ಕಗ್ಗಂಟು ಪತ್ತೇದಾರಿ ಕಥೆ - ಭಾಗ 5 (ಅಂತಿಮ ಭಾಗ)
ಇದರ ಮೊದಲ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1
ಇದರ ಎರಡನೇಯ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2
ಇದರ ಮೂರನೆಯ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 3
ಇದರ ಹಿಂದಿನ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 4
"ಸರss ನಂಗss ಭಾರೀ ಖುಷಿಯಾಗೈತ್ರಿ ಅಂತೂ ಕೊಲೆ ರಹಸ್ಯ ಬಿಡಿಸಿ ಬಿಟ್ರಲ್ರಿ. ಹೇಳ್ರಿ ಆ ಖದೀಮರ ಹೆಸ್ರನ್ನ ಬೇಡಿ ಹಾಕಿ ಜೈಲಿಗೆ ಹಾಕಿ ಬಿಡೋಣ್ರಿ." ಎಂದು ಬಸವರಾಜ ಆನಂದದಿಂದ ಹೇಳಿದ.
ಆದರೆ ವಿಕ್ರಂ ತಲೆ ಬೇರೆ ಕಡೆಯೇ ಇತ್ತು.ನಿಜ ಕೊಲೆಗಾರ ಯಾರು ಎಂದು ಹೇಳಬಹುದು. ಆದರೆ ನಾನು ಹೇಳಬಿಡಬಹುದು. ಆದರೆ ನಾನು ಹೇಳಿದ್ದನ್ನು ಯಾರು ನಂಬುತ್ತಾರೆ? ಕೋರ್ಟಿಗೆ ಸಾಕ್ಷಿ ಬೇಕು. ಆದರೆ ಆ ತರಹದ ಗಟ್ಟಿ ಸಾಕ್ಷಿ ಯಾವುದು ಇಲ್ಲ. ಯಾರೂ ಸುಮ್ಮನೆ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವದಿಲ್ಲ.
ಇದಕ್ಕಿದ್ದಂತೆ ಬೇರೆ ಲೋಕದಿಂದ ಬಂದವನಂತೆ ವಿಕ್ರಂ "ಇಲ್ರಿ ಬಸವರಾಜು ಕಾದು ನೋಡಿ ಅದಕ್ಕೆ ಇವತ್ತು ಎಲ್ಲರನ್ನು ಕರೆದಿರುವದು"
ಅಂದು ಬೆಳಿಗ್ಗೆ ಮೊದಲು ಬಂದವರು ಇನ್ಸ್ ಪೆಕ್ಟರ್ ಪೃಥ್ವಿರಾಜ್ ಇಬ್ಬರು ಕಾನ್ಸ್ ಸ್ಟೇಬಲ್ ಜೊತೆ ಬಂದಿದ್ದರು. ವಿಕ್ರಂ ಹತ್ತಿರ ಬಂದು "ಕಂಗ್ರಾಟ್ಸ್ ಅಂತೂ ಈ ಕೇಸನ್ನು ಬಿಡಿಸಿಯೇ ಬಿಟ್ರಿ. ಹೇಳ್ರಿ ಯಾರು ಕೊಲೆಗಾರ ಅಂತಾ ಹಲ್ಕಾ ನನ್ಮಗನನ್ನು ಲಾಕಪ್ ಒಳಗೆ ಹಾಕಿ ಬಡಿತೀನಿ"
ಆಗ ವಿಕ್ರಂ "ಇಲ್ಲ ಸಾರ್ ಕೇಸ್ ಅಷ್ಟು ಸುಲಭ ಇಲ್ಲ. ಕೊಲೆಗಾರನ ವಿರುದ್ಧ ಯಾವುದೇ ಬಲವಾದ ಸಾಕ್ಷಿ ಇಲ್ಲ"
"ಅಯ್ಯೋ ಅದೆಲ್ಲಾ ನನಗೆ ಬಿಡಿ ಸಾರ್. ಆ ಬಡ್ಡಿ ಮಗನ್ನ ಜೈಲಲ್ಲಿ ಏರೋ ಪ್ಲೇನ್ ಹತ್ತಿಸಿ ನಾಲ್ಕು ಬಿಟ್ಟರೆ ಎಲ್ಲಾ ಬಾಯಿ ಬಿಡ್ತಾನೆ" ಎಂದು ಗರ್ಜಿಸಿದರು ಪೃಥ್ವಿರಾಜ್.
"ಉಹೂಂ ಇವರೆಲ್ಲಾ ಗೌರನ್ವಿತ ಮನೆತನದವರು ಹಾಗೆಲ್ಲಾ ಖಚಿತವಾದ ಸಾಕ್ಷಿ ಇಲ್ಲದೇ ಥರ್ಡ್ ಗ್ರೇಡ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಅಲ್ವಾ" ಎಂದು ಪ್ರಶ್ನಿಸಿದ ವಿಕ್ರಂ.
ಒಂದೆರಡು ನಿಮಿಷ ಯೋಚಿಸಿದ ನಂತರ ಪೃಥ್ವಿರಾಜ್ "ನಿಜ ನೀವು ಹೇಳುವದು ಆದರೆ ಈಗ ಏನ್ಮಾಡೋದು ಅಂತೀರಿ?" ಎಂದು ಕೇಳಿದರು.
"ಈಗ ಚಂದ್ರಹಾಸ, ಗೌತಮ್ ಮತ್ತು ಸೌಜನ್ಯ ಈ ಮೂವರು ಬರಲಿದ್ದಾರೆ. ಈ ಮೂವರನ್ನು ವಿಚಾರಣೆ ನಡೆಸಿ ಬಾಯಿ ಬಿಡಿಸುವದೊಂದೇ ಈಗಿರುವ ದಾರಿ. ಈ ವಿಚಾರಣೆ ಸಂಪೂರ್ಣ ವಿಡಿಯೋ ಶೂಟಿಂಗ್ ಆಗಲಿದೆ." ಎಂದ ವಿಕ್ರಂ.
"ಆದರss ನೀವು ವಿಚಾರಣೆ ಆಗಲೇ ಮಾಡೀರಲ್ರಿ. ಇನ್ನೇನು ಐತ್ರಿ" ಎಂದು ಬಸವರಾಜು ಆಶ್ಚರ್ಯದಿಂದ ಹೇಳಿದ.
"ಆಗಿನ ವಿಚಾರಣೆಯಿಂದ ಸತ್ಯ ತಿಳಿದಿದೆ. ಈಗ ಕೊಲೆ ಮಾಡಿದವರಿಂದಲೇ ಬಾಯಿ ಬಿಡಿಸ ಬೇಕಾಗಿದೆ ಅದಕ್ಕೇ ಈ ವಿಚಾರಣೆ" ಎಂದುತ್ತರಿಸಿ ವಿಕ್ರಂ ಕಿಟಕಿಯಿಂದ ಹೊರಗೆ ನೋಡಿದ. ಕಾರನ್ನು ಪಾರ್ಕ್ ಮಾಡಿ ಇಳಿಯುತ್ತಿದ್ದ ಚಂದ್ರಹಾಸ ಕಾಣಿಸಿದ.
