Skip to main content

ಹುಡುಗಿಗೆ munch ಕೊಟ್ಟ punch ನೀಡಿದಳು..

ಇಂದ lokesh
ಬರೆದಿದ್ದುApril 12, 2011
8ಅನಿಸಿಕೆಗಳು

1 ) ಅವತ್ತಿನ ಮಾತು.. "ಕೊಡು ದೇವಿ ವರವನ್ನು ಕುಡುಕನಲ್ಲದ ಗಂಡನ..ಇವತ್ತಿನ ಮಾತು.. "ಕೊಡು ದೇವಿ ವರವನ್ನು ಕಮ್ಮಿ ಕುಡಿಯುವ ಗಂಡನ. 2 ) ಎಲ್ಲಾ ಹುಡುಗೀರು ಕ್ವಶ್ಚನ್ ಬ್ಯಾಂಕ್ ಥರಾ, ಅವರಿಗೆ ಯಾವುದಾದ್ರೂ ಕ್ವಶ್ಚನ್ ಕೇಳಿ ನೋಡಿ, ವಾಪಸ್ ನಿಮ್ಮನ್ನೇ ಪ್ರಶ್ನೆ ಕೇಳ್ತಾರೆ. 3 ) ಅವಳಿಗೆ ಪ್ರಪೋಸ್ ಮಾಡಲು ಕವನ ಬರೆದು ಕೊಟ್ಟೆ. ಅವಳು ರಿಜೆಕ್ಟ್ ಮಾಡಿದರೂ ಅವಳ ಜೊತೆಯಲ್ಲಿದ್ದವಳಿಗೆ ಇಷ್ಟವಾಯಿತು. ಇವಾಗ ಅವಳ ಹೆಸರು "ನನ್ನ ಹೆಂಡ್ತಿ" 4 ) ಮದುವೆಯಾದ 3 ತಿಂಗಳಿಗೇನೇ ನನಗೆ ಸಕ್ಕರೆ ಖಾಯಿಲೆ ಬರುತ್ತೆ ಅನ್ಸುತ್ತೆ.ನನ್ನವಳು ಕೊಡೋ ಮುತ್ತುಗಳು ತುಂಬಾನೇ ಸಿಹಿಯಾಗಿರುತ್ತೆ.. 5 ) ಹುಡುಗಿಗೆ ಮಂಚ್(munch) ಕೊಟ್ಟ..ಪಂಚ್ (punch) ನೀಡಿದಳು..
ಪರ್ಕ್ (perk) ಕೊಟ್ಟ.. ಪೊರ್ಕಿಅಂದಳು..
ನಾನು ನಿನ್ನ ಪ್ರೀತಿಸ್ತೀನಿ ಕಣೆ ಕ್ಯಾಡ್ಬರಿ(Cadbury) ಅಂದ..
ಐ ಟೂ ಲವ್ ಯೂ ಕಣೋ ಡೋಂಟ್ ವರಿ (Don't Worry) ಅಂದಳು..
ಒಂದೇ ಒಂದು ಮುತ್ತು ಕೊಡು ಅಲ್ಪೆನ್ ಲಿಬೆ(Alpenliebe) ಅಂದ..
ಅಷ್ಟಕ್ಕೇ ಅವಳ ಜೊತೆ ಆಯಿತು ಕಿಟ್-ಕ್ಯಾಟ್ (Kit-Kat)
ಕೊನೆಯಬಾರಿ ಅವಳಿಗೆ ಕೊಡಿಸಿದ್ದು ಮಿಲ್ಕಿ ಬಾರ್ (Milky Bar)
ಈಗ ಅವನ ವಾಸಸ್ಥಳ ಬರೀ ಬಾರ್ ಬಾರ್ ಬಾರ್... (only Bar Bar Bar..) 6) ನೂರಾರು ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದ ಶ್ರೀಮಂತ ಹುಡುಗನೊಬ್ಬನ ತಂದೆ ತಾಯಿ ತೀರಿಹೋದರು. ಜವಾಬ್ದಾರಿ ಬಂದ ಕೂಡಲೇ ಎಲ್ಲ ಸ್ನೇಹಿತರನ್ನು ಹಿಗ್ಗಾ ಮುಗ್ಗಾ ಬೈದು ವಿನಾಕಾರಣ ದೂರ ಮಾಡಿದ. ನೂರಾರು ಸ್ನೇಹಿತರಲ್ಲಿ ಮೂರು ಜನ ವಾಪಸ್ ಬಂದು, ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. 7 ) ಎಲ್ಲಾ ಪ್ರಶ್ನೆಳಿಗೂ ಉತ್ತರಿಸುತ್ತಿದ್ದ ಹುಡುಗಿಯೊಬ್ಬಳು, ಮುಗ್ಧ ಸಹಪಾಠಿಯ ಮುದ್ದು ಪ್ರಶ್ನೆಗೆ ಉತ್ತರಿಸಲಾಗದೇ, ಅನಿರ್ಧಿಷ್ಟ ಕಾಲಾವಕಾಶ ಬೇಡಿಕೊಂಡು ಬಂದಿದ್ದಳು. ಅಷ್ಟೊಂದು ದಿನದಿಂದ ಕಾದಿದ್ದ ಅವನಿಗೆ ಇವತ್ತಿನ ಅವಳ ವ್ಯಾಲಂಟೈನ್ ಕಾರ್ಡು, ಅವಳ ಉತ್ತರದ ಮುನ್ಸೂಚನೆ ನೀಡಿದೆ. ಅವನ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ.   