Skip to main content

ನಾವೇಕೆ ಅಳುತ್ತೇವೆ ???

ಇಂದ shamala
ಬರೆದಿದ್ದುMarch 22, 2009
4ಅನಿಸಿಕೆಗಳು

[img_assist|nid=3862|title=ಅಳು|desc=|link=none|align=left|width=215|height=197]ಮೊಟ್ಟ ಮೊದಲಿಗೆ ಈ ಅಳು ಎಂದರೆ ಏನು ಯಾಕೆ, ಯಾವಾಗ, ಹೇಗೆ ಬರುತ್ತದೆ ಎಂಬುದೊಂದು ದೊಡ್ಡ million dollar ಪ್ರಶ್ನೆ. ನನ್ನ ಪ್ರಕಾರ ಮಾನಸಿಕ ಅಸಂತುಲನ ಅಥವಾ ಆಘಾತ ಅಳುವಿನ ಶುರುವಾತು ಎನ್ನಬಹುದು. ಆದರೆ ಬರೀ ಈ ಮಾನಸಿಕ ಏರು ಪೇರು ಮಾತ್ರವೇ ಅಳುವಿಗೆ red carpet ಹಾಕಿ ಬರಮಾಡಿಕೊಳ್ಳತ್ತೋ ಅಥವಾ ದೈಹಿಕ ಅಸ್ವಸ್ಥತೆ / ನೋವು ಕೂಡ ಅಳುವನ್ನು ಸ್ವಾಗತಿಸುತ್ತೋ ಎನ್ನುವುದೇ ನನ್ನ ಪ್ರಶ್ನೆ ? ಈ ಅಳು ಅಂದರೆ ಏನು ? ಬರಿಯ ಕಣ್ಣಿರೋ ಕಣ್ಣೀರಿನ ಪ್ರವಾಹವೋ, ಎಲ್ಲಾ ಕಾಲದಲ್ಲೂ ಬರತ್ತೋ or ಅದಕ್ಕೂ ಒಂದು ಕಾಲ (ವಸಂತ ಕಾಲ, ಮಳೆಗಾಲ, ಛಳಿಗಾಲ ಎಂದೆಲ್ಲಾ ಇದೆಯಲ್ಲಾ) ಅಂತ ಏನಾದರೂ ಇದೆಯಾ ಎಂದರೆ ಊಹೂಂ.... ಯಾರೂ ಉತ್ತರ ಹೇಳಲಾಗದು.

ಇದಕ್ಕೆ ಕಾಲ, ಋತು, ದಿನ, ರಾತ್ರಿ, ಒಳಗೆ, ಹೊರಗೆ, ಬಹು ಜನಗಳ ಮಧ್ಯದಲ್ಲಿ ಅಥವಾ ಏಕಾಂತ ಎಂಬ ಯಾವೊಂದು ಕಟ್ಟುಪಾಡೂ ಇಲ್ಲ.... ಹೇಳದೆ ಕೇಳದೆ, ತನ್ನ ಇಷ್ಟ ಬಂದ ಕಡೆ ಕಾಣಿಸುಕೊಳ್ಳುವ ಅತ್ಯಂತ ನವಿರಾದ ಒಂದು ಭಾವನೆ. ಮನಸ್ಸೆಂಬ ಅಂಕುಶವಿಲ್ಲದ, ಹಿಡಿತಕ್ಕೆ ಬರದೇ ಓಡುವ ಕುದುರೆಗೆ, ಇದು ಒಂಥರಾ speed break ಹಾಕುವ ಛಾವಟಿ ! ನಮ್ಮ ಹೃದಯ ಏನನ್ನಾದರೂ ನೋಡಿದಾಗ, ಅದನ್ನು ಒಪ್ಪಿಕೊಳ್ಳದಿದ್ದರೆ, ಇಷ್ಟವಾಗದಿದ್ದರೆ, or if our heart does not accept something happening in the surroundings, lead to some kind of blockage in our inner system and the expression or hurt comes out through our tears !!! ಕಣ್ಣೀರು ಮನಸನ್ನು ಶಾಂತಗೊಳಿಸುತ್ತದೆ. ಇದೊಂದು ಸುಂದರವಾದ ವರ, ನಮ್ಮ ದೇವರು ನಮಗೆ ಕೊಟ್ಟಿರುವುದು. ಕಣ್ಣೀರು ದುಗುಡಗೊಂಡಿರುವ ಮನಸ್ಸಿಗೆ ಕಡಿನಾಣ ಹಾಕಿ, ನಮ್ಮ ಯೋಚನಾ ಶಕ್ತಿಯನ್ನು ಜಾಗ್ರುತಿಗೊಳಿಸುತ್ತದೆ, ದುಃಖವಾದಾಗ, ಕಣ್ಣೀರು ಹರಿಯತೊಡಗಿದ ಒಡನೇ ನಮ್ಮ ಬುದ್ಧಿ ಕೆಲಸ ಮಾಡಲು ತೊಡಗುತ್ತದೆ. and initial outburst of tears (emotions) leads to more rational thoughts !!!!

