Skip to main content

ಶಿಕ್ಷಣ ಮತ್ತು ಹಿಂದಿ ಹೇರಿಕೆ

ಬರೆದಿದ್ದುSeptember 8, 2009
35ಅನಿಸಿಕೆಗಳು

ನನ್ನ ನೆನ್ನೆಯ ಲೇಖನದಲ್ಲಿ ಹೇಳಿದಂತೆ, ಭಾರತ ಒಕ್ಕೂಟದಲ್ಲಿ ರಾಷ್ಟ್ರ ಭಾಷೆ ಎಂಬ ಸ್ಥಾನ ಯಾವ ಭಾಷೆಗೂ ಇಲ್ಲ.
ಕಾನೂನು ಚೌಕಟ್ಟು ಹೀಗಿದ್ದರೂ, ಹಿಂದಿ ಭಾಷೆಗೆ ರಾಷ್ಟ್ರ ಭಾಷೆಯೆಂಬ ಕಿರೀಟ ತೊಡಿಸಿ, ಕರ್ನಾಟಕದ ಬಹುತೇಕ ಶಾಲೆಗಳಲ್ಲಿ ಹಿಂದಿ ಭಾಷೆಯನ್ನೊಂದು ಕಡ್ಡಾಯ ಭಾಷೆಯನ್ನಾಗಿ ಏಕೆ ಕಲಿಸಲಾಗುತ್ತಿದೆ?

ಹಿಂದಿ ಪ್ರದೇಶದಿಂದ ದೂರವಿರುವ, ತಮ್ಮದೇ ಆದ ಭಾಷೆ ಹೊಂದಿರುವ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಇತ್ಯಾದಿ ರಾಜ್ಯಗಳ ಮಕ್ಕಳಿಗೂ ಸಹ ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ.
ಈ ಪ್ರದೇಶಗಳ ಮಕ್ಕಳು, ತಮ್ಮ ಭಾಷೆ, ಇಂಗ್ಲಿಷು ಮತ್ತು ಹಿಂದಿ ಭಾಷೆಗಳನ್ನು ಕಲಿಯುವ ಹೊರೆಯನ್ನು ಹೊರುತ್ತಿದ್ದಾರೆ. ತಮಿಳು ನಾಡಿನಲ್ಲಿ ಹಿಂದಿ ಕಲಿಕೆಗೆ ಸಾರ್ವಜನಿಕ ವಿರೋಧವಿರುವುದರಿಂದ, ಅಲ್ಲಿನ ಮಕ್ಕಳು ಈ ಹೊರೆಯಿಂದ ತಪ್ಪಿಸಿಕೊಂಡಿದ್ದಾರೆ.
ಹೆಚ್ಚಾಗಿ ಕೇಂದ್ರೀಯ ಪಕ್ಷಗಳಿಂದ ಆಳಲ್ಪಡುತ್ತಿರುವ ಈ ರಾಜ್ಯಗಳ ನಾಯಕರು ಸ್ವಲ್ಪವೂ ಯೋಚಿಸದೆ, ಈ ಹೊರೆಯನ್ನು ತಮ್ಮ ತಮ್ಮ ರಾಜ್ಯದ ಚಿಕ್ಕ ಮಕ್ಕಳ ಮೇಲೆ ಎಸೆದು ಕೈ ತೊಳೆದುಕೊಳ್ಳುತ್ತಿದ್ದಾರೆ.
ಬಹುಷಃ ಇದೇ ಅವೈಜ್ನ್ಯಾನಿಕ ಕಲಿಸುವಿಕೆಯ ಕಾರಣದಿಂದಲೇ ಏನೋ, ನಾವು ಮೆಕ್ಸಿಕೋ ದೇಶಕ್ಕಿಂತಾ ತಿಳುವಳಿಕೆಯಲ್ಲಿ ಹಿಂದೆ ಬಿದ್ದಿರುವೆವು.

ರಾಷ್ಟ್ರ ಭಾಷೆ ಎಂಬ ಸುಳ್ಳನ್ನು ಪುಟಾಣಿ ಮಕ್ಕಳ ಮನಸ್ಸಿಗೆ ತೂರುವ ಕೆಲಸ ಮಾಡುತ್ತಿರುವ ಕೇಂದ್ರ ಸರಕಾರಕ್ಕೆ, "ಎಲ್ಲ ಭಾಷೆಯೂ ಸಮನಾದವು, ನಮ್ಮ ಒಕ್ಕೂಟದಲ್ಲಿ ೨೩ ಭಾಷೆಗಳಿಗೂ ಸಮಾನ ಗೌರವವಿದೆ" ಎಂಬ ಸತ್ಯವನ್ನು ಮಾತ್ರ ಮಕ್ಕಳಿಗೆ ತಿಳಿಸುವ ಅವಶ್ಯಕತೆ ಕಾಣುತ್ತಿಲ್ಲ. ಈ ರೀತಿಯ ಶಿಕ್ಷಣ ಪಡೆದು ಬೆಳೆದ ಮಕ್ಕಳು, ತಮ್ಮ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ತಮ್ಮದೆಂದು ಕಾಣುವ, ಉಳಿದ ಭಾರತೀಯ ಭಾಷೆಗಳನ್ನು ಕೆಳ ಮಟ್ಟದಲ್ಲಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಮುಂದೊಂದು ದಿನ ಒಕ್ಕೂಟಕ್ಕೇ ತೊಂದರೆಯಾಗಿ ಪರಿಣಮಿಸಬಹುದು.

ಮೇಲ್ನೋಟಕ್ಕೆ ಕಾಣದ ಈ ರೀತಿಯ ತೊಂದರೆಗಳು, ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡುವುದರಿಂದ ಕ್ರಮೇಣ ಹೊರಗೆ ಬರುತ್ತವೆ.
ಸರ್ಕಾರ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಬುದ್ಧಿಜೀವಿಗಳು, ಈ ನಿಟ್ಟಿನಲ್ಲಿ ಸ್ವಲ್ಪ ಚಿಂತನೆ ನಡೆಸುವುದು ಅತಿ ಮುಖ್ಯವಾಗಿದೆ.
ನಮ್ಮ ದೇಶದ ಅಸಂಖ್ಯಾತ ಪ್ರತಿಭೆಗಳು, ಮೂರ್-ಮೂರು ಭಾಷೆ ಕಲಿಯುವುದರಲ್ಲಿ ಕಾಲ ಹರಣ ಮಾಡದಿರಲಿ. ಇಚ್ಛೆಯಿದ್ದಲ್ಲಿ ಮಾತ್ರ ಮೂರನೇ ಭಾಷೆ ಕಲಿಯುವಂತಹ ವ್ಯವಸ್ಥೆ ಬರಲಿ.

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

ನನ್ನ ಅಭಿಪ್ರಾಯ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 11:25

ಪ್ರಿಯಂಕ್,

ನಿಮ್ಮ ಕೂಗು ನನಗೆ ಕೇಳಿಸಿದೆ. ಎಲ್ಲರಿಗೂ ಕೇಳಿಸಿ, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಏನೇನಾಗಿರುತ್ತೋ. ಯಾರಿಗೊತ್ತು?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 12:03

guru mathe naav pakad rajya ke hodre yaav bhase alli mathad beku avar jothe
Tamil avaro yaav bhase go maryade kotella, yenake andre avarge maryade ne ella,
bere bhase kaliyodu thaapa ala
aadre bhase bandro mathade erodu thapu

ಪ್ರಿಯಾಂಕ್ ಮಂಗಳ, 09/08/2009 - 12:22

ಪಕ್ಕದ ರಾಜ್ಯಕ್ಕೆ ಹೋಗುವವರು ಆ ರಾಜ್ಯದ ಭಾಷೆ ಕಲಿಯಬೇಕಾಗುತ್ತೆ.
ಸದ್ಯದ ಪರಿಸ್ಥಿತಿನೂ ಹಾಗೆಯೇ ಇದೆ.

ಹೊರ ರಾಜ್ಯಕ್ಕೆ ವಲಸೆ ಹೋಗುವವರ ಸಂಖ್ಯೆ ಕಡಿಮೆಯೇ ಇರುವುದರಿಂದ, ರಾಜ್ಯದ ಎಲ್ಲಾ ಮಕ್ಕಳೂ ಮೂರು ಭಾಷಾ ಹೊರೆ ಹೊತ್ಕೊಳದು ಎಷ್ಟು ಸರಿ?

