಸಿರು ಬಿಗಿಹಿಡಿದು ಕೊಂಡು ನಿನಗಾಗಿಯೇ ಕಾದಿದ್ದ ನಿನ್ನವನನ್ನ ಎನ್ನುತ್ತಿದ್ದವಳ ಕಣ್ಣಂಚು ಮೊದಲ ಬಾರಿಗೆ ತೇವವಾಗಿದ್ದು ಮೊದಲ ಬಾರಿಗೆ ನಾ ನೋಡಿದೆ,  ಬೇಗ ಇಬ್ಬರೂ ಸೇರಿ ನನಗೊಂದು ಗಂಡು ನೋಡಿ , ನಿಮ್ಮದು ಆಗಿಹೋಯ್ತು ಅಂತ ಸುಮ್ಮನಿರಬೇಡಿ. ನಿನ್ನ ಹೀರೋನಾ ನಿನಗೆ ಬಿಟ್ಟು ಹೋಗುತ್ತಿದ್ದೇನೆ ಹುಷಾರಾಗಿ ನೋಡಿಕೋ ಎಂದು ಕಣ್ಣೋಡೆದು ಹೋದಳು . 


ಅವಳು ನಮ್ಮಿಬ್ಬರ ನಡುವಿನ ಸೇತುವೆಯಾಗಿ ನಮ್ಮನ್ನು ಬೆಸದಿದ್ದಳು, ನಾ ಮೌನವಾಗಿದ್ದೆ ಅವನು ನನ್ನ ಕೈ ಹಿಡಿದಿದ್ದ ಬಿಟ್ಟರೆ ಕಳೆದು ಕೊಳ್ಳಬಹುದೆಂಬ ಪುಟ್ಟ ಮಗುವಿನಂತೆ ತುಸು ಬಿಗಿಯಾಗಿಯೇ ,,,,,,,, ನಾ ಬಯಸಿದ್ದ ನನ್ನ ಪಾಲಿನ ಅಮೂಲ್ಯ ರತ್ನ ನನಗೆ ದೊರಕಿತ್ತು. 

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

ರಾಜೇಶ ಹೆಗಡೆ ಶನಿ, 06/15/2013 - 08:23

ಬೆಂಗಳೂರಿನಿಂದ ಸಕಲೇಶಪುರದ ನಡುವೆ ಓಡಾಡುವ ಈ ಪ್ರೇಮ ಕಥೆ ಓದಿಸಿಕೊಂಡು ಹೋಯಿತು. ಹೀಗೂ ಪ್ರೀತಿ ಇರುತ್ತಾ ಮೊದಲ ನೋಟದಲ್ಲೇ ಪ್ರೀತಿ ಆಗುತ್ತಾ ಅನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸ್ಪಷ್ಟೀಕರಿಸುತ್ತದೆ. ಪ್ರೀತಿ ಕುರುಡು ಎಂಬುದನ್ನು.

ತುಂಬಾ ಚೆನ್ನಾಗಿದೆ ಪಾರ್ವತಿ ಅವರೇ ನಿಮ್ಮ ಕಲ್ಪನಾ ಕುಂಚದಿಂದ ಮೂಡಿದ ಈ ಕಥೆ,

ಧನ್ಯವಾದಗಳು,  ರಾಜೇಶ್ ರವರೇ ನಿಮ್ಮ ಸ್ಫೂರ್ತಿಯೇ ನಮಗೆ ಆಸರೆ ಇರಲಿ ಇದೂ ನಮ್ಮೊಂದಿಗೆ ನಿತ್ಯ ನಿರಂತರ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.