"ರೀ ಬಸವರಾಜು ಹೋಗಿ ಚಂದ್ರಹಾಸ ಬರ್ತಾ ಇದ್ದಾನೆ. ಅವನಿಗೆ ಕಳುಹಿಸಿ ಉಳಿದವರನ್ನು ಮೇಲೆ ಬಿಡಬೇಡಿ. ನಾನು ಮತ್ತು ಪೃಥ್ವಿ ರಾಜ್ ವಿಚಾರಿಸುತ್ತೇವೆ" ಎಂದು ಕಳುಹಿಸಿದ. ಅಷ್ಟರಲ್ಲಿ ಬಸವರಾಜುವನ್ನು ಪೃಥ್ವಿರಾಜ್ ತಡೆದು ಕಾನ್ಸ್ಟೇಬಲ್ ಇಬ್ಬರನ್ನು ಕಳುಹಿಸಿದರು. ವಿಕ್ರಂ ಹೂದಾನಿಯಲ್ಲಿ ಅಡಗಿಸಿದ್ದ ವಿಡಿಯೋ ಕ್ಯಾಮರಾ ಆನ್ ಮಾಡಿ ತನ್ನ ಅಂಗಿಯೊಳಗೆ ಮೈಕ್ ಅಡಗಿಸಿ ಕುಳಿತ. ಬಸವರಾಜು ಪೃಥ್ವಿರಾಜರಿಗೆ ತಾನು ಬರೆದಿಟ್ಟ ಹಿಂದಿನ ವಿಚಾರಣೆಯ ಫೈಲ್ ನ್ನು ತಂದು ಕೊಟ್ಟ.
ಹೊರಗೆ ಬಾಗಿಲು ತಟ್ಟಿದ ಶಬ್ದ. ವಿಕ್ರಂ ಮತ್ತು ಪೃಥ್ವಿರಾಜ್ ಅಕ್ಕ ಪಕ್ಕ ಕುಳಿತರು.
"ಕಂ ಇನ್" ಎಂದ ವಿಕ್ರಂ. ಚಂದ್ರಹಾಸ ನಿದಾನವಾಗಿ ಒಳಗೆ ಬಂದ.,
"ಬನ್ನಿ ಚಂದ್ರಹಾಸ ಇವರು ನಿಮ್ಮ ಏರಿಯಾದ ಇನ್ಸ್ ಪೆಕ್ಟರ್ ಪೃಥ್ವಿರಾಜ್ ಅಂತಾ" ಎಂದು ಪರಿಚಯಿಸಿದ ವಿಕ್ರಂ.
ಚಂದ್ರಹಾಸ ನಮಸ್ಕರಿಸಿದ ಆದರೆ ನಗಲಿಲ್ಲ. ಕುಳಿತುಕೊಳ್ಳುವಂತೆ ಸೂಚಿಸಿದ ವಿಕ್ರಂ.
ಚಂದ್ರಹಾಸ ಕುಳಿತ ನಂತರ ವಿಕ್ರಂ ಆರಂಭಿಸಿದ "ಚಂದ್ರಹಾಸ ನಿಮಗೆ ಹರಿದ ಹಗ್ಗ ನಾಟಕ ಗೊತ್ತಾ?"
"ಹುಂ ಅದು ಅನುಷಾಳ ಮೆಚ್ಚಿನ ನಾಟಕ. ಅವಳು ಕಾಲೇಜಿನ ದಿನಗಳಲ್ಲಿ ಆಡಿದ ನಾಟಕ"
"ನೀವು ಯಾವಾಗಲಾದರೂ ಅನುಷಾ ಜೊತೆ ಈ ನಾಟಕ ಆಡಿದ್ದೀರಾ?"
"ಇಲ್ಲ ನನಗೆ ಆ ನಾಟಕ ಇಷ್ಟ ಇರಲಿಲ್ಲ. ಒಮ್ಮೆ ಗೌತಮ್ ನಮ್ಮ ಮನೆಗೆ ಬಂದಾಗ ಈ ನಾಟಕ ಆಡಿದ್ದ"
ಆಗ ವಿಕ್ರಂ "ನೀವು ಅನುಷಾಳನ್ನು ಎಷ್ಟು ಪ್ರೀತಿಸ್ತಾ ಇದ್ರಿ"
ಚಂದ್ರಹಾಸನ ಮುಖ ಬಾಡಿತು ಕಣ್ಣಲ್ಲಿ ನೀರು ತುಂಬಿ ಬಂತು.
ವಿಕ್ರಂ ಮುಂದುವರಿಸಿದ "ಹೇಳಿ ಚಂದ್ರಹಾಸ ನನಗೆ ಗೊತ್ತು. ನಿಮಗೆ ಅನ್ಯಾಯ ಆಗಿದೆ ಅಂತಾ. ಆದ್ರೆ ಅದಕ್ಕೆ ನೀವೇ ಕಾನೂನನ್ನು ಕೈಲಿ ತಗೊಳ್ಳೋದು ಎಷ್ಟರಮಟ್ಟಿಗೆ ಸರಿ? ನಿಮ್ಮನ್ನು ಅನುಷಾ ಕೂಡಾ ಎಷ್ಟು ಪ್ರೀತಿಸ್ತಾ ಇದ್ದಳು. ನೀವು ಕೊಲೆ ಮಾಡಿ ಜೈಲಿಗೆ ಹೋದರೆ ಅನುಷಾಲ ಆತ್ಮ ನೆಮ್ಮದಿಯಾಗಿರುತ್ತಾ? ಪ್ಲೀಸ್ ನಿಮಗೆ ಈ ಕೊಲೆಯ ಬಗ್ಗೆ ಗೊತ್ತು. ನಮಗೆ ಹೇಳಿ ಕೊಲೆಗಾರನಿಗೆ ಶಿಕ್ಷೆ ಕೊಡಿಸೋಣ."
ವಿಕ್ರಂ ಮಾತಿಗೆ ತಲೆದೂಗಿ "ಹೇಳಿ ಚಂದ್ರಹಾಸ ನಿಮ್ಮ ಜೊತೆ ನಾವಿದ್ದೀವಿ. ನಿಮಗೆ ನ್ಯಾಯ ಒದಗಿಸುವದು ನನ್ನ ಜವಾಬ್ದಾರಿ" ಎಂದು ಹೇಳಿದರು.
ಚಂದ್ರಹಾಸ ನಿದಾನವಾಗಿ ಹೇಳಲಾರಂಭಿಸಿದ "ಆ ದಿನ ಸಿನಿಮಾಕ್ಕೆ ಬಾ ಅಂತಾ ಕನ್ನಿಕಾ ಚಿತ್ರಮಂದಿರದ ಹತ್ತಿರ ಅನುಷಾ ಕಾಯುತ್ತಿದ್ದಳು. ಕೆಲಸ ಇರೋದ್ರಿಂದ ಮನೆಗೆ ಹೋಗು ಅಂದೆ. ರಾತ್ರಿ 7ಕ್ಕೆ ಫೋನ್ ಮಾಡಿದಾಗ ಅನುಷಾ ಮಾತು ನಾರ್ಮಲ್ ಅನಿಸಲಿಲ್ಲ. ಕುಡಿದಂತಿತ್ತು. ಆದರೆ ಅನುಷಾ ಕುಡಿಯುವ ವಿಷಯ ನನಗೆ ಗೊತ್ತಿರಲಿಲ್ಲ. ಅದಕ್ಕೆ ಬೇಸರ ಆಗಿರಬೇಕು ಅಂತಾ ತಿಳಿದು ಕೆಲಸವನ್ನು ಬೇರೆಯವರಿಗೆ ವಹಿಸಿ ಮನೆಗೆ ಹೊರಟೆ. ದಾರಿಯಲ್ಲಿ ಚಿನ್ನದ ಅಂಗಡಿಯಲ್ಲಿ ಹಿಂದೊಮ್ಮೆ ಅನುಷಾ ನೋಡಿ ಇಷ್ಟಪಟ್ಟ ನಕ್ಲೆಸ್ ಖರೀದಿಸಿದೆ. ಅವಳಿಗೆ ಸರ್ ಪ್ರೈಸ್ ಗಿಫ್ಟ್ ಕೊಡೋಣ ಅಂತಾ ಇದ್ದೆ. ಮನೆಯ ಹತ್ತಿರ ಬರುವಾಗ ಗೌತಮ್ ನಮ್ಮ ಮನೆಯಿಂದ ಹೊರ ಬರುತ್ತಿರುವದು ಕಾಣಿಸಿತು. ಅವನನ್ನು ಕರೆಯಬೇಕು ಅನ್ನುವಷ್ಟರಲ್ಲಿ ಅವನು ಜೋರಾಗಿ ಓಡತೊಡಗಿದ. ಯಾಕೆ ಎಂದು ಗೊತ್ತಾಗಲಿಲ್ಲ. ಅವನು ನನ್ನನ್ನು ನೋಡಿರಲಿಲ್ಲ. ನನಗೂ ಗಾಬರಿ ಆಗಿ ಮನೆ ಒಳಕ್ಕೆ ಓಡಿದೆ. ಅನುಷಾ ಫ್ಯಾನ್ ಗೆ ನೇತಾಡುತ್ತಿದ್ದಳು. ನಾನು ಅವಳನ್ನು ಇಳಿಸುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅವಳು ನಿರ್ಜೀವ ಶವ ಆಗಿದ್ದಳು. ನನಗೆ ದಿಕ್ಕೇ ತೋಚದಂತಾಯ್ತು. ನನ್ನ ಅನುಷಾಳನ್ನು ಕೊಂದ ಗೌತಮನಿಗೆ ಕಾನೂನಿನಿಂದ ಯಾವ ಕಠಿಣ ಶಿಕ್ಷೆ ಸಿಗುವ ಬರವಸೆ ನನಗಿರಲಿಲ್ಲ. ಅದಕ್ಕೆ ಗೌತಮನನ್ನು ಉಪಾಯವಾಗಿ ಕೊಲ್ಲುವ ನಿರ್ಧಾರ ಕೈಗೊಂಡೆ. ಆ ದಿನ ಗೌತಮನ ಮನೆಬಳಿ ಸಿಕ್ಕಾಗ ನಾನು ಗೌತಮನ ಮುಗಿಸುವದಕ್ಕಾಗಿ ಬಂದಿದ್ದೆ. ಆದರೆ ನೀವು ನನ್ನನ್ನು ನೋಡಿದ್ದರಿಂದ ಜಾಗ ಖಾಲಿ ಮಾಡಿದೆ."
"ಗೌತಮ ಕೂಡಾ ಅನುಷಾಳನ್ನು ಪ್ರೀತಿಸುತ್ತಿದ್ದ. ಅವನು ಅವಳನ್ನು ಹೇಗೆ ಕೊಲೆ ಮಾಡಲು ಸಾಧ್ಯ? ಯಾರಾದರೂ ಪ್ರೀತಿಸುವವರನ್ನು ಕೊಲ್ಲುತ್ತಾರೆಯೇ" ಎಂದು ಕೇಳಿದ ವಿಕ್ರಂ.
ಬಸವರಾಜು ಹಾಗೂ ಪೃಥ್ವಿರಾಜ್ ಸುಮ್ಮನೆ ಇವರ ಮಾತು ಕೇಳುತ್ತಿದ್ದರು. ಪೃಥ್ವಿರಾಜ್ ಹಿಂದಿನ ವಿಚಾರಣೆಯ ಫೈಲ್ ಕೂಡಾ ಮಧ್ಯದಲ್ಲಿ ಓದುತ್ತಿದ್ದರು.
"ಕಾಲೇಜಿನಲ್ಲಿ ಅನುಷಾಳನ್ನು ಗೌತಮ್ ತೀರಾ ಹಚ್ಚಿಕೊಂಡಿದ್ದ. ಆದರೆ ಅನುಷಾಳಿಗೆ ಅವನ ಮೇಲೆ ಇಷ್ಟ ಇರಲಿಲ್ಲ. ಅನುಷಾಳ ಬರೀ ಸ್ನೇಹವನ್ನು ಗೌತಮ್ ಪ್ರೀತಿ ಎಂದೇ ಬೃಮಿಸಿದ್ದ. ಅವಳು ಕೆಲಸಕ್ಕೆ ಸೇರಿದಾಗ ನಾವು ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆ ಆದೆವು. ನನ್ನ ಜೊತೆ ಸಂಸಾರ ಆರಂಭಿಸಿದ ಅನುಷಾ ಕ್ರಮೇಣ ಗೌತಮನನ್ನು ಕ್ರಮೇಣ ಕಡೆಗಣಿಸಲಾರಂಭಿಸಿದಳು. ತನ್ನನ್ನು ನಿರ್ಲಕ್ಷಿಸುತ್ತಿರುವದರಿಂದ ಗೌತಮ್ ಬಯ್ಯುತ್ತಿರುವದಾಗಿ ಅನುಷಾ ನನಗೆ ಹೇಳಿದ್ದಳು. ಆಗ ಅವನಿಂದ ದೂರ ಇರುವಂತೆ ಸೂಚಿಸಿದ್ದೆ. ಆದರೆ ಕೊಲೆಯಾದ ದಿನ ನನ್ನ ಮಾತು ಕೇಳದ ಅನುಷಾ ನನ್ನನ್ನೇ ಬಿಟ್ಟು ಹೋದಳು" ಹೀಗೆ ಹೇಳಿದ ಚಂದ್ರಹಾಸ ದುಃಖವನ್ನು ತಡೆಯಲಾರದೇ ಅಳಲಾರಂಭಿಸಿದ. ಬಸವರಾಜು ಕಣ್ಣಲ್ಲೂ ಸಹ ನೀರು ಬಂತು. ಅದನ್ನು ಓರೆಗಣ್ಣಲ್ಲಿ ನೋಡಿದ ವಿಕ್ರಂ ಸುಮ್ಮನಿದ್ದ.
ವಿಕ್ರಂ ಚಂದ್ರಹಾಸನನ್ನು ಸಮಾಧಾನ ಪಡಿಸಲು ಹೇಳಿದ "ನೋಡಿ ಚಂದ್ರಹಾಸ ನಿಮ್ಮ ಮಾತಿನಲ್ಲಿ ಸತ್ಯ ಇದೆ ಎಂಬುದು ನನಗೆ ಗೊತ್ತು. ಕೊಲೆಗಾರನಿಗೆ ಶಿಕ್ಷೆ ಆಗುತ್ತೆ."
ಅಷ್ಟರಲ್ಲಿ ಕಾನ್ಸ್ಟೇಬಲ್ ಒಬ್ಬ ಬಂದು "ಯಾರೋ ಗೌತಮ್ ಅನ್ನುವವರು ಬಂದಿದಾರೆ" ಎಂದು ಹೇಳಿದ.
ವಿಕ್ರಂ ಚಂದ್ರಹಾಸ ನನ್ನು ಪಕ್ಕದ ರೂಮಲ್ಲಿ ಕುಳಿತಿರುವಂತೆ ತಿಳಿಸಿ " ಹಾಂ ಕಳ್ಸಿ" ಎಂದ.
ಚಂದ್ರಹಾಸ ಪಕ್ಕದ ರೂಂ ಗೆ ಹೋದ ಮೇಲೆ ಬಸವರಾಜು ಆ ಕೋಣೆಯ ಬಾಗಿಲು ಹಾಕಿದ.
------
ಗೌತಮನನ್ನು ಸ್ವಾಗತಿಸಿದ ವಿಕ್ರಂ ಕುಳಿತುಕೊಳ್ಳುವಂತೆ ಹೇಳಿದ.
