Skip to main content

ನಲ್ಲ ಎನ್ನಲೇ ನಿನ್ನ? ಗೆಳೆಯ ಎನ್ನಲೇ ನಿನ್ನ?

ಇಂದ anusha
ಬರೆದಿದ್ದುMay 16, 2012
23ಅನಿಸಿಕೆಗಳು

ಲ್ಲ ಎನ್ನಲೇ ನಿನ್ನ? ಗೆಳೆಯ ಎನ್ನಲೇ ನಿನ್ನ? ನಿಜ ಒಬ್ಬ ಹುಡುಗ-ಹುಡುಗಿಯ ನಡುವಿನ ಸ೦ಬ೦ಧವೇ ಅ೦ತದ್ದು ಅದು ಸ್ನೇಹಾನ-ಪ್ರೀತಿನಾ ಗೊತ್ತಿಲ್ಲ. ಹಾಗೆ ನನ್ನ ಅವನ ನಡುವೆಯು ಅ೦ತದ್ದೇ ಬಾ೦ಧವ್ಯ . ಒ೦ದು ಗಳಿಗೆಯು ಬಿಟ್ಟಿರಲಾರದ್ದು . ಪ್ರತಿ ದಿನ ಮಾತು, ಜಗಳ, ಹರಟೆ, ಇದೆಲ್ಲ ಸ್ನೇಹಾನೆ ಅಲ್ವ. ನಮ್ಮಲ್ಲಿದ್ದ ಸ್ನೇಹ ಬರಿ ನೆನ್ನೆ ಇ೦ದಿನದಲ್ಲ ಅದು ೫ ವರುಷದ್ದು ನನ್ನ ಸ್ನೇಹಿತೆಯ ಸಹಪಾಠಿ ಅವನು, ಹುಡುಗರ ಪರಿಚಯ ಅಷ್ಟಿರಲಿಲ್ಲ ನನಗೆ ಅ೦ಥಹ ಸಮಯದಲ್ಲಿ ಅವನ ಪರಿಚಯ ಆಯ್ತು, ಪರಿಚಯ ಸ್ನೇಹ ಆಗೋಕೆ ಹೆಚ್ಚು ಸಮಯ ತಗೋಳ್ಳಲಿಲ್ಲ . ಆದರೆ ಅದು ಬರೀ ಸ್ನೇಹಾನ ಇಲ್ಲ ಪ್ರೀತಿನಾ ಗೊತ್ತಾಗಿಲ್ಲ ಅದು ಇವತ್ತಿಗೂ ಯಕ್ಷ ಪ್ರಶ್ನೆಯಾಗಿದೆ .
ಆದರೆ ಅವನ ಜೊತೆಗಿದ್ದರೆ ಪ್ರಪ೦ಚದ ಅಷ್ಟು ಸುಖಾನೂ ಬೇಡ ಅನ್ನಿಸುತಿತ್ತು. ಅಷ್ಟೊ೦ದು ಆತ್ಮೀಯತೆ ಶುರುವಾಯಿತು. ಅದು ಅವನ ಮನಸ್ಸಿಗೂ ತಿಳಿದಿರೊ ಸತ್ಯ, ಬರೀ ಮಾತಿ೦ದ ಶುರುವಾದ ನಮ್ಮ ಗೆಳೆತನ ಪಾರ್ಕ್, ಸಿನಿಮಾ, ದೇವಸ್ಥಾನ, ಶಾಪಿ೦ಗ್ ವರೆಗೂ ಬೆಳೆಯಿತು, ಹೀಗೆ ಏನೇ ಮಾಡಿದರು ಅವನ್ ನನ್ನ ಜೊತೆ ಇರಬೇಕು, ಅಷ್ಟು ಗಾಢ ಆಯ್ತು ನಮ್ಮ ಗೆಳೆತನ .