ನಾನು ನನ್ನ ಅನುಭವ ನೋಡಿಕೊಂಡಾಗ ನನ್ನ ವ್ಯಕ್ತಿತ್ವವನ್ನು ಅಳೆದು ಕೊಂಡಾಗ, ನನಗೆ ನನ್ನ ಮೇಲ್ಮನೆಯ ನೀರಿನ ಟ್ಯಾಂಕಿ ಯಾವಾಗಲೂ ತುಂಬಿ ಹರಿಯುತ್ತಿರುತ್ತದೆಂದು ಅನ್ನಿಸುತ್ತದೆ. ಮೊದಲು ಕಣ್ಣೀರು ಹೊರ ಬರತ್ತೋ ಅಥವಾ ನನ್ನ ಮನಸ್ಸಿಗೆ ಧಕ್ಕೆ ಬರತ್ತೋ ಅಂತ ತೀರ್ಪು ಕೊಡುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಆದರೆ ಅತ್ಯಾಶ್ಚರ್ಯಕರವಾದ ಸಂಗತಿ ಎಂದರೆ, ನಾನು ಸಂತೋಷವಾದಾಗಲೂ ಕೂಡ ಅಳುತ್ತೇನೆ ಮತ್ತು ಯಾರಾದರೂ ನನ್ನ ಅಂತರಾಳವನ್ನು ಸೋಕುವಂತಹ, ಮಾತುಗಳನ್ನಾಡಿದಾಗಲೋ, ನನ್ನ ಮೇಲೆ ಪ್ರೀತಿ ತೋರಿಸಿದಾಗಲೋ ಕೂಡ ನನಗೆ ಅಳು ಬರತ್ತೆ. I cry even when I am very happy and also when I am touched by someone's kind or affectionate gesture. ತುಂಬಾ ಜನ ತಮ್ಮ ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಆದರೆ ನನಗನ್ನಿಸುತ್ತದೆ, ನಾವು ನಮ್ಮ ಭಾವನೆಗಳ ನದಿಯನ್ನು ಹರಿಯಬಿಡಬೇಕು. ಅದು ಹರಿಯ ಬಿಟ್ಟಷ್ಟೂ ಜುಳು ಜುಳು ಎಂಬ ಸಂಗೀತಮಯ ಪ್ರಪಂಚ ಸೃಷ್ಟಿಸುತ್ತಾ ತನ್ನ ಹತ್ತಿರ ಬಂದವರನ್ನೆಲ್ಲಾ, ಮೋಡಿ ಮಾಡುತ್ತಾ, ತನ್ನೆಡೆಗೆ ಸೆಳೆಯುತ್ತಾ ಹೋಗುತ್ತದೆ. ಸಂಗೀತ ಎಲ್ಲೆಡೆ ತುಂಬಿ ಹರಿಯುತ್ತಿದ್ದರೆ, ಪ್ರಪಂಚ ಸುಂದರವಾಗಿರತ್ತೆ ಮತ್ತು ಎಲ್ಲರೂ ಸಂತೋಷವಾಗಿ ಇರುತ್ತಾರೆ.