"ಇವರು ಇನ್ಸ್ ಪೆಕ್ಟರ್ ಪೃಥ್ವಿರಾಜ್ ಅಂತಾ" ಎಂದು ಪರಿಚಯಿಸಿದ
ಗೌತಮ್ ಅವರಿಗೂ ಸ್ಮೈಲ್ ಕೊಟ್ಟು ಶೇಕ್ ಹ್ಯಾಂಡ್ ಮಾಡಿದ ಮೇಲೆ ಕುಳಿತು ಕೊಂಡ.
"ಗೌತಮ್ ನಿಮ್ಮನ್ನು ಇಲ್ಲಿಗೆ ಕರೆದಿರುವದು ಯಾಕೆಂದರೆ ಅಂತೂ ಅನುಷಾಳ ಕೊಲೆಯ ಕೇಸು ಬಗೆ ಹರಿಯಿತು. ಕೊಲೆಗಾರ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ." ಎಂದ ವಿಕ್ರಂ.
ಬಸವರಾಜುಗೆ ಕಾಲ ಕೆಳಗಿನ ನೆಲ ಸರಿದಂತಾಯ್ತು. ಪೃಥ್ವಿರಾಜ್ ಅವರಿಗೂ ಆಶ್ಚರ್ಯ. ಇಬ್ಬರೂ ಮನಸ್ಸಿನಲ್ಲಿಯೇ ನಮಗೆ ಹೇಳಲೆ ಇಲ್ಲ ಆದ್ರೆ ಗೌತಮನಿಗೆ ನೇರವಾಗಿ ಹೇಳುತ್ತಿದ್ದಾನಲ್ಲ ಅಂದುಕೊಂಡರು.
"ಹುಂ ಚಂದ್ರಹಾಸ ತಾನು ಕೊಲೆ ಮಾಡಿದ್ದು ಅಂತಾ ಒಪ್ಪಿಕೊಂಡಿದ್ದಾನೆ. ಆ ದಿನ ಅನುಷಾ ಹಾಗೂ ನೀವು ಇಬ್ಬರೂ ಜೊತೆಯಲ್ಲಿ ಕುಡಿದು ನಾಟಕ ಆಡುತ್ತಿರುವದನ್ನು ನೋಡಿದನಂತೆ. ನಂತರ ನೀವು ಹೋದ ಮೇಲೆ ಅನುಷಾಳ ಕೆನ್ನೆಗೆ ಹೊಡೆದಿದ್ದಾನೆ. ಆ ಹೊಡೆತದ ರಭಸಕ್ಕೆ ಆಕೆ ಸತ್ತಿದ್ದಾಳೆ."
"ನಾನು ಮೊದಲೇ ಹೇಳಿರಲಿಲ್ಲವೇ? ಅವನು ದುಷ್ಟ ಅಂತಾ. ನಂಗೆ ಗೊತ್ತಿತ್ತು ಅವನೇ ಕೊಲೆಗೆ ಮಾಡಿರೋದು ಅಂತಾ. ಜೈಲಿಗೆ ಹಾಕಿ ಸಾರ್ ಅವನನ್ನು" ಎಂದ ಗೌತಮ್.
ಆಗ ವಿಕ್ರಂ "ಆದರೆ ಒಂದು ಸಮಸ್ಯೆ ಇದೆ"
"ಏನು ಸಮಸ್ಯೆ ಅವನೇ ಒಪ್ಪಿಕೊಂಡ ಮೇಲೆ?" ಎಂದು ಕೇಳಿದ ಗೌತಮ್.
" ಸಮಸ್ಯೆ ಏನೆಂದರೆ ನೀವು ನೋಡಿದರೆ ನಾಲ್ಕು ತಿಂಗಳಿಂದ ಅನುಷಾಳನ್ನು ಭೇಟಿ ಆಗಿಲ್ಲ ಅನ್ನುತ್ತೀರಿ. ಆದರೆ ಅಲ್ಲಿ ಚಂದ್ರಹಾಸ ಕೊಲೆಯಾದ ದಿನ ನಿಮ್ಮನ್ನು ಒಟ್ಟಿಗೆ ನೋಡಿದೆ ಅನ್ನುತ್ತಾನೆ. ನೀವು ಹಾಗೆ ಹೇಳಿರುವದರಿಂದ ಚಂದ್ರಹಾಸ ಹೇಳುತ್ತಿರುವದು ಸುಳ್ಳು ಎಂದಾಗುತ್ತದೆ. ಅವನನ್ನು ಬಿಡಬೇಕಾಗುತ್ತೆ. ಹಾಂ ಚಂದ್ರಹಾಸ ನಿಮ್ಮನ್ನೂ ಕೊಲೆ ಮಾಡೋಕೆ ಬಂದಿದ್ದನಂತೆ. ಅವನನ್ನು ಹೀಗೆ ಸಾಕ್ಷಿ ಇಲ್ಲದೇ ಬಿಟ್ಟರೆ ನಿಮ್ಮ ಜೀವಕ್ಕೂ ಅಪಾಯ ಇದೆ." ಎಂದು ವಿಕ್ರಂ ಸಮಸ್ಯೆ ಹೇಳಿದ.
ಗೌತಮ್ " ನಾನು ಆ ದಿನ ಸುಳ್ಳು ಹೇಳಿದ್ದೆ. ಇವತ್ತು ನಿಜ ಹೇಳುತ್ತೀನಿ. ಕನ್ನಿಕಾ ಚಿತ್ರಮಂದಿರದ ಬಳಿ ಇದ್ದ ಅನುಷಾ ಚಂದ್ರಹಾಸ ಕೆಲಸ ಇದ್ದುದರಿಂದ ಸಿನಿಮಾಕ್ಕೆ ಹೋಗುವದಿಲ್ಲ ಎಂದು ಮೆಸೇಜ್ ಮಾಡಿದಳು. ಆಗ ನಾನು ಅಲ್ಲೆ ಹತ್ತಿರದಲ್ಲಿದ್ದೆ. ಅವಳಿಗೆ ಕಾಲೇಜಿನ ದಿನಗಳಲ್ಲಿ ನಾವಿಬ್ಬರೂ ಹೋಗುತ್ತಿದ್ದ ಪಬ್ ಒಂದಕ್ಕೆ ಹೋಗೋಣ ಅಂದೆ. ಅಲ್ಲಿ ನಾವಿಬ್ಬರೂ ಕುಡಿದೆವು. ಅನುಷಾ ಕೂಲ್ ಡ್ರಿಂಕ್ಸ್ ತೆಗೆದುಕೊಂಡರೂ ನನ್ನ ಗ್ಲಾಸ್ ನಲ್ಲೇ ಒಂದೆರಡು ಸಿಪ್ ವಿಸ್ಕಿ ಕುಡಿಯುತ್ತಿದ್ದಳು. ಆದಿನ ಸ್ವಲ್ಪ ಜಾಸ್ತಿಯೇ ಕುಡಿದಳೆನ್ನಿ. ಆಮೇಲೆ ಮನೆಗೆ ಹೋಗೋಣ ಕಾಲೇಜಿನ ದಿನ ಆಡಿದ ನಾಟಕ ಮತ್ತೆ ಆಡೋಣ ಅಂದಳು. ನಾವು ಆ ನಾಟಕ ಆಡುತ್ತಿದ್ದೆವು. ಆಗ ಚಂದ್ರಹಾಸ ಬಂದ. ಇಬ್ಬರಿಗೂ ಕೆಟ್ಟ ಶಬ್ದಗಳಲ್ಲಿ ಬೈದ. ಅನುಷಾಳಿಗೆ ಕೆನ್ನೆಗೆ ಹೊಡೆದ. ಆಗ ಅವಳು ಬಿದ್ದಳು. ನನಗೆ ಹೆದರಿಕೆ ಆಗಿ ಅವರ ಮನೆಯಿಂದ ಓಡಿದೆ. ಬಿಡ ಬೇಡಿ ಸಾರ್ ಅವನನ್ನು."
