Skip to main content

ರಾಜ್, ಲೀಲಾವತಿ ಮತ್ತು ರವಿಬೆಳಗೆರೆ.

ಬರೆದಿದ್ದುMarch 9, 2009
59ಅನಿಸಿಕೆಗಳು

[img_assist|nid=3743|title=ಲೀಲಾವತಿ|desc=ಲೀಲಾವತಿ|link=none|align=left|width=150|height=126]
ತ್ತೀಚೆಗೆ ಕುವೆಂಪು ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದರ ಸಾರಥಿ ರವಿಬೆಳಗೆರೆ, ಪ್ರಾಯೋಜಕರು ಈಟಿವಿ ವಾಹಿನಿ. ಮುಖ್ಯ ಅತಿಥಿಗಳು, ಸಿನಿತಾರೆ ಲೀಲಾವತಿಯವರು, ವಿನೋದ್ ರಾಜ್ ಹಾಗೂ ಸುಧಾರಾಣಿ ಮತ್ತು ಹಿರಿಯ ನಿರ್ದೇಶಕರಾದ ಶಿವಶಂಕರಪ್ಪನವರು. ಕಾರ್ಯಕ್ರಮದ ಹೆಸರು: ಎಂದೂ ಮರೆಯದ ಹಾಡು.

ಈ ಕಾರ್ಯಕ್ರಮವನ್ನು ರವಿಬೆಳಗೆರೆ ತುಂಬಾ ಸೊಗಸಾಗಿ ನಿರೂಪಿಸುತ್ತಾರೆ ಎಂಬ ಗಾಳಿಮಾತಿಗೆ, ಧ್ವನಿಯಾಗಿ ಈ ಕಾರ್ಯಕ್ರಮಕ್ಕೇ ನಾನೂ ಹೋಗಿದ್ದೆ. ರವಿಬೆಳಗೆರೆ ಎಂದಿನಂತೆ ದೇವೇಗೌಡರ ಮೇಲೆ ಜೋಕುಗಳನ್ನು ಸಿಡಿಸುತ್ತಾ, ಸಭಿಕರನ್ನು ನಗಿಸುತ್ತಾ, ಚಿತ್ರರಂಗದ ಪರಿಶ್ರಮದಲ್ಲಿ ಮಿಂಚಿಮರೆಯಾದ ನಾಯಕಿನಟಿಯರ ಬಗ್ಗೆ ಮಾತನಾಡುತ್ತಿದ್ದರು. ಹರಿಪ್ರಿಯಾ, ಹರಿಣಿ, ಬಿ.ಸರೋಜಾ ದೇವಿ, ಪಂಡರಿಬಾಯಿ, ಮಂಜುಳ, ಪ್ರೇಮ, ಕಲ್ಪನಾ, ಜಯಮಾಲ, ಮಾಲಾಶ್ರೀ ಹಾಗೂ ಲೀಲಾವತಿಯಂತಹ ಮರೆಯಲಾಗದ ನಟಿಯರ ಬಗ್ಗೆ , ಮನಮುಟ್ಟುವಂತೆ ಸಭಿಕರಿಗೆ ರಸವತ್ತಾಗಿ ವಿವರಿಸಿ, ಅವರುಗಳನು ನಟಿಸಿದ ಚಿತ್ರಗಳಿಂದ ಒಂದು ಅಮರಗೀತೆಯನ್ನು ಖ್ಯಾತ ಗಾಯಕ/ಕಿ ರಿಂದ ಹಾಡಿಸುತ್ತಿದ್ದರು.

