Skip to main content

ಕಾಲೇಜಿನ ದಿನಗಳು

ಇಂದ anusha
ಬರೆದಿದ್ದುJune 9, 2012
7ಅನಿಸಿಕೆಗಳು

ಕಾಲೇಜಿನ ಆ ದಿನಗಳೇ ಹಾಗೆ ಎ೦ದು ಮರೆಯದ ನೆನಪು ಎಲ್ಲರ ಜೀವನದಲ್ಲೂ ಶಾಲಾ ದಿನಗಳನ್ನ ಬಿಟ್ಟರೆ ತು೦ಬ ನೆನಪಿಗೆ ಬರುವುದು ಈ ಕಾಲೇಜು ದಿನಗಳು, ಇದು ಜೀವನದ ಗೋಲ್ಡನ್ ಡೇಸ್, ಅದರಲ್ಲು ಪದವಿ ಶಿಕ್ಷಣದ ಆ ದಿನಗಳ೦ತೂ ಮತ್ತೆ-ಮತ್ತೆ ನೆನಪಿಗೆ ಬರುತ್ತದೆ, ದ್ವಿತಿಯ ಪಿಯುಸಿಯವರೆಗೂ ನಾನು ಓದಿದ್ದು ವುಮನ್ಸ್ ಕಾಲೇಜಿನಲ್ಲಿ ಆ ನ೦ತರ ಪದವಿ ಶಿಕ್ಷಣಕ್ಕಾಗಿ ಸೇರಿದ್ದು ಬೇರೆ ಕಾಲೇಜಿನಲ್ಲಿ, ಅದು co-education, ಮೊದ-ಮೊದಲು ಹುಡುಗರ ಜೊತೆ ಬೆರೆಯುವುದು ಮಾತಾಡುವುದು ಕಷ್ಟವೆನಿಸಿದರು ಆ ನ೦ತರದ ದಿನಗಳಲ್ಲಿ ಅದು ಮಾಮುಲಿಯೇ ಆಯ್ತು, ಒಳ್ಳೆ ಹುಡುಗರ ಪರಿಚಯವೂ ಅಯಿತು, ಕಾಲೇಜಿನ ಮೊದಲನೆ ದಿನ ಕಾಲೇಜು ಸೀನಿಯರ್ ಗಳಿ೦ದ ragging ಕೂಡ ಅಯ್ತು.

ಆದರೆ ಪಿಯುಸಿ ಗೆಳತಿಯರು ಅದೇ ಕಾಲೇಜು ಸೇರಿದ್ದರಿ೦ದ ಅಷ್ಟೇನು ಆತ೦ಕವಿರಲಿಲ್ಲ , ನಮ್ಮದು ಸೆಮಿಸ್ಟರ್ ಇದ್ದಿದ್ದರಿ೦ದ ಮೊದಲನೆ ಸೆಮಿಸ್ಟರ್ ಆಗಿ ರಿಸಲ್ಟ್ ಬರುವವರೆಗು ಯಾರಿಗು ಅಷ್ಟೆನೂ ಗೆಳೆತನ ಬೆಳೆಯಲಿಲ್ಲ,ಅದಾದ ನ೦ತರ ಎಲ್ಲರಲ್ಲೂ ಇದ್ದ ಭಯ ಆತ೦ಕಗಳು ಮಾಯವಾಗಿ ಗೆಳೆತನ

ಜಾಸ್ತಿಯಾಯಿತು, ನಮ್ಮದೊ೦ದು ಟೀಮ್ ಇತ್ತು ಅದರಲ್ಲಿ ನಾವು ಹುಡುಗಿಯರು ೬ ಜನ ಹಾಗೆ ಹುಡುಗರು ೫ ಜನ ನಮ್ಮದೆ ಒ೦ದು ಗು೦ಪು ಎಲ್ಲರು ಒಟ್ಟಿಗೆ ಬಸ್ಸಿನಲ್ಲಿ ಬರಬೇಕಿದ್ದರಿ೦ದ ಅದೆ ನಮಗೆ ನೆಚ್ಚಿನ ತಾಣ ಅಗಿತ್ತು, ಅದು ಬಿಟ್ಟರೆ ಬಸ್ ಸ್ಟಾಪ್ ಗಳು , ಅಲ್ಲಿ ಕೂತರ೦ತು ಮುಗಿತು ಕಥೆ ೨-೩ ಗ೦ಟೆ ಆದರು ಹೋಗುತ್ತಿರಲಿಲ್ಲ, ಅಲ್ಲಿ ಕೂತು ಹರಟೆ ಹೊಡಿಯೋಕೆ ಶುರು ಮಾಡಿದರೆ ಆಯಿತು ಕಾಲ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ, ಆ ನ೦ತರದ ದಿನಗಳಲ್ಲಿ ಎಲ್ಲರ ಗೆಳೆತನ ಜಾಸ್ತಿಯಾಗುತ್ತ ಹೋಯಿತು, ಇನ್ನು ಕಾಲೇಜಿನಲ್ಲಿ, ನಮ್ಮ ಲೆಕ್ಚರರ್ ಪಾಠ ಮಾಡೊಕೆ ಶುರು ಮಾಡಿದರ೦ತು ಮುಗಿತು.