ವಿಕ್ರಂ "ಗೌತಮ್ ನೀವು ನಾಟಕ ಆಡಿದ್ದು ನಿಜ. ಆದರೆ ಚಂದ್ರಹಾಸ ಅಲ್ಲಿಗೆ ಬಂದಿರಲಿಲ್ಲ. ಅನುಷಾಳ ಮೇಲೆ ನಿಮಗೆ ತುಂಬಾ ವ್ಯಾಮೋಹವಿತ್ತು. ಅವಳು ನಿಮಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಈ ನಾಟಕದ ಮೂಲಕ ಅನುಷಾಳನ್ನು ಕೊಲೆ ಮಾಡಿದಿರಿ. ಸತ್ಯ ಹೇಳಿ"
ಅಷ್ಟರಲ್ಲಿ ಬಸವರಾಜು "ಗೌತಮನೋರsss ಅಲ್ರಿ ಸತ್ಯದ ತಲಿ ಮ್ಯಾಲ ಹೊಡೆದಾಂಗ ಅದ್ ಹ್ಯಾಂಗsss ಸುಳ್ಳು ಹೇಳ್ತಿರ್ರಿ? ನಮಗೂ ಸ್ವಲ್ಪ ಕಲಿಸ್ರಿ. ನಿಮಗsss ಒಳ್ಳಿದು ಮಾಡೋಣು ಅಂತಾ ಲಗ್ನ ಆದss ಸೌಜನ್ಯ ಮ್ಯಾಡಮ್ಮೋರಿಗೆ ಮೋಸ ಮಾಡಿದ್ರಿ. ಅನುಷಾಳಿಗss ಇಷ್ಟ ಇಲ್ಲದಿದ್ರು ಅವಳ ಹಿಂದೆ ಬಿದ್ದು ಅದೂ ಅವಳ ಬೇರೆಯವನ ಮದುವೆ ಆದ್ರೂ ದುರಾಸೆ ಪಟ್ರಿ. ಅವಳು ಒಪ್ಪಲಿಲ್ಲ ಅಂತಾ ಅವಳು ನಿಮ್ಮ ಮ್ಯಾಲೆ ವಿಶ್ವಾಸ ಇಟ್ಟು ನಾಟಕ ಆಡೋಣು ಅಂತಾ ಕರೆದ್ರೆ ಹರಿಯೋ ಹಗ್ಗಕ್ಕss ಕಬ್ಬಿಣದ ಕೊಂಡಿss ಹಾಕಿ ಅವಳ ಜೀವಾನೆ ತೆಗೆದು ಬಿಟ್ರಲ್ರಿ. ಹೊತ್ತು ಹೊತ್ತಿಗೊಂದು ರೂಪ ಹೊತ್ತು ಮುಗಿದ ಮ್ಯಾಗೆ ಕತ್ತೆ ಸ್ವರೂಪ ತೋರಿಸ್ತಿರಲ್ರಿ."
ಗಾಬರಿಗೊಂಡ ಗೌತಮ್ "ಹಾಗಿದ್ರೆ ಚಂದ್ರಹಾಸ ಕೊಲೆ ಮಾಡಿದೀನಿ ಅಂತಾ ಒಪ್ಪಿಕೊಳ್ಳಲಿಲ್ವಾ?" ಎಂದು ಕೇಳಿದ.
"ಕೊಲೆ ಮಾಡಿದ್ರೆ ತಾನೆ ಒಪ್ಪಿಕೊಳ್ಳೋಕೆ. ನಿಮ್ಮ ಬಾಯಿ ಬಿಡಿಸೋಕೆ ಮಾಡಿದ ಉಪಾಯ ಇದು" ಎಂದು ವಿಕ್ರಂ ನಕ್ಕ.
"ನೋಡ್ರಿ ನಿಮ್ಮ ಹಕೀಕತ್ ಏನು ಅಂತಾ ನಮಗೆಲ್ಲಾ ಗೊತ್ತಾಗೈತಿ. ಸುಮ್ನೆ ಒಪ್ಪಿಕೊಂಡು ನಿಜ ಹೇಳಿದ್ರ ಸರಿ. ಇಲ್ಲಾಂದ್ರ ಏರೋಪ್ಲೇನ್ ಹತ್ತಿಸಿ ಬಾಯಿ ಬಿಡಿಸ ಬೇಕಾಗುತ್ತೆ" ಎಂದು ಪೃಥ್ವಿರಾಜರು ತಮ್ಮ ಎಂದಿನ ಪೋಲಿಸ್ ಶೈಲಿಯಲ್ಲಿ ಗುಡುಗಿದರು.
ಆಗ ಬಸವರಾಜು "ಬರೀ ಏರೋಪ್ಲೇನ್ ಅಷ್ಟೇ ಅಲ್ರಿ ಸಾಹೆಬ್ರ ಡೈರೆಕ್ಟ್ ಆಗಿ ನರಕಕ್ಕss ಪಾರ್ಸೆಲ್ ಮಾಡ್ರಿ ಈ ಬೆರಕಿ ನನ್ಮಗನ್ನ. ಅಲ್ರಿ ಆ ಅನುಷಾಳನ್ನ ಯಾಕ್ರಿ ಕೊಂದ್ರಿ. ಆಯವ್ವ ನಿಮಗss ಅದ್ಯಾವ ದ್ರೋಹ ಮಾಡಿತ್ರಿ? ನಿಮ್ಮ ಮ್ಯಾಲ ವಿಶ್ವಾಸ ಇಟ್ಟು ಸ್ನೇಹ ಬೆಳೆಸಿದ್ದss ಆಕಿ ತಪ್ಪೆನss" ಎಂದು ಹೇಳಿದ.
ಗೌತಮ್ ಒಂದೇ ಸಮನೆ ಅಳತೊಡಗಿದ.
"ಮಾಡಬಾರದ್ದನ್ನು ಮಾಡಿ ಬಿಟ್ಟು ಹೀಂಗss ಹುಡುಗಿ ಹಾಂಗss ಅತ್ರ ಹೋದಾಕಿ ವಾಪಸ್ ಬರಲ್ಲಾರಿss. ಯಾಕೆ ಹೀಗೆ ಮಾಡಿದ್ರಿ ಅಂತಾ ಬೊಗಳ್ರಿ" ಎಂದು ಬಸವರಾಜ್ ಸಿಟ್ಟಿನಿಂದ ಹೇಳಿದ.