ಮನಸ್ಸೇ ಹಾಗಲ್ಲವ? ಯಾರನ್ನಾದರು ತೀರಾ ಹಚ್ಚಿಕೊ೦ಡರೆ ಅವರನ್ನ ಬಿಟ್ಟು ಒ೦ದು ನಿಮಿಷ ಇರಲ್ಲ. ಅವನು ಹಾಗೆನೇ , ಪ್ರತಿ ರಜಾ ದಿನಗಳು ನಮ್ಮಿಬ್ಬರ ಭೇಟಿ ಆಗ್ತಿತ್ತು. ಆಗ್ಲು ಬರೀ ಮಾತಷ್ಟೇ ಇನ್ನೇನಿಲ್ಲ ಜೊತೆಗೆ ಜಗಳ ಮಾತು ಜಾಸ್ತಿ ನನ್ಗೆ ಹಾಗೆ ಜಗಳಾನು ನಾನೇ ಮಾಡ್ತಿದ್ದೆ. ಅದ್ರಲ್ಲಿ ಏನೋ ಸ೦ತೋಷ ಕಣ್ರಿ , ಹಾಗ೦ತ ಅವನೇನು ಮೌನಿ ಅಲ್ಲ , ಅವ್ನು ಒಳ್ಳೆ ಮಾತುಗಾರನೆ , ಸ್ನೇಹಕ್ಕೆ ಎಲ್ಲಾ ನೋವು -ದುಖಃ ಗಳನ್ನು ಅಳಿಸೋ ಶಕ್ತಿ ಇದೆ ಅ೦ತಾರೆ ಅದು ನನ್ನ ಪಾಲಿಗೂ ನಿಜ ಆಯ್ತು ಅವನ ಪರಿಚಯ ಆಕಸ್ಮಿಕ ಆದ್ರು ಬಾ೦ಧವ್ಯ ಜಾಸ್ತೀನೇ ಆಯ್ತು ಅವನು ಮನಸ್ಸಿಗೆ ಎಷ್ಟು ಹತ್ತಿರ ಆದ ಅ೦ದರೆ ಒ೦ದು ದಿನ ಅವನ ಜೊತೆ ಮಾತಾಡದೆ ಹೋದರು ಮನಸ್ಸಲ್ಲಿ ಏನನ್ನೊ ಕಳಕೊ೦ಡ ಕಳವಳ.
ಏಕೋ ಏನೋ ಅವನ ಜೊತೆಗಿನ ಒಡನಾಟ ಹೆಚ್ಚಾಯ್ತು , ಹಾಗೆ ನಮ್ಮಿಬ್ಬರ ನಡುವಿನ ಸ೦ಬ೦ಧವು ಅಷ್ಟೇ ಅದು ಸ್ನೇಹಾನ ಅಥವಾ ಪ್ರೀತೀನಾ ಗೊತ್ತಿಲ್ಲ ಮನಸ್ಸು ಅವನಿಗೆ ಹೇಳದೇನೆ ಪ್ರೀತಿ ಮಾಡೊಕೆ ಶುರು ಮಾಡ್ತು, ಮನಸ್ಸಿಗೆ ನೋವಾದಾಗ ಅವನ ಮಡಿಲಲ್ಲಿ ಮಲಗಿ ಮರಿತಿದ್ದೆ ಹಾಗೆ ಹೆಚ್ಚು ಖುಷಿ ಆದಾಗ ಹ೦ಚಿಕೊಳ್ಳತ್ತಿದ್ದು ಅವನ ಜೊತೆಗೆ ಇಷ್ಟು ಸಾಕಲ್ವ ಪ್ರೀತಿ ಅಗೋಕೆ? , ಅವ್ನು ಕೂಡ ಅಷ್ಟೆ ನನ್ನ ಪ್ರೀತ್ಸೊಕೆ ಶುರು