ಎಟಿಎಂ: ಇಂದಿನಿಂದ ನಿಯಮ ಬದಲು
ನವದೆಹಲಿ (ಪಿಟಿಐ): ಬ್ಯಾಂಕ್ಗಳ `ಎಟಿಎಂ` ಬಳಸುವ ಗ್ರಾಹಕರಿಗೆ ಶುಕ್ರವಾರದಿಂದ ಹೊಸ ನಿಯಮಗಳು ಅನ್ವಯವಾಗಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಆದೇಶದ ಅನ್ವಯ, `ಎಟಿಎಂ` ವಹಿವಾಟಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.
`ಎಟಿಎಂ`ಗಳಿಂದ ಹಣ ಪಡೆಯುವಾಗ ಯಾಂತ್ರಿಕ ದೋಷದಿಂದ ನಗದು ಗ್ರಾಹಕರ ಕೈಸೇರದೇ ಖಾತೆಯಲ್ಲಿ ಹಣ ಕಡಿತಗೊಂಡ ಪ್ರಕರಣಗಳಲ್ಲಿ ಇನ್ನು ಮುಂದೆ 7 ಕೆಲಸದ ದಿನಗಳಲ್ಲಿ ನಿರ್ದಿಷ್ಟ ಮೊತ್ತವು ಗ್ರಾಹಕರ ಖಾತೆಗೆ ಸೇರ್ಪಡೆಯಾಗಲಿದೆ.
ಗ್ರಾಹಕರು ದೂರು ನೀಡಿದ ನಂತರ 7 ಕೆಲಸದ ದಿನಗಳಲ್ಲಿ ಅವರ ಖಾತೆಗೆ ಸಂಬಂಧಿಸಿದ ಬ್ಯಾಂಕ್ಗಳು ಹಣ ಸಂದಾಯ ಮಾಡಬೇಕು ಎಂದು ಕೇಂದ್ರೀಯ ಬ್ಯಾಂಕ್ ಸೂಚಿಸಿದೆ. ಇಲ್ಲಿಯವರೆಗೆ ಇದಕ್ಕೆ 12 ದಿನಗಳನ್ನು ನಿಗದಿ ಮಾಡಲಾಗಿತ್ತು.
`ಆರ್ಬಿಐ` ಮಾರ್ಗದರ್ಶಿ ಸೂತ್ರಗಳ ಅನ್ವಯ, 7 ಕೆಲಸದ ದಿನಗಳ ನಂತರವೂ ಖಾತೆಗೆ ಹಣ ಪಾವತಿ ಮಾಡದಿದ್ದರೆ ಬ್ಯಾಂಕ್ಗಳು ಪ್ರತಿ ದಿನಕ್ಕೆ ರೂ100ರಂತೆ ದಂಡ ಪಾವತಿಸಬೇಕಾಗುತ್ತದೆ. ತೊಂದರೆಗೆ ಗುರಿಯಾದ ಗ್ರಾಹಕರು 30 ದಿನಗಳಲ್ಲಿ ದೂರು ಸಲ್ಲಿಸಿರಬೇಕಾಗುತ್ತದೆ.
ಗ್ರಾಹಕರು ತಮ್ಮ ಖಾತೆ ಇರದ ಇತರ ಬ್ಯಾಂಕ್ಗಳ `ಎಟಿಎಂ` ಮೂಲಕ ಹಣ ಪಡೆಯುವುದರ ಮೇಲೆ ಸದ್ಯಕ್ಕೆ ಗರಿಷ್ಠ 5 ಬಾರಿಯ ಮಿತಿ ವಿಧಿಸಲಾಗಿದೆ. ಹಣಕಾಸೇತರ ವಹಿವಾಟುಗಳಾದ ಖಾತೆಯ ಶಿಲ್ಕು ತಿಳಿದುಕೊಳ್ಳುವ, ರಹಸ್ಯ ಸಂಖ್ಯೆ (ಪಿನ್) ಬದಲಿಸುವ ಮತ್ತು ಖಾತೆಯಲ್ಲಿ ಇರುವ ಹಣ ಮತ್ತು ವಹಿವಾಟಿನ ಚಿಕ್ಕ ಮುದ್ರಿತ ಹೇಳಿಕೆ ಪಡೆಯುವುದರ ಮೇಲೆ ಇದುವರೆಗೆ ಯಾವುದೇ ನಿರ್ಬಂಧ ಇರಲಿಲ್ಲ. ಈ ಪದ್ಧತಿಯೂ ಶುಕ್ರವಾರದಿಂದ ಬದಲಾಗಲಿದೆ.
ಹೊಸದಾಗಿ ಜಾರಿಗೆ ಬರುವ ಹೊಸ ನಿಯಮಗಳ ಬಗ್ಗೆ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಮಾಹಿತಿಯನ್ನೂ ನೀಡಲಿವೆ. ಅನ್ಯ ಬ್ಯಾಂಕ್ಗಳ `ಎಟಿಎಂ`ಗಳ 5 ಉಚಿತ ಬಳಕೆಗೆ ಅವಕಾಶ ಮುಂದುವರೆಸಿರುವ ಆರ್ಬಿಐ, ಗರಿಷ್ಠ 5 ಬಾರಿಯ ಬಳಕೆಯಲ್ಲಿ ನಗದು ಮತ್ತು ನಗದೇತರ ವಹಿವಾಟುಗಳನ್ನೂ ಈಗ ಹೊಸದಾಗಿ ಸೇರ್ಪಡೆ ಮಾಡಿದೆ.
