Skip to main content

ಮುಂಬೈ ಮೇಲೆ ಉಗ್ರರ ಧಾಳಿ ಕುರಿತ ಹಿಂದಿ ಚಲನ ಚಿತ್ರ ಹೇಗಿದೆ ?

ಇಂದ venkatb83
ಬರೆದಿದ್ದುMarch 5, 2013
2ಅನಿಸಿಕೆಗಳು
 
ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಹಲವು ಹಿಟ್ ಫ್ಲಾಪ್ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದವರು. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆ (ಆರ್ ಜಿ ವಿ ಫ್ಯಾಕ್ಟರಿ..!)ಮೂಲಕ ಹಲವು ನವ ನಟರು (ಅನ್ಯ ಭಾಷೆಗಳ ನಟರೂ ನಟಿಯರೂ ಸಹ -ಸುದೀಪ್-ಸೂರ್ಯ)ನಿರ್ದೇಶಕರು-ತಂತ್ರಜ್ಞರು-ಸಂಗೀತ ನಿರ್ದೇಶಕರು ಇತ್ಯಾದಿ ಪ್ರತಿಭೆಗಳನ್ನು ಕಡಿಮೆ ಖರ್ಚಲ್ಲಿ ಅಥವಾ ಫ್ರೀ ಆಗಿಯೇ ದುಡಿಸಿಕೊಂಡು  ಚಿತ್ರ ನಿರ್ಮಿಸುವ ಜಾಣ ನಿರ್ದೇಶಕ..!

ದಿ ಅಟ್ಯಾಕ್ಸ್  ಆಫ್ ೨೬/೧೧-ಮುಂಬೈ
ತೆಲುಗಿನ ಶಿವ ಚಿತ್ರ (ಅಕ್ಕಿನೇನಿ ನಾಗಾರ್ಜುನ ನಾಯಕ)ದ ಮೂಲಕ ಅದರ ವಿಶೇಷ ರೀತಿಯ ನಿರೂಪಣೆ -ಹಸಿ ಬಿಸಿ ಹೊಡೆದಾಟಗಳ ಮೂಲಕ ಮೊದಲ ಚಿತ್ರದಿಂದಲೇ ಗಮನ ಸೆಳೆಯಲ್ಪಟ್ಟ ನಿರ್ದೇಶಕ..
 
ಅ ನಂತರ ಹಿಂದಿಗೆ  ಜಿಗಿದು ಅಲ್ಲಿ ರಂಗೀಲ ಚಿತ್ರ (ಅಮೀರ್ ಖಾನ್  -ಉರ್ಮಿಳ)ತೆಗೆದು ದೇಶಾದ್ಯಂತ ಆ ಚಿತ್ರದ ಯಾಯಿರೆ ಯಾಯಿರೆ ಹಾಡು ಮೂಲಕ  ಉರ್ಮಿಳಳನ್ನು  ಏಕ್ದಂ ಸ್ಟಾರ್ ಆಫ್ ಸ್ಟಾರ್ ಮಾಡಿದವರು...
 
ಹಲವು ನೈಜ-ಕಾಲ್ಪನಿಕ ಘಟನೆಗಳ ಕುರಿತ ಚಿತ್ರಗಳನ್ನು ಮಾಡುತ್ತಾ  ಹಲವು ಹಿಟ್ ಕೆಲವು ಫ್ಲಾಪ್ ಆಗಿ  ಕೆಲವೊಮ್ಮೆ ಸತತ ಫ್ಲಾಪ್ ಚಿತ್ರಗಳ ನಂತರವೂ  ಇವರ ಸಿನೆಮಗಳಲಿ ಹಣ ಹೂಡುವ ನಿರ್ಮಾಣ ಸಂಸ್ಥೆಗಳಿಗೆ ಕಮ್ಮಿ ಇಲ್ಲ...!
ಸರ್ಕಾರ್-ಸರ್ಕಾರ್ ರಾಜ್
ಭೂತ್ ಕಂಪನಿ ಸತ್ಯ ರಣ್ ರಕ್ತ ಚರಿತ್ರ ೧ -೨
ಆರ್ ಜಿ ವಿ ಆಗ್ (ಕಲ್ಟ್  ಕ್ಲಾಸ್ಸಿಕ್  ಶೋಲೆ ಚಿತ್ರವನ್ನು ಆಧುನಿಕ ರೀತಿಯಲ್ಲಿ  ನಿರ್ಮಿಸಿದ್ದರು-ಅದ್ರಲ್ಲಿ ಅಮಿತಾಬ್ ಗಬ್ಬರ್ ಸಿಂಗ್ ಪಾತ್ರಧಲಿ .)
ನಾಟ್ ಎ ಲವ್ ಸ್ಟೋರಿ ಹೀಗೆ ಹಿಟ್ ಫ್ಲಾಪ್  ಚಿತ್ರ ನಿರ್ದೇಶಿಸಿ ನಿರ್ಮಿಸಿದ  ಇವರು ೨೬/೧೧ ನಂತರ ತಾಜ್ ಗೆ ಭೇಟಿ ಕೊಟ್ಟಾಗಲೇ ಇವರು ಆ ಬಗ್ಗೆ ಚಿತ್ರ ನಿರ್ಮಿಸುವರು ಎಂದು  ಮಾಧ್ಯಮಗಳು  ಊಹಿಸಿ ಆ ಬಗ್ಗೆ ಟೀಕಿಸಿ ಬರೆದಿದ್ದರು-
 