ಗೌತಮ್ ಹೇಳಲಾರಂಭಿಸಿದ "ನಾನು ಮತ್ತು ಅನುಷಾ ಕಾಲೇಜಿನಲ್ಲಿ ಭೇಟಿ ಆದೆವು. ಪ್ರತಿಯೊಂದು ವಿಷಯಕ್ಕೂ ಅನುಷಾ ನನ್ನನ್ನೇ ಅವಲಂಭಿಸಿದ್ದಳು. ಲಂಚ್ ಕೂಡಾ ಒಟ್ಟಿಗೆ, ಓದುವಾಗಲೂ ಒಟ್ಟಿಗೆ, ಹೀಗೆ ನಮ್ಮ ಸಂಬಂಧ ಬೆಳೆಯುತ್ತಾ ಹೋಯ್ತು. ನನಗೆ ಪಬ್ ಗೆ ಹೋಗುವ ಅಭ್ಯಾಸ ಇತ್ತು. ಅವಳನ್ನೂ ಒತ್ತಾಯ ಮಾಡಿ ಕರೆದೊಯ್ಯುತ್ತಿದ್ದೆ. ಮೊದ ಮೊದಲು ನಾಚಿಕೆ ಪಟ್ಟರೂ ನಂತರ ಅದಕ್ಕೂ ಒಗ್ಗಿ ಹೋದಳು. ಹೀಗೆ ನಾವು ಬಾಯ್ ಫ್ರೆಂಡ್ - ಗರ್ಲ್ ಫ್ರೆಂಡ್ ತರಾ ಇರತೊಡಗಿದೆವು. ಟೂರ್ ನಲ್ಲೂ ಒಟ್ಟಿಗೆ ಒಂದೇ ರೂಮನ್ನು ಹಂಚಿಕೊಂಡು ಇರುವಷ್ಟು ಅನ್ಯೋನ್ಯತೆ ನಮ್ಮಲ್ಲಿ ಬೆಳೆಯಿತು. ನಾನು ಅನುಷಾಳನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡೆ. ಇಷ್ಟೆಲ್ಲಾ ಆದರೂ ಅನುಷಾ ಮದುವೆ ಬಗ್ಗೆ ಮಾತನಾಡಲಿಲ್ಲ. ಒಮ್ಮೆ ನಾನೇ ಪ್ರೋಪೋಸ್ ಮಾಡಿದಾಗ ಕೆಲಸ ಸಿಕ್ಕಿ ಸೆಟಲ್ ಆಗೋಣ ಎಂದಳು. ಆದರೆ ಕೆಲಸ ಸಿಕ್ಕಾಗ ಅವಳು ಚಂದ್ರಹಾಸನಿಗೆ ಮನಸೋತಳು. ದಿನೇ ದಿನೇ ನನ್ನ ನಿರ್ಲಕ್ಷ್ಯ ಮಾಡಲಾರಂಭಿಸಿದಳು. ಒಂದು ದಿನ ನನಗೆ ಫೋನ್ ಮಾಡಿ ಚಂದ್ರಹಾಸನ ಮದುವೆ ಆಗುತ್ತಿರುವೆ ಹಳೆಯದನ್ನೆಲ್ಲಾ ಮರೆತು ಬಿಡು ಎಂದಳು. ಆಗ ನನಗೆ ಭಾರೀ ದುಃಖವಾಯ್ತು. ಸರಿ ಎಂದೆ.ಅವಳ ಮದುವೆ ಆಯ್ತು. ನನ್ನ ಮದುವೆ ಸೌಜನ್ಯಳ ಜೊತೆ ಅವಳ ಒತ್ತಾಯದಿಂದ ಆಯ್ತು. ಆದರೂ ನನಗೆ ಅನುಷಾಳನ್ನು ಮರೆಯಲು ಆಗಲೇ ಇಲ್ಲ. ಇದೇ ಕಾರಣದಿಂದ ಸೌಜನ್ಯ ಕೂಡ ನನ್ನ ಬಿಟ್ಟು ಹೋದಳು. ನನ್ನ ಜೀವನದ ಈ ಸ್ಥಿತಿಗೆ ಅವಳೇ ಕಾರಣ. ಅದಕ್ಕೆ ಅವಳನ್ನು ಕೊಲ್ಲುವ ನಿರ್ಧಾರ ಮಾಡಿದೆ. ಆಗ ನನಗೆ ನೆನಪಿಗೆ ಬಂದದ್ದು ಕಾಲೇಜಿನಲ್ಲಿ ಆಡುತ್ತಿದ್ದ ಅನುಷಾಳಿಗೆ ತುಂಬಾ ಇಷ್ಟವಾದ ನಾಟಕ ಹರಿದ ಹಗ್ಗ. ಪ್ರಿಯತಮಾ ವಿರಹ ವೇದನೆ ಅನುಭವಿಸಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆದರೆ ಅವಳ ನೇಣಿನ ಹಗ್ಗ ಹರಿಯುತ್ತದೆ. ಒಮ್ಮೆ ಅನುಷಾ ತನ್ನ ಮನೆಯಲ್ಲಿ ಈ ನಾಟಕವನ್ನು ಆಡುವಂತೆ ಕೇಳಿಕೊಂಡಿದ್ದಳು. ಆ ದಿನ ಕುಡಿದ ಅಮಲಿನಲ್ಲಿದ್ದ ಅವಳ ಜೊತೆ ಮನೆಗೆ ಹೋದಾಗ ಈ ಆಟ ಆಡುವಾ ಎಂದು ಕೇಳಿದೆ. ಅದಕ್ಕೆ ಒಪ್ಪಿದ್ದಳು. ಅವಳ ಮನೆಯಲ್ಲೇ ಇದ್ದ ಹಗ್ಗ, ಪತ್ರ ತಂದಳು. ಹಿಂದಿನ ಬಾರಿ ಆಡಿದಾಗ ತುಂಡಾಗಿದ್ದ ಹಗ್ಗಕ್ಕೆ ದಾರದ ಬದಲು ಕಬ್ಬಿಣದ ಕೊಂಡಿ ಹಾಕಿ ಜೋಡಿಸಿದೆ. ನಶೆಯಲ್ಲಿದ್ದ ಅವಳು ಅದನ್ನು ಗಮನಿಸಲಿಲ್ಲ. ನಾಟಕ ಆಡುವಾಗ ನಾನು ನಿರೀಕ್ಷಿಸಿದ್ದಂತೆ ಹಗ್ಗ ಹರಿಯದೇ ನೇತಾಡತೊಡಗಿದಳು. ನಾನು ಆ ಪತ್ರಕ್ಕೆ ಅನುಷಾ ಎಂದು ಸಹಿ ಹಾಕಿ ಹೊರಗೆ ಓಡಿ ಹೋದೆ. ಹಿಂದೆ ಕಾಲೇಜಿನಲ್ಲಿ ಅವಳ ಸಹಿ ಹಾಕುವದನ್ನು ಕಲಿತಿದ್ದೆ. ಅನೇಕ ಬಾರಿ ಅವಳ ಬದಲು ನಾನೇ ಸಹಿ ಹಾಕುತ್ತಿದ್ದೆ. ಇದು ಆತ್ಮಹತ್ಯೆಯೇ ಎಂದು ಪ್ರೂವ ಆಗುತ್ತೆ ಅನ್ನುವದು ನನ್ನ ನಂಬಿಕೆ ಆಗಿತ್ತು."
"ಯು ಆರ್ ಅಂಡರ್ ಅರೆಸ್ಟ್" ಎಂದು ಪೃಥ್ವಿರಾಜ್ ಕಾನ್ಸ್ಟೇಬಲ್ ಅವರನ್ನು ಕರೆದು ಅವನನ್ನು ಹಿಡಿದುಕೊಂಡು ಹೋದರು.
ಅವರೆಲ್ಲ ಹೋದ ನಂತರ ಬಸವರಾಜು ಕೇಳಿದ "ಸಾರss ಇವನೇ ಕೊಲೆಗಾರ ಅಂತಾ ಹೇಗೆ ಕಂಡು ಹಿಡಿದಿರ್ರಿ?"
ಅದಕ್ಕೆ ವಿಕ್ರಂ "ಈತ ಹೇಳಿದ ಮಾತುಗಳಲ್ಲಿ ಹೆಚ್ಚಿನವು ಸುಳ್ಳೇ ತುಂಬಿತ್ತು. ಉಳಿದವರು ಮಾತುಗಳು ಸಾಕ್ಷ್ಯಗಳೊಂದಿಗೆ ತಾಳೆಯಾಗುತ್ತಿತ್ತು. ಹೇಗೆ ಘಟನೆಗಳು ನಡೆದಿರಬಹುದೆಂದು ಕಲ್ಪಿಸಿ ನೋಡಿದಾಗ ಈತನೇ ಕೊಲೆಗಾರ ಎಂದು ತಿಳಿಯಿತು. ಇರಲಿ ಬಿಡಿ ಆ ಚಂದ್ರಹಾಸನನ್ನು ಈಗ ಹೊರಗೆ ಬಿಡಿ. ಮೊದಲೇ ಬಿಟ್ಟಿದ್ದರೆ ರಾದ್ದಾಂತ ಮಾಡಿ ಬಿಡುತ್ತಿದ್ದ. ಇನ್ನು ನೀವು ಯಾವುದೇ ಚಿಂತೆ ಇಲ್ಲದೇ ಸವಿತಾಳನ್ನು ಮದುವೆಯಾಗಬಹುದ್ರಿ." ಎಂದ.