ಎರಡನೆಯದಾಗಿ, ಇಲ್ಲಿ ವಿಚಾರ ಭಾಷೆ ಬಂದರೂ ಮಾತಾಡೋದರ ಬಗ್ಗೆ ಅಲ್ಲ.
ಗಮನಿಸಿ, ಇಲ್ಲಿ ವಿಚಾರ, ಮಕ್ಕಳಿಗೆ ಮೂರು ಭಾಷೆ ಕಲಿಸಬೇಕಾ ಎನ್ನುವುದು? ಕಲಿಸಿದರೂ ಅದು ಒತ್ತಾಯವಾಗಿರಬೇಕಾ ಅಥವಾ ಇಚ್ಚೆಯ ಮೇಲೆ ಇರಬೇಕಾ? ಯಾವ ಭಾಷೆ ಕಲಿಯಬೇಕು ಎನ್ನುವುದನ್ನೂ ಮಕ್ಕಳ ಅಥವಾ ಪೋಷಕರ ಇಚ್ಛೆಗೆ ಬಿಡಬೇಕಾ?

kishan (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 12:29

priyank ibbaru germany avaru mathad bekandre german nalli mathadthare.... ibbaru france navaru mathad bekandre french nalli mathad thare..
adhe obba kannada dhavanu andra dhanava jothe mathodoke yen madabeku ?? ivanu kannadalli aghu avanu telugu nalli mathad beka ?? ee gap annu tumbhoke common languages bekalwa..

adake numma desha athwa rajya dalli hindi agu english annu kalisodhu...
tamil nalli hindi ban madidare antha helidiralla, hagidre english yake kalibeku avaru ?? tamil kalitare sakalwa ??

numma janara ondhu tappu andre, english bekidre kalithare.. adhu parikiya bashe..
adre hindi kaliri andre rajya, rashtra anthella helthare..
yake hindi numma bashe ne alwa english ghe holisidhare ??

bekidre ibbaru bharthiyaru english nalli mathad thare.. adre hindi bandru mathadalla..

yella bahsa lipi galighu mola devanagari .. idanu mandatu madkondre olledhu.

ಪ್ರಿಯಾಂಕ್ ಮಂಗಳ, 09/08/2009 - 12:47

ಕಿಶನ್ ಅವರೇ,
ಒಬ್ಬ ಕನ್ನಡದವನು ಮತ್ತೊಬ್ಬ ಆಂಧ್ರ ದವನು ಮಾತನಾಡಬೇಕಾದರೆ, ಅವರು ಯಾವ ರಾಜ್ಯದಲ್ಲಿರುವರೋ ಅಲ್ಲಿಯ ಭಾಷೆ ಮಾತನಾಡಬೇಕಾಗುತ್ತದೆ. ಇಂಗ್ಲಿಷ್-ನಲ್ಲಿ ಹೇಳುವಂತೆ, "ಬಿ ಎ ರೋಮನ್ ಇನ್ ರೋಮ್".
ಹಾಗಾಗಿ, ಕನ್ನಡಿಗನು ಆಂಧ್ರದವರ ಜೊತೆ ಹೈದರಾಬಾದ್-ನಲ್ಲಿ ತೆಲುಗಿನಲ್ಲೇ ಮಾತನಾಡಬೇಕು. ಒಂದು ರಾಜ್ಯದಲ್ಲಿದ್ದೂ ಅಲ್ಲಿಯ ಭಾಷೆ ಕಲಿಯೋಲ್ಲ ಅನ್ನುವವನು ಭಾಶಾಂಧ ಎನ್ನಿಸಿಕೊಳ್ಳುತ್ತಾನೆ. ಇದು, ಹಿಂದಿ ಭಾಷಿಕರಿಗೂ ಅನ್ವಯಿಸುತ್ತದೆ, ಕನ್ನಡಿಗರಿಗೂ ಅನ್ವಯಿಸುತ್ತದೆ.

ಇಂಗ್ಲಿಷ್ ಕಲಿಯೋದು ಈ ಸಮಯದಲ್ಲಿ ಮುಖ್ಯ ಯಾಕಂದ್ರೆ, ಅದರ ಜೊತೆ ಹೊಟ್ಟೆಗೆ ಹಿಟ್ಟು ದಕ್ಕುತ್ತದೆ.
ಬೆಂಗಳೂರಿನಲ್ಲಿ ಹುಟ್ಟಿರುವ ಅನೇಕಾನೇಕ ಕೆಲಸಗಳನ್ನು ನೀವು ನೋಡಿರಬಹುದು. ಎರಡನೆಯದಾಗಿ, ಇಂಗ್ಲಿಷ್-ನಲ್ಲಿ ಜಗತ್ತಿನ ಎಲ್ಲಾ ವಿಷಯಗಳೂ ಇವೆ. ಅವೆಲ್ಲಾ ಕನ್ನಡಿಗರಿಗೆ ಕನ್ನಡದಲ್ಲಿ ದೊರೆಯುವವರೆಗೆ, ಇಂಗ್ಲಿಷ್ ಕಲಿಯುವುದು ಅವಶ್ಯವಾಗಿದೆ.

ಎಲ್ಲಾ ಭಾಷಾ ಲಿಪಿಗಳಿಗೂ ಮೂಲ ದೇವನಾಗರಿ ಅಂತ ನೀವು ಹೇಳಿದ್ರಿ. ಅದು ವೈಜ್ನ್ಯಾನಿಕವಾಗಿ ತಪ್ಪು ಹೇಳಿಕೆ.
ನಿಮ್ಮ ಮಾಹಿತಿಗಾಗಿ, ಈ ಲಿಂಕುಗಳನ್ನು ಖಂಡಿತ ನೋಡಿ.
http://en.wikipedia.org/wiki/Dravidian_languages

http://en.wikipedia.org/wiki/Indo-Aryan_languages

Akshaya (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 13:13

@Kishan,
alla kishan, you spoke about conversation between a german and a german, french and another francophone. Try questioning yourself, how would a french speak with german. what do you think?. it is English guru. Though they dont learn anywhere in their education system. they take external lessons in english just for conversational purpose not to be fluent and show off.

c, my arguement is like this. people migrate to other state for 3 possible reasons, either job, business or higher education. the class of people they socialise with are educated or being educated. right? so let them have a common language of english and it is anna kodo bhashe today as well. English is taught in every school in india as well. When they come out they will have to meet other classes of people as well and this prompts them to learn the regional language. There is another reason why people travel to other places, thats tourism and people travel to know their culture, to experience something new and not english and hindi and conversation is limited as well due to availability of information booklet and books iin various different languages. Correct me if i am wrong.

You have a very bad idea of origin or languages. kindly read a credible book or a internet website and educate yourself. Kannada has its own and original script.

kishan (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 14:10

ಹಾಗು ಅಕ್ಷಯ ನೀನು ಇಲ್ಲಿ ಒಬ್ಬ ಕನ್ನಡವನ ಜೊತೆ ಮಾತಾಡೋಕೆ ಇಂಗ್ಲಿಷ್ ಉಪಯೋಗಿಸುತ್ತ ಇದ್ದೀಯ.
ಇದು ಯಸ್ಥರ ಮಟ್ಟಿಗೆ ಸರಿ ಅನ್ನೋದನ್ನ ನೀನೆ ಸಮರ್ತಿಸಿಕೋ.

kishan (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 13:29

akshya, ninu nanna samarthane yennu tappi agi grayisidhya..
obba german french jothe mathaduvaga kanditha english balusthane.. karana avaribbaru bere deshadavaru.
nanu illi helidhu ibbaru bhartiya ra bagge horothu... bere deshadavara bagge alla..

Shashank (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 13:58

ಈಗಲು ಸಹ ಕನ್ನಡದವರು ತೆಲುಗಿನವನ ಜೊತೆ ಮಾತನಡಲು ಬಳಸುವುದು English ಬಾಷೆನೆ..
ಹಿಂದಿ ಬಳಸುವುದು ಅಪರೂಪ ಅಂತ ನನ್ನ ಅನಿಸಿಕೆ..

ಪ್ರಿಯಾಂಕ್ ಮಂಗಳ, 09/08/2009 - 14:29

ಕಿಶನ್,
ನನ್ನ ಹಳೆಯ ಲೇಖನದಲ್ಲೂ ಹೇಳಿದ ಹಾಗೆ, ರಾಷ್ಟ್ರ ಭಾಷೆ ಎಂಬುದು ಇಲ್ಲ.
ಅದನ್ನು, ಸುಳ್ಳು ಸುಳ್ಳೇ ನಮಗೆ ಹೇಳಿ ಕೊಟ್ಟಿದ್ದಾರೆ.
ಯಾಕೆ ಎನ್ನುವ ವಿಚಾರ ಮಾಡುವುದು ನಿಮಗೆ ಬಿಟ್ಟಿದ್ದು.

ಎರಡನೆಯದಾಗಿ, ಭಾರತೀಯರು ಮಾತನಾಡುವಾಗ ಭಾರತದ್ದೆ ಭಾಷೆ ಬಳಸಬೇಕು ಎಂಬ ಮನಸ್ಥಿತಿ ನಿಮಗಿದ್ದಂತಿದೆ.
ಒಬ್ಬ ಕನ್ನಡಿಗ ಹಿಂದಿ ಭಾಷಿಕನ ಜೊತೆ ಕನ್ನಡದಲ್ಲಿ ಮಾತನಾಡಿದರೆ ಸರಿಯೇ ತಾನೇ?
ಕರ್ನಾಟಕದಲ್ಲಿ ಕನ್ನಡಿಗನಾಗಿರಬೇಕಾದ್ದು ಎಲ್ಲರಿಗೂ ಅನ್ವಯಿಸುತ್ತದೆ ತಾನೇ?