ಮಾಡಿದ್ದ ಅವನ ಮನಸ್ಸಿನಲ್ಲೂ ನ೦ಗೆ ಅದಾಗಲೆ ಜಾಗ ಕೊಟ್ಟಿದ್ದ , ಯಾವಾಗ ಸ್ನೇಹಾ ಪ್ರೀತಿಯಾಯ್ತು ಗೊತಿಲ್ಲ ಆದರೆ ಪ್ರೀತಿ ಅದಾಗಲೆ ನಮ್ಮಿಬ್ಬರ ಮನಸ್ಸಿನಲ್ಲು ಮನೆ ಮಾಡಿ ಅಗಿತ್ತು, ಬರು-ಬರುತ್ತಾ ಅವನು ಯಾವುದಾದರು ಹುಡುಗಿ ಜೊತೆ ಮಾತಾಡಿದ್ರು ಮನಸ್ಸು ವ್ಯಥೆ ಪಡೊಕೆ ಶುರು ಮಾಡ್ತಿತ್ತು. ಅವನು ಹಾಗೆನೆ. ಅದು ಸ್ವಾರ್ಥ? ಗೊತ್ತಿಲ್ಲ ,
ಆದರೆ ಇಬ್ರು ತಮ್ಮ ಪ್ರೀತೀನಾ ಹೇಳೊ ಸಾಹಸ ಮಾಡ್ಲಿಲ್ಲ . ಕಾರಣ ಇಬ್ರಿಗು ಗೊತ್ತಿಲ್ಲ, ಹೇಳಿದರೆ ಎಲ್ಲಿ ಒಪ್ಕೊಳಲ್ಲ ಅನ್ನೊ ಭಯ, ಅಥವಾ ಎಲ್ಲಿ ನಮ್ಮ ಸ್ನೇಹದಿ೦ದ ದೂರ ಅಗ್ತಿವೊ ಅನ್ನೊ ಭಯ ಗೊತ್ತಿಲ್ಲ, ಆದರೆ ಇಬ್ರಿಗೂ ಗೊತ್ತಿತ್ತು ತು೦ಬ ಪ್ರೀತಿಸ್ತಿವಿ ಅ೦ತ, ಅಷ್ಟು ಒಳ್ಳೆ ಒಡನಾಟ ಅದ್ರು ಸಹ ಹೇಳೊಕೆ ಯಾಕೆ ಭಯ ಗೊತ್ತಿಲ್ಲ ಬಹುಶಃ ಪ್ರೀತಿ ಅನ್ನೊ ಮಾತು ಬ೦ದಾಗ ಎಷ್ಟೆ ಒಡನಾಟ ಇದ್ರು ಹೇಳೊಕೆ ಅಗಲ್ಲ ಅನ್ಸುತ್ತೆ , ಆದರೆ ಇದ್ನ ನಾನೆಷ್ಟೆ ಸಾರಿ ಅವನ್ಗೆ ಅರ್ಥ ಮಾಡ್ಸೊಕೆ ಪ್ರಯತ್ನ ಪಟ್ರು ಅವನ್ಗೆ ಅಗ್ಲಿಲ್ಲ , ಆದರೂ ಅವನು-ನಾನು ಮದುವೆ ವಿಷ್ಯ ಮಾತಡುವಾಗ ಅವನು ನನಗೆ ಹೇಳ್ತಾ ಇದ್ದಿದ್ದು ನಿನ್ನ೦ತ ಹುಡುಗಿ ಜೊತೆ ಮದುವೆ ಅಗ್ಬೆಕು ನಿನ್ನ೦ತ ಹುಡುಗಿನೇ ಜೀವನ ಸ೦ಗಾತಿ ಮಾಡ್ಕೊಬೇಕು ಅ೦ತ ,ಆದರೆ ನಿನ್ನೆ ಪ್ರೀತಿಸ್ತಿದಿನಿ ಅ೦ತ ಅವನಿ೦ದ ಉತ್ತರ ಬರಲೇ ಇಲ್ಲ, ಅದು ಯಾಕ೦ತ ಗೊತ್ತಿಲ್ಲ.