ನೀವೇನಂತೇರಿ ? ನಾನಂತೂ ನನ್ನೆಲ್ಲಾ ಭಾವನೆಗಳನ್ನೂ ಪಿಸುಮಾತಿನ ಮೂಲಕ ಹರಿಯ ಬಿಡುವಿದೆಂದು ನಿರ್ಧರಿಸಿಬಿಟ್ಟಿದ್ದೀನಿ. ನೀವು ಮುಚ್ಚಿಡುವಿರಾ ಇಲ್ಲ ನನ್ನಂತೆ................. I just love to express my emotions.......................

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ಕೈವಲ್ಯನಾಥ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/23/2009 - 14:33

""ನಾನಂತೂ ನನ್ನೆಲ್ಲಾ ಭಾವನೆಗಳನ್ನೂ ಪಿಸುಮಾತಿನ ಮೂಲಕ ಹರಿಯ ಬಿಡುವಿದೆಂದು ನಿರ್ಧರಿಸಿಬಿಟ್ಟಿದ್ದೀನಿ."" ಎನ್ನುವ ಈ ವಾಕ್ಯ ಓದುಗರಲ್ಲಿ ತುಸು ಭಯ ಹುಟ್ಟಿಸುವಂತಿದೆ !!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/23/2009 - 14:37

ನಾನಂತೂ ನನ್ನೆಲ್ಲಾ ಭಾವನೆಗಳನ್ನೂ ಪಿಸುಮಾತಿನ ಮೂಲಕ ಹರಿಯ ಬಿಡುವಿದೆಂದು ನಿರ್ಧರಿಸಿಬಿಟ್ಟಿದ್ದೀನಿ. ನೀವು ಮುಚ್ಚಿಡುವಿರಾ ಇಲ್ಲ ನನ್ನಂತೆ...

ಸಾಮಲಕ್ಕೋ... ವಸಿ ನಿದಾನಾ...ವಾರಕ್ಕೊಂದು ಪಿಸುಮಾತಿನ ಮೂಲಕ ಹರಿಬಿಟ್ರೆ ಸಾಕಕ್ಕೋ..... ನೀ ಸಂದಾಗಿ ಬರೀತ್ಯಕ್ಕೋ...ಆದ್ರೆ ವಸಿ ನಿದಾನ... ಮೊದ್ಲು ಬರ್ದಿದ್ದು ಅರ್ಗಿಸ್ಕಂಡು ಆಮೇಲೆ ಮತ್ತೆ ಬರ್ದ್ರೆ ಸಂದಾ ಕಣಕ್ಕೋ. ಅದಲ್ದೇ ಬಳಸಾ ಸಬ್ದಾ ನೋಡ್ಕಕ್ಕೋ. ಡಬ್ಬಲ್ ಮೀನಿಂಗ್ ಬರೋವಂಗೆ ಬರೀಬೇಡಕ್ಕೋ. ಎಲ್ಲಾರೂ ನಿನ್ನಂಗೇ ಹರಿಬಿಡಕ್ಕೆ ಸುರುವಚ್ಕಂಡ್ರು ಅಂದ್ಕಕ್ಕೋ.... ಜಾಗ ಎಲ್ಲೈತಕ್ಕೋ?