ಅದು ಬಿಟ್ಟು, ರಾಷ್ಟ್ರ ಭಾಷೆ ಎಂಬ ಹುಸಿಮಾತು ಹೇಳಿ, ಕರ್ನಾಟಕಕ್ಕೆ ಬಂದ ಹಿಂದಿ ಭಾಷಿಕನು ಕನ್ನಡಿಗನಾಗದಂತೆ ತಡೆಯುವ ವ್ಯವಸ್ಥೆ ಬಗ್ಗೆ ಏನ್ ಹೇಳುತ್ತೀರಿ?
ಇದೇನು ಸಮಾನ ಸಾಮಾಜಿಕ ವ್ಯವಸ್ಥೆಯೂ, ಅಥವಾ ಹೇರಿಕೆ ಮಾಡಲು ನಡೆಸಿರುವ ಕುತಂತ್ರವೋ ಎಂಬ ಅನುಮಾನ ಹುಟ್ಟುವುದಿಲ್ಲವೇ ನಿಮಗೆ?

ನಂದನ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 17:08

ಸರಿಯಾಗಿ ಹೇಳುದ್ರಿ ಪ್ರಿಯಾಂಕ್ ಅವರೇ. ಒಬ್ಬ ಕನ್ನಡಿಗ ಹಿಂದಿಯವನ ಜೊತೆ ಮಾತಾಡ್ಬೇಕಾದ್ರೆ ಕರ್ನಾಟಕದಲ್ಲಿ ಕನ್ನಡಾನ ಬಳಿಸ್ಬೇಕು. ಹಂಗೆ ದೆಹಲಿ ಅಲ್ಲಿ ಮಾತಾಡ್ಬೇಕಾದ್ರೆ ಹಿಂದಿ ಬಳಸಬಹುದು.
ಹಿಂದಿ ಏನು ಎಲ್ಲರೂ ಕಲಿಯಬೇಕಾದ ಭಾಷೆ ಏನು ಅಲ್ಲ. ಅದು ಒಂದು ಭಾರತದ ಒಂದು ಭಾಷೆ ಅಸ್ಟೇ. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಮೂರ್ಖತನ.

@ಕಿಶನ್,
ನೀವು ಹೇಳಿದ ಹಾಗೆ ಒಬ್ಬ ಕನ್ನಡದವನು ತೆಲಗಿನವನ ಜೊತೆ ಮಾತಾಡ್ಬೇಕಾದ್ರೆ ಇಂಗ್ಲಿಷ್ ಬಳಸುವುದೇ ಒಳ್ಳೇದು. ಇಂಗ್ಲಿಷ್ ನಮಗೆ ಉಪಯೋಗಕ್ಕೆ ಬರುತ್ತದೆ. ನಮಗೆ ಅನ್ನ ಹಾಕುತ್ತಿರುವ ಭಾಷೆ. ಆದ್ರೆ ಹಿಂದಿ? ಕರ್ನಾಟಕದಲ್ಲಿ ಹಿಂದಿ ಕಲಿಯುವುದರಿಂದ ಏನೂ ಪ್ರಯೋಜನವಿಲ್ಲ ಎಂದು ನನ್ನ ಭಾವನೆ.

ವಸಂತ್ತ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 18:15

ಈ ಕೆಳಗಿನ ಇಬ್ಬರಲ್ಲಿ ಯಾರು ಸಂಕುಚಿತ ಮನೋಭಾವದವನು ಎನ್ನುವುದನ್ನು ನೀವು ಹೇಳಿ:

ಒಬ್ಬ ಹಿಂದಿಯವನು ಕನ್ನಡಿಗರ ನಾಡು ಕರ್ನಾಟಕಕ್ಕೆ ಬಂದು, ಹಿಂದಿನೇ ನಡಿಬೇಕು, ಕನ್ನಡ ಕಲಿಯಲ್ಲ. ಹಿಂದಿ ಗೊತ್ತಿಲ್ಲದ ನೀನೆಂತಹ ಭಾರತೀಯ ಅನ್ನೋನು. ( ಇವರ ಲೆಕ್ಕದಲ್ಲಿ ಜೀವನದಲ್ಲೆಂದು ಹಿಂದಿ ಮಾತನಾಡದ ನನ್ನ ಅಪ್ಪ-ಅಮ್ಮ-ಅಜ್ಜ-ಅಜ್ಜಿ ಎಲ್ಲರೂ ದೇಶದ್ರೋಹಿಗಳೇನೋ !)

ಒಬ್ಬ ಕನ್ನಡಿಗ ತನ್ನದೇ ನೆಲದಲ್ಲಿ ಕನ್ನಡದಲ್ಲಿ ಮಾತನಾಡಿ, ಈ ನೆಲದಲ್ಲಿ ನೆಲೆ ಕಂಡುಕೊಳ್ಳುತ್ತಿಯಾದರೆ ಇಲ್ಲಿನ ಭಾಷೆ ಕಲಿತು ಇಲ್ಲಿಯವನಾಗು ಅನ್ನೋನು.

ನೀವು ಹೇಳಿ, who is parochial? Who is really narrow minded? ನನ್ನೂರಲ್ಲೇ ನನ್ನ ಭಾಷೆ ಮಾತಾಡಿ ಅನ್ನೋ ಕನ್ನಡಿಗನೋ ಇಲ್ಲ ೨೦೦೦ಕಿ.ಮೀ ದೂರದ ಅದ್ಯಾವುದೋ ಊರಿಂದ ಇಲ್ಲಿಗೆ ಬಂದು ಇಲ್ಲಿ ಕೂಡ ತನ್ನದೇ ಭಾಷೆ ಮಾತಾಡಬೇಕು ಎಲ್ಲರೂ ಅಂತ ನಿರೀಕ್ಷೆ ಮಾಡೋನು? ಯಾರು ನಿಜಕ್ಕೂ ಸಂಕುಚಿತ ಮನೋಭಾವದವರು?

venkatesh MM (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 18:15

hindi is spreading like weed, so we call hindi is weed langauge.

ವಸಂತ್ತ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/08/2009 - 18:22

ಕರ್ನಾಟಕ, ಕನ್ನಡಕ್ಕಾಗಿ ಜೀವ ತೆಯ್ದ ಅ.ನ. ಕೃಷ್ಣರಾಯರು ಹೇಗೆ ಸ್ವಾತಂತ್ರ್ಯಕ್ಕೂ ಮುಂಚೆಯೇ ಹಿಂದಿ ಯಿಂದ ನಮ್ಮ ನಾಡಿಗಾಗುವ ತೊಂದರೆಗಳ ಬಗ್ಗೆ ತಿಳಿದಿದ್ದರು ಅನ್ನುವುದನ್ನು ಇಲ್ಲಿ ನೋಡಿ:
http://kalyana-raman.blogspot.com/2009/09/blog-post_07.html