 
ಬಹುಶ ಈ ಸಂಗತಿ ತಣ್ಣಗಾಗಲಿ ಎಂದೋ-ಆ ಚಿತ್ರದ ತಯಾರಿಗೆಂದೋ ೩ವರೆ ವರ್ಷ ಕಾದ ರಾಮ್ ಗೋಪಾಲ್ ವರ್ಮ  ಹಲವು ಸಾವಿರ ಜನರ ಅಡಿಶನ್ ನಡೆಸಿ ಕೊನೆಗೆ ಸಂಜೀವ್ ಜೈಸ್ವಾಲ್ ಎಂಬ  ನವ ನಟನನ್ನು ಕಸಬ್ ಪಾತ್ರಕ್ಕೆ ಆರಿಸಿ  ಹೆಸರಲ್ಲಿ ಚಿತ್ರವನ್ನು ಸದ್ಧಿಲ್ಲದೆ ನಿರ್ಮಿಸಿ -ಅದೀಗ ಬಿಡುಗಡೆ ಆಗಿ  ಪ್ರೇಕ್ಷಕರ ಅತಿಯಾದ ನಿರೀಕ್ಷೆ ಕಾತರತೆ ಮಟ್ಟ  ತಲುಪದೇ-ವಿಫಲವಾಗಿದೆ ..
 
ಇನ್ನೂ ಹಲವು ತಿಂಗಳು ಶೂಟಿಂಗ್ ನಡೆಸುತ್ತಿದ್ದರೆನೋ-ಅಷ್ಟರಲ್ಲಿ ಅನಿರೀಕ್ಷಿತವಾಗಿ ಕಸಬ್ ಗಲ್ಲಿಗೆ ಏರಿದ್ದು-ಆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡಿ ಹಣ ಗಳಿಸಬೇಕು ಎಂಬ ಅಶೆಯೊ -ಅವಸರವಸರದಲ್ಲಿ ಹೇಗೇಗೋ ಚಿತ್ರವನ್ನು ತೆಗೆದ ಹಾಗಿದೆ..!
 
ನೈಜ ಘಟನೆಗಳ ಸುತ್ತ ಸುತ್ತುವ ಈ ಸಿನೆಮ ಯಾಕೆ ವಿಫಲವಾಯ್ತು?
೧.ಚಿತ್ರ ನಿರ್ಮಾಣಕ್ಕೆ ೩ ವರೆ ವರ್ಷ ಕಾದದ್ದು-ಇಂದು ನಿನ್ನೆ ನಡೆದದ್ದನ್ನೇ ಮರೆವ ಜನ ಅಂದಿನ ಅ ದುರ್ಘಟನೆ ಮರೆತಿಲ್ಲ ವಾದರೂ-ಕುತೂಹಲ -ಆಸಕ್ತಿ ಉಳಿಸಿಕೊಂಡಿಲ್ಲ ;
 
೨. ಬದುಕುಳಿದ ಕಸಬ್ -ಅವನ ಹೇಳಿಕೆಗಳು -ವರ್ತನಗೆಳು-ಇತ್ಯಾದಿ ಸುತ್ತ ಒಟ್ಟಿನಲ್ಲಿ  ಕಸಬ್ ಸುತ್ತಲೇ ಫೋಕಸ್ ಆಗಿರುವ ಚಿತ್ರ ಕಥೆ-ನಿರೂಪಣೆ ..
(೧೦ ಜನ ಉಗ್ರರಲಿ ಮೊದಲಿಂದ ಕೊನೆವರ್ಗೆ ಹೈ ಲೈಟ್ ಆಗೋದು ಕಸಬ್ ಮಾತ್ರ ಈ ಚಿತ್ರದಲ್ಲಿ ಅವನತ್ತಲೆ ಕ್ಯಾಮೆರ ಯಾಂಗಲ್  ಸದಾ..) 
 
