Skip to main content

ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆ....

ಬರೆದಿದ್ದುFebruary 1, 2010
13ಅನಿಸಿಕೆಗಳು

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩
ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...

ಕಪ್ಪೆಗಳು...
ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.
ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಎಂದು ಪೆಚ್ಚಾಗಿ ಹೇಳಿದನು....!
[ನೀತಿ: ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ನಿಮಗೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂಬುದನ್ನು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?]
----------------------------------------
ಸುಂದರ ಮಹಿಳೆ
ಒಮ್ಮೆ ಬೌದ್ಧ ಧರ್ಮದ ಭಿಕ್ಷುಗಳಿಬ್ಬರು ನೆಡೆಯುತ್ತ ಸಾಗುತ್ತಿರಲು, ಅವರು ನೆಡೆಯುತ್ತಿದ್ದ ಹಾದಿಯಲ್ಲಿ ಒಂದು ಒಡೆದುಹೋದ ಸೇತುವೆ ಕಾಣಿಸಿತು. ತಮ್ಮ ಮುಂದಿನ ಹಾದಿ ಆ ಸೇತುವೆ ದಾಟಿಯೇ ಹೋಗಬೇಕಾಗಿದ್ದರಿಂದ ಅವರು ಮೆಲ್ಲನೆ ಅದರ ಮೇಲೆ ಸಾಗುತ್ತಿರಲು ಮಧ್ಯದಲ್ಲಿ ಅವರಿಗೆ ಒಬ್ಬ ಸುಂದರ ಮಹಿಳೆ ಕಾಣಿಸಿದಳು. ಅವಳು ಸಹ ಆ ಸೇತುವೆಯ ದಾಟಲು ಪ್ರಯತ್ನಪಡುತ್ತಿರಲು, ಅದು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಬಿಟ್ಟಿದ್ದಳು... ಆ ಭಿಕ್ಷುಗಳಲ್ಲಿ ಒಬ್ಬರಾದ ಹಿರಿಯ ಭಿಕ್ಷುವು ಅವಳನ್ನು ಸ್ವತ: ಹೊತ್ತುಕೊಂಡೊಯ್ಯುವುದಾಗಿ ವಿನಂತಿಸಲು ಅವಳು ಸಮ್ಮತಿಸಿ, ಆ ಹಿರಿಯ ಭಿಕ್ಷುವು ಅವಳನ್ನು ಸುರಕ್ಷಿತವಾಗಿ ಇನ್ನೊಂದು ದಡ ಸೇರಿಸಿದರು. ಇದನ್ನು ನೋಡಿದ ಕಿರಿಯ ಭಿಕ್ಷುವಿಗೆ ಮನದಲ್ಲೇ ಉರಿಯ ಅನುಭವವಾಯಿತು. ತನ್ನ ಧರ್ಮದಲ್ಲಿ ಪರಸ್ತ್ರೀಯರನ್ನು ಮುಟ್ಟುವುದನ್ನ, ಸ್ನೇಹ ಬೆಳೆಸುವುದನ್ನ ವಿರೋಧಿಸಿರುವಾಗ ಈ ಹಿರಿಯ ಭಿಕ್ಷುವು ಅವಳನ್ನ ಹೊತ್ತೊಯ್ಯುವುದಾಗಿ ಕೇಳಿದ್ದಲ್ಲದೇ ಅವಳನ್ನು ಸ್ಪರ್ಶಿಸಿ, ಮುಟ್ಟಿ, ತನ್ನ ದೇಹದ ಮೇಲೆ ಹೊತ್ತು ಇನ್ನೊಂದು ದಡ ಸೇರಿಸಿದ್ದು ಏಕೆ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದ್ದರೂ ಹಿರಿಯ ಭಿಕ್ಷುವಿಗೆ ಗೌರವ ನೀಡಬೇಕು ಎಂಬ ನಿಯಮದಲ್ಲಿ ಮರುಮಾತನಾಡದೆ ಸುಮ್ಮನೆ ಅವರೊಂದಿಗೆ ಹೊರಟನು. ಆ ಮಹಿಳೆ ಅವರಿಗೆ ಧನ್ಯವಾದ ಹೇಳಿ ತನ್ನ ಪಯಣ ಮುಂದುವರಿಸಲು, ಈ ಕಿರಿಯ ಭಿಕ್ಷುವಿನ ಮನ ಆಗಲೇ ಕುದಿಯಲು ಪ್ರಾರಂಭಿಸಿಯಾಗಿತ್ತು. ಅವನ ಮನವು ಈ ಹಿರಿಯ ಭಿಕ್ಷುವಿನ ಬಗ್ಗೆ ಇಲ್ಲದ ಕಲ್ಪನೆ ಮಾಡತೊಡಗಿತು, ಬೇಡದ ಭಾವನೆಗಳು ಬರತೊಡಗಿದವು... ಇವೆಲ್ಲದರ ನಡುವೆ ಆ ಹಿರಿಯ ಭಿಕ್ಷುವು ಸುಮ್ಮನೆ ನೆಡೆಯುತ್ತಿರಲು, ಇತ್ತ ಸಹನೆಯ ಕಟ್ಟೆಯೊಡೆದ ಕಿರಿಯ ಭಿಕ್ಷುವು "ನೀವು ನನಗೆ ಅಷ್ಟೆಲ್ಲಾ ಉಪದೇಶ ಮಾಡುತ್ತಿರಲ್ಲಾ, ಅದೇ ನಿಮಗೆ ಒಂದು ಸುಂದರ ಮಹಿಳೆ ಕಾಣಿಸಿದಾಗ ತಮ್ಮ ಧರ್ಮದ ತತ್ವವೆಲ್ಲಾ ಬಿಟ್ಟು, ತಾವೇ ಮೊದಲು ಹೋಗಿ ಅವಳನ್ನು ಮುಟ್ಟಿ, ಹೊತ್ತೊಯ್ದು ಆ ದಡ ಸೇರಿಸಿದರಲ್ಲ..., ಎಲ್ಲೊಯ್ತು ನಿಮ್ಮ ನಿಷ್ಠೆ, ಧರ್ಮ, ಅಚಾರಗಳೆಲ್ಲಾ...? ನಿಮ್ಮಿಂದ ಕಲಿಯಬೇಕಾದದ್ದು ಇದನ್ನೇನಾ...?" ಎಂದು ಹೇಳಲು, ಹಿರಿಯ ಭಿಕ್ಷುವು ಅದೇ ಸೌಮ್ಯಭಾವದಿಂದ ಈ ಕಿರಿಯ ಭಿಕ್ಷುವನ್ನು ಕೇಳಿದರು: "ನಾನೇನೋ ಹಲವು ಗಂಟೆಗಳ ಹಿಂದೆಯೇ ಅವಳನ್ನು ಇನ್ನೊಂದು ದಡ ಸೇರಿಸಿಬಿಟ್ಟು ಬಂದಿದ್ದೆ. ಆದರೆ ಅವಳು ಅಲ್ಲಿಂದ ನಿನ್ನ ಹೆಗಲ ಮೇಲೆ ಇನ್ನೂ ಪ್ರಯಾಣ ಮುಂದುವರಿಸಿರುವಂತೆ ಕಾಣಿಸುತ್ತಿದೆಯಲ್ಲಾ...?!!"
[ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ. ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ, ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ, ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!]
 