ರಾಜೇಶ ಹೆಗಡೆ ಧ, 09/09/2009 - 08:02

ಹಾಯ್ ಪ್ರಿಯಾಂಕ್,

ಜರ್ಮನಿಗೆ ಐದು ಬಾರಿ ಭೇಟಿ ಕೊಟ್ಟ ನನ್ನ ಅನಿಸಿಕೆ ಹೀಗಿದೆ. ಜರ್ಮನಿಯಲ್ಲಿ ಆ ಭಾಷೆಗೆ ಎಷ್ಟು ಬೆಲೆ ಕೊಡುತ್ತಾರೋ ಅಷ್ಟು ಬೆಲೆ ಕನ್ನಡಕ್ಕೆ ಕೊಟ್ಟರೆ ಖಂಡಿತ ಉದ್ಧಾರ ಆಗುತ್ತೆ. ಉದಾಃ ಮಾರ್ಕೆಟ್ ನಲ್ಲಿ ಮಾರಾಟವಾಗುವ ವಸ್ತುಗಳ ಮೇಲೆ ಸಂಪೂರ್ಣ ಕನ್ನಡ, ಕನ್ನಡ ಭಾಷೆ ಜನರ ಹೊಟ್ಟೆಗೆ ಹಿಟ್ಟು ಕೊಡುವ ಭಾಷೆ ಆಗ ಬೇಕು. ಪ್ರತಿ ಎಟಿಎಂ, ಏರ್ ಲೈನ್ಸ್ ಟ್ರೇನ್ , ಮೊಬೈಲ ಎಲ್ಲಾ ಕಡೆ ಕನ್ನಡ. ಎಲ್ಲ ರೀತಿಯ ಜ್ಞಾನ ಕನ್ನಡದಲ್ಲಿ ಬರಬೇಕು. ಇವೆಲ್ಲಾ ಆಗುತ್ತಾ? ಇದು ಮಿಲಿಯನ್ ಡಾಲರ್ ಪ್ರಶ್ನೆ.
ಜರ್ಮನ್ನರು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲೀಷ್ ಕಲಿಯುವದಿಲ್ಲ ಅನ್ನುವದು ಸತ್ಯಕ್ಕೆ ದೂರದ ಮಾತು. ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿತರೂ ಅದನ್ನು ಹೆಚ್ಚು ಬಳಸದೇ ಮರೆತು ಬಿಡುತ್ತಾರೆ. ಕೆಲವರಿಗೆ ಅಲ್ಪ ಸ್ವಲ್ಪ ಬರುತ್ತೆ. ಎಲ್ಲ ಆಂಗ್ಲ ಸಿನಿಮಾ ಧಾರಾವಾಹಿಗಳು ಅಲ್ಲಿನ ಭಾಷೆಗೆ ಅನುವಾದಗೊಳ್ಳುತ್ತವೆ. ಇದರಲ್ಲಿ ಹಿಂದಿ ಸಿನಿಮಾ ಕೂಡಾ ಸೇರಿದೆ! ಈಗ ಹಿಂದಿ-ತಮಿಳು-ತೆಲುಗು ಭಾಷೆಗೂ ಇಂಗ್ಲೀಷ್ ಚಿತ್ರ ಅನುವಾದವಾಗುತ್ತಿದೆ.ನಾವು ಇಂಗ್ಲೀಷ್ ನಲ್ಲಿಯೇ ಕಷ್ಟ ಪಟ್ಟು ನೋಡುತ್ತೇವೆ!

ನಾವು ಇಂಗ್ಲೀಷ್ ಭಾಷೆಗೆ ಕೊಡುತ್ತಿರುವ ಸಾಫ್ಟ ಕಾರ್ನರ್ ಕನ್ನಡವನ್ನು ಕೊಲ್ಲುತ್ತಿದೆ. ಇಂಗ್ಲೀಷ್ ನಲ್ಲಿದ್ದರೆ ಪರವಾಗಿಲ್ಲ. ಆದರೆ ಹಿಂದಿಯಲ್ಲಿರಬಾರದು. ಸರಕಾರಿ ವ್ಯವಹಾರ, ಬ್ಯಾಂಕಿಂಗ್ ಎಟಿಎಂ, ಮೊಬೈಲ್, ಜಾಹೀರಾತು , ಹೊಟೆಲ್ ಮೆನು, ಕಂಪ್ಯೂಟರ್ ಇನ್ನು ಹಲವು ಸಂಪೂರ್ಣ ಕನ್ನಡದಲ್ಲಿರಲು ಯಾವ ತಾಂತ್ರಿಕ ತೊಂದರೆಯೂ ಈಗಿಲ್ಲ. ಆದರೆ ನಾವು ಇಂಗ್ಲೀಷ್ ನಲ್ಲಿಯೇ ಬಳಸುವದನ್ನು ರೂಢಿಸಿಕೊಂಡಿದ್ದೇವೆ. ಬಹುಶಃ ಹಿಂದಿಯಲ್ಲಿದ್ದರೆ ಕೂಗಾಡಿ ಗಲಾಟೆ ಮಾಡುತ್ತಿದ್ದೆವೇನೋ!! ಕನ್ನಡದಲ್ಲಿ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಹಿಂದಿಯಲ್ಲಿರ ಬಾರದು ಅನ್ನುವ ಮನೋಭಾವ ನಮ್ಮದು. ಇಂಗ್ಲೀಷ್ ನಲ್ಲೂ ಬೇಡ ಅನ್ನೋ ಮನೋಭಾವ ಯಾಕಿಲ್ಲ?
ಹಿಂದಿ ಭಾಷೆ ಕಲಿಯುವದು ಕಾಲಹರಣ ಅಲ್ಲ ಎಂಬುದು ನನ್ನ ಅನಿಸಿಕೆ. ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿದರೆ ಒಳ್ಳೆಯದು. ಬೇಕಾದವರು ಕಲಿಯುತ್ತಾರೆ.

ಪ್ರಿಯಾಂಕ್ ಧ, 09/09/2009 - 11:03

ನಮಸ್ಕಾರ ರಾಜೇಶ್,

ನೀವು ಹೇಳಿದುದು ಅಕ್ಷರಶಃ ಸತ್ಯ.
ನೀವು ಹೇಳಿದಂತೆ, ನಮ್ಮ ರಾಜ್ಯದಲ್ಲಿ ಎಲ್ಲೆಲ್ಲೂ ಕನ್ನಡ ಬರಬೇಕು. ಬೇರೆ ಭಾಷೆ ಕಲಿಕೆ ಆಯ್ಕೆಯ ವಿಷಯವಾಗಿರಬೇಕೆ ಹೊರತು, ಕದ್ದಾಯವಾಗಿರಬಾರದು.
ನಮ್ಮ ವಿರೋಧ ಕೇವಲ ಹಿಂದಿಗೆ ಮಾತ್ರ ಸೀಮಿತವಾಗಿರದೇ, ಇಂಗ್ಲಿಷ್ ಬಳಕೆಗೂ ಕಡಿವಾಣ ಬೀಳಬೇಕು.
ಈ ನಿಟ್ಟಿನಲ್ಲಿ, ನಾನು ಕೆಲವು ಬ್ಲಾಗ್-ಗಳನ್ನು ಬರೆದಿದ್ದೇನೆ. ಅವುಗಳಲ್ಲಿ, ಇಂಗ್ಲಿಷ್ ಬಳಕೆಯನ್ನು ವಿರೋಧಿಸಿದ್ದೇನೆ.
ನೀವು ಈ ಮೊದಲೇ ಆ ಬ್ಲಾಗ್-ಗಳನ್ನು ನೋಡಿಲ್ಲದಿದ್ದರೆ, ಇಲ್ಲಿ ನೋಡಬಹುದು.

http://www.vismayanagari.com/node/4664

http://www.vismayanagari.com/node/4929

Bharath.K ಧ, 09/09/2009 - 12:25

ಕಲಿಯುದು ಯಾವಾಗಲು ಹೊರೆಯಲ್ಲ... ಅದು ಜೀವನಕ್ಕೆ ದಾರಿ..
ನಾವು ಭಾರತಿಯರು ಅಂದ ಮೇಲೆ ರಾಷ್ಟ್ರ ಭಾಷೆ ಕಡ್ಡಾಯವಾಗಿ ಪ್ರತಿಯೊಬ್ಬರು ಕಲಿಯಲೆ ಬೇಕು...
ಇಲ್ಲಿ ನಾವು ಕೇಂದ್ರ ಸರಕಾರ ರಾಷ್ಟ್ರ ಭಾಷೆಯನ್ನು ಹಿಂದಿಯನ್ನಗಿ ಮಡಿರುವ ಉದ್ದೇಶ ಏನೆಂಬುದನ್ನ ಅರಿತು ಕೊಳ್ಳ ಬೇಕು. ರಾಷ್ಟ್ರ ಭಾಷೆಯ ಉದ್ದೇಶ ಕೇವಲ ಏಕತೆ....... ಮತ್ತು ರಾಷ್ಟ್ರ ಭಾಷೆ ಹಿಂದಿಯನ್ನಗಿ ಆಯ್ಕೆ ಮಡಿರುವ ಉದ್ದೇಶ ಭಾರತ ಹೆಚ್ಚಿನ ಜನರು ಹಿಂದಿ ಭಾಷೆಯನ್ನ (ಬೇರೆ ಭಾಷೆಗಿಂತ ಇಂಗ್ಲಿಷ್ ಬಿಟ್ಟು) ಬಳಸುತಿದ್ದರೆ...

ಪ್ರಿಯಾಂಕ್ ಧ, 09/09/2009 - 12:39

ನಮಸ್ಕಾರ ಭರತ್.
ನೀವು ಈ ವಿಷಯವಾಗಿ ನನ್ನ ಮೊದಲನೇ ಬ್ಲಾಗ್ ನೋಡಿದಂತಿಲ್ಲ.
ಈ ಬ್ಲಾಗ್-ನೋಮ್ಮೆ ವೀಕ್ಷಿಸಿ. http://www.vismayanagari.com/node/5112

ರಾಷ್ಟ್ರ ಭಾಷೆ ಎಂಬುದು ನಮ್ಮ ದೇಶದಲ್ಲಿಲ್ಲ.
೨೩ ಭಾಷೆಗಳಿಗೆ ಅಧಿಕೃತ ಸ್ಥಾನ ಲಭಿಸಿದೆ.

ಕಲಿಯುವುದು ಹೊರೆಯಾಗದು ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತಿರುವಿರಿ ತಿಳಿಸಿ.

