ಹಿಂದಿ ಚಲನಚಿತ್ರ ಟ್ರಾಫಿಕ್ ಸಿಗ್ನಲ್ - ಮನ ಮುಟ್ಟುವ ಚಿತ್ರ
ಹಿಂದಿ ಚಲನಚಿತ್ರ ಟ್ರಾಫಿಕ್ ಸಿಗ್ನಲ್ - ಮನ ಮುಟ್ಟುವ ಚಿತ್ರ
[img_assist|nid=392|title=ಟ್ರಾಫಿಕ್ ಸಿಗ್ನಲ್|desc=ಪೋಸ್ಟರ್|link=none|align=left|width=175|height=150]ಈ ಫಿಲಂ ಹೆಸರು ಕೇಳಿ ಏನಿರತ್ತೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಹೇಳೋದು ಮಣ್ಣು ಅಂತಾ ಅಂದು ಕೊಂಡಿದ್ದೆ. ಆದರೆ ಇದರ ಡೈರೆಕ್ಟರ್ ಮಧು ಬಂಡಾರ್ಕರ್ ಅವರ ಹಿಂದಿನ ಫಿಲಂಗಳು 'ಪೇಜ್ ೩' ಹಾಗೂ 'ಕಾರ್ಪೋರೇಟ್ ಚೆನ್ನಾಗಿದ್ದವು. ಆದರಿಂದ ಈ ಫಿಲಂ ನೋಡಿದೆ. ಆದರೆ ಮಧು ಬಂಡಾರಕರ್ ಇಲ್ಲಿ ನಮ್ಮನ್ನು ನಿರಾಶೆ ಮಾಡಲ್ಲ.
ಟ್ರಾಫಿಕ್ ಸಿಗ್ನಲ್ ಬಳಿ ನಿಲ್ಲುವ ವಾಹನಗಳಿಗೆ ಪೇಪರ್, ಮ್ಯಾಗಜಿನ್ ಇತ್ಯಾದಿಗಳನ್ನು ಮಾರಿ, ಬಿಕ್ಷೆ ಬೇಡಿ ಬದುಕುವ ಜನರ ಕಥೆಯನ್ನು ಮಧು ಬಂಡಾರಕರ್ ಅವರು ಮನ ತಟ್ಟುವಂತೆ
ಹೇಳುತ್ತಾರೆ. ಆ ಜನರ ಜೀವನದ ಅತಿ ಸೂಕ್ಷ್ಮ ವಿಷಯಗಳನ್ನು ನಮ್ಮ ಮುಂದೆ ತೆರೆದಿಡುವ ಪ್ರಯತ್ನ ಮಾಡುತ್ತಾರೆ.
ಮುಂಬೈನ ಬೀದಿಯಲ್ಲಿ ಬದುಕಲು ಕೆಳವರ್ಗದ ಜನ ಹೋರಾಡುವ ರೀತಿಯ ಚಿತ್ರಣ ತುಂಬಾ ಚೆನ್ನಾಗಿ ಬಂದಿದೆ.
ಈ ಚಿತ್ರದಲ್ಲಿ ಮಧು ಬಂಡಾರಕರ್ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಅವರ 'ಪೇಜ್ ೩' ಯಷ್ಟೇ ಸೊಗಸಾಗಿದೆ ಈ "ಟ್ರಾಫಿಕ್ ಸಿಗ್ನಲ್".
ಸಿಲ್ಸಿಲಾ (ಕುನಾಲ್ ಖೇಮು - ಕಲಿಯುಗ್ ಹೀರೋ) , ನೀತು ಚಂದ್ರಾ, ಕೊಂಕಣಾ ಸೇನ್ (ಪೇಜ್ ೩ ಖ್ಯಾತಿ) ಉತ್ತಮ ಅಭಿನಯ ನೀಡಿದ್ದಾರೆ.
ಹಾಡುಗಳಲ್ಲಿ "ನ ಜಿಸ್ ದಿನ್ ತೇರಿ ಮೇರಿ ಬಾತ್ ಹೋತಿ ಹೈ. ನ ದಿನ್ ಗುಜರತಾ ಹೈ. ರಾತ್ ಹೋತಿ ಹೈ." ತುಂಬಾ ಅರ್ಥಪೂರ್ಣ ಹಾಗೂ ಮಧುರವಾಗಿದೆ. ಈ ಹಾಡು ಮತ್ತೆ ಮತ್ತೆ
ಗುನುಗುನಿಸುವಂತಿದೆ.
ಇನ್ನೊಂದು ಹಾಡು "ಯಹಿ ಜಿಂದಗಿ ಹೈ ತೋ ಕ್ಯಾ ಜಿಂದಗಿ ಹೈ" ಕೂಡಾ ಅರ್ಥಪೂರ್ಣವಾಗಿದೆ.
ಒಟ್ಟಿನಲ್ಲಿ ಹೇಳುವಾದರೆ ಬಾಲಿವುಡ್ ಮಸಾಲಾ ಚಿತ್ರಗಳಿಗಿಂತ ಬೇರೆ ನಿರೂಪಣೆ. ಇದು ಮಧು ಬಂಡಾರಕರ್ ಅವರ ಶೈಲಿ ಕೂಡಾ.
ನಿಮಗೆ ಅವರ "ಪೇಜ್ ೩" ತುಂಬಾ ಇಷ್ಟವಾಗಿದ್ದರೆ ತಪ್ಪದೇ ನೋಡಬೇಕಾದ ಚಿತ್ರ ಇದು.
ವಿಸ್ಮಯಾ ರೇಟಿಂಗ್: ೫.5/೭ (5.5/7)
ಸಾಲುಗಳು
- Add new comment
- 1504 views
ಅನಿಸಿಕೆಗಳು
Re: ಹಿಂದಿ ಚಲನಚಿತ್ರ ಟ್ರಾಫಿಕ್ ಸಿಗ್ನಲ್ - ಮನ ಮುಟ್ಟುವ ಚಿತ್ರ
ಟ್ರಾಫಿಕ್ ಸಿಗ್ನಲ್ ತುಂಬಾ ಬೇರೆ ತರಾ ತೆಗೆಯಲು ಹೋಗಿ... ಅಡ್ಡಾ ದಿಡ್ಡಿ ತರಾ ಬಂದಿದೆ.... ಟೆಕ್ನಿಕಲ್ಲೀ ಇದು ತುಂಬಾ ವೀಕ್ ಆಗಿರುವ ಚಿತ್ರ. ಕಥೆ ಹಂದರ ಸರಿಯಾಗಿ ಪೋಣಿಸಿಲ್ಲ.... ಅದು ಬಿಟ್ಟರೆ ಒಳ್ಳೆಯ ಚಿತ್ರ.
--------------------------------------------------------------------------------------------------
traffic signal tumbaa bere tara tegeyalu hogi....adda diddi tara bandide...techinically idu tumbaa weak agiruva chitra. kathe handara sariyagi ponisilla... adu bittare olleya chitra
Re: ಹಿಂದಿ ಚಲನಚಿತ್ರ ಟ್ರಾಫಿಕ್ ಸಿಗ್ನಲ್ - ಮನ ಮುಟ್ಟುವ ಚಿತ್ರ
Near to Reallity....Realityಗೆ ಹತ್ತಿರವಾಗಿದೆ
Madhukeshwar.T .
Sr.Design Engineer(product development/CAE )
Hoyt Engineering solutions pvt ltd( http://hoytindia.com/)
Active Parteners of "Autocluster Development &Research Institute Ltd (http://autoclusterpune.org/contact.html)
Mobile: +91-934193