ಕತ್ತಲ ರಾತ್ರಿಯಲ್ಲೊಂದು ದಿನ …

ದು ನಾನು 2nd  P U C ,  ಓದುತ್ತಿದ್ದ ಸಮಯ.. ಚೆನ್ನಾಗಿ ಓದೋದು ಹೇಗೆ ಅಂತ  idea  ಕೇಳ್ದಾಗ, ಯಾವನೋ senior  ಕೊಟ್ಟ ಐಡಿಯಾ ” ರಾತ್ರಿಯೆಲ್ಲ ಓದು, ಹಗಲಲ್ಲಿ ಮಲ್ಕೋ” .. ಹೌದಲ್ಲ .. ಚೆನ್ನಾಗಿದೆ ಅನ್ನಿಸ್ತು… ಯಾಕೆ ಒಂದು ಸಲ ಯಾಕೆ   try  ಮಾಡಬಾರದು ಅಂತ, ಒಂದು ದಿನ ಸಂಜೆ ಕಾಲೇಜಿನಿಂದ ಮನೆಗೆ ಬಂದು. ಊಟ ಮಾಡಿ ಸಂಜೆ  6  ಗಂಟೆಗೆ ಮಲ್ಕೊಂಡೆ… 10 ಗಂಟೆಗೆ  alarm  ಇಟ್ಟೆ..   ನನ್ನ ಕರ್ಮಕ್ಕೆ 8 ಗಂಟೆಯಾದ್ರೂ ನಿದ್ರೆ ಬರ್ಲಿಲ್ಲ…!!  ಹೆಂಗ್ರಿ ಬರುತ್ತೆ,..? ಪ್ರತಿ ದಿನ  8  ಗಂಟೆ ಟೈಮಿನಲ್ಲಿ , ಅಮ್ಮನ ಜೊತೆ ಕೂತು, ” ದಂಡಪಿಂಡಗಳು” ಧಾರವಾಹಿ ನೋಡಿದವರಲ್ಲವೇ ನಾವು.., ಹಂಗೂ, ಹಿಂಗೂ ಆಗಿ 10  ಗಂಟೆ ಆಯಿತು ಗುರು… ಓದ್ಕೊಳ್ತಿನಿ ಅಮ್ಮ ಅಂತ ಹೇಳಿ ಸಂಜೆನೇ ಮಲಗಿರೋದ್ರಿಂದ, ಮತ್ತೆ ಮಲಗೋ ಹಾಗಿಲ್ಲ,,, ಹಾ ಹಾ .. ಎಂಥ ನಿದ್ರೆ ಅದು,,,,  ಓದಬೇಕು ಅನ್ನೋ ಟೈಮಲ್ಲಿ .. ? ಹಂಗೂ, ಹಿಂಗೂ ಮಾಡಿ ಕಷ್ಟ ಪಟ್ಟು 11 ಗಂಟೆಗೆ ಎದ್ದು, ಬಿಸಿ ಬಿಸಿ ಚಹಾ ಮಾಡ್ಕೊಂಡು ಕುಡಿದೆ…  Biology  ಪುಸ್ತಕ ತಗೊಂಡು ಓದೋಕೆ start  ಮಾಡಿದೆ…. ಇದು ಎಲ್ಲರಿಗೂ ಆಗುತ್ತಾ ….? ಅಥವಾ ನನಗೆ ಮಾತ್ರ ಆಗುತ್ತ ಗೊತ್ತಿಲ್ಲ..  ಓದೋದನ್ನ ಬಿಟ್ಟು ಬೇರೆಲ್ಲ ಕೆಲಸ ಮಾಡೋಕೆ mood ಇರುತ್ತ್ತೆ… ಅವತ್ತು ಆಗಿದ್ದು ಅದೇ…   11  ಗಂಟೆ ಆಗಿದ್ರಿಂದ,  ಕ್ರೈಂ ಸ್ಟೋರಿಯೊಂದಿಗೆ T V  ಮಾತು ಮುಗಿಸಿತ್ತು .. ಮತ್ತೆ  T V  ಮಾತನಾಡೋ ಶಬ್ದ ಕೇಳಿದರೋ ಅಮ್ಮನ ಲಟ್ಟನಿಕೆ ಮಾತನಾಡೋ ಅಪಾಯವಿತ್ತು.. ಅದ್ದರಿಂದ ಸುಮ್ನೆ  Biology  ಬುಕ್ ಹಿಡ್ಕೊಂಡು, ಮೌನ ವ್ರತ ಆಚರಿಸುತ್ತಿದ್ದೆ.. ಟೈಮು ಹೇಗೆ ಕಳೆಯಿತೋ ಗೊತ್ತಿಲ್ಲ…. ಮದ್ಯ ರಾತ್ರಿ  3  ಗಂಟೆ ಆಗಿತ್ತು .. ಪ್ರತಿ ದಿನ ನಾನು ಗಮನಿಸಿದಂತೆ ಮದ್ಯ ರಾತ್ರಿ ನಮ್ಮ ಮನೆ ಸುತ್ತ ಮುತ್ತ ಯಾರೋ ಅಪಾಪೋಲಿ ಹುಡುಗರು,  ಪೀಪಿ ಊದುತ್ತ, ಗಲಾಟೆ ಮಾಡುತ್ತಿದ್ದರು … ಇವತ್ತೂ ಹಾಗೆ ಆಯಿತು .. 3  ಗಂಟೆಯ ಆಸು ಪಾಸಿನಲ್ಲಿ , ಮನೆಯ ಹೊರಗಡೆ ಶಬ್ದವಾಗುತ್ತಿತ್ತು .. ನಂಗೆ ಮೆಲ್ಲಗೆ ನಡುಕ ಶುರುವಾಯ್ತು .. ಆದರೂ ದೈರ್ಯ ತುಂಬಿಕೊಂಡು, ಬಾಗಿಲ ಬಳಿ ಬಂದೆ… ಶಬ್ದ ಹತ್ತಿರ ಬಂದಂತೆ, ಇನ್ನೇನು ನಮ್ಮ ಮನೆಯ ಮುಂದೇನೆ ಹುಡುಗರು ಬರ್ತಾ ಇದಾರೆ ಅನ್ನೋವಾಗ, ಜೋರಾಗಿ ಬಾಗಿಲು ತೆಗೆದು ಅವರನ್ನು ಹೆದರಿಸಬೇಕು ಅನ್ನೋದು ನನ್ನ ಯೋಜನೆ.. ಅಂತೆಯೇ ನಾನು ಬಾಗಿಲು ಚಿಲಕ ತೆಗೆದು, ಗೋಡೆಗೆ ಒರಗಿಕೊಂಡು ನಿಂತಿದ್ದೆ .. ಶಬ್ದ ಹತ್ತಿರತ್ತಿರ ಬರುತ್ತಿತ್ತು .. ನಾನು ತಯಾರಾಗಿದ್ದೆ .. ಇನ್ನೇನು ಬಾಗಿಲು ತೆರೆದು ಆ ಹುಡುಗರನ್ನು ಹೆದರಿಸಬೇಕು ಅನ್ನುವಷ್ಟರಲ್ಲಿ , ಬಾಗಿಲು ತಂತಾನೇ ಕಿರ್ ಎಂದು ಸದ್ದು ಮಾಡಿತು … ನಾನು ಭಯದಿಂದ ಹೊರಗೆ ನೋಡಿದೆ.. ಇದಕ್ಕಿಂತ ಅವಮಾನಕರವಾಗಿ ನೀವು ಎಂದಿಗೂ ಮೂರ್ಖರಾಗಲು ಸಾದ್ಯವಿಲ್ಲ.. ತೆರೆದ ಬಾಗಿಲ ಬಳಿ ನಿಂತಿದ್ದ ಗೂರ್ಖಾ ” ದರ್ವಾಜ್ಹ ಮುಚ್ಕೊಳ್ರಿ ಸಾರ ” ಅಂತ ಅವನದೇ ರೀತಿಯ ಕನ್ನಡದಲ್ಲಿ ಹೇಳಿ , ಮತ್ತೆ ಪೀಪಿ ಊದುತ್ತಾ ಕತ್ತಲಲ್ಲಿ ಕಳೆದು ಹೋದ … ಅಂದಿನಿಂದ ನಾನು ಯಾರಿಗೂ ರಾತ್ರಿ ಓದ್ಕೊಳ್ಳಿ ಅಂತ  ಬಿಟ್ಟಿ ಸಲಹೆ ಕೊಟ್ಟಿಲ್ಲ.. ನೀವು ಕೊಟ್ಟಿದಿರಾ.. ? ಪ್ರೀತಿಯಿಂದ ,