Bharath.K ಧ, 09/09/2009 - 13:14

ನಮಸ್ಕಾರ ಭಾರ್ಗವ್..
Article 343, Official Language Act, 1963, since 26th January, 1965, ರಂದು ಭಾರತ ಸರ್ಕಾರ ಹಿಂದಿಯನ್ನು ರಾಷ್ಟ್ರ ಭಾಷೆ ಯನ್ನಾಗಿ ಮಾಡಿದೆ...
ಕಲಿಯುವುದು ಹೊರೆಯಾಗದು ಎಂದು ತಿಳಿಸಲು ಆಧಾರದ ಅಗತ್ಯವಿಲ್ಲ ಗೇಳೆಯ.. ಎಕೆಂದರೆ ಇದು ಅನುಭವದ ಮಾತು...

ಪ್ರಿಯಾಂಕ್ ಧ, 09/09/2009 - 13:47

ಭರತ್,

ಅದು ಅಧಿಕೃತ ಭಾಷೆ ಅಷ್ಟೇ. ರಾಷ್ಟ್ರ ಭಾಷೆ ಅಲ್ಲ.
ನಾನು ಹಿಂದಿನ ಕಾಮೆಂಟ್-ನಲ್ಲಿ ಒದಗಿಸಿದ ಲಿಂಕ್-ನಲ್ಲಿ ವಿವರಿಸಿದ್ದೇನೆ.
ನಿಮ್ಮ ಗಮನಕ್ಕಾಗಿ, ಈ ಲಿಂಕ್-ನಿಂದ ತೆಗೆದ ಒಂದೆರಡು ಸಾಲನ್ನು ಇಲ್ಲಿ ಹಾಕಿರುತ್ತೇನೆ.

All languages spoken in India, starting from the most populous to the least are our national languages, because all of them define the people of this nation, culture and their history collectively.

India has NO LEGALLY DEFINED NATIONAL LANGUAGES ONLY 23 OFFICIAL languages as per the constitution.

ಸ್ವಂತ ಅನುಭವದಿಂದ ಭಾಷಾ ಕಲಿಕೆ ಸುಲಭ ಅಂತ ನೀವು ಕಲಿಯುವಾಗ ಆದ ಅನುಭವ ಹೇಳುತ್ತಿದ್ದೀರಾ ತಾನೇ?

ಇಡೀ ನಾಡಿನ ಜನತೆಗೆ ಹಿಂದಿ ಕಲಿಯುವುದು ಕಷ್ಟವೋ, ಸುಲಭವೋ ಅಂತ ನಿರ್ಧರಿಸಲು ನಿಮ್ಮ ಅನುಭವ ಸಾಕಾಗುತ್ತದ?

ಅಥವಾ ಒಂದು ವಿಮರ್ಶೆ ನಡೆಸಿ ಹೇಳಿರುವ ತಜ್ನ್ಯರ ಅಭಿಪ್ರಾಯ ಪಾಲಿಸುವುದು ಉತ್ತಮವೋ?

ವಸಂತ (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/09/2009 - 13:58

ಸರಿಯಾಗಿ ಹೇಳಿದಿರಾ ಪ್ರಿಯಾಂಕ್,,
ರಾಷ್ಟ್ರ ಭಾಷೆಗೂ, ಅಧಿಕೃತ ಭಾಷೆಗೂ ವ್ಯತ್ಯಾಸ ಇದೆ ಆನ್ನುವುದನ್ನು ಮೊದಲು ಅರಿಯಬೇಕು. ಅದು ಅರ್ಥ ಆದರೆ, ಹಿಂದಿ ಹೇರಿಕೆ, ಅದರಿಂದಾಗ್ತಿರೋ ದುಷ್ಟ ಪರಿಣಾಮಗಳು ಅರ್ಥ ಆಗುತ್ತೆ.

Bharath.K ಧ, 09/09/2009 - 16:36

ಗೇಳೆಯ...
ಕಲಿಯುದು ಯಾವಾಗಲು ಹೊರೆಯಲ್ಲ... ಅದು ಜೀವನಕ್ಕೆ ದಾರಿ... ಇದು ನನ್ನ ಅನುಭವದ ಮಾತು...
ಇ ಮಾತು ಕೇವಲ ಭಾಷಾ ಕಲಿಕೆ ಮಾತ್ರ ಅಲ್ಲ.............................
ತಂದೆ, ತಾಯಿ, ಗುರು, ಹೀರಿಯರಿಂದ, ಗೇಳೆಯರಿಂದ, ವಿರೊಧಿಗಳಿಂದ, ಎಲ್ಲರಿಂದ ನಾನು ಕಲಿತ್ತಿದ್ದೆನೆ ಮತ್ತು ಕಲಿಯುತ್ತಿದ್ದೆನೆ. ಇಲ್ಲಿ ತನಕ ಕಲಿತದ್ದು ನನಗೆ ಹೊರೆಹಾಗಲ್ಲಿಲ್ಲ ನನ್ನ ಜೀವನಕ್ಕೆ ದಾರಿಯಾಗಿದೆ..........
Articles 343-351, 344- 351 ರ ಬಗ್ಗೆ http://lawmin.nic.in/coi/contents.htm - ಇದರಲ್ಲಿ ಸರಿಯದ ಮಾಹಿತಿ ಇದೆ.

ಪ್ರಿಯಾಂಕ್ ಧ, 09/09/2009 - 17:34

ಭರತ್,
ನೀವು ಕಳಿಸಿದ ಲಿಂಕ್-ನಲ್ಲಿ ಇರುವ ಒಂದು ವಾಕ್ಯ ಕಾಪಿ-ಪೇಸ್ಟ್ ಮಾಡಿದೀನಿ.
"343 Official language of the Union."
ಅದರಲ್ಲೇ ಹೇಳಿದಾರೆ ನೋಡಿ, ಅಧಿಕೃತ ಭಾಷೆ ಅಂತ.
ಅದು ಅಧಿಕೃತ ಮಾತ್ರ, ರಾಷ್ಟ ಭಾಷೆ ಅಲ್ಲ ಅಂತ ನಿಮಗೆ ಗೊತ್ತಾಗಿದೆ ಅನ್ಕೋತೀನಿ.

೧೯೪೬-ರಲ್ಲಿ ಭಾರತ ಸರ್ಕಾರದ ಸಭೆಯಲ್ಲಿ ಇದರ ಬಗ್ಗೆ ನಡೆದ ವಾದ ವಿವಾದ ಈ ಲೇಖನದಲ್ಲಿ ನಿಮಗೆ ಸಿಗುತ್ತೆ.
http://karnatique.blogspot.com/2009/09/december-10-1946-in-indian-parliament.html
ಖಂಡಿತ ಓದಿ. ನಿಮಗೆ ಇಷ್ಟವಾಗಬಹುದು.

ಕೆಎಲ್ಕೆ ಗುರು, 09/10/2009 - 10:45

ಬಹಳ ದಿನಗಳ ನಂತರ ವಿಸ್ಮಯದಲ್ಲಿ ಒಂದು ಒಳ್ಳೆಯ ಚರ್ಚೆ ಆಗುತ್ತಿದೆ. ಅದನ್ನು ಶುರು ಮಾಡಿದ ಪ್ರಿಯಾಂಕ್ ಗೆ ಒಂದು ಥ್ಯಾಂಕ್ಸ್. ಹೌದು, ಕನ್ನಡಿಗನಾದ ನಂಗೆ ಹಿಂದಿ ಒಂದು “Foreign Language” ; ಇಂಗ್ಲಿಷ್ ಕೂಡ. ಈ ಎರಡೂ ಫಾರಿನ್ ಭಾಷೆಗಳಲ್ಲಿ ನನ್ನ ಆಯ್ಕೆ ಇಂಗ್ಲಿಷ್. ಅದಕ್ಕೆ ನೂರಾರು ಕಾರಣಗಳಿರಬಹುದು; ಅದಿಲ್ಲಿ ಅನಗತ್ಯ.
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂಬುದು ನನ್ನ ಅನಾದಿಕಾಲದ ವಾದ. ಅದು ಅನೇಕ ಕನ್ನಡಿಗರ ಅರಿವಲ್ಲಿ ಇಲ್ಲದಿರುವದು ಬೇಸರದ ವಿಷಯ.

ಬೆಳ್ಮಣ್ಣು ಸುಧೀರ ರಾವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 09/10/2009 - 17:10

ಹ್ವಾಯ್,
ನಿಮಗೆ ಹಿಂದಿ “Foreign Language” ಆದರೆ ಸಂಸ್ಕೃತ ಹೇಗೆ? ಅದು ಭಾರತೀಯವೋ?
ಭಾರಿ ಜನ ಮಾರಾಯ್ರೆ ನೀವು. ಇಂಗ್ಲೀಶು ಹಿಂದಿಗಿಂತ ಹತ್ತಿರ ಅಂತ ಬೇರೆ ಹೇಳಿದರೆ ಹೇಗೆ ಮಾರಾಯ್ರೆ?
ಮತ್ತೆ ಸಂವಿಧಾನದಲ್ಲಿ ಹೇಳಿದ್ರೆ ಹಿಂದಿ ರಾಷ್ಟ್ರಭಾಶೆ ಆಗ್ಲಿಕ್ಕಿಲ್ಲವೋ? ಅದಕ್ಕೆ "ದೊಡ್ಡ ಜನ"ಗಳ ಅಪ್ಪಣೆ ಬೇರೆ ಬೇಕೋ ಮಾರಾಯ್ರೆ?