೩.ವಾಂತಿ-ವಾಕರಿಕೆ ಬರಿಸುವಂತ ಸನ್ನಿವೇಶಗಳು -ದೃಶ್ಯಗಳು-(ಉಗ್ರರು ಕತ್ತು  ಕುಯ್ಯುವುದು-ಗುಂಡು ಹಾರಿಸಿದಾಗ ತಲೆ ಒಡೆದು-ರಕ್ತ ಧಾರಾಕಾರವಾಗಿ  ಸುರಿಯೋದು-ಸ್ಲೋ ಮೋಶನ್ ಕ್ಯಾಮೆರ ವರ್ಕ್. ಇತ್ಯಾದಿ..
೪.ಜನ ಮನ ಸೆಳೆವ ಖ್ಯಾತ ನಟ ನಟಿ -ಇರದೇ ಎಲ್ಲರೂ ಹೊಸಬರೇ ಇರುವುದು-(ಇದ್ದುದರಲ್ಲಿ  ಕಸಬ್ ಪಾತ್ರಧಾರಿ  ಜೈಸ್ವಾಲ್ದು ನೈಜ ರೀತಿಯ ಅಭಿನಯ-ಅಪ್ಪಿ ತಪ್ಪಿ  ಕೈಗೆ ಸಿಕ್ಕರೆ  ಇವನೇ ನೈಜ ಕಸಬ್ ಎಂದು ಸಾಯಿಸಿಬಿಡುವಂತ  ಅಭಿನಯ..)
೫.ಉಗ್ರರು ಪಾಕಿ ಸಮುದ್ರ ಪ್ರದೇಶದಿಂದ ಭಾರತೀಯ ಸಮುದ್ರ ತೀರಕ್ಕೆ ಬರುವಲ್ಲಿನ  -ನಂತರದ ಘಟನೆಗಳ ಸುತ್ತ ಕೇಂದ್ರೀಕೃತವಾಗಿರುವ ಈ ಚಿತ್ರದಲ್ಲಿ  ತಾಜ್ ಹೋಟೆಲ್ ಎಂದು  ಸೆಟ್ಟು ಹಾಕಿದ (೪ಕೋಟಿ  ವೆಚ್ಚದಲ್ಲಿ..!)ಡೈನಿಂಗ್ ಹಾಲ್  ಜಾಗದಲ್ಲಿ ನಡೆವ ಗ್ರೆನೇಡ್ ಗುಂಡಿನ ಧಾಳಿ ಮತ್ತು  ರೈಲ್ವೆ ಸ್ಟೇಶನ್-ಲಿಯೋಫಾಲ್ದ್ ಹೋಟೆಲ್ ಮೇಲಿನ -ಹಾಗೂ ಕಾಮಾ  ಹಾಸ್ಪಿಟಲ್  ಧಾಳಿ  ದೃಶ್ಯಗಳನ್ನು ನೋಡುವವರಿಗೆ ಅಸಹಜ ಎನ್ನಿಸುವ ರೀತಿ ಇವೆ-ಆ ಸನ್ನಿವೇಶಗಳನ್ನು ಚಿತ್ರೀಕರಿಸಿದ-ಅದರಲ್ ನಟಿಸಿದವರ ಅಭಿನಯ -ನೈಜವಾಗಿರದೆ ಅಭಿನಯ ಎನ್ನೋದು ಗೊತ್ತಾಗುತ್ತೆ..;
 
೬.ಖ್ಯಾತ ನಟ  ನಾನ ಪಾಟೇಕರ್ -ಪೋಲೀಸ್ ಮುಖ್ಯಸ್ತ ಆಗಿ  ಸಂಯಮದ ಅಭಿನಯ ನೀಡಿರುವರು-ಆದರೆ ಅವರನ್ನು ಉಪಯೋಗಿಸಿಕೊಂಡ ರೀತಿ ನೋಡಿದರೆ-ಆ ಪಾತ್ರಕ್ಕೆ ಬೇರೆ ಯಾರಾದರೂ ಆಗಬಹುದಿತ್ತು-ಅವರೇ ಯಾಕ್ ಬೇಕಿತ್ತು ಎನ್ನಿಸದೇ ಇರದು..
 