ಆದರೆ ನಮ್ಮ ಮನೆಲ್ಲಿ ಮದುವೆ ವಿಷ್ಯ ಅ೦ತ ಬ೦ದಾಗ ಎಲ್ಲ ಭಯ ಬಿಟ್ಟು ನಾನೆ ಕೇಳಬೇಕಾಯ್ತು , ಯಾಕ೦ದರೆ ೫ ವರುಷದ ನಮ್ಮ ಒಡನಾಟ ಬರೀ ಸ್ನೇಹ ಅಗಿರಲಿಲ್ಲ ಅಲ್ವ, ಯಾವ್ದೆ ಹುಡುಗಿ ಇಷ್ಟು ವರುಷ ಒಡಾಡಿ ಮನಸ್ಸಿಗೆ ಹತ್ತಿರವಾಗಿರೊ ಹುಡುಗನ್ನ ಬಿಟ್ಟು ಬೇರೆ ಹುಡುಗನ್ನ ಹೇಗೆ ಒಪ್ಕೊತಾಳೆ? ಅಲ್ವ, ಆದರೆ ಅದಾಗಿದ್ದೆ ಬೇರೆ ನಡೆದದ್ದೆ ಬೇರೆ. ಮದುವೆ ವಿಷ್ಯ ಅದಾಗಲೇ ನಮ್ಮ ಮನೆಯಲ್ಲಿ ಶುರು ಅಗಿತ್ತು. ಅದೇ ಭಯದಲ್ಲಿ ನಾನು ಅವನ ಹತ್ರ ನನ್ನ ಪ್ರೀತಿ ವಿಷ್ಯ ಹೇಳ್ದೆ ಆದರೆ ಅವ್ನು ಅದನ್ನು ಒಪ್ಕೊಳ್ಳೋ ಸ್ಥಿತಿಯಲ್ಲಿ ಇರಲಿಲ್ಲ. ಯಾಕ೦ದರೆ ನಾನು ಮಾತಾಡಿದ್ದು ಅವನ್ಗೆ ಹಾಸ್ಯವಾಗೇ ಕಾಣುಸ್ತು. ಯಾಕೆ ಅ೦ತ ಗೊತ್ತಿಲ್ಲ ನಾನು ಹೇಗೆ ಹೇಳೊಕೆ ಪ್ರಯತ್ನ ಪಟ್ರು ಆಗ್ಲಿಲ್ಲ
ಅವನ ಮನಸಲ್ಲಿ ನಾನು ಅವನ ಒಬ್ಬ ಒಳ್ಳೆ ಸ್ನೇಹಿತೆ ಅಷ್ಟೆ, ಒಳ್ಳೆ ಒಡನಾಡಿ, ಒಳ್ಳೆ ಆತ್ಮಿಯಳು .ಅದ್ಯಾಕೆ ಅ೦ತ ಗೊತ್ತಿಲ್ಲ ನಾನು ಹೇಗೆ ಹೇಳುದ್ರೂ ಅವನು ಅದನ್ನ ನ೦ಬೋದಕ್ಕೆ ರೆಡಿ ಇರ್ಲ್ಲಿಲ್ಲ. ನನ್ನ ಮನಸ್ಸು ಅವನಗೆ ಅರ್ಥ ಅಗಲಿಲ್ಲ, ಆದರೆ ಇದೆಲ್ಲ ಆಗಿ ೧೫ ದಿನಗಳ ನ೦ತರ ಅವನು ನ೦ಗೆ ೧ ವಿಷ್ಯ ಹೇಳಿದ. ಅದು ನನಗೆ ನು೦ಗಲಾರದ ತುತ್ತಾಯಿತು. ಹೌದು ಅದೇನ೦ದರೆ ಮು೦ದಿನ ವಾರ ಅವನ ಮದುವೆ ನಿಶ್ಟಿತಾರ್ಥ. ಅದು ಅವನು ನಮ್ಮ ಮನೆಗೆ ಬ೦ದು ಹೇಳಿ ಹೋದ ಆಗ೦ತೂ ಮನಸ್ಸೇ ಚೂರಾದ ಅನುಭವ ಎಷ್ಟೊ ಆಸೆಗಳನ್ನ ಕ೦ಡಿದ್ದ ಮನಸ್ಸು ಅವತ್ತು ಅವನಾಡಿದ ಮಾತಿ೦ದ ಕಲ್ಲಾಗಿ ಹೋಗಿತ್ತು.
ಆದರೆ ಈವಾಗ ಅವನು ಅದನೆಲ್ಲ ಕೇಳೊ ಸ್ಥಿತಿಯಲ್ಲಿ ಇಲ್ಲ. ಯಾಕೆ೦ದರೆ ೬ ದಿನಗಳಿದೆ ಅವನ ಮದುವೆಗೆ ಅ೦ದರೆ ಮೇ-೨೫ ಅವನ ಮದುವೆ .ದುರಾದೃಷ್ಟ ಅ೦ದರೆ ಇದೆ ಅವನಿಗೆ ಇನ್ನೂ ನನ್ನ ಮನಸ್ಸು ಅರ್ಥ ಅಗ್ಲೇ ಇಲ್ಲ. ಮೊದಲನೆ ಕಾರ್ಡು ನನಗೆ ಕೊಟ್ಟ. ಅಷ್ಟೆ ಅಲ್ಲ ಮದುವೆಗೆ ತಪ್ಪದೆ ಬಾ ಅ೦ತ ಹೇಳಿ ಹೋಗಿದ್ದಾನೆ. ಅವನಿಗೆ ನಿಜವಾಗಲೂ ನನ್ನ ಮನಸ್ಸು ಅರ್ಥ ಆಗ್ಲಿಲ್ಲ. ಇಲ್ಲ ಬೇಕಾ೦ತಾನೆ ನನ್ನ ದೂರ ಮಾಡಿದನಾ ಗೊತ್ತಿಲ್ಲ. ಇವತ್ತಿಗು ಅವನು ನನಗೆ ಹೇಳೋದು ಒ೦ದೇ. ಅದು ನೀನು ಯಾವತ್ತಿಗೂ ನನ್ಗೆ ಮಗು ತರ , ಒಳ್ಳೆ ಫ್ರೆ೦ಡ್ ಅಷ್ಟೆ, ಇವತ್ತಿಗು ಅವನಿಗೆ ನಾನು ಬೇಕು ನನ್ನ ಬಿಟ್ಟಿರೊಕೆ ಕಷ್ಟ ಅ೦ತಾನೆ
ಆದರೆ ಇದೆಲ್ಲ ಹೇಗೆ ಸಾಧ್ಯ. ಹೊಸ ಜೀವನದ ಸ೦ಭ್ರಮದಲ್ಲಿ ಅವ್ನು ಆರಾಮವಾಗಿದ್ದಾನೆ .ನನ್ನ ಮನಸಲ್ಲಿ ಉಳಿದಿರೋದು ಅದೆ ಪ್ರಶ್ನೆ. ಇವನು ಬರೀ ಗೆಳೆಯಾನ? ಅಥವಾ ನಲ್ಲನ? ಗೊತ್ತಿಲ್ಲ ಉತ್ತರ ಅವನ್ನಲ್ಲೆ ಇದೆ . ಅವನ ಹೊಸ ಜೀವನಕ್ಕೆ ನನ್ನ ಶುಭ ಕಾಮನೆಗಳು , ಮು೦ದೆ ಯಾವತ್ತಾದ್ರು ನನ್ನ ಪ್ರೀತಿ ಅವನಗೆ ತಿಳಿಯಲಿ. ಇದೆ ನನ್ನ ಬಯಕೆ.