Bharath.K ಗುರು, 09/10/2009 - 14:38

ನಾವು ಭಾಷೆ ಪದದ ಅರ್ಥ ತಿಳಿದರೆ ಮಾತ್ರ ಅದರ ಬಗ್ಗೆ ಚರ್ಚೆ ಮಾಡ ಬಹುದು. ಭಾಷೆವೆಂಬುದು ಮಾಹಿತಿಯ ಸಂವಹನೆಗೆ ನಿರೂಪಿತವಾಗಿರುವ ಉಚ್ಛರಿತ, ಲಿಖಿತ, ಅಭಿನಿತ ಸಂಕೇತಗಳು. ನಾವು ಬೇರೆ ಭಾಷೆ (ಇಂಗ್ಲಿಷ್/ಹಿಂದಿ) ಕಲಿತರೆ ವಿದೇಶಿರಾಗುದಿಲ್ಲ.. ನಮ್ಮ ಸಂಸ್ಕೃತಿಯನ್ನ ಉಳಿಸುದನ್ನು ಕಲಿತರೆ ಮಾತ್ರ ನಾವು ನಿಜವಾದ ಕನ್ನಡಿಗರಬಹುದು.
http://rand-rambler.blogspot.com/2007/11/blog-post.html

ಕೆಎಲ್ಕೆ ಗುರು, 09/10/2009 - 17:03

ಭರತ್, ಇಲ್ಲಿ ಭಾಷೆ ಕಲಿಕೆಯ ಬಗ್ಗೆ ಚರ್ಚೆ ಆಗುತ್ತಿಲ್ಲ. ಕಲಿಯುವುದರಲ್ಲಿ ಏನೂ ತಪ್ಪಿಲ್ಲ. ಹಿಂದಿಯೇಕೆ ಪೋರ್ತುಗೀಸರ ಭಾಷೆ ಬೇಕಾದರೂ ಕಲಿಯೋಣ. ಆದರೆ ಬಳಕೆ ಮಾತ್ರ ( ಕನಿಷ್ಠ ಪಕ್ಷ ಕರ್ನಾಟಕದಲ್ಲಿ ಯಾದರೂ) ಕನ್ನಡ ಆಗಲಿ ಎಂಬುದು ಆಶಯ ಹಾಗೂ ಉದ್ದೇಶ.

ಪ್ರಿಯಾಂಕ್ ಗುರು, 09/10/2009 - 17:18

ಕೆಎಲ್ಕೆ ಅವರ ಮಾತಿಗೆ ಸೇರಿಸುತ್ತಾ,
ಕಲಿಕೆಯು ಹೇರಿಕೆಯಾಗಬಾರದು. ಐಚ್ಛಿಕ ವಿಷಯವಾಗಿ ಆರಿಸಿಕೊಳ್ಳಲು ಸಲುವಾಗಿರಬೇಕು.
ಹಿಂದಿಯೂ ಹೇರಿಕೆಯಾಗಬಾರದು.
ಹಿಂದಿಯನ್ನು ಹೇರಲು, ಅದಕ್ಕೆ "ರಾಷ್ಟ ಭಾಷೆ" ಎಂಬ ಸುಳ್ಳು ಪಟ್ಟ ಕೊಡುವುದರ ಹಿಂದಿನ ಉದ್ದೇಶವೇನು ಎಂಬುದು ಎಲ್ಲರೂ ಯೋಚಿಸಬೇಕಾದ ವಿಷಯ.

sanjaykattimani ಶುಕ್ರ, 09/11/2009 - 03:51

ಇಂದಿಗೂ ಪ್ರಪಂಚದ ಯಾವುದೆ ಮೂಲೆಲ್ಲಿ ಇತರ ಭಾರತೀಯರೊಂದಿಗೆ ಭೆಟಿಯಾದಾಗ ಮಾತನಾಡುವದು ಆಂಗ್ಲ ಅಥವಾ ಕನ್ನಡ ಭಾಷೆಯನ್ನಲ್ಲ, ಅದು ಹಿಂದಿ. ಹಿಂದಿ ಕಲಿಯವ ಯಾವ ವಿದ್ಯಾರ್ಥಿಗೂ ಅದು ಹೊರೆಯಾಗಿರಲಾರದು.

ತುಂಬಾ ಜನ ತಮಿಳು ಭಾಷೆಗೆ ಹೊಲಿಸಿ ಹೆಳುತ್ತಾರೆ.. ನಾವೂ ಅವರ ಹಾಗೆ ಹಿಂದಿ ಭಾಷೆ ಕಲಿಯಬಾರದು ಅಂತ. ನಾನು ಹಲವಾರು ಬಾರಿ ಕಂಡಿದ್ದೆನೆ, ಅವರು ಹಿಂದಿ ಬಾರದ ಕಾರಣ ಬೆರೆ ಯಾವುದೇ ಭಾಷೆಯ ಜನರೊಂದಿಗೆ ಬೆರೆಲಾಗದೇ, ತಮ್ಮದೇ ಗುಂಪಿನೊಂದಿಗೆ ಇರಬೆಕಾಗುತ್ತದೆ, ಭಾಷೆ ನಮ್ಮನ್ನ ಜೊತೆ ಸೇರಿಸಬೆಕೆ ಹೊರತು ಬೆರ್ಪಡಿಸಬಾರದು.

ನಾನು ನನ್ನ ಕನ್ನಡ ಶಾಲೆಯಲ್ಲಿ ಹಿಂದಿ ಕಲಿಯದಿದ್ದರೆ ಇತರರನ್ನು ಅರ್ಥ ಮಾಡಿಕೊಳ್ಳಲು ನಾನು ಇನ್ನಷ್ಟು ಕಷ್ಟಾಡುತ್ತಿದ್ದೆನೆ ಹೊರತು, ಸಂತೊಷಪಡುತ್ತಿರಲಿಲ್ಲ.

ನನ್ನ ಪ್ರಕಾರ ನಾವು ಕನ್ನಡದ ಉಪಯೊಗದ ಕಡೆ ಗಮನ ಹರಿಸಬೆಕೆ ಹೊರತು, ಹಿಂದಿ ಭಾಷೆಯನ್ನ ತೆಗೆದು ಹಾಕುವುದರಿಂದ ಕನ್ನಡಕ್ಕೆ ಯಾವುದೆ ಸಹಾಯವಾಗಲಾರದು.

ಜಗದೀಶ (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/16/2009 - 13:18

ಸಂಜಯ ಅವರೇ, ನೀವು ಕರ್ನಾಟಕದ ಹೊರಗೆ ಹೋದಾಗ ಅಲ್ಲಿಗೆ ಬೇಕಿರುವ ಸಂದರ್ಭಕ್ಕೆ ತಕ್ಕಂತೆ ಮಾತ್ನಾಡಿ... ಎಷ್ಟು ಬೇಕಾದ್ರು ಕಲೀರಿ, ಬಲವಂತವಾಗಿ ಬೇಡದೆ ಇರೋರಿಗೆ ಕಲಿಸಿ, ಕರ್ನಾಟಕದಲ್ಲೂ ಹಿಂದಿ ಮಾತಾಡಿಸಿ ಹೊರಗಿನವರಿಗೆ ಸಂತೋಷ ಪಡಿಸಿ, ಇಲ್ಲೇ ಕನ್ನಡ ಕಿತ್ತ ಹಾಕ್ಬೇಡಿ... ಅಂತ ಚರ್ಚೆ ನಡಿತಿರೋದು... ಸರಿಗೆ ಯೋಚಿಸಿ... ನಾವು ಎಲ್ಲೇ ಹೋದರೂ ಅಲ್ಲಿಯವರಂತೆ ಬದುಕುವಾಗ ಇಲ್ಲಿಗೆ ಬಂದವರು ನಮ್ಮಂತೆ ಇರಬೇಕೊ ಅಥವಾ ಬಂದವರಂತೆ ನಾವು ಬದಲಾಗಬೇಕೊ? ಹಿಮಾಲಯಕ್ಕೆ ಹೋದಾಗ ನಂಗೆ ಹಿಂದಿ ಬಂತು ಆರಾಮಗಿತ್ತು ಅಂತ ನಾವು ಹೇಳೊ ಹಂಗೆ, ಅವರು ಕರ್ನಾಟಕಕ್ಕೆ ಹೋಗಿದ್ದೆ, ಕನ್ನಡ ಬಂತು ಆರಾಮಾಯ್ತು ಅನ್ನೋದು ಸರಿನೊ, ಅಥವಾ ಹಿಂದಿ ಸಾಕು, ನಮ್ಗೆ ಯಾಕೆ ಕನ್ನಡ ಅನ್ನೋದು ಸರಿನೊ.... ಅಲ್ಲಿಯವ್ರು 2 ಭಾಷೆನ ಚೆನ್ನಾಗಿ ಕಲಿಬಹುದು ... ಅಷ್ಟೆ ಸಮಯದಲ್ಲಿ ಬೇರೆ ಎಲ್ಲಾ ಭಾರತೀಯರು 3 ಭಾಷೆ ಕಲಿಬೇಕು... ಇದು ನ್ಯಾಯ ನ?