 
(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ಎಚ್.ಎಸ್. ಪ್ರಭಾಕರ ಸೋಮ, 02/01/2010 - 15:14

ವಿನಯ್, ಕಪ್ಪೆಗಳ ಕಥೆಯನ್ನು ನಾನು ಇದೇ ಮೊದಲು ಕೇಳುತ್ತಿರುವುದು. ಜಗತ್ತನ್ನು ನಾವು ನೋಡುವ `ಪರಿ'ಯನ್ನು ಇದು ಸೂಚಿಸುತ್ತಿದೆ. ಇದನ್ನು ಒಂದು ರೀತಿ `ಕಾಮಾಲೆ ಕಣ್ಣಿಗೆ' ಹೋಲಿಸಬಹುದಲ್ಲವೆ?

ವಿನಯ್_ಜಿ ಸೋಮ, 02/01/2010 - 15:30

ಪ್ರಭಾಕರ ಸರ್,
`ಕಾಮಾಲೆ ಕಣ್ಣಿಗೆ' ಹೊಂದಿರುವ ಜನರು ಅದನ್ನ ತಮ್ಮ ಬಳಿಯೇ ಇಟ್ಟಿಕೊಂಡರೆ ಅದೇನೋ ಸರಿಯನ್ನಬಹುದು.., ಅದರೆ ಅವರು ತಾವು ನೋಡುವ ಲೋಕ ಹಳದಿಯಾದರೆ ಇತರರನ್ನು ಸಹ ಈ ಲೋಕವಿರುವುದು ಹಳದಿಯೇ ಎಂದು ನಂಬಿಸುತ್ತಾರಲ್ಲಾ... ಅದು ಮಾತ್ರ ಅಪಾಯಕ್ಕೆ ಇಡುಮಾಡುತ್ತಲ್ಲವೇ ಸರ್.... ನಮ್ಮ ನಡುವೆ ಇಂತಹ ಜನರು ಈಗೀಗ ಜಾಸ್ತಿಯಾಗುತ್ತಿದ್ದಾರೆ.... ಅದೇ ಖೇದದ ವಿಷಯ ನೋಡಿ :(