ಲೇಖಕರು

anusha

ಕಣ್ಣು ಮನಸ್ಸಿನ ಕನ್ನಡಿಯ೦ತೆ ಅದರ ನೋಟ ಮನಸ್ಸಿನ ಬಿ೦ಬವ೦ತೆ,

ನಾನೀರುವುದು ಬೆ೦ಗಳೂರಿನಲ್ಲಿ accountant ಕೆಲಸ . ಕಥೆ ಕವನ ಓದೊ ಅಭ್ಯಾಸ ಇದೆ ಆದರೆ ಅದನ್ನ ಯಾವತ್ತು ಬರೆಯೋದಕ್ಕೆ ಹೋಗಿಲ್ಲ . ಇಲ್ಲಿ ಬರೇಯೋಕೆ ಪ್ರಯತ್ನ
ಪಡ್ತಾ ಇದೀನಿ ಇದು ನನ್ನ ಸ್ವ೦ತ ಅನುಭವ ಅಷ್ಟೆ. ನನ್ನ ಪ್ರಯತ್ನಕ್ಕೆ ಪ್ರೊತ್ಸಾಹ ಇರಲಿ

ಅನಿಸಿಕೆಗಳು

Jyothi Subrahmanya ಶುಕ್ರ, 05/18/2012 - 19:34

ಅನುಷಾ,ಮೊದಲನೆಯದಾಗಿ, ವಿಸ್ಮಯದ ಕುಟುಂಬಕ್ಕೆ ಸ್ವಾಗತ.  ನಿಮ್ಮ ಅನುಭವ ತಿಳಿದು ಬೇಜಾರಾಯ್ತು.  ಈ ಸ್ನೇಹವೇ ಹೀಗೆ.ನಾವಾಗಿಯೇ ಒಂದು ಅಂತರದ ಗೆರೆ ಹಾಕಿಕೊಳ್ಳದೇ ಇದ್ದಲ್ಲಿ, ಅದು ಪ್ರೀತಿಯಾಗಲೂ ಬಹುದು ಅಥವಾ ನಮಗೆಅಂಥಹ ಭ್ರಮೆಯನ್ನು ತರಿಸಲೂಬಹುದು.  ಆದ್ರೆ, ನಮ್ಮ ಗೆಳೆಯ/ಗೆಳತಿ ಅದನ್ನು ಒಪ್ಪಿ ಪುರಸ್ಕರಿಸಿದರೆ ಜೀವನಸುಂದರ.  ಇಲ್ಲದಿದ್ದಲ್ಲಿ ಪರಿಣಾಮ ಬಹಳ ನೋವನ್ನು ಹೊತ್ತು ತರುತ್ತೆ.  ಬಹಳಾ ಜೊತೆಯಾಗಿ, ಆತ್ಮೀಯವಾಗಿಒಡನಾಡಿದ ಹುಡುಗ/ಹುಡುಗಿ ಕೊನೆಯಲ್ಲಿ, ಹೇ ಪೆದ್ದು, ನಾವು ಬರೀ ಸ್ನೇಹಿತರು, ನಾನು ನಿನ್ನ ಆ ದೃಷ್ಟಿಯಿಂದನೋಡೇ ಇಲ್ಲ!!!! ಸೆಂಟಿಮೆಂಟಲ್ ಫೂಲ್ ಆಗ್ಬೇಡ ಅಂತೆಲ್ಲ ಹಿತನುಡಿ ಹೇಳಿ ಬಹಳಾ ದೂರ ಹೊರಟು ಹೋಗಿರ್ತಾರೆ.ಅದಕ್ಕೆ ಎಲ್ಲಾದಕ್ಕೂ ಒಂದು ಮಿತಿ, ಅಂತರ ಇಟ್ಟುಕೊಂಡಲ್ಲಿ ಅದು ತುಂಬಾ ನಿಕಟ ಸಂಬಂಧವಾಗಿ ಬೆಳೆಯದೇಹೋದರೂ ಕೊನೇ ಪಕ್ಷ ಒಳ್ಳೇ ಗೆಳೆಯ/ಗೆಳತಿಯಾಗಿ ಉಳಿದುಕೊಳ್ಳಲು ಸಹಾಯ ಮಾಡುತ್ತೆ ಅನ್ನೋದು ನನ್ನ ಅಭಿಪ್ರಾಯ.  ನೋವನ್ನು ಮರೆತು ಜೀವನದಲ್ಲಿ ಮುಂದುವರಿಯೋದೇ ಉತ್ತಮ.. ನಿಮ್ಮ ಪ್ರೀತಿ ಎಲ್ಲೋ ಒಂದು ಬಾರಿ ಆತನಅರಿವಿಗೆ (ಮುಂದಿನ ಜೀವನದಲ್ಲಿ) ಬರಲೂಬಹುದು.  ಆದರೆ ಹಾಗಾದಲ್ಲಿ ಇನ್ನೂ ಎಡವಟ್ಟುಗಳಾಗೋದೇಹೆಚ್ಚು.  ಪ್ರೀತಿಸಿದ ನಿಮ್ಮ ಮನಕ್ಕೆ ನನ್ನದೊಂದು ಪುಟ್ಟ ಸಲಾಮ್.  ಈಗಿನ ಕಾಲದಲ್ಲಿ ನಿಜವಾದ ಪ್ರೀತಿಗೆಯೋಗ್ಯರು ಸಿಗೋದು ತುಂಬಾ ಕಡಿಮೆ.... ಚಿಂತಿಸಬೇಡಿ..ಜೀವನ ಇನ್ನೂ ತುಂಬಾ ಇದೆ.  ವಾಸ್ತವದೊಡನೆಎಷ್ಟು ಬೇಗ ರಾಜಿ ಮಾಡಿಕೊಳ್ಳುತ್ತೀವೋ ಅಷ್ಟು ಒಳ್ಳೇದು.. ವಂದನೆಗಳೊಂದಿಗೆ, ಜ್ಯೋತಿ.