8) ಇರೋ ಗರ್ಲ್ ಫ್ರೆಂಡುಗಳಲ್ಲಿ ಒಬ್ಬಳನ್ನು ಸೆಲೆಕ್ಟ್ ಮಾಡ್ಕೊಂಡು, ಗಿಫ್ಟ್ ಗಾಗಿ ಜಾಸ್ತಿ ತಲೆ ಕೆಡುಸ್ಕೊಂಡು, ಹೊಸ ಬಟ್ಟೆ ತಗೊಂಡು, ಫ್ರೆಂಡ್ ಗಳ ಸೆಂಟ್ ಹಾಕ್ಕೊಂಡು, ಗುಲಾಬಿ ಹಿಡ್ಕೊಂಡು ಅವಳ ಮುಂದೆ ಪೆಕರನ ಥರಾ ಹೋಗಿ ನಿಂತುಕೊಳ್ಳೋ ವಿಶೇಷ ದಿನಕ್ಕೆ ಫೆಬ್ರವರಿ 14 ಅನ್ನಬಹುದು  9 ) ನಾನು ಇವಳನ್ನು ಪ್ರೀತಿಸುತ್ತಿದ್ದರೂ, ಬೇರೇ ಹುಡುಗಿಯನ್ನು ನೋಡಿ ಒಪ್ಪಿಕೊಂಡಿದ್ದರಲ್ಲಿ ನನ್ನದೇನೂ ತಪ್ಪಿಲ್ಲ.. ಎಲ್ಲ ಹುಡುಗಿಯರೂ ಅವಳಂತೆಯೇ ಕಾಣುತ್ತಾರೆ..10 ) ಬದುಕಲು ಪ್ರೀತಿ ಬೇಕು ವಿನಾಃ ಪ್ರೀತಿಯೇ ಬದುಕಲ್ಲ. ಪ್ರೀತಿ ಅಂತ್ಯವಾಯಿತೆಂದು ಬದುಕನ್ನು ಅಂತ್ಯಗಾಣಿಸುವುದು ನಿಜವಾಗಲೂ ಸರಿಯಲ್ಲ. 11 ) ಯಾವಾಗಲೊಮ್ಮೆ ನಾವು ಬೇಗ ಏಳುವುದರ ನಷ್ಟವೆಂದರೆ, ನಾವು ಯಾವತ್ತು ಬೇಗ ಎದ್ದಿರ್ತೀವಿ, ಅವತ್ತೇ ಪೇಪರ್ ನವನು ಮತ್ತು ಹಾಲಿನವನು ಲೇಟಾಗಿ ಬಂದಿದಾರೆ ಅನ್ಸುತ್ತೆ.  12 ) ಪತ್ನಿಯ ವರ್ತನೆಯಿಂದ ಕುಪಿತಗೊಂಡ ಗಂಡ ಹೆಣ್ಣು ಕೊಟ್ಟ ಮಾವನಿಗೊಂದು ಎಸ್‌ಎಂಎಸ್ ಮಾಡಿದ ನಿಮ್ಮ ಪ್ರಾಡೆಕ್ಟ್ ನನಗೆ ಹೊಂದಾಣಿಕೆಯಾಗುತ್ತಿಲ್ಲ, ನನ್ನ ಅವಶ್ಯಕತೆ ಪೂರೈಸುತ್ತಿಲ್ಲ.. ಜಾಣ ಮಾವ ಪ್ರತಿಕ್ರಿಯಿಸಿದ ವಾರಂಟಿ ಮುಗಿದಿದೆ, ಉತ್ಪಾದಕರು ಜವಾಬ್ದಾರರಲ್ಲ!          ಪ್ರೀತಿಸಿ ಪ್ರೀತಿಸಲು ಬೀಡಿ ಪ್ರೀತಿಗಾಗಿ ಜೀವಿಸಿ
      "ಲೋಕೇಶನ್ನೂ ಪ್ರೀತ್ಸೋ ಹೃದಯಾ ಇರುತ್ತಾ          ಇದು ಎಲ್ಲೊ ಓದಿದ ನೆನಪು    

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಮಂಗಳ, 04/12/2011 - 17:18

ಹ್ಹ ಹ್ಹ ಹ್ಹ ಚೆನ್ನಾಗಿವೆ ಲೋಕೇಶ್ ರವರೆ,ಬಹುಶಃ ಎಸ್ ಎಂ ಎಸ್ ಗಳು ಅನ್ಕೋತಿನಿಉಮಾಶಂಕರ ಬಿ ಎಸ್

Jyothi ಧ, 04/13/2011 - 17:03

ತುಂಬಾ ತುಂಬಾ ಚೆನ್ನಾಗಿದೆ........... ಲೋಕೇಶ್'ರವರೆ....................
Very Very Nice... I Like it...........