ಬಸವರಾಜು ಮೆತ್ತಗೆ ನಾಚಿಕೊಂಡ.
ಅಷ್ಟರಲ್ಲಿ ಶಾಂತಿಲಾಲರು ಹಾಗೂ ಸೌಜನ್ಯ ಸಹ ಬಂದರು.
ಶಾಂತಿಲಾಲರು ವಿಕ್ರಂ ಬಳಿ ಬಂದು "ನಿಜಕ್ಕೂ ಒಳ್ಳೆಯ ಕೆಲಸ ಮಾಡಿದಿರಿ. ಅಂತೂ ಅನುಷಾಳ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಿದ್ರಿ. ನಿಮ್ಮ ಫೀಸ್ ಎಷ್ಟು ಅಂತಾ ಹೇಳಿ" ಎಂದು ತಮ್ಮ ಚೆಕ್ ಬುಕ್ ತೆಗೆದರು.
ಮುಂದೆ ವಿಕ್ರಂನ ರಹಸ್ಯ ಡಿಟೆಕ್ಟಿವ್ ಎಜೆನ್ಸಿ ಜನಪ್ರಿಯವಾಯ್ತು. ಮುಂದೆ ಬಂದವರಿಗೆ ವಿಕ್ರಂ ಯಾಕೋ ಏನೋ ಮೊದಲಿನಂತೆ ವಾಪಸ್ ಕಳುಹಿಸುತ್ತಿರಲಿಲ್ಲ. ಎಲ್ಲಾ ಕೇಸ್ ಸಹ ಹ್ಯಾಂಡಲ್ ಮಾಡುತ್ತಿದ್ದ.ಬಸವರಾಜುವಿನ ಮದುವೆಯೂ ಆಯ್ತು. ವಿಕ್ರಂ ಸಹ ಆ ಮದುವೆಗೆ ಹೋಗಿದ್ದ.
ಸಾಲುಗಳು
- Add new comment
- 5768 views
ಅನಿಸಿಕೆಗಳು
ನಾನು ಅವಳ ಗಂಡಾನೇ ಕೊಲೆ
ನಾನು ಅವಳ ಗಂಡಾನೇ ಕೊಲೆ ಮಾಡಿರಬಹುದು ಅಂತ ಅಂದುಕೊಂಡಿದ್ದೆ. ಅನಿರೀಕ್ಷಿತ ಅಂತ್ಯ ಕೊಟ್ಟು ಪತ್ತೆದಾರಿ ಕಥೆಯನ್ನು ಹೆಚ್ಚು ಅರ್ಥಪೂರ್ಣಗೊಳಿಸಿದ್ದೀರಿ. ಕಥೆಯ ಮೊದಲನೇ ಭಾಗದಿಂದ ಕೊನೆಯ ಪ್ಯಾರಾದವರೆಗೂ ಕೂತೂಹಲವನ್ನು ಉಳಿಸಿಕೊಂಡಿದ್ದು 'ಕಗ್ಗಂಟು'ವಿನ ಹೆಗ್ಗಳಿಕೆ. ನಿಮ್ಮಿಂದ ಇಂತಹ ಮತ್ತಷ್ಟು ಸೊಗಸಾದ ಕಥೆಗಳನ್ನು ನಿರೀಕ್ಷಿಸುವಂತೆ ಮಾಡಿದ ಕೀರ್ತಿ ಕೂಡ 'ಕಗ್ಗಂಟು' ವಿಗೆ ಸಲ್ಲಬೇಕು.
ಹಾಗೇ ಈ ಕೊನೆಯ ಭಾಗದಲ್ಲಿ ಉಳಿದ ಭಾಗಗಳ ಲಿಂಕ್ ಕೊಡುವುದನ್ನು ಯಾಕೋ ಈ ಬಾರಿ ಮರೆತಂತಿದೆ. ಆ ಲಿಂಕ್ ಗಳು ಈ ಭಾಗದಲ್ಲಿ ಸಿಗುವಂತಾಗಲಿ.
ಧನ್ಯವಾದಗಳೊಂದಿಗೆ.
ಧನ್ಯವಾದಗಳು ಶ್ರೀನಿವಾಸ್
ಧನ್ಯವಾದಗಳು ಶ್ರೀನಿವಾಸ್ ಅವರೇ,
ನಿಜ ಈಗ ಲಿಂಕ ಕೊಡುತ್ತೇನೆ. :)
ಅಂತು ಕೊನೆಗೂ ಕಗ್ಗಂಟು ಪತ್ತೇದಾರಿ
ಅಂತು ಕೊನೆಗೂ ಕಗ್ಗಂಟು ಪತ್ತೇದಾರಿ ಕಥೆಗೆ ಅಂತ್ಯ ಸಿಕ್ಕಿತು. ನಾನು ಹೇಳಿದ ಹಾಗೇನೇ ಗೌತಮ್ನೆ ಕೊಲೆ ಮಾಡಿದ್ದಾನೆ. ನೀಜವಾಗಳು ಸಾವಿನ ಕಗ್ಗಂಟುನ್ನು ತುಂಬಾ ಚೆನ್ನಾಗಿ ವರ್ಣಿಸಿದಿರಿ ಸರ್. ಇದೆ ರೀತಿ ಇನ್ನಷ್ಟು ಕಥೆಗಳು ಬರಲಿ ಎಂದು ಆಶಿಸುತ್ತೇನೆ. :)
ಹಿಂದಿನ ಭಾರಿಯೇ ಸತ್ಯವನ್ನು ಕಂಡೂ
:D ಹಿಂದಿನ ಭಾರಿಯೇ ಸತ್ಯವನ್ನು ಕಂಡೂ ಹಿಡಿದಿದ್ದೀರಿ. ಗ್ರೇಟ್ :)
ಖಂಡಿತ ಪ್ರಯತ್ನಿಸುತ್ತೇನೆ
ಹೌದು ಅಶ್ವಿನಿಯವರೇ ನೀವು
ಹೌದು ಅಶ್ವಿನಿಯವರೇ ನೀವು ಹೇಳಿದ್ದು ಸರಿ ಗೌತಮನೇ ಕೊಲೆಗಾರ. ರಾಹೆಯವರ ಮನಸ್ಸಲ್ಲಿದ್ದುದನ್ನು ಸರಿಯಾಗಿ ಗೆಸ್ ಮಾಡಿದ್ದೀರಿ. ಇದೇ ಖುಷಿಯಲ್ಲಿ ನೀವು ಒಂದು ಪತ್ತೆದಾರಿ ಕಥೆ ಬರೆದುಬಿಡ್ರೀ. ಹ್ಯಾಗೂ ಕೊಲೆಗಾರರನ್ನು ಕಂಡುಹಿಡಿಯೋದರಲ್ಲಿ ನೀವು expert ಅಲ್ವಾ..!!
:D
:D :D :D
ರಾಜೇಶ್ ಅವರೆ ನಮಸ್ಕಾರ. ಬಹಳ
ರಾಜೇಶ್ ಅವರೆ ನಮಸ್ಕಾರ.