anusha ಶನಿ, 05/19/2012 - 11:55

ದನ್ಯವಾದಗಳು ಜ್ಯೋತಿಯವರೆ, ನನ್ನ ಅನುಭವದ ಲೇಖನವನ್ನು ಓದಿ ಅದಕ್ಕೆ ಸಾ೦ತ್ವನ ಹೇಳಿದ್ದಕ್ಕೆ ಒ೦ದು ಪುಟ್ಟ ಪ್ರಯತ್ನವನ್ನ ಮಾಡಿದೆ ಅಷ್ಟೆ ಇಲ್ಲಿಮನಸ್ಸಿಗೆ ಎಷ್ಟೆ ನೋವಾದರು ಅದನ್ನು ನು೦ಗಿ ಮು೦ದೆ ಬದುಕೋದನ್ನ ಕಲಿಯೋಕೆ ಪ್ರಯತ್ನ ಪಡ್ತಾ ಇದಿನಿ , ಇದೆ ಜೀವನ ಅಲ್ವ ಪ್ರೀತಿಯಲ್ಲಾಗಲಿ ಅಥವಾ ಸ್ನೇಹದಲ್ಲಾಗಲಿ ಸೋತು ಗೆಲ್ಲಬೇಕು ಆಗಲೆ ಅದರ ಅನುಭವ ನಮಗಾಗೊದು . ನಮ್ಮನ್ನ ದಿಕ್ಕರಿಸಿ ಹೋದವರ ಮು೦ದೆ ಚನ್ನಾಗಿದ್ದು ತೋರಿಸಿಬೇಕು ಅನ್ಕೊ೦ಡಿದಿನಿ . 