ಈ ಲೇಖನ ಹೇಗಿದೆ?: 
ಅಂಕಗಳು: 3.5 (6 ಓಟುಗಳು)

ಲೇಖನದ ಬಗೆ: 

ಅನಿಸಿಕೆಗಳು

Jyothi Subrahmanya's picture

ವಿಜಯ್ ಅವರೇ,
ಚಿಕ್ಕದಾದರೂ ಚೊಕ್ಕವಾಗಿ ನಗು ಮೂಡುವಂತೆ ಬರೆದ ನಿಮ್ಮ ಈ ಲೇಖನ ಇಷ್ಟವಾಯಿತು. ನಿಮ್ಗೆ ಮಾತ್ರ ಅಲ್ಲ ವಿದ್ಯಾರ್ಥಿಯಾಗಿದ್ದಾಗ ಎಲ್ಲರಿಗೂ ಈ ನಿದ್ರಾದೇವಿಯ ಕಾಟ ಇದ್ದದ್ದೇ.. :) ಕೊನೆಯಲ್ಲಿ ಸಧ್ಯ ಗೂರ್ಖನನ್ನ ಹೆದರಿಸಿ ಇನ್ನೂ ಅವಾಂತರ ಮಾಡಿಕೊಳ್ಳಲಿಲ್ಲವಲ್ಲ... :)

simple gal nethra's picture

ಇಲ್ಲ ಕಣ್ರೀ ee ಥರ ಅಂತ  ಬಿಟ್ಟಿ ಸಲಹೆ ಕೊಟ್ಟಿಲ್ಲ.. ನಾವು

simple gal nethra's picture

ಇಲ್ಲ ಕಣ್ರೀ ee ಥರ   ಬಿಟ್ಟಿ ಸಲಹೆ ಕೊಟ್ಟಿಲ್ಲ.. ನಾವು

ಹರಿಹರಪ್ರಿಯ's picture

ಧನ್ಯವಾದಗಳು.. ಜ್ಯೊತಿ ಮತ್ತು ನೆತ್ರ ಅವರೆ..

ಮಹೇಶ್ ಕೆ.ಆರ್'s picture

ಉತ್ತಮ 

Subscribe to Comments for "ಕತ್ತಲ ರಾತ್ರಿಯಲ್ಲೊಂದು ದಿನ …"