ಬಹಳ ಚೆನ್ನಾಗಿ "ಕಗ್ಗಂಟು"ವಿನ ಕಥಾ ಸಾರಾಂಶ ಮೂಡಿಬಂದಿದೆ... ನಿಮ್ಮ ಕೆಲಸದ ಒತ್ತಡದಲ್ಲೂ.. ಬಹಳ ಉತ್ಸಾಹದಿಂದ ನಿರೂಪಿಸಿದ್ದೀರ.. ಮತ್ತಷ್ಟೂ ನಿರೀಕ್ಷೆಯೊಂದಿಗೆ..
ಯೋಗೇಶ್
ಧನ್ಯವಾದಗಳು ಯೋಗೇಶ
ಧನ್ಯವಾದಗಳು ಯೋಗೇಶ :)
ರಾಜೇಶ್, ತಡವಾಗಿ ಓದಿದೆ ಕೆಲಸದ
ರಾಜೇಶ್,
ತಡವಾಗಿ ಓದಿದೆ ಕೆಲಸದ ಒತ್ತಡದಿಂದ ನಿಮ್ಮ ಕಥೆ ಓದಲಾಗಲಿಲ್ಲ...ನೆನ್ನೆ ಆಫೀಸ್ನಿಂದ ಹೊರಡುವ ಸಮಯದಲ್ಲಿ ಪ್ರಿಂಟ ಮಾಡಿಕೊಂಡು ಕಾರಿನಲ್ಲಿ ಹೋಗುವಾಗ ಓದಿದೆ ಈಗ ನಿಮ್ಮ ಕಥೆಗೆ ಅನಿಸಿಕೆಗಳು ತಿಳಿಸುತ್ತಿದ್ದೇನೆ...
ತುಂಬಾ ಒಳ್ಳೆಯ ಕೊನೆಯನ್ನು ಮಾಡಿದ್ದಿರಿ ಕಥೆಯೇ ಕೊಲೆಗೆ ಪ್ರೇರಣೆ ಎಂದು ಹೇಳಿದ್ದೆ ಅದು ನಿಜ ಕೊಡ... ಬಸವರಾಜುಗೆ ಮದುವೆ ಮಾಡಿಸಿದರಲ್ಲ ಹ ಹ ಹ ಅದು ಒಳ್ಳೆಕೆಲಸ ಹ ಹ ಹ...
ಮುಂದಿನ ಕಥೆ ಯಾವುದು ಹೀಗೆ ಕುತುಹಲ ಹುಟ್ಟಿಸುವಂತಹುದೇ ಬರಲಿ ನಾವು ಕಾಯುತ್ತಲಿರುತ್ತೇವೆ..
ನಿಮಗೆ ಶುಭವಾಗಲಿ
ಧನ್ಯವಾದಗಳು
ಕುವೈಟ ಓದುಗರು..
ಹಾಯ್ ಮನಸು, ಧನ್ಯವಾದಗಳು. ಮುಂದೆ
ಹಾಯ್ ಮನಸು,
ಧನ್ಯವಾದಗಳು. ಮುಂದೆ ಕಂಚಿ ಪ್ರವಾಸಿ ಸರಣಿ ಮುಗಿದ ತಕ್ಷಣ ಇನ್ನೊಂದು ಪ್ರವಾಸಿ ಕಥನ ಸರಣಿ ಹಾಗೂ ಒಂದು ವಿಷಯದ ಬಗ್ಗೆ ಬರೆಯೋಣ ಅಂದು ಕೊಂಡಿದ್ದೇನೆ. :)
ನಿಮ್ಮ ವಿಶ್ವಾಸ ಹೀಗೆ ಇರಲಿ.
ಕಥೆ ಬಹಳ ಚೆನ್ನಾಗಿದೆ. keep it
ಕಥೆ ಬಹಳ ಚೆನ್ನಾಗಿದೆ. keep it up .
ಕಥೆ ಒಳ್ಳೆದಿತ್ತು. ಮೊದಲ ಸಲ
ಕಥೆ ಒಳ್ಳೆದಿತ್ತು. ಮೊದಲ ಸಲ ನೀವು ಬರೆದ ಕಥೆ ಓದಿದ್ದು. ಖುಷಿಯಾಯಿತ್ತು . ಇನ್ನೂ ಕೂತುಹಲವಾದ ಕಥೆಯನ್ನು ಬರೆಯಿರಿ. ಕಥೆಯಲ್ಲಿ ತುಂಬ ಕೂತುಹಲ ಇರುವಾಗೆ ಬರಿಯಿರಿ.
ನೀವು ಮೊದಲೇ ಹೇಳಬಾರದಿತ್ತು-
ನೀವು ಮೊದಲೇ ಹೇಳಬಾರದಿತ್ತು- ಹಗ್ಗದಲ್ಲಿ ಕಬ್ಬಿಣದ ಕೊಂಡಿ ಜೋಡಿಸಿದ್ದು. ಸೌಜನ್ಯ ನ ಮನೆಗೆ ವಿಕ್ರಮ್ ಹೋಗಿ ಮಾತಾನಾಡಿದಾಗಲೇ ಗೋತ್ತಾಯಿತ್ತು . ಗೌತಮ್ ಕೊಲೆ ಮಾಡಿದ್ದು. ಮೊದಲೇ ಓದುವಾಗ ತಿಳಿದ್ದಿತ್ತು ಅನುಷಾ ನಿಗೆ ಒಬ್ಬ ಹುಡುಗನ ಪರಿಚಯ ಇರುತ್ತೆ ಅವನೇ ಅವಳನ್ನು ಕೊಲೆಮಾಡಿರುತ್ತಾನೆ,
Hi Rajesh,ee kathe tumba
Hi Rajesh,
ee kathe tumba chennagide. akasmattagi ee page siktu. tumba danyavadagalu... koneya bagada kathe ee putadalli illa..
Dayavittu adannu heli sahaya maadi...
Kannadadalli type madalu baruvudilla, dayavittu kshamisi.
Danyavadagalu.
Suresh Kumar. C
ನಮಸ್ಕಾರ ಸುರೇಶ ಅವರೇ,
ನಮಸ್ಕಾರ ಸುರೇಶ ಅವರೇ,
ಕೊನೆಯ ಭಾಗ ಮಾಯವಾದ ಬಗ್ಗೆ ತಿಳಿಸಿ ತುಂಬಾ ಸಹಾಯ ಮಾಡಿದ್ದೀರಾ. ಅದನ್ನು ಮತ್ತೆ ತಂದಿದ್ದೇನೆ. ಓದಿ ಖುಷಿ ಪಡಿ.
ಕನ್ನಡದಲ್ಲಿ ಕಮೆಂಟು ಬರೆಯುವವರ ಸಂಖ್ಯೆ ಕಡಿಮೆ ಆಗಿರುವಾಗ ಇಂಗ್ಲೀಷ್ ಅಲ್ಲಿ ಆದರೂ ಸರಿಯೇ. ಒಟ್ಟಿನಲ್ಲಿ ಸಂದೇಶ ತಿಳಿಸುವದು ಮುಖ್ಯ.
ತುಂಬಾ ಧನ್ಯವಾದಗಳು....ಕಥೆ ತುಂಬಾ
ತುಂಬಾ ಧನ್ಯವಾದಗಳು....ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.......
Thank you Thanks a lot... idanna type maadakke tumba time tagontu...... Ee kathe nanage tumba ista aytu... Thanks once again.
Suresh
ತುಂಬಾ ಕುತೂಹಲಕಾರಿಯಾಗಿದೆ
ತುಂಬಾ ಕುತೂಹಲಕಾರಿಯಾಗಿದೆ