Skip to main content

ಆ ಮುಗ್ಧ ನಗೆಗೂ ಒಂದು ಸದ್ದಿತ್ತು

ಇಂದ kannada vijay
ಬರೆದಿದ್ದುFebruary 20, 2007
2ಅನಿಸಿಕೆಗಳು

೨ ವರ್ಷದ ಹಿಂದೆ(೨೦೦೫, ಫೆಬ್ರುವರಿ) ಮಜೆಸ್ಟಿಕ್. ಸಮಯ ಬೆಳಗ್ಗೆ ಹತ್ತು. ಇಬ್ಬರು ಭಿಕ್ಷುಕರ ಮಕ್ಕಳು, ಚಿಕ್ಕವರು. ೬-೭ ವರ್ಷ ವಯಸ್ಸಿರಬಹುದು ....ಒಬ್ಬ ಹುಡುಗ ಅಣ್ಣ, ಮತ್ತೆ ಅವನ ಪುಟ್ಟ ತಂಗಿ.ಇಬ್ರೂ ಎಷ್ಟು ಕ್ಯೂಟ್ ಆಗಿದ್ರು ಅಂದ್ರೆ, ಒಳ್ಳೆ ಬಟ್ಟೆ ತೊಡಿಸಿದ್ರೆ, ರಾಜರ ಮಕ್ಕಳ ತರ ಕಾಣಿಸಿರೋರು..
ಈಗ ಪ್ಲಾಟ್ ಫಾರ್ಮ್ ನ ಕಂಬದ ಕೆಳಕ್ಕೆ ನೆಲಕ್ಕೆ ಆ ಮಗು ಒರಗಿ ನೆಲಕ್ಕೆ ಕೂತ್ಕೊಳ್ಳುತ್ತೆ... ತುಂಬಾ ಹಸಿವಾಗಿರಬೇಕು. ಆ ಹುಡುಗ ಜೇಬಲ್ಲಿ ಹುಡುಕಿ ತೆಗೆದ ನಾಣ್ಯ ತೊಗೊಂಡು ಸೈಡ್ನಲ್ಲಿದ್ದ ನಂದಿನಿ ಫೇಡಾ ಅಂಗಡಿಗೆ ಹೋಗ್ತಾನೆ.. ಸ್ವಲ್ಪ ಹೊತ್ತಲ್ಲೇ ತಿರುಗಿ ಬಂದು ತಂಗಿ ಹತ್ರ ಏನೋ ಹೇಳ್ತಾನೆ...ಅವಳು ತನ್ನ ಹತ್ರ ಇದ್ದ ಇನ್ನೊಂದು ನಾಣ್ಯ ತೆಗೆದು ಕೊಡ್ತಾಳೆ...ಅವನು ಮತ್ತೆ ಅಂಗಡಿಗೆ ಓಡ್ತಾನೆ.. ಈ ಬಾರಿಯೂ ಹಾಗೇ ವಾಪಸ್ ಬರ್ತಾನೆ... ಬಂದು ತಂಗಿ ಹತ್ರ ಏನೋ ಹೇಳ್ತಾನೆ...ನಾನು, ಆ ಚಿಕ್ಕ ತಂಗಿಯ ಮುಖವನ್ನೇ ದಿಟ್ಟಿಸುತ್ತಿದ್ದೆ..ಅವಳ ಮುಖ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅಂತ..
೬ ವರ್ಷದ ಆ ಚಿಕ್ಕ ಮುಗ್ಧ ಮುಖದಲ್ಲಿ, ಎಂತ ಪ್ರೌಢ ಕಲೆ ಅಂದ್ರೆ, ಎಂತವರೂ ಗಮನಿಸಬಹುದು..ಮತ್ಥೆ, ಅಣ್ಣನ ಮುಖದಲ್ಲಿ ತಂಗಿಗಾಗಿ ಯಾವದೋ ತಿನಿಸನ್ನ ತರಲಿಲ್ಲವಲ್ಲ ಅನ್ನೊ ಕಳೆಯಿತ್ತು...ಅವನೂ ಅಲ್ಲೆ, ಅವಳ ಬಳಿಯಲ್ಲೆ ಕೂತ್ಕೊತಾನೆ.. ಹತ್ತು ನಿಮಿಷದಿಂದ ನೋದ್ತಾನೆ ಇದ್ದಿನಿ..ನಂಗೆ ಭಯ, ಆಶ್ಚ್ರ್ಯರ್ಯವಾಗಿದ್ದು ಅಂದ್ರೆ, ಆ ಹುಡುಗಿ ತುಟಿ ಪಿಟಕ್ ಅನ್ನಲಿಲ್ಲ ....ಭಾವದಲ್ಲೂ ಏನೂ ಬದಲಾವಣೆ ತೋರಲಿಲ್ಲ..ಆದ್ರೆ, ಮೊದಲಿಂದ ಕೊನೆವರೆಗೂ, ಮುಖದಲ್ಲಿ, ಬರೀ ಮುಗುಳ್ನಗೆ... ಒಂಥರ ದಿವ್ಯ ನಗು...ನಾನಷ್ಟೇ ಅಲ್ಲ, ತುಂಬಾ ಜನರೂ ಈ ಇಬ್ಬರೂ ಮಕ್ಕಳ ಬಗ್ಗೆ ಸ್ವಲ್ಪ ಕುತೂಹಲ ತೋರಿದ್ದು ನನ್ನ ಗಮನಕ್ಕೂ ಬಂತು...