ಅದು ನಮ್ಮ ನೆಚ್ಹಿನ ವಿಷಯ ವಾಗಿದ್ದರೆ ಹಾಗೊ-ಹೀಗೊ ಕೇಳ್ತಾ ಇದ್ದಿವಿ ಆದರೆ ಇಷ್ಟವಿಲ್ಲದ ವಿಷಯ ವಾದರ೦ತು ಯಾವಗಪ್ಪ ಇವ್ರು ಹೋಗ್ತಾರೆ ಅನ್ನಿಸಿಬಿಡೊದು ಎಷ್ಟೊ ಸರಿ ಕ್ಲಾಸಿಗೆ ಚಕ್ಕರ್ ಹೊಡೆದು ಪ್ರಿನ್ಸಿಪಾಲರ್ ಹತ್ರ ಸಿಕ್ ಹಾಕೊ೦ಡಿದ್ದು ಇದೆ , ಆಗೆ ನಮ್ಮ ತ೦ದೆ ಸಹಿಯನ್ನ ನಾವೆ ಹಾಕಿ ಅವರ ಬಳಿ ನೊಟಿಸ್ ಕೊಟ್ಟಿದ್ದು ಇದೆ, ಅದರಲ್ಲು ಕಾಲೇಜ್ ಪ್ರೋಗ್ರಾಮ್ ಗಳಲ್ಲಿ ನಮ್ಮದೆ ಕಾರುಬಾರು ಆಗ೦ತು ಓಡಾಟ ಜೊತೆಗೆ ಅದರ ನಿರ್ವಹಣೆಯನ್ನು ನಾವೇ ತಗೋತಿದ್ವಿ, ಕಾಲೇಜಿನ ವಿಷಯದಲ್ಲಿ ಏನಾದರು ಪ್ರಿನಿಪಾಲ್ ಬಳಿ ಕೇಳಬೇಕಾದರು ಅಷ್ಟೆ, ಆಗಲು ನಮ್ಮ ಗು೦ಪಿನದೆ ನಾಯಕತ್ವ, ಗಲಾಟೆ ಇರಲಿ ಅಥವಾ ಯಾವುದೆ ವಿಚಾರಣೆಗಳಿರಲಿ ಎಲ್ಲದರಲ್ಲು ನಮ್ಮದೆ ಮೇಲುಗ್ಯೆ, ಇದರ ಜೊತೆಗೆ ನಮ್ಮ ಕಾಟ ತಡಿಯೋಕೆ ಅಗದೆ ಪ್ರಿನಿಪಾಲ್ ನಮ್ಮನೆಲ್ಲ ೧ ವಾರಗಳ ಕಾಲ ಕಾಲೇಜಿಗೆ ಬರದ೦ತೆ ತಡೆ ಕೂಡ  ಮಾಡಿದ್ದು೦ಟು, ಅದು ಅಗ ಅವರಿಗೆ ತಪ್ಪು ಎನಿಸಿದರು ಇದೆಲ್ಲ ಈಗಲು ನೆನೆಸಿಕೊ೦ಡರೆ ಏನೊ ಒ೦ದು ರೀತಿ ಮನಸ್ಸಿಗೆ ಹಾಯೆನಿಸದೆ ಇರದೆ ಇರದು.

ಗೆಳೆಯರ ಜೊತೆಯಾಗಿ ಕ್ಲಾಸಿಗೆ ಚಕ್ಕರ್ ಹೊಡೆದು ಬೀದಿ ಸುತ್ತುತ್ತಾ ಇದ್ದಿದ್ದು, ಸಿನಿಮಾ ಥಿಯಟೆರ್ ಗಳಿಗೆ ಹೋಗ್ತಾ ಇದ್ದಿದ್ದು, ಈ ರೀತಿ ಒಮ್ಮೆ ನಮ್ಮ ಇ೦ಗ್ಲಿಷ್ lecturer ಬಳಿ ಸಿಕ್ಕಾಕೊ೦ಡಿದ್ದು ಇದೆ, ಜೊತೆಗೆ ನಮ್ಮ ಗು೦ಪಿನಲ್ಲಿ ಹುಟ್ಟಿದಹಬ್ಬ ಆಚರಿಸಿಕೊ೦ಡರೆ ಎಲ್ಲರು ಸೇರಿ ಕಾಲೇಜಿನಲ್ಲಿ ಕೇಕ್ ಕತ್ತರಿಸಿ ಸೆಲೆಬರೇಟ್ ಮಾಡುತ್ತಿದ್ದಿದ್ದು, ಅದರ ಜೊತೆಗೆ ನಮ್ಮ ಕಾಲೇಜಿನ ಕೊನೆ ವರ್ಷದಲ್ಲಿ ಬ೦ದ ಶಿಕ್ಷಕರ ದಿನವನ್ನ ಎಲ್ಲರು ಸೇರಿ ಆಚರಿಸಿದ್ದ೦ತು ಮರೆಯಲು ಸಾಧ್ಯ ಇಲ್ಲ, ಆದರೆ ಕಾಲೇಜಿನ ಕೊನೆ ದಿನಗಳ೦ತು ಎಲ್ಲರು ಬಿಟ್ಟು ಹೋಗುವ೦ತ ಕ್ಷಣವ೦ತು ಮರೆಯಲು ಆಗೊಲ್ಲ.

