Skip to main content

ನಮ್ಮ ನಿಮ್ಮ ಜನಪ್ರತಿನಿಧಿಗಳು....

ಬರೆದಿದ್ದುApril 18, 2009
5ಅನಿಸಿಕೆಗಳು

ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009....

ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋಕಾಸಭಾ ವ್ಯಾಪ್ತಿಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಟ್ಟು ಎಷ್ಟು ಜನ ಚುನಾವಣೆಗೆ ನಿಂತಿದ್ದಾರಂತಾ???
ಹುಂ.. ಗೊತ್ತಿಲ್ಲದಿದ್ದರೆ ಬಿಡಿ... ಎಕೆಂದರೆ ನನಗೂ ಇನ್ನೊಬ್ಬರಿಗೂ ಗೊತಿಲ್ಲ... ಎಕೆಂದರೆ 17ನೇ ಸಂಖ್ಯೆಯ ನಮ್ಮನ್ನು ಲೋಕಸಭೆಯಲ್ಲಿ ಪ್ರತಿನಿಧಿಸಲು ಹೋಗುತಿರುವ "ಅಭ್ಯರ್ಥಿ" ಎದುರಿಗೆ ಬರದೆ ಒಂದು ದಿನಪತ್ರಿಕೆಯ ಮೂಲಕ "ತಾನು ಚುನಾವಾಣೆಗೆ ನಿಂತಿದ್ದೇನೆ... ದಯವಿಟ್ಟು ನನ್ನನ್ನು ಆರಿಸಿ ಕಳಿಸಿ... " ಎಂಬ ಸಾಲುಗಳ ಕರಪತ್ರ ಪ್ರಿಂಟ್ ತಗಿಸಿ ಪೇಪರ್ ನೊಟ್ಟಿಗೆ "ಬೋನಸ್ ಅಫರ್" ನಂತೆ ಕಳುಹಿಸಿದ್ದರು...! ನಮ್ಮ ಎದುರಿಗೆ ಪ್ರತ್ಯಕ್ಷರಾಗದವರೂ ಸಹ ನಮ್ಮ "ಪ್ರತಿನಿಧಿ" ಎಂದು ಚುನಾವಣೆಗೆ ಹೋಗುವ ಜನಾ...!

ವಿಪರ್ಯಸವೆನೆಂದರೆ ಒಟ್ಟು 17 ಜನಾ ( ಇದಕ್ಕೂ ಹೆಚ್ಚು ಜನಾ ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಪ್ರತಿನಿಧಿಸುತ್ತಿರಬಹುದು ಎಂದು ಭಾವಿಸಿ...!) ಈ ವರೆಗೂ ನಿಂತಿದ್ದಾರೆ ಎಂಬ ಸತ್ಯ ತಿಳಿದಿದ್ದು ಅಗಲೆ...! ಹೋಗಲಿ ನಮ್ಮನ್ನು "ಉದ್ದಾರ" ಮಾಡುವುದು ಬೇಡ... Atleast ಮುಖ ತೋರಿಸುವುದಕ್ಕೂ ಸಮಯವಿಲ್ಲದ ಜನರಿದ್ದರಾ ನಮ್ಮ "ಜನ ಪ್ರತಿನಿಧಿ" ಯಾಗಿ??(ನನಗೆ ಇನ್ನೂ ಒಬ್ಬ ಜನಪ್ರತಿನಿಧಿಯ ಮುಖದರ್ಶನ ಮಾಡುವ ಭಾಗ್ಯ ಬಂದಿಲ್ಲ....!!?!). ಹುಂ, ಇವರಿಂದ ನಾವು ಏನನ್ನು ಪಡೆಯಬಹುದು, ನಮ್ಮ ಕ್ಷೇತ್ರದ ಕೆಲಸ ಕಾರ್ಯಗಳು ಎಷ್ಟು ಪೂರ್ಣಗೊಳ್ಳಬಹುದು ಎಂಬುದಕ್ಕೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಅಗಲೇ ಬೀಳುತ್ತದೆ....! ನಾವು ಕೇವಲ "ಓಟು ಮಾಡುವ" ಸಾಧನಗಳಾದೆವಾ ಎಂಬ ಮತ್ತೊಂದು ಸಣ್ಣ ಅನುಮಾನದೊಂದಿಗೆ....! ನೀವೇನು ಹೇಳ್ತೀರಿ ಇದರ ಬಗ್ಗೆ ???

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ರಾಜೇಶ ಹೆಗಡೆ ಸೋಮ, 04/20/2009 - 08:02

ಅದಕ್ಕೆ ಬರೀ ಓಟು ಮಾಡೂವ ಸಾಧನಗಳಂತೆ ಕಣ್ಮುಚ್ಚಿ ಪಕ್ಷ ನೋಡಿ ಓಟು ಹಾಕದೇ ಹಿಂದೆ ಮಾಡಿದ ಒಳ್ಳೆಯ ಕೆಲಸದ ಆಧಾರದ ಮೇಲೆ ಓಟೂ ಹಾಕಬೇಕು ವಿನಯ್. ಬೃಷ್ಟರಿಗೆ ಪಾಠ ಕಲಿಸಿ.