ಈ ಮದ್ಯೆ ಲೀಲಾವತಿಯವರ ಬಗ್ಗೆ ಮಾತನಾಡುವ ಮುಂಚೆ , ಅವರಿಬ್ಬರನ್ನೂ (ಲೀಲಾವತಿ & ವಿನೋದ್ ರಾಜ್) ರವಿ ವೇದಿಕೆಗೆ ಆಹ್ವಾನಿಸಿದರು. ಅವರಿಬ್ಬರನ್ನು ತನ್ನ ಎಡ-ಬಲದಲ್ಲಿ ನಿಲ್ಲಿಸಿಕೊಂಡು ಒಂದೊಂದೇ ಮಾತುಗಳನ್ನು ಆಗ ತಾನೇ ತೆಗೆದ ಜೇನಿನಿಂದ ತುಪ್ಪ ಒಂದೊಂದೇ ಹನಿ ಜಿನುಗುವಂತೆ , ಜಿನುಗಿಸತೊಡಗಿದರು. ನಮ್ಮ ನಾಡಿನಲ್ಲಿ ಯಾರ್ಯಾರೋ ನಾನು ಮಣ್ಣಿನ ಮಗ, ಮಣ್ಣಿನ ಮೊಮ್ಮಗ, ಅಂದ್ಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ, ಆದರೆ ಅವರ್ಯಾರು, ಒಂದು ದಿವಸಾನೂ ನೇಗಿಲು ಕಟ್ಟಿದ್ದಿಲ್ಲ, ಹೊಲ ಉತ್ತಿದ್ದಿಲ್ಲ, ಬೀಜ ಬಿತ್ತಿದ್ದಿಲ್ಲ, "ಆದರೆ ನಿಜವಾದ ಮಣ್ಣಿನ ಮಗಳು ನಮ್ಮ ಲೀಲಮ್ಮ. ರೈತನಿಗಿಂತ ಸೊಗಸಾಗಿ ತರಕಾರಿ ಬೆಳೀತಾರೆ ಇವರು. ನನ್ನ ಪುಣ್ಯ ಇವರು ಬೆಳೆದ ತರಕಾರಿಯನ್ನು ತಿನ್ನುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅವರ ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾ , ಸುಮಾರು 500 ಸಿನಿಮಾಗಳಲ್ಲಿ ನಟಿಸಿರುವ ಇವರು( ನಾವು ಅಷ್ಟು ಸಂಖ್ಯೆಯ ಸಿನಿಮಾಗಳನ್ನು ನೋಡಿದ್ದೀವೆಯೋ ಇಲ್ಲವೋ ..!! ) ನಾಲ್ಕು ರಾಜ್ಯ ಪ್ರಶಸ್ತಿಗಳನ್ನು, ಡಾ.ರಾಜ್ ಪ್ರಶಸ್ತಿಯನ್ನು, ಜೀವಿತಾವಧಿ ಸಾಧನೆಗೆ ಫಿಲ್ಮಫೇರ್ ಪ್ರಶಸ್ತಿಯನ್ನು, ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.

ನಂಬಿದವರು ಕೈಬಿಟ್ಟರೂ , ನಂಬಿದವರೇ ಇಂಚಿಂಚಾಗಿ ಅವಮಾನಿಸಿದರೂ ಅದನ್ನೆಲ್ಲ ಮೀರಿ ಇಷ್ಟೆಲ್ಲಾ ಸಾಧನೆ ಮಾಡಿದ ಈ ತಾಯಿಯ ದೈರ್ಯ ನನಗೆ ಆದರ್ಶ. "ಈ ಪ್ರಶಸ್ತಿ ನನ್ನದು, ಈ ಚಿತ್ರ ನನ್ನದು, ಈ ಖ್ಯಾತಿ ನನ್ನದು ಎಂದುಕೊಳ್ಳುತ್ತಿದ್ದ ಆ ವ್ಯಕ್ತಿ, ಈ ಒಂದೇ ಒಂದು ಜೀವವನ್ನು ಈ ಜೀವ ನನ್ನದು ಅಂತ ಸ್ವೀಕರಿಸಿದಿದ್ದರೆ, ಆ ವ್ಯಕ್ತಿ ಇನ್ನೂ ದೊಡ್ಡ ವ್ಯಕ್ತಿಯಾಗಿ ಬಿಡುತ್ತಿದ್ದರು" ಅಂದಾಗ ವಿನೋದ್ ಮತ್ತು ಲೀಲಮ್ಮ ಇಬ್ಬರೂ ವೇದಿಕೆ ಮೇಲೆಯೇ ಅತ್ತುಬಿಟ್ಟರು. ವಿನೋದ್ ರಾಜ್ ಅಂತೂ ಪಕ್ಕ ತಿರುಗಿ ಕಣ್ಣೊರೆಸಿಕೊಂಡಾಗ ಸಭಿಕರ ಕಣ್ಣಂಚಲಿ ಕಂಬನಿ ಹೆಪ್ಪುಗಟ್ಟಿಬಿಟ್ಟಿತ್ತು. ಈ ಸಂದರ್ಭ ಎಂತಹ ಕಟುಕನ ಮನಸ್ಸೂ ಕಲುಕುವಂತಿತ್ತು.