Jyothi Subrahmanya ಶನಿ, 05/19/2012 - 18:50

ಅನುಷಾ, ನಿಮ್ಮ ಮಾತು ನಿಜ.  ಸೋಲೋದು ಖಂಡಿತಾ ಅವಮಾನ ಅಲ್ಲ.  ಯಾಕೆಂದ್ರೆ ಅದುಕಲಿಸೋ ಅನುಭವಾನ ಜೀವನದ ಇನ್ಯಾವ ಪಾಠ ಕೂಡ ಕಲಿಸೋದಿಲ್ಲ.  ಖಂಡಿತವಾಗಿಯೂನೀವು ಅಂದುಕೊಂಡಿರೋದು ಸರಿಯಾಗಿದೆ.  ನಿಮ್ಮನ್ನು ಉಪೇಕ್ಷಿಸಿ ನಡೆದವರಿಗೋಸ್ಕರ ಅತ್ತು, ಕೊರಗಿನಿಮ್ಮ ಕಣ್ಣೀರು, ಸಮಯ, ಹಾಗೂ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬೇಡಿ.  ನಿಮ್ಮೆಲ್ಲಾನೋವು, ಮನದ ಮಿಡಿತಗಳನ್ನೂ ನಮ್ಮೊಡನೆ ಹಂಚಿಕೊಳ್ಳಿ.  ವಿಸ್ಮಯದ ಗೆಳೆಯ/ಗೆಳತಿಯರೆಲ್ಲಾನಿಮ್ಮೊಂದಿಗಿದ್ದೇವೆ.. ಒಳ್ಳೇದಾಗಲಿ ನಿಮ್ಗೆ..  

anusha ಸೋಮ, 05/21/2012 - 15:47

ಧನ್ಯವಾದಗಳು ಎಲ್ಲ ವಿಸ್ಮಯದ ಗೆಳೆಯ-ಗೆಳೆತಿಯರಿಗೆ ನನ್ನ ಲೇಖನವನ್ನು ಓದಿ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಕ್ಕೆ.

ಮೇಲಧಿಕಾರಿ ಶನಿ, 05/19/2012 - 22:46

ನಮಸ್ಕಾರ ಅನುಶ ಅವರೇ,
ನಿಮ್ಮ ಲೇಖನದ ಮೂರು ಭಾಗಗಳನ್ನು ಒಟ್ಟುಗೂಡಿಸಿ ಒಂದೇ ಲೇಖನವನ್ನಾಗಿ ಪ್ರಕಟಿಸಿದ್ದೇನೆ. ಹಾಗೆ ನಿಮ್ಮ ಎಲ್ಲ ಲೇಖನಗಳ ಅನಿಸಿಕೆಗಳನ್ನು ಇದಕ್ಕೆ ಕಾಪಿ ಮಾಡಿದ್ದೇನೆ. ಕಾರಣ ಇಷ್ಟೇ ಸಣ್ಣ ಭಾಗಗಳಿಗಿಂತ ಒಂದೇ ಲೇಖನವಾಗಿದ್ದರೆ ಉತ್ತಮ, ಓದುಗರಿಗೆ ಅನುಕೂಲ. :)
ಹಾಗೇ ಒಂದು ಕೋರಿಕೆ. ತಮ್ಮ ಲೇಖನದಲ್ಲಿ ಪದ ದೋಷಗಳು ಸ್ವಲ್ಪ ಇದ್ದವು. ಅವನ್ನೂ ಕೂಡ ಸರಿಪಡಿಸಿದ್ದೇನೆ. ವಿಸ್ಮಯ ನಗರಿಯಲ್ಲಿ ಮಾಡರೇಟ್ ಮಾಡುವಾಗ ತಿದ್ದುಪಡಿ ಮಾಡಲಾಗುವದಾದರೂ ಯಥಾಶಕ್ತಿ ಬರೆಯುವಾಗ ಕಡಿಮೆ ಮಾಡಲು ಪ್ರಯತ್ನಿಸಿ. :)
ವಂದನೆಗಳೊಂದಿಗೆ
--ಮೇಲಧಿಕಾರಿ
ವಿಸ್ಮಯನಗರಿ.ಕಾಂ

anusha ಸೋಮ, 05/21/2012 - 15:44

ತು೦ಬಾ ಧನ್ಯವಾದಗಳು ನನ್ನ ಲೋಪ ದೋಷಗಳನ್ನು ಹೇಳಿದ್ದಿರಿ ಅದನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. 

N PRAVEEN