Skip to main content

"ನಾನು ನಿನ್ನನ್ನು ಪ್ರೀತಿಸುತ್ತೇನೆ..."

ಬರೆದಿದ್ದುNovember 8, 2011
5ಅನಿಸಿಕೆಗಳು


ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ "ಹಾಗೆಂದರೇನು?"

ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಿನ್ನ ಕೆನ್ನೆ ಕೆಂಪೇರಿತು. ನೀನು ನಗುತ್ತಾ ,ಕೆಳಗೆ ನೆಲವನ್ನು ನೋಡುತ್ತಿದೆ ಕಾಲಲ್ಲಿ ಕೆರೆಯುತ್ತಾ...."

ನಿನಗಾಗ ೨೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿನ್ನ ತಲೆಯನ್ನ ನನ್ನ ಹೆಗಲ ಮೇಲಿಟ್ಟೆ ಮತ್ತು ನನ್ನ ಕೈಯನ್ನು ಹಿಡಿದೆ.. ನಿನ್ನಲ್ಲಿ ಭಯ ಆವರಿಸಿತ್ತು ನಾನು ಮರೆಯಾಗುವೆನೇನೋ ಎಂದು.

ನಿನಗಾಗ ೨೫ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಬೆಳಗಿನ ತಿಂಡಿ ತಯಾರುಮಾಡಿ ನನಗೆ ಬಡಿಸುತ್ತಾ ನನ್ನ ಹಣೆಗೆ ಮುತ್ತಿಡುತ್ತಾ ಹೇಳಿದೆ" ನೀವು ಬೇಗ ಏಳಿ,ತಡವಾಗುತ್ತಿದೆ..."

ನಿನಗಾಗ ೩೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ" ನೀವು ನಿಜವಾಗಿಲೂ ನನ್ನ ಪ್ರೀತಿಸುತ್ತಿದ್ದರೆ, ದಯವಿಟ್ಟು ಆಫೀಸಿನಿಂದ ಮನೆಗೆ ಬೇಗ ಬನ್ನಿ..."

ನಿನಗಾಗ ೪೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಮನೆಯ ಊಟದ ಟೇಬಲನ್ನು ಸ್ವಚ್ಛಗೊಳಿಸುತ್ತಿದ್ದೆ ಮತ್ತು ಹೇಳಿದೆ " ಆಯಿತು ನನ್ನವರೇ!, ಈಗ ಸಮಯವಾಗಿದೆ ಮಕ್ಕಳಿಗೆ ಓದಿನಲ್ಲಿ ಸಹಾಯ ಮಾಡಲು.."

ನಿನಗಾಗ ೫೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿಟ್ಟ್ ಮಾಡುತ್ತಿದ್ದೆ ಹಾಗು ನನ್ನನು ನೋಡಿ ನಕ್ಕೆ....

ನಿನಗಾಗ ೬೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನನ್ನನ್ನು ನೋಡಿ ನಕ್ಕೆ...

ನಿನಗಾಗ ೭೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಾವು ಕುಳಿತ್ತಿದ್ದೆವು ಕುರ್ಚಿಯ ಮೇಲೆ ನಮ್ಮ ಕನ್ನಡಕಗಳನ್ನು ಧರಿಸಿ. ನಾನು ನೀನು ಬರೆದ ೫೦ ವರ್ಷ ಹಿಂದೆ ಬರೆದ ಪ್ರೇಮ ಪತ್ರವನ್ನು ಓದುತ್ತಿದ್ದೆ, ನಮ್ಮಿಬ್ಬರ ಕೈಗಳು ಜೊತೆಯಾಗಿದ್ದವು...

ನಿನಗಾಗ ೮೦ ವರ್ಷ, ನೀನು ನನಗೆ ಹೇಳಿದೆ"" ನೀನು ನಿನ್ನನ್ನು ಪ್ರೀತಿಸುತ್ತೇನೆ ಎಂದು..."
ನಾನೇನೂ ಹೇಳಲಾಗಲಿಲ್ಲ ಆದರೆ ಅಳುತ್ತಿದ್ದೆ.

ಸೂಚನೆ: Face book ನಲ್ಲಿ ಬಂದಿದ್ದನ್ನು ಕನ್ನಡೀಕರಿಸಿದ್ದೇನೆ.

ಲೇಖಕರು

Nagendra Kumar K S

ಎಲ್ಲಿ ಜಾರಿತೋ ಮನವು........

ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಭಾವನೆಗಳನ್ನು ಹೇಳಿಕೊಳ್ಳುವ ಒಂದು ಮಾಧ್ಯಮವನ್ನಾಗಿ ಬರವಣಿಗೆ ಆರಂಬಿಸಿದೆ. ಅದೇ ಒಂದು ಪ್ರೇರಣೆ ಇಲ್ಲಿಯವರೆವಿಗೂ ಎಳೆದುತಂದಿದೆ. ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದೇನೆ, ಆದರೆ ಎಲ್ಲೂ ಪ್ರಕಟಣೆಗೆ ಕೊಟ್ಟಿಲ್ಲ. ನನ್ನಲ್ಲಿರುವ ಅಗಾಧವಾದ ಶಕ್ತಿ ಸುಮ್ಮನೆ ವ್ಯರ್ಥವಾಗುತ್ತಿದೆ ಎನ್ನುವ ಭಾವನೆ ಬಂದ ಮೇಲೆ ನನ್ನ ಕವನಗಳನ್ನು ಓದುಗರ ಮುಂದಿಟ್ಟು ನನ್ನ ಯೋಗ್ಯತೆಯನ್ನು ತಿಳಿದುಕೊಳ್ಳಬೇಕೆಂಬ ಹಂಬಲದಿಂದ ಇಲ್ಲಿಗೆ ಬಂದಿದ್ದೇನೆ. ಹಾಗೆ ನನ್ನ ಎಲ್ಲಾ ಕವನಗಳನ್ನು ಈ ಕೆಳಕಂಡ ಬ್ಲಾಗ್ ನಲ್ಲಿ ಕೂಡ ಓದಬಹುದಾಗಿದೆ, ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ದಾಖಲಿಸಿ.
http://www.anisha-mypoems.blogspot.com

ಅನಿಸಿಕೆಗಳು

Nanjunda Raju Raju ಧ, 11/09/2011 - 17:41

ಮಿತ್ರರೇ ಒಳ್ಳೆಯ ಲೇಖನ. ಮೆಲುಕು ಹಾಕುವಂತದ್ದೆ. ನನಗೆ ಈಗಾಗಲೇ ೫೯ ವರುಷ. ೬೦ರ ಅಂಚಿನಲ್ಲಿದ್ದೇನೆ. ಭಾಷಾಂತರವಾದರೇನಂತೆ, ಚೆನ್ನಾಗಿದೆ. ವಂದನೆಗಳು.

Nagendra Kumar K S ಧ, 11/23/2011 - 22:05

ಶ್ರೀ ನಂಜುಂಡ ರಾಜು ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ದೇಹಕ್ಕೆ ವಯಸ್ಸಾದರೇನಂತೆ ನಿಮ್ಮ ಮನಸ್ಸು ಇನ್ನೂ ತಾರುಣ್ಯದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 19:13

yu

giridhar ಮಂಗಳ, 02/19/2013 - 16:30

ಒಲೆಯ ಮಾತು

sapna ಮಂಗಳ, 11/08/2016 - 16:39

Prithi shashwatha ansthide brother

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.