Hi loki !! tumba cheennagi barediddiya!!  ಹುಡಿಗಿರಬಗ್ಗೆ ತುಂಬಾ ತಿಳಿದುಕೋಂಡೀದ್ದಿರಾ?!!! ದಿನಾಲೂ ಈಗೆ ಟಿಪ್ಸ ಗಳನ್ನು ಕೋಡ್ತಾಯಿರಿ!!
Tnx loki
ur freand /Venky

Pattar ಗುರು, 04/14/2011 - 13:09

ಲೋಕೇಶ್ ನೀವು ಹೀಗೆ ಹೆ೦ಗಳೆಯರ ಬಗ್ಗೆ ಬರೀತಾ ಇದ್ರೆ... ನೀವು ಯಾವಾಗಲೂ ಕೇಳ್ತಿರಲ್ಲಾ "ಲೋಕೇಶನ್ನೂ ಪ್ರೀತ್ಸೋ ಹೃದಯಾ ಇರುತ್ತಾ?"ಅನ್ನೋ ಪ್ರಶ್ನೆ, ಪ್ರಶ್ನೆಯಾಗೇ ಉಳಿಯುತ್ತೆ.......ಹ್ಹ ಹ್ಹ ಹ್ಹ  ಬೇಜಾರಾಗ್ಬೇಡಿ ಸುಮ್ನೆ ತಮಾಷೆ ಮಾಡ್ದೆ... ಸಕ್ಕತ್ತಾಗಿ ಬರೆದಿದ್ದೀರಾ

ಹೇಮಂತ ಭಾನು, 04/17/2011 - 15:16

 ಸತ್ಯಕ್ಕೆ ಸಮೀಪವಾದುದೆ ಇದೆ....ಹೇಳುವ  ರೀತಿ ವಿಭಿನ್ನವಾಗಿದೆ..ಹೀಗೆ ಮು೦ದುವರೆಯಲಿ  ಗೆಳೆಯ..

shobha ಸೋಮ, 04/18/2011 - 13:45

ella hudgeeru onde tara irolla hudgeera bagge tappagi baribedi please 

shree ಶುಕ್ರ, 04/22/2011 - 11:09

 ಹಾಯ್ ಲೋಕಿ ಎಲ್ಲಾ ತುಂಬಾ ಚೆನ್ನಾಗಿದೆ.......
     ವೆಂಕಿ ಹೇಳೋ ಹಾಗೆ ನೀವು ಹುಡ್ಗೀರ ಬಗ್ಗೆ ತುಂಬಾ ತಿಳ್ಕೊಡಿದೀರ.ಹೆಚ್ಚು ಪುಣ್ಯ ಬರತ್ತೆ ನಿಮಗೆ.ಯಾಕಂದ್ರೆ ನಗು ಆರೋಗ್ಯಕ್ಕೆ ಒಳ್ಳೇದು.ಎಲ್ರು ನಿಮ್ ಜೋಕ್ ಓದಿ ನಗ್ತಾರೆ ಆಯಸ್ಸು ಹೆಚ್ಚಿಸ್ಕೋತಾರೆ. ಎಲ್ರನ್ನ ಹೆಚ್ಚು ಬದುಕಿಸಿದ ಪುಣ್ಯ ನಿಮಗೆ ಬರತ್ತೆ.......ಹ... ಹ... ಹ ....ಹ .....
                                       ನಿಮ್ಮ ಸ್ನೇಹಿತೆ
                        ಶ್ರೀ...
 

ಲಾವಣ್ಯ ನಾಗ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/01/2011 - 13:26

ಲೋಕಿ ನೀವು ಹೀಗೆ ಹೆಣ್ಣು ಮಕ್ಕಳ ವಿರೋಧಿ ನಾನು ಅನೋ ರೀತಿಯಲ್ಲಿ ಬರಿತ್ತೀರಿ... ಒಂದಲ್ಲ ಒಂದು ದಿನ... ಹ್ಹ ಹ್ಹ ಹ್ಹ ಸುಮ್ನೆ ತಮಾಷೆ ಮಾಡದೇ.... ತುಂಬಾ ಅಂದರೆ ತುಂಬಾ ಚೆನ್ನಾಗಿದೆ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.