ಮುಂದುವರೆದ ರವಿ , ನಾವು ಜೀವನದಲ್ಲಿ ಎರಡು ವಿಷಯಗಳನ್ನು ತಪ್ಪದೇ ಪಾಲಿಸುತ್ತೇವೆ. 1. ಮನೆಯಿಂದ ಹೊರಡುವಾಗಲೇ, ಈ ದಿನ ನಾವು ಯಾರೊಬ್ಬರ ಬಗ್ಗೆಯೂ ಒಳ್ಳೆ ಮಾತನ್ನಾಡೋಲ್ಲ. 2. ನಮಗೆ ಗೊತ್ತಿರೋ ಸತ್ಯವನ್ನು , ಯಾರಿಗೆ ಎಷ್ಟೇ ಅನ್ಯಾಯವಾದರೂ ನಾವು ಯಾರಿಗೂ ಹೇಳೋಲ್ಲ. ಅಂತ. ಆದರೆ " ಇವತ್ತು ನಾನು ಒಂದು ಸತ್ಯವನ್ನು ಹೇಳಿದ್ದೇನೆ. ಈ ವೇದಿಕೆಯಿಂದ ಆ ಕೆಲಸ ಆಗಿದೆ ಅಂತ ಭಾವಿಸುತ್ತೇನೆ ಎಂದಾಗ ಸದಾಶಿವನಗರದ ಬಂಗ್ಲೆಗೆ ಕೇಳಿಸುವ ಹಾಗೆ ಕರತಾಡನ ಮೊಳಗಿತು.

ಈ ಕಾರ್ಯಕ್ರಮ ನೋಡಿದ ಮೇಲೆ ನನಗನ್ನಿಸಿದ್ದು ಚಿತ್ರಜೀವನದಲ್ಲಿ ಅಭಿಮಾನಿಗಳ ಮನಗೆದ್ದ ನಟಿಯರೆಲ್ಲ ಜೀವನವನ್ನು ಯಾಕೆ ಗೆಲ್ಲಲಿಲ್ಲ...? ತೆರೆಮೇಲೆ ಅವರು ನಮಗೆ ಅವರು ಹೇಗೇಗೋ ಕಂಡರೂ ಸಹ ತೆರೆಹಿಂದೆ ಅವರು ತೀರಾ ಸಾಮಾನ್ಯರಾಗಿದ್ದುದು ಹೇಗೆ..? ಸಿಕ್ಕಾಪಟ್ಟೆ ಪ್ರತಿಭೆ, ಯಶಸ್ಸು, ಹಣ ಇದ್ದರೂ ಕೂಡ ಮಂಜುಳಾ, ಕಲ್ಪನಾ ರಂತಹ ಮಿನುಗುತಾರೆಗಳು, ಆತ್ಮಹತ್ಯೆಗೆ ಮೊರೆಹೋದುದು ಯಾಕೆ...? ಖ್ಯಾತಿ, ಯಶಸ್ಸು, ಹಣ ಅವಕಾಶ ಇವೆಲ್ಲವುಗಳನ್ನು ಮೀರಿಸುವಷ್ಟು ಕೆಟ್ಟದಿತ್ತೇ ಅವರ ಜೀವನ..?

ಮನದಲ್ಲಿ ಉಳಿದವು ಎಷ್ಟೋ ಪ್ರಶ್ನೆಗಳು , ಉತ್ತರ ನೀಡುವಾರಾರೋ..? ಎಂಬ ನೋವಿನಲಿ , ಕಾರ್ಯಕ್ರಮದಿಂದ ಆಚೆ ಬಂದಾಗ , ಈಗಿನ ಉದಯನ್ಮೋಖ ನಟಿಯೊಬ್ಬರು ಕಂಡರು. ಅವರನ್ನು ನೋಡಿ ನಾನು ಮನಸ್ಸಲ್ಲೇ ಅಂದುಕೊಂಡೆ "ಆಗಿನವರ ಇತಿಹಾಸ, ಈಗಿನವರಿಗೆ ಪಾಠವಾಗದಿದ್ದರೆ ಇತಿಹಾಸ ಇಂತಹವರನ್ನು ಎಂದೂ ಕ್ಷಮಿಸೋಲ್ಲ. ಎಲ್ಲಿವರೆಗೆ ವಂಚನೆಗೊಳಗಾಗುವವರು ಇರುತ್ತಾರೋ, ಅಲ್ಲಿವರೆಗೆ ವಂಚಿಸುವವರು ಇದ್ದೇ ಇರುತ್ತಾರೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/30/2010 - 00:33