ಎಚ್.ಎಸ್. ಪ್ರಭಾಕರ ಸೋಮ, 02/01/2010 - 15:55

ಕಾಮಾಲೆ ಕಣ್ಣು ಎಂಬುದು ಎಂದಿದ್ದರೂ ಬಯಲಾಗಲೇಕಲ್ಲವೆ ವಿನಯ್! ಅದನ್ನು ಹಾಗೇ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಯಾರಿಗೂ ಕಾಣದಿರಲೆಂದು (ಅಥವಾ ಬಾಯಿ ಬಾತಿನ ಮೂಲಕ ಯಾರಿಗೂ ತಿಳಿಯದಿರಲೆಂದು) ಬಟ್ಟೆ ಕಟ್ಟಿಕೊಂಡರೆ ಯಾರ ಕಣ್ಣಿಗೂ ಬೀಳದೆ, ಚಿಕಿತ್ಸೆಯೇ ಇಲ್ಲದೆ ಅವರ ಪ್ರಾಣ ಹೋಗುವ ಸಂಭವವೂ ಇರುತ್ತದೆ. ಹೀಗಾಗಿ ನಮಗೆ ಶಕ್ತಿ ಇದ್ದರೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಬೇಕು; ಇಲ್ಲವಾದರೆ `ಅಯ್ಯೋ ಪಾಪ' ಎಂದು ಮರುಗಿ ಸುಮ್ಮನಾಗಬೇಕಷ್ಟೆ!
ಇನ್ನು ಅಪಾಯದ ಮಾತು: ನನಗೆ ಅರ್ಥವಾಗಿದೆ! ನಾವು ನಿರುಪದ್ರವಿಗಳು ಎಂಬ ವಿಶ್ವಾಸ ನಮಗಿರುವಾಗ; ನಾವು ಅದನ್ನು ಮೂರನೆಯವರಿಗೆ ಬಲವಂತವಾಗಿ ತಿಳಿಸಿಹೇಳುವ ಪ್ರಮೇಯವಾದರೂ ಏಕೆ? `ನೀನು ಬಂದು ನನ್ನ ಸುವಾಸನೆ ಆಘ್ರಾಣಿಸು' ಎಂದು ಹೂವು ನಮ್ಮನ್ನು ಬಲವಂತಪಡಿಸುವುದೆ?

ಉಮಾಶಂಕರ ಬಿ.ಎಸ್ ಮಂಗಳ, 02/02/2010 - 07:28

ತಾವಂದುಕೊಂಡ್ಡಿದ್ದೇ ಸರಿ ಅನ್ನುವ ಮೂಢರಿಗೆ ಸರಿಯಾದ ನೀತಿಪಾಠ ವಿನಯ್

ವಿನಯ್_ಜಿ ಮಂಗಳ, 02/02/2010 - 11:54

...:) ಧನ್ಯವಾದಗಳು ಉಮಾಶಂಕರ ರವರೆ.

ಹರಿಪ್ರಸಾದ್ ಧ, 02/03/2010 - 12:53

ನೀತಿ ಕಥೆ ಚೆನ್ನಾಗಿದೆ ವಿನಯವರೆ

ವಿನಯ್_ಜಿ ಧ, 02/03/2010 - 13:32

ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಹರಿಪ್ರಸಾದ್ ರವರೆ... :)

prakash.g (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/25/2011 - 16:06

ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ
ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ.
ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು
ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ
ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ
ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ
ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ
ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ,
ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ
ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ
ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ
ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ
ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ
ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ,
ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ
ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!
]

kiran D A (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/04/2011 - 15:42

ನನಗೆ ತು೦ಬ ಮೆಚ್ಹುಗೆ ಅಗಿದೆ ಧನ್ಯಾವಾದಗಲು

ವಿನಯ್_ಜಿ ಸೋಮ, 03/21/2011 - 18:31

ಬಹಳ ಧನ್ಯವಾದಗಳು ಕಿರಣ್ ರವರೆ.. :)

siddeshwara si… ಭಾನು, 10/16/2016 - 10:14

ಸುಂದರ ನೀತಿ ಕಥೆ

ವಿನಯ್_ಜಿ ಮಂಗಳ, 10/18/2016 - 19:11

ಧನ್ಯವಾದ ಸಿದ್ದೇಶ್ವರ ರವರೆ... Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.