೭.ಮುಖ್ಯವಾಗಿ ಉಗ್ರರನ್ನು ಕೊಳ್ಳುವ ಸೆರೆ ಹಿಡಿವ -ಜನರನ್ನು ಸುರಕ್ಷಿತವಾಗಿ ಕರೆ ತರುವ  ಎನ್  ಎಸ್  ಜಿ ಯೋಧರ ಕಾರ್ಯಾಚರಣೆ ದೃಶ್ಯವೇ ಚಿತ್ರದಲ್ಲಿ ಇಲ್ಲ. ಇದೆ ಮುಖ್ಯವಾಗಿ ಈ ಚಿತ್ರದ ಡ್ರಾ ಬ್ಯಾಕ್ ಅಂಶ..
ಅದಿಲ್ಲದೆ ಕೇವಲ-ನಾನಾ ಪಟೇಕರ್ ಮತ್ತು ಕಸಬ್ ಮಧ್ಯದ ಸಂಭಾಷಣೆ-ಜಿಹಾದ್ ಬಗ್ಗೆ ಭಾಷಣ -ನೀರು ಕುಡಿಯುವುದು-ಚಹಾ ಕುಡಿಯುವುದು ಇತ್ಯಾದಿ ಮಧ್ಯೆ ೨ ಘಂಟೆ ಹೋಗಿದ್ದೆ ಗೊತ್ತಾಗದೆ -ಚಿತ್ರ ಕಸಬ್ ಗಲ್ಲಿನಿಂದ ಮುಗಿಯುತ್ತದೆ.
 
೮.ಏನೇನೋ ನಡೆಯುತ್ತೆ - ಬರುತ್ತೆ ಈಗ ಅಗ-ಇನ್ನೇನು ಬಂತು ಎನ್ನುವ ಕಾತರಿಕೆ ಮನದ ನಮಗೆ ಇದಕಿಂತ ದೊಡ್ಡ ನಿರಾಶೆ ಬೇರೆ ಬೇಕಾ?
 
ಈ ಚಿತ್ರವನ್ನು ನೋಡಿದ ಮೇಲೆ  ನನಗೆ   ಅನ್ನಿಸಿದ್ದು :
 
ಈ ಚಿತ್ರವನ್ನು ಹೀಗೆ ತೆಗೆಯುವ ಹಾಗಿದ್ದರೆ-ರಾಮ್ ಗೋಪಾಲ್ ವರ್ಮ ಯಾಕೆ? ಯಾರದರೂ ಹೊಸ ನಿರ್ದೇಶಕರೆ ತೆಗೆಯಬಹುದಿತ್ತು..;
ರಾಮ್ ಗೋಪಾಲ್ ವರ್ಮ ಹೆಸರಿಗೆ ಒಂದು ಚುಂಬಕ ಶಕ್ತಿ ಇದೆ ಅದಕ್ಕೆ ಸಾಕ್ಷಿ ಆಗಿ ಶಿವ-ಸತ್ಯ-ಕಂಪನಿ -ರಕ್ತ ಚರಿತ್ರ -ರಂಗೀಲ ಸಿನೆಮಾಗಳು  ಇವೆ..
ಆ ತರಹದ ಹಿಟ್ ಚಿತ್ರಗಳ ನಿರ್ದೇಶಕ ಹೀಗೆ ಬೀಡು ಬೀಸಾಗಿ  ಹೊಸಬರಂತೆ ಏನೇನೂ ಹೊಸತನ ಇಲ್ಲದ ಚಿತ್ರವನ್ನು-ಅದೂ ದೇಶವನ್ನು-ಜಗತ್ತನ್ನು ತಲ್ಲಣಗೊಳಿಸಿದ ನೈಜ ಘಟನೆ ಕುರಿತ ಚಿತ್ರವನ್ನು ಹೀಗೆ ತೆಗ್ಯೋದ?
 
