ರೊಟ್ಟಿ
ಅಮ್ಮ ನನಗೂ ಹಿಟ್ಟನು ಕೊಡು
ಜೋಳದ ರೊಟ್ಟಿಯ ಮಾಡುವೆನು|
ಕೊಣಮಗಿಯಲ್ಲಿ ಹಿಟ್ಟನು ಹಾಕಿ
ಬಿಸಿ ನೀರನು ಸುರುವುವೆನು||೧||
ಗಂಟಾಗದ ರೀತಿ ಮೆಲ್ಲಗೆ ಕಲಿಸಿ
ಉಳ್ಳಿಯ ಮಾಡುವೆನು|
ಪಟ ಪಟ ಬಡೆದು ದುಂಡಗೆ ಮಾಡಿ
ಹಂಚಲಿ ಹಾಕುವೆನು||೨||
ರೊಟ್ಟಿಯು ಬೆಂದು ಹೊಟ್ಟೆಯು ಉಬ್ಬಲು
ಪುಟ್ಟಿಗೆ ಹಾಕುವೆನು|