ಬೆಳ್ಮಣ್ಣು ಸುಧೀ… (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/20/2009 - 09:19

ಹ್ವಾಯ್ , ವಿನಯ್ ಮತ್ತೆ ಹೇಗೆ? ಆರಾಮವಾ?

ಇನ್ನು ನಿಮ್ಮ ಲೇಖನಗಳುಂಟಲ್ಲ, ಇತ್ಲಾಗೆ ಅವು ಸಣ್ಣ ಸಣ್ಣ ಆಗಿ ಓದ್ಲಿಕ್ಕೆ ಭಾರಿ ಗಮ್ಮತ್ತು ಮಾರಾಯ್ರೆ. ನಿಮ್ದು ಮೊದ್ಲಿಂದು ಹನ್ನೆರಡು ಪೇಜು ನೋಡಿದ್ರೆ... ಮಂಡೆ ಬೆಚ್ಚ ಆಗ್ತಿತ್ತು ಮಾರಾಯ್ರೆ. ಈಗ ಸ್ವಲ್ಪ ಉಸಿರು ತೆಕ್ಕೊಂಡು ಓದ್ಲಿಕ್ಕೆ ಆಗ್ತದೆ.

ಹೀಗೇ ಸಣ್ಣ ಸಣ್ಣ ಲೇಖನ ಬರೆಯುತ್ತಿದ್ದರೆ ಉಂಟಲ್ಲ, ನಮಗೆಲ್ಲ ಭಾರಿ ಆನಂದ. ಅದೂ ಬರಿಯುದಿಲ್ಲ ಅಂತ ಆದ್ರೆ ಉಂಟಲ್ಲ ಪರಮಾನಂದ. ಆದ್ರೆ ಈಗ ಅಡ್ಡಿ ಇಲ್ಲ. ಸದ್ಯಕ್ಕೆ ಆನಂದ ಸಾಕು. ಸ್ವಲ್ಪ ಎಜಸ್ಟ್ ಮಾಡುವ. ನಮ್ಮ ಉಡುಪಿಯ ಜನ ಮಾರಾಯ್ರೆ ನೀವು. ಮುಂದೆ ಬರಬೇಕು. ಮತ್ತೆ ನಿಮ್ಮನ್ನು ಹಿಂದೆ ಬಿಟ್ಟಿರಲಿಕ್ಕುಂಟ? ಹಿಂದಿಂದ ಏನಾದರೂ ಜನ ತಿಂದು ಮರೆತು ಬಿಟ್ಟಿದ್ದನ್ನು ಹುಡುಕಿ ತೆಗೆದು ತಿಂದು ಬಿಡುತ್ತೀರಿ ಮಾರಾಯ್ರೆ. ಸರಿ ಕಾಣುದಿಲ್ಲ.... ಅಲ್ಲ.

ಅದಕ್ಕೇ ಹೀಗೆ ನಮ್ಮ ಮುಂದೇ ಬರೆದುಕೊಂಡು ಇರಿ. ನಿಮಗೆ ಒಳ್ಳೆಯದು ಆಗ್ಲಿ. ಆಯಿತಾ?

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/20/2009 - 11:40

ಸ್ವಾಮಿ ವಿನಯ್ 2009,
ಈ ನಿಮ್ಮ ಲೇಖನ ಅರ್ಥ ಆಗಲಿಲ್ಲ. ಏನ ಹೇಳ ಹೊರಟಿರುವಿರಿ ತಿಳಿಯುವುದಿಲ್ಲ. ಸದ್ಯ, ಇದು ನಿಮ್ಮ "ಸ್ವಂತ" ಲೇಖನ ಎನ್ನುವುದೊಂದೇ ಸಮಾಧಾನ. ಓದುಗರಿಂದ ಎಷ್ಟೇ ಉಗಿಸಿಕೊಂಡರೂ ಮತ್ತೆ ಮತ್ತೆ ಒಕ್ಕರಿಸುವ ನಿಮ್ಮ 'ಅಸಹಾಯಕತೆ'ಗೆ ಬಹುಮಾನ ಕೊಡಲೇ ಬೇಕು!

siddeshwara si… ಭಾನು, 10/16/2016 - 10:17

ಪ್ಲೀಸ್ ನಿಮ್ಮ ಪೋನ್ ನಂಬರ್‍ ಕೊಡತೀರ .

ವಿನಯ್_ಜಿ ಮಂಗಳ, 10/18/2016 - 19:08

ಸಿದ್ದೇಶ್ವರ ರವರೆ, ಈ ವಿಳಾಸಕ್ಕೆ ನೀವು ಈಮೇಲ್ ಕಳುಹಿಸಬಹುದು... vinnygm1*@*gmail.com (* ತಗೆದು ಬಿಡಿ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.