ನಾನು ಕಾಯುತ್ತಿದ್ದ ಯಾವದೊ ಬಸ್ಸು ಬಂತಾ ಅಂತ ಸ್ವಲ್ಪ ದೂರ ಹೋಗಿ ವಾಪಸ್ ಬಂದ್ರೆ, ಅವರಿಬ್ರೂ ಮಾಯ...
ನಂಗೆ ಆ ಮಕ್ಕಳಿಗೆ ಸ್ವಲ್ಪ ದುಡ್ಡು ಕೊಡೋಣ ಅನ್ನಿಸಿತ್ತು...ಅತ್ತಿತ್ತ ಎಲ್ಲೂ ಕಾಣಿಸ್ಲಿಲ್ಲ..ಆದರೆ, ಅಲ್ಲೆ ಇದ್ದ ಒಬ್ಬ ನನ್ನ ಗೆಳೆಯ ಸಿಕ್ಕ. ಅವನಿಗೆ ಆ ವಿಷಯ ಹೇಳಿದೆ..ಅವನು ಆ ಮಕ್ಕಳ ಹತ್ರಾನೇ ತುಂಬಾ ಹೊತ್ತಿಂದ ನಿಂತ್ಕೊಂಡು ಬಸ್ ಗಾಗಿ ಕಾಯ್ತಿದ್ನಂತೆ..
"ಹೂಂ ಕಣೊ..ಮುದ್ದಾಗಿದ್ವು ಮಕ್ಕಳು... ಆ ಹುಡುಗ ಒಂದಿಬ್ಬರ ಹತ್ರ ಭಿಕ್ಷೆ ಬೇಡಿದ್ದ...ಸ್ವಲ್ಪ ಹೊತ್ತು ತಮ್ಮ ತಮ್ಮಲ್ಲೆ ಮಾತಾಡ್ತಿದ್ರು...ಏನು ಅನ್ನೋದು ಸರಿಯಾಗಿ ಗೊತ್ತಿಲ್ಲದಿದ್ರೂ, ಒಂದ್ ವಿಷ್ಯ ಗೊತ್ತಾಯ್ತು..
ಆ ಚಿಕ್ಕ ಹುಡುಗಿ ಹಸಿದಿತ್ತು....ಮತ್ತೆ, ಪಾಪ ಅವಳಿಗೆ ಮಾತ್ ಬರೊಲ್ಲ..ಮೂಕಿ.."
ಅಲ್ಲಿವರೆಗೂ ಆ ಮಗುವಿನ ನಿರಂತರ ಸುಂದರ ಮುಗುಳುನಗೆಗೆ ಒಂದು ರೀತಿಯ ಮೌನ ಇತ್ತು.. ಆದರೆ, ನನ್ನ ಗೆಳೆಯನ ಮಾತು ಕೇಳಿ, ಇದ್ದಕ್ಕಿದ್ದಂತೆ ಆ ನಗೆಗೆ ಬಿಕ್ಕಳಿಸುವ ಸದ್ದೂ ಜತೆಯಾಗಬೇಕೇ....?

ಲೇಖಕರು

ಅನಿಸಿಕೆಗಳು

Hussain ಧ, 05/16/2007 - 20:57

ಬರಿ ಕೂತು ಅಶ್ಟೊತ್ತು ನೊಡೊಕಿಂತ್ಲು ಆಗಿಂದಾಗ್ಲೆ ಒಂದು ಬ್ರೆಡ್ ಕೊಟ್ಟಿದ್ರೆ ನಿಮ್ಮ್ ಮನ್ಸ್ಸು ಹಗುರ ಅಗಿರೊದು.

good atempt to write something. :)

Rajashekhar (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/01/2010 - 18:20

ತು೦ಬಾ ಚೆನ್ನಾಗಿದೆ. ಮನಸ್ಸು ತು೦ಬಿಬ೦ತು..............

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.