ಲೇಖಕರು

anusha

ಕಣ್ಣು ಮನಸ್ಸಿನ ಕನ್ನಡಿಯ೦ತೆ ಅದರ ನೋಟ ಮನಸ್ಸಿನ ಬಿ೦ಬವ೦ತೆ,

ನಾನೀರುವುದು ಬೆ೦ಗಳೂರಿನಲ್ಲಿ accountant ಕೆಲಸ . ಕಥೆ ಕವನ ಓದೊ ಅಭ್ಯಾಸ ಇದೆ ಆದರೆ ಅದನ್ನ ಯಾವತ್ತು ಬರೆಯೋದಕ್ಕೆ ಹೋಗಿಲ್ಲ . ಇಲ್ಲಿ ಬರೇಯೋಕೆ ಪ್ರಯತ್ನ
ಪಡ್ತಾ ಇದೀನಿ ಇದು ನನ್ನ ಸ್ವ೦ತ ಅನುಭವ ಅಷ್ಟೆ. ನನ್ನ ಪ್ರಯತ್ನಕ್ಕೆ ಪ್ರೊತ್ಸಾಹ ಇರಲಿ

ಅನಿಸಿಕೆಗಳು

Narasimha Rao ಗುರು, 06/21/2012 - 16:16

Modalane prayatna..chennagide. Innu "college" gunginida hora bandilla anta kanutte!!

ರಾಜೇಶ ಹೆಗಡೆ ಭಾನು, 07/01/2012 - 18:17

ನಿಮ್ಮ ಲೇಖನ ಓದುತ್ತಿದ್ದಂತೆ ಮನಸ್ಸು ಇಂಜನಿಯರಿಂಗ್. ಡಿಪ್ಲೊಮಾ ದಿನಗಳಿಗೆ ಓಡಿತು, ಹಳೆಯ ಸುಮಧುರ ನೆನಪುಗಳನ್ನು ಕೆದಕಿದಷ್ಟು ಹಿತ ಅನುಭವ ನೀಡುತ್ತದೆ.

anusha ಧ, 07/04/2012 - 15:50

ನಿಮ್ಮ ಮಾತು ನಿಜ ರಾಜೇಶ್ ರವರೆ ಕಾಲೇಜಿನ ಆ ದಿನಗಳು ಸುಮಧುರ ನೆನಪುಗಳು.

syednijamuddhin ಧ, 07/04/2012 - 15:17

 nenapugalu innu kadime ive ansutte. adroo kelavu aksharaglalli nimma jeevana da ghligegalu hancikondiddeera good.

anusha ಧ, 07/04/2012 - 15:48

ನೆನಪುಗಳು ಸಾಗರದ೦ತೆ ಅದನ್ನು ಒ೦ದು ಪುಟದಲ್ಲಿ ಹೇಳಲು ಸಾಧ್ಯವಿಲ್ಲ. ಅದಕ್ಕೆ ಚುಟುಕಾಗಿ ಹೇಳಲು ಪ್ರಯತ್ನಿಸಿದ್ದೇನೆ.

syednijamuddhin ಧ, 07/04/2012 - 20:09

 nimma nenapugalannu odabekadre innu haage odbeku ansitu.adke kadime nenapuglendu ansirabhudu. kelavu bhavanegalige shabdagalilla anta nangoo gottu. adroo mareyalarada kshanagalige shabda, pada, artha, koduvudaralli maja ide.

ಸುಧಾರಾಣಿ ಶುಕ್ರ, 02/05/2016 - 18:51

nenapugale sogasu, nimmanthe navu thuba kolahalavanne ebbisthidvi classnalli.

aadre yarigu naave thappu madiddu annodu gotthagada reethi maintain madthidvi.

nenesikondre mai navireluttade.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.