ಲೀಲಾವತಿಯವರಿಗೆ ಯಾವುದೇ ಅನ್ಯಾಯವಾಗಿಲ್ಲ , ತಪ್ಪು ಇಬ್ಬರಿಂದಲೂ ಆಗಿದೆ(ಅಕಸ್ಮಾತ್ ಆಗಿದ್ದರೆ)  ಲೀಲಾವತಿಯವರೂ ತುಂಬು ಜೀವನ ಅನ್ಯಾಯವಾಗಿದ್ದರೆ ಅದು ವಿನೋದ್ ಗೆ ಮಾತ್ರ. but it is his destiny. so let us forget it ಇಬ್ಬರೂ ಕಲಾವಿದರ ಮೇಲೆ ನಮಗಿರುವ ಗೌರವ ಹಾಗೆ ಇರಲಿ.

RAJESH RAO (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/30/2010 - 00:35

ಲೀಲಾವತಿಯವರಿಗೆ ಯಾವುದೇ ಅನ್ಯಾಯವಾಗಿಲ್ಲ , ತಪ್ಪು ಇಬ್ಬರಿಂದಲೂ ಆಗಿದೆ(ಅಕಸ್ಮಾತ್ ಆಗಿದ್ದರೆ)  ಲೀಲಾವತಿಯವರೂ ತುಂಬು ಜೀವನ ನಡೆಸಿದ್ದಾರೆ. ಅನ್ಯಾಯವಾಗಿದ್ದರೆ ಅದು ವಿನೋದ್ ಗೆ ಮಾತ್ರ. but it is his destiny. so let us forget it ಇಬ್ಬರೂ ಕಲಾವಿದರ ಮೇಲೆ ನಮಗಿರುವ ಗೌರವ ಹಾಗೆ ಇರಲಿ.

padma sadanand (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/02/2010 - 11:18

Rajkumar jeevanta iddagaa  evarella jeeva eralillve? Sattavara tejovadhe madi anu (what) sadhisbeku antiddare ?

Subramanya Prasad (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/29/2011 - 12:37

ನಿಮ್ಮ ಮಾತು ಸರಿಯಾಗಿದೆ.    ಈ ರವಿ ಬೆಲಗೆರೆ ಯಾಕೆ ಇದನ್ನ ಈ ಸಮಯದಲ್ಲಿ ಹೆಳುತಾರೊ. ಇದನ್ನು ಈಗ ನೆನಪು ಮಾಡಿ ಏನು ಸಾದಿಸುತ್ತಾರೊ. ಒಬ್ಬ ವ್ಯಕ್ಥಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೆ ಅವರ ಬಗ್ಗೆ ಕೊoಕು ನುಡಿಯುವವರೆ ಜಾಸ್ಥಿ. . ಸುಮ್ಮನೆ ಯೊಚಿಸಿ ನೊದಿ.

Have you ever thought about free hosting? Is it possible to be completly free?

Mike
[url=http://www.darmowyhosting.waw.pl]darmowy hosting[/url]

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/07/2011 - 13:06

idu Leelavathi avarige agiro anyaya. Nija idaralli ibbaradu tappide. Adare Leelavathi avarige Raj avru baduku kodabekittu. Tande preethi Vinod ge sigbekittu. AAga Raj avaru nijavaglu great agtidru.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/07/2011 - 13:14

Ravi Belagere avaru helirodralli yenu tappilla. Namma samajadalli maduve agade magu huttidare yenella himse anubhavisabeku annodu ondu hennige matra gottide. Adre Ravibelagere avru antha novanna artha madikondu atleast satya yenu annodanna janarige tilistare. You are really great Ravibelagere avre...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/11/2012 - 11:46