ಅಂದರೆ, ಇನ್ನು ಮುಂದೆ ಗ್ರಾಹಕರು ತಮ್ಮ ಖಾತೆ ಇರದ ಇತರ ಬ್ಯಾಂಕ್ಗಳ `ಎಟಿಎಂ`ಗಳನ್ನು ಹಣ ಪಡೆಯಲು, ಶಿಲ್ಕು ವಿವರ ಪಡೆಯಲು, ಚಿಕ್ಕ ಮುದ್ರಿತ ವಹಿವಾಟು ವಿವರ ಪಡೆಯಲು ಪ್ರತಿ ತಿಂಗಳು 5 ಬಾರಿ ಮಾತ್ರ ಉಚಿತವಾಗಿ ಬಳಸಬಹುದು. ಈ ಉಚಿತ ಸೇವೆಗಳು ಬರೀ ಉಳಿತಾಯ ಖಾತೆದಾರರಿಗೆ ಮಾತ್ರ ಲಭಿಸಲಿವೆ ಎನ್ನುವ ನಿಬಂಧನೆಯನ್ನೂ ವಿಧಿಸಲಾಗಿದೆ. 5 ಉಚಿತ ಅವಕಾಶ ನಂತರದ ಪ್ರತಿಯೊಂದು ವಹಿವಾಟಿಗೆ ಬ್ಯಾಂಕ್ಗಳು ಶುಲ್ಕ ವಿಧಿಸಬಹುದಾಗಿದೆ. 5 ವಹಿವಾಟು ನಂತರದ ಪ್ರತಿಯೊಂದು ನಗದು ವಹಿವಾಟಿಗೆ ರೂ20ರಂತೆ ಮತ್ತು ನಗದೇತರ ವಹಿವಾಟಿಗೆ ರೂ 8.50ರಂತೆ ಶುಲ್ಕ ವಿಧಿಸುವುದಾಗಿ ಎಚ್ಡಿಎಫ್ಸಿ ಬ್ಯಾಂಕ್ ಪ್ರಕಟಿಸಿದೆ. ಇತರ ಬ್ಯಾಂಕ್ಗಳೂ ಇದೇ ಧೋರಣೆ ಅನುಸರಿಸುವ ಸಾಧ್ಯತೆಗಳು ಇವೆ.
ಎಸ್ಎಂಎಸ್, ಇ-ಮೇಲ್ ಮಾಹಿತಿ: ವಂಚನೆ ತಡೆಗಟ್ಟಲು ಬ್ಯಾಂಕ್ನ ಪ್ರತಿಯೊಂದು ವಹಿವಾಟಿನ ಬಗ್ಗೆ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ಎಸ್ಎಂಎಸ್ ಮತ್ತು ಇ-ಮೇಲ್ ಮಾಹಿತಿ ರವಾನಿಸಬೇಕಾಗುತ್ತದೆ. ಸದ್ಯಕ್ಕೆ ನಿರ್ದಿಷ್ಟ ಮೊತ್ತ ಮತ್ತು ಆಯ್ದ ವಹಿವಾಟಿಗಷ್ಟೇ ಬ್ಯಾಂಕ್ಗಳು ಮಾಹಿತಿ ರವಾನಿಸುತ್ತಿವೆ.
ಸಾಲುಗಳು
- Add new comment
- 1005 views
ಅನಿಸಿಕೆಗಳು
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಉಮಾಶಂಕರ್.
ಉಪ್ ಯುಕ್ಥ ಮಾಹಿತಿ.. ಧನ್ಯವದಗಲು
ಉಪ್ ಯುಕ್ಥ ಮಾಹಿತಿ.. ಧನ್ಯವದಗಲು
ಲೇಖನ ಚೆನ್ನಾಗಿದೆ. ಉಪಯುಕ್ತ ಮಾಹಿ
ಲೇಖನ ಚೆನ್ನಾಗಿದೆ. ಉಪಯುಕ್ತ ಮಾಹಿತಿ ನೀಡಿದ್ದೀರಿ. ಥ್ಯಾಂಕ್ಸ್.
tumbaa upayukta
tumbaa upayukta maahiti
tilisiddakke dhanyavaadagalu
ಧನ್ಯವಾದಗಲು frend.
ಧನ್ಯವಾದಗಲು frend.
(faithamah78@yahoo.com)ಡಿಯರ್
(faithamah78@yahoo.com)
ಡಿಯರ್ ನನ್ನ ಹಲೋ
ನನ್ನ ಹೆಸರು ಫೇಯ್ತ್ Amah, ಅದು ನನಗೆ ನೀವು ಸಂವಹನ ಕಾರಣ ಸಂಬಂಧಿಸಿದಂತೆ ಒಂದು ಮಹಾನ್ ಆನಂದ ನೀಡಿ ಇ, ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹಾಗೆ ತಿನ್ನುವೆ
ನಲ್ಲಿ ನಾವು ಉತ್ತಮ ಪರಸ್ಪರ ಗೊತ್ತು ಆದ್ದರಿಂದ ಆ (faithamah78@yahoo.com) ನನಗೆ ಬರೆಯಬಹುದು ನಾನು ತುಂಬಾ ಸಂತೋಷದ ನಡೆಯಲಿದೆ.
ನಾನು ಎಂದು ಆದಷ್ಟು ಬೇಗ ಅದನ್ನು ತಿಳಿಯಲು ಕಾಯುವ ಇದೆ.
ಒಂದು ಪೂಜ್ಯ ದಿನ.
ನಂಬಿಕೆ
(faithamah78@yahoo.com)
Hello My Dear
My name is Faith Amah, it give me a great pleasure with due respect to communication with you and i will like to know more about you,
i will be very happy if you can write me AT (faithamah78@yahoo.com) so that we can know each other better.
i am waiting to hear from you as soon as possible .
have a blessed day.
Faith