Bharath.K ಧ, 09/16/2009 - 15:31

ಜಗದೀಶರವರೆ......
ನಿಮ್ಮ ಮಾತು ಅರ್ಥವಗಲಿಲ್ಲ............
ಏಕೆಂದರೆ ಸಂಜಯವರು ಕಲಿತ ಭಾಷೆಯ ಅನುಭವ ಹಂಚಿ ಕೊಡ್ಡಿದ್ದರೆ...........

ಅಷ್ಟೆ ಸಮಯದಲ್ಲಿ ಬೇರೆ ಎಲ್ಲಾ ಭಾರತೀಯರು 3 ಭಾಷೆ ಕಲಿಬೇಕು... ಅಂದರೆ ಕನ್ನಡ, ಆಂಗ್ಲ ಮತ್ತು ಹಿಂದಿ.......... ವಿದೇಶಿಯರು ಬಿಟ್ಟು ಹೋದ ಆಂಗ್ಲ ಭಾಷೆ ಕಲಿಯಲು ನಿಮಗೆ ಅಡ್ಡಿಯಿಲ್ಲ...... ಆದರೆ ದೇಶದಲ್ಲಿ ಹುಟ್ಟಿ ಬೆಳೆದ ಹಿಂದಿ ಬೇಡ...
ಸಂಜಯ ಅವರ ಮಾತಿಗೆ ಸೇರಿಸುತ್ತಾ, ಹಿಂದಿ ಭಾಷೆಯನ್ನ ತೆಗೆದು ಹಾಕುವುದರಿಂದ ಕನ್ನಡಕ್ಕೆ ಯಾವುದೆ ಸಹಾಯವಾಗಲಾರದು... ನಮ್ಮ ಸಂಸ್ಕೃತಿಯನ್ನ ಉಳಿಸುದನ್ನು ನಾವು ಕಲಿಬೇಕು... ನಾಡಿನ ಹಿರಿಮೆ ನಮ್ಮ ಸಂಸ್ಕೃತಿಯಲ್ಲಿ ಅಡಗಿದೆ.....

ಮುಂದುವರಿಯುದು.....

ಜಗದೀಶ (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/23/2009 - 13:43

ಅಣ್ಣ ನಮಸ್ಕಾರ.... ಸಂಜಯ ಅನುಭವ ಹಂಚಿಕೊಂಡಿದಾರೆ, ನಾನು ಅದನ್ನೇ ಹೇಳಿದ್ದು - ಹಿಮಾಲಯಕ್ಕೆ ಹೋಗಿದ್ದಾಗ..

ನನಗೆ ಹಿಂದಿ, ಆಂಗ್ಲ ಎರಡೂ ಬೇರೆಯವರ ಭಾಷೆನೆ... ಆಂಗ್ಲ ನಮಗೆ ಮುಂಚಿಂದ ತುರುಕಿದಾರೆ, ಅದು ಇಡೀ ಭಾರತದಲ್ಲಿದೆ... ಈಗ ಹಿಂದಿ ತುರುಕ್ತಿದಾರೆ... ನಮ್ಮ ಸಂಸ್ಕೃತಿಗೆ ಕನ್ನಡ ಇದೆ... ಹೊಟ್ಟೆ ಪಾಡಿಗೆ ಕನ್ನಡ ಬರೋವರ್ಗು ಆಂಗ್ಲ ಬೇಕು... ಹಿಂದಿ ಎಕ್ಸ್ಟ್ರಾ ಅನ್ನಿಸ್ತಿಲ್ವ ನಿಮಗೆ....
ಬೆಂಗಳೂರಲ್ಲಿ ಈಗ ಹಿಂದಿ ಕಲಿರಿ ಇಲ್ಲಿರ್ಬೇಕು ಅಂದ್ರೆ ಅಂತ ಅಂದ್ರೆ ಹೆಂಗಾಗ್ಬೇಕು.... ದೇಶದ ಹೊರಗೆ ಆಂಗ್ಲ ಬೇಕು... ರಾಜ್ಯದಲ್ಲಿ ಕನ್ನಡ ಬೇಕು, ಸಂಸ್ಕೃತಿ ಉಳಿಬೇಕಾಗಿರೋದು ರಾಜ್ಯದಲ್ಲಿ... ಇವೆರಡು ಸಾಕು ನಂಗೆ... ಇವತ್ತಿಗು ಭಾರತದಲ್ಲಿ ಆಂಗ್ಲ ನೆ ಆಡಳಿತ ಭಾಷೆ, 60 ವರ್ಷ ಆಯ್ತು ಅವ್ರು ನಮ ದುಡ್ಡೆಲ್ಲ ಉಪಯೋಗಿಸಿ ಹಿಂದಿ ತುರ್ಕಿ ಬರಿ ಆ ರಾಜ್ಯದವ್ರ್ನ ದೊಡ್ಡೋರ್ನ ಮಾಡಕ್ಕೆ ಹೋಗಿ... ಆಗಿಲ್ಲ... ಯಾಕೇಂದ್ರೆ ಬೇಸಿಕ್ಸ ಸರಿ ಇಲ್ಲ.... ಹಿಂದಿ ಆಂಗ್ಲ ನ replace ಮಾಡ್ಬೇಕಿತ್ತು... ಆಗ್ಲಿಲ್ಲ, ಬದಲಿಗೆ ಹಿಂದಿ ಬೇರೆ ಎಲ್ಲಾ ಭಾರತೀಯ ಭಾಷೆನ ನುಂಗಿ ಹಾಕ್ತಿದೆ...
ಇದನ್ನೆಲ್ಲ ಓದಿ ನೋಡಿ...
http://enguru.blogspot.com/2009/09/heluvudsu-omdu-maasduvudu-innomdu.html
http://kalyana-raman.blogspot.com/2009/09/blog-post_07.html

sanjaykattimani ಗುರು, 09/17/2009 - 22:02

ಜಗದೀಶರವರೆ,
ಕರ್ನಾಟಕದಲ್ಲಿ ಕನ್ನಡ ಕಲಿಯಬೆಕೊ, ಕಲಿಯಬಾರದೊ ಅದರ ಬಗ್ಗೆ ನಾವು ಚರ್ಚಿಸುತ್ತಿಲ್ಲ,
ನಾನು ಹಿಂದಿ ಮಾತನಾಡಿ ಯಾರನ್ನೂ ಮೆಚ್ಚಿಸಬೆಕಿಲ್ಲ, ಕರ್ನಾಟಕದಲ್ಲಿ ಕನ್ನಡ ಮಾತನಾಡಬೆಕೊ ಇಲ್ಲವೊ ಅದನ್ನೂ ಚರ್ಚಿಸುತ್ತಿಲ್ಲ.

2 ಭಾಷೆನ ಚೆನ್ನಾಗಿ ಕಲಿಯಬಹುದು ಅನ್ನುವದು ಮಾತ್ರ ನಿಮ್ಮ ಭ್ರಮೆ. ಅದು ಕಲಿಯುವ ಮತ್ತು ಕಲಿಸುವರ ಮೆಲೆ ಅವಲಂಬಿಸುತ್ತದೆ.
ಹಿಂದಿ ಮಕ್ಕಳಿಗೆ ಬಲವಂತ ಅನ್ನುವದು ಸಹ ನಿಮ್ಮ ಸ್ವಂತ ಅಭಿಪ್ರಾಯ. ನಾನೂ ಕನ್ನಡ ಮಾಧ್ಯಮ ದಲ್ಲೆ ಕಲಿತಿದ್ದೆನೆ, ಹಿಂದಿಯನ್ನು ಕಲಿತಿದ್ದೆನೆ.
ಶಿಕ್ಷಣದಲ್ಲಿರುವ ಇತರೆ ದೊಷಗಳನ್ನು ತೊಡೆದು ಹಾಕುವದನ್ನು ಬಿಟ್ಟು ಸುಮ್ಮನೆ ಜನರನ್ನ ಕೆರಳಿಸುವುದರಲ್ಲಿ (ಟಿವಿ, ಸಿನೆಮಾ, ಪತ್ರಿಕೆಗಳಲ್ಲಿ ಇದೇ ಕಂಡು ಬರುತ್ತದೆ) ಕಾಲಹರಣ ಮಾಡುವುದು ಬೆಡ.