ಛೆ ಛೆ...!
ಅದೇನೋ ಗೊತ್ತಿಲ್ಲ ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅನ್ನೋ ಗಾದೆ  ಬಹುಪಾಲು ವಿಷ್ಯ ವ್ಯಕ್ತಿಗಳಿಗೆ  ಸೆಟ್ ಆಗುತ್ತೆ..!
ಮಣಿ ರತ್ನಂ (ರೋಜ-ಬಾಂಬೆ-ದಿಲ್ ಸೆ-ಇರುವರ್ )-ಎಂತೆಂತ ಹಿಟ್ ಚಿತ್ರ ಕೊಟ್ಟವರು-ಜಗತ್ತಿನ ಸಿನೆಮ ಜಗತ್ತಿನ ಖ್ಯಾತನಾಮ ವ್ಯಕ್ತಿಗಳಲ್ಲಿ ಒಬ್ಬರು-ಆದರೆ ಈಗೀಗ ಅವರು ತೆಗೆದ ಯಾವೊದ್ನು ಚಿತ್ರಗಳಲ್ಲೂ ಅವರತನವಿಲ್ಲ -ಒಂಥರಾ ಹೊಸಬರ ರೀತಿಯ ಚಿತ್ರ ತೆಗೆದು ಹಿಂದೊಮ್ಮೆ  ಆ ರೀತಿಯ ಚಿತ್ರ ತೆಗೆದವರು ಇವರೇನಾ ಎಂಬ ಭಾವ ಮೂಡುವ ಹಾಗೆ ಮಾಡಿದವರು..
 
ಇತ್ತೀಚಿನ ಅವರ ಚಿತ್ರ  
'ಕಡಲ್ ' ತೋಪು ಆಗಿ ವಿತರಕರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ  ಅಂಶ  ಇವರಿಗೆಲ್ಲ ಅನ್ವಯ ಆಗುತ್ತೆ 
 
೧.ತೆಲುಗಿನ -ತೇಜ ಅವರು (ಚಿತ್ರಂ -ಜಯಂ-ನಿಜ೦ ಚಿತ್ರಗಳ  ನಿರ್ದೇಶಕ)
೨.ಹಿಂದಿಯ ಸುಭಾಶ್ ಘಾಯ್ (ತಾಲ್-ಪರ್ದೇಶ್ -ಚಾಂದಿನಿ)
ಇದೇ  ಅಂಶ ಬಹುತೇಕ ಸಂಗೀತ ನಿರ್ದೇಶಕರು -ಕಥೆಗಾರರು-ನಿರ್ಮಾಣ ಸಂಸ್ಥೆಗಳಿಗೂ ಅನ್ವಯವಾಗುತ್ತೆ..!
 
ಈಗೀಗ ಯಾಕೋ ನನಗೆ  ಯಾವುದರ ಯಾರೊಬ್ಬರ ಬಗ್ಗೆಯಾಗಲಿ  ಜಾಸ್ತಿ ನಿರೀಕ್ಷೆ-ಆಸಕ್ತಿ-ಕುತೂಹಲ ಇರೋದು  ಇಟ್ಟುಕೊಳ್ಳುವುದು ತರವಲ್ಲ ಅನಿಸುತ್ತಿದೆ...!
 
ಈ ಸಿನೆಮಾವನ್ನು  ಹೇಗೆ ತೆಗೆದಿರಬಹುದು ಎನ್ನುವ ಕೆಟ್ಟ ಕುತೂಹಲಕ್ಕಾಗಿಯಾದರೂ ಒಮ್ಮೆ ನೋಡಿ...ಮರೆತು ಬಿಡಿ..

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

K.M.Vishwanath ಶುಕ್ರ, 03/08/2013 - 20:12

ಮತ್ತೆ ಸಿನಿಮಾದೊರು ಕೊಲೆ ಹೇಗೆ ಮಾಡುವುದು ದರೊಡೆ ಹೇಗೆ ಮಾಡುವದು ಅಂತಾ ಹೇಳಿಕೊಟ್ಟರಾ ಗುರುವೆ//

 

venkatb83 ಭಾನು, 03/10/2013 - 11:17

ನಿಮ್ಮ ಪ್ರತಿಕ್ರಿಯೆ ನನಗೆ ಅರ್ಥವಾಗಲಿಲ್ಲ..

ಪ್ರತಿಕ್ರಿಯೆಗೆ ನನ್ನಿ..
ಶುಭವಾಗಲಿ..
\\//

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.