ರಾಜೇಶ ಹೆಗಡೆ ಮಂಗಳ, 03/24/2009 - 17:17

ಹಾಯ್ ಶ್ಯಾಮಲಾ ಜನಾರ್ಧನ್ ಅವರೇ,

ಭಾವನೆಗಳಲ್ಲೊಂದಾದ ಅಳುವಿನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. 8)
ಮೇಲಿನ ಅನಾಮಿಕರಿಬ್ಬರ ಅಭಿಪ್ರಾಯ ನೋಡಿ ನಿಮ್ಮ ಮೇಲ್ಮನೆಯ ಟ್ಯಾಂಕಿನಿಂದ ನೀರು ಹರಿದು ಬರಲಿಲ್ಲವೆಂದು ಕೊಳ್ಳುತ್ತೇನೆ. :D ತಮಾಷೆಗೆ ಅಂದೆ.

ಬಹುಶಃ ಏನೋ ಬರೆಯಬೇಕು ಎಂದು ಪ್ರತಿದಿನ ಬರೆಯುವದಕ್ಕಿಂತ ಹೀಗೆಯೆ ಉತ್ತಮ ಲೇಖನ, ಅನುಭವಗಳನ್ನು ವಾರಕ್ಕೊಮ್ಮೆ ಬರೆದರೆ ಚೆನ್ನ ಅನ್ನುವದು ಅವರ ಅಭಿಪ್ರಾಯ. ವಿಸ್ಮಯ ನಗರಿಯ ಜನರೇ ಹೀಗೆ. ಸ್ವಲ್ಪ ನೇರ ನುಡಿ. ಆದರೂ ಒಳ್ಳೆಯ ಮನಸ್ಸು. :symapthy:

ನನ್ನ ಪ್ರಕಾರ ಹೀಗೆ ಮಾಡುವದರಿಂದ ಅನೇಕ ಲಾಭಗಳಿವೆ. ಬರೆಯಲು ಹೆಚ್ಚಿನ ಸಮಯ ಇರುವದರಿಂದ ಲೇಖನಗಳ ಗುಣಮಟ್ಟ ಹೆಚ್ಚಬಹುದು.ನಿಮ್ಮ ಹಿಂದಿನ ಲೇಖನ ಹೆಚ್ಚು ಜನ ಓದುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುತ್ತಾರೆ.

ನಿಮ್ಮ ಮುಂದಿನ ಲೇಖನದ ನಿರೀಕ್ಷೆಯಲ್ಲಿದ್ದೇವೆ. :)

ಮೇಲೆ ಅನಾಮಿಕರಾಗಿ ಕಮೆಂಟ್ ಹಾಕಿದ ಮಹಾನುಭಾವರಿಬ್ಬರಿಗೆ,

ದಯವಿಟ್ಟು ಅನಾಮಿಕರಾದ ಮಾತ್ರಕ್ಕೆ ಇನ್ನೊಬ್ಬರನ್ನು ನೋಯಿಸುವಂತಹ ಕಮೆಂಟ್ ಖಂಡಿತ ಬೇಡ.

shamala ಧ, 03/25/2009 - 15:02

ನಮಸ್ಕಾರ ರಾಜೇಶರಿಗೆ

ತುಂಬಾ ಧನ್ಯವಾದಗಳು. ಅವರವರ ಭಾವನೆಗಳನ್ನು ಅವರು ವ್ಯಕ್ತಪಡಿಸಲು ಸ್ವತಂತ್ರರು ಅಲ್ಲವಾ? ನೀವು ಹೇಳಿದ್ದು ಸರಿ, ಸಧ್ಯ ನನಗೆ ಅಳು ಬರಲಿಲ್ಲ. :( ನೇರ ನುಡಿಯ ಒಳ್ಳೆಯ ಮನಸ್ಸಿನ ಅನಾಮಿಕರಿಗೆ ಉತ್ತರಿಸುವ ಗೊಡವೆ ಬೇಡವೆಂದುಕೊಂಡೆ :D ! ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು. ಖಂಡಿತಾ ಬರೆಯುತ್ತೇನೆ, ಮತ್ತೆ........ ಮತ್ತೆ....... :)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.