ಜಗದೀಶ (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/23/2009 - 13:55

perfect...ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತಾಡ್ತಿರೋದು... ಸದ್ಯಕ್ಕೆ ಕನ್ನಡ, ಆಂಗ್ಲ ಸಾಕು... ಹಿಂದಿ ಬೇಕಿದ್ರೆ ಮುಂದಕ್ಕೆ ಜನ ಕಲಿತಾರೆ... ಅಲ್ಲಿಯವರು ಇಲ್ಲಿ ಬಂದು ಬೇಕಿದ್ರೆ ಕನ್ನಡ, ತಮಿಳು ಕಲಿಯೊ ಹಂಗೆ...
ನಂದು ಸ್ವಂತ ಭ್ರಮೆ, ಅಭಿಪ್ರಾಯ, ಅನುಭವ ಇರ್ಬಹುದು....ಎಲ್ಲರು ನಿಮ್ಮಂಗೆ ಎಲ್ಲ ಭಾಷೆ ಕಲಿತಾರೆ ಅನ್ನೋದು ಕೂಡ ನಿಮ್ಮ ಒಬ್ಬರ ಅಭಿಪ್ರಾಯ ಅನ್ನಿಸೋಲ್ವ...
ಶಿಕ್ಷಣದಲ್ಲಿರೋ ದೋಷ ತೆಗೆದು ಹಾಕ್ಬೇಕು, ಹೌದು... ಅದರ ಜೊತೆ, ಹಿಂದಿ ರಾಷ್ಟ್ರ ಭಾಷೆ ಅಂತ ಕಲಿಸೋದು ದೋಷನೆ... ರಾಜಭಾಷೆ ಸಪ್ತಾಹ ಅನ್ನೊ ಹೆಸರಿನಲ್ಲಿ ಕರ್ನಾಟಕಕ್ಕೆ ಬಂದು, ಕನ್ನಡ ಬರಿ ನಿಮ್ಮನೇಲಿ ಮಾತಾಡಿ, ಹೊರಗೆಲ್ಲ ಮತ್ತು office li ಬರಿ ಹಿಂದಿ ಮಾತಾಡಿ ಅನ್ನೋದು ಹೇರಿಕೆ ಅಲ್ದೆ ಮತ್ತಿನ್ನೇನು...
ಜನರನ್ನ ಯಾರು ಕೆರಳಿಸ್ತಿಲ್ಲ... ತಪ್ಪು ಮಾಹಿತಿ ಕೊಡೊದ ಇಡೀ ದೇಶನ ಮೋಸ ಮಾಡೋದು ಅನ್ಸಲ್ವ... ಅದನ್ನ ಜನಕ್ಕೆ ತಿಳಿಸಿ ಎಚ್ಚರಿಸ್ತಿದಾರೆ ಅಷ್ಟೆ... ಜನ ಏನು ಪೆದ್ರಲ್ಲ... ಎಲ್ಲ ವಿಷಯ ಕೊಟ್ಟು ಬೇಕಿದ್ದು ತಗೊಳ್ಳಿ ಅಂದ್ರೆ ತಗೊತಾರೆ... ಹಿಂದಿ ಬರದಿದ್ರೆ ರೇಲ್ವೆ ಲಿ ಕೆಲಸ ಇಲ್ಲ ಅನ್ನೋ ಮಟ್ಟಕ್ಕೆ ಬರ್ತಿದೆ... ಮುಂದಕ್ಕೆ ಹಿಂದಿ ಬರದಿದ್ರೆ ದೇಶದ್ರೋಹಿ ಅಂದ್ರು ಅಂತಾರೆ... ಇದು ಯಾವ ನ್ಯಾಯ....
http://kalyana-raman.blogspot.com/2009/09/blog-post_07.html
ಇಲ್ಲಿ comments ಓದಿ, ಹಿಂದಿ ಹೇರಿಕೆ ಅಂತ ಅನ್ನಿಸೋದು ನಿಜ ಅಂತ ಗೊತ್ತಾಗುತ್ತೆ...

ಹರಿಪ್ರಸಾದ್ ಶುಕ್ರ, 09/25/2009 - 15:26

ನಮಸ್ಕಾರ ಈ ಲೇಖನದಲ್ಲಿ ಹೇಳಿದಂತೆ ಹಿಂದಿ ನಮ್ಮ ರಾಷ್ಟೃ ಭಾಷೆ ಅಲ್ಲ ಅಂದಂದರೆ ಆ ಭಾಷೆಯನ್ನು ಕಡ್ಡಾಯವಾಗಿ ಶಿಕ್ಷಣದಲ್ಲಿ ಹೇರುವುದು ಸಂಮಂಜಸವಾಗಲಾರದು.ಆದರೂ ಬೇಡವೇ ಬೇಡ ಬೇಕೆ ಬೇಕು ಏಂಬ ವಾದಕ್ಕಿಂತ ಈಗ ನಾವು ಕಲಿತ ಹಿಂದಿ,ಇಂಗ್ಲಿಷ ಭಾಷೆಯನ್ನು ಉಳಿಸಿ ಕೊಂಡು ಕನ್ನಡವನ್ನು ಎತ್ತರ ಎತ್ತರಕ್ಕೆ ಬೇಳೆಸ ಬೇಕಾಗಿದೆ. ಇತರ ಭಾಷೆಯನ್ನು ಅಳಿಸುವುದಕ್ಕಿಂತ ನಮ್ಮ ಭಾಷೆಯನ್ನು ಎಲ್ಲಕ್ಕಿಂತ ಮಿಗಿಲಾಗಿ ಬೇಳೆಸಿ ನಮ್ಮ ಭಾಷೆಯನ್ನು ಇತರರು ಕಲಿಯುವಂತೆ ಮಾಡಬೇಕಿದೆ,ಇಲ್ಲಿ ಪ್ರುಮುಖವಾಗಿ ನಮ್ಮ ರಾಜ್ಯದ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಕನ್ನಡವನ್ನೆ ಕಲಿಸಬೇಕಾಗಿದೆ ನಮ್ಮ ಮಕ್ಕಳು ಒಂದು ಎಂದಾಗ ಇಸ್ ಇಟ್ ಒನ್ ಎಂದು ಕೇಳಿ ಅರ್ಥ ಮೂಡಿಕೊಳ್ಳುವಂತೆ ಆಗಬಾರದು ಶಿಕ್ಷಣದ ನಂತರದ ಹಂತದಲ್ಲಿ ಹಿಂದಿ ಭಾಷೆಯನ್ನು ಕಲಿಯುದರಿಂದ ನಮ್ಮ ಕನ್ನಡ ಭಾಷೆಗೆ ಏನು ದಕ್ಕೆ ಉಂಟಾಗಲ್ಲಲಾರದು ಎಂದು ನನ್ನ ಅನಿಸಿಕೆ.

ದಕ್ಷಿಣ ಕನ್ನಡ ಜಲ್ಲೆಯವನದ ನಾನು ಅಲ್ಲಿನ ಭಾಷೆಯದ ತುಳುವಿಗೆ ಪ್ರಮುಖ್ಯತೆಯನ್ನು ಕೊಟ್ಟು ಕಲಿತು ನನ್ನ ಮಾತ್ರ ಭಾಷೆಯದ ಕನ್ನಡವನ್ನು ಅ ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕಿದೆ ನಾವು ಇತರ ಭಾಷೆ ಬೇಡವೇ ಬೇಡ ಎಂದು ವಾದಿಸಿದರೆ ನಮ್ಮ ಭಾಷೆಯು ಇತರೆಡೆ ಆ ಪರಿಸ್ಥಿಯನ್ನು ಎದುರಿಸ ಬೇಕಾಗಬಹುದು.

ಈ ಅಂತರ್ಜಾಲದಲ್ಲಿ ವಿಸ್ಮಯನಗರಿಯು ಮಾಡಿದ ಕ್ರಾಂತಿಯಂತೆ ಇತರ ಕ್ಷೇತ್ರದಲ್ಲಿ ಆರೋಗ್ಯ ಪೊರ್ಣ ಸ್ಪರ್ಧೆ ಯಿಂದ ನಾವು ಇತರ ಭಾಷೆಗಿಂತ ಅಭಿವ್ರಧಿ ಹೊಂದ ಬೇಕಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಪ್ರಮುಖ ಮನ್ನಣೆ ಕೊಟ್ಟು ಇತರ ಭಾಷೆಗಳಿಗು ಸ್ಥ್ತಾನ ಕಲ್ಪಿಸಿ ಭಾಷೆಗಳ ವಿಚಾರದಲ್ಲಿ ಸಹ್ರದಯತೆಯನ್ನು ಮೆರೆಯಬೇಕು.

ಅಳಿಸಿ ಉಳಿಸಿವುದಕ್ಕಿಂತ ಉಳಿಸಿ ಬೇಳಸುವುದು ಉತ್ತಮ ಎಂದು ನನ್ನ ಅಭಿಪ್ರಾಯ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.