ನಿಜ...ರವಿ ಬೆಳಗೆರೆಯವರ ಮಾತು ಒಪ್ಪೊಣ...! ಆದ್ರೆ ರಾಜ್ ಅವರು ಲೀಲಮ್ಮನವರಿಗೆ ನಿಜವಾಗಲು ಬದುಕು ಕೊಡಲು ಒಪ್ಪಿದ್ದರು...ಆದ್ರೆ ಪಾರ್ವತಮ್ಮನ ಕಾಟದಿಂದಾಗಿ ಬಹಿರಂಗವಾಗಿ ಹೇಳಿಕೊಂಡಿಲ್ಲ ಅಷ್ತೆ..! ಮಕ್ಕಳು ಕೂಡ ಅಮ್ಮನಿಗೆ ಸಪ್ಪೂರ್ಟ್ ಮಾದಿದ್ರು.! ತೆರೆ ಮೆಲೆ ಇಂತ ಸಂಗತಿಗಳಿಗೆ ಬೆಂಬಲ ಕೊಡುವ ಮಕ್ಕಳು..ನಿಜ ಜೀವನದಲ್ಲಿ ಲೀಲಮ್ಮ ಮತ್ತು ವಿನೊದ್ ಬಗ್ಗೆ ಮಸಲತ್ತು ಮಾದಿದ್ದೆನು ಸುಳ್ಳಲ್ಲ...! ಈಗಲಾದ್ರು ಸದಾಶಿವ ಬಂಗ್ಲೆಯವರುತಪ್ಪನ್ನು ತಿದ್ದಿಕೊಂಡ್ರೆ ಓಳ್ಳೆದು..ನಿಮಗೊತ್ತಾ..? ಅಸಲಿಗೆ ರಾಜ್ ಅವರ ಸಾವಿಗೆ ಕಾರಣ ಎನು ಅಂತ..? ಅದನ್ನು ಬಿಡಿಸಿ ಹೇಳಿದ್ರೆ ಅದೊಂದು ವೀವಾದತ್ಮಕ ವಿಷಯೆ ಆದಿತು ಬಿಡಿ..!

anamadeya ಶನಿ, 12/12/2015 - 12:30

ದಿಗ್ರೀ ಮಾಡಿರೊ ವಿದ್ಯಾವಂತರೆ ತಪ್ಪು ಮಾಡೊವಾಗ ೩ನೇ ಕ್ಲಾಸ್ ಓದಿ ಬಾರಿ ನಟನ ಸಾಮರ್ತ್ಯದಿಂದ ಒಂದು ರಾಜ್ಯ ಮತ್ತು ಭಾಷೆಯ ಪ್ರತಿನಿಧಿಯಾಗಿ ಬೆಳೆದ ಅಣ್ಣಾವ್ರು ಮಾಡಿರೊ ಯಾವ್ದೋ ತಪ್ಪನ್ನ ಹಿಡ್ಕೊನ್ಡು ಹೀಗೆ ಮಾತಡೊದು ಮನುಷ್ಯನ ಸಣ್ಣತನ ಅಷ್ಟೇ ... (Adallade e vichara nadediddu 60's nalli, Rajkumar ravaru chitrarangakke banda hosadu, hadi hareya, sahajavagi agiruvantha thappu annona. Ananthara avaru thappugalannu thiddikondu obba adarsha vyakthiyagi ninthavaru Dr.Rajkumar. Kannada bashe ucharane hegirabeku, Thande / Thayina hege nodikollabeku, Hiriyarige hege gowrava kodabeku MATHU navu este etharakke yeridaru namma nadavalike hegirabeku Mathu Avaru ellu saha Dhoomapanu, Madhyapanavannu uthejisalilla. Heege Samajamukhi cinemagalannu Kottanthavaru.

Bereyavarella kevala manaranjanege cinema thegadaru Mathu Thammannu thavu hogalikollodakke ardha cinema meesalu.
Adare Rajkumar ravaru ellu saha thannannu hogalikollalilla, E prasasthi nandu antha annalilla.

Omme annavru elthare "Neevu(Fans) nanage anna kottiddiri, preethi kottiddiri, nan nimage en kodaballe ? Preethi matra kodaballe."

Omme agiruvantha ondu thappige, poora Rajkumaravara vruthi jeevanakke kolli iduvantha kelasa kelavarinda nadeyuthide. Idu nillabeku.

Nirmapakarannu Annadatha antha karedaru, Abhimanigalige Devaru antha Karedavaru'

melina mathinalli natakiyathe illa. Adaranthe nadedavaru Rajanna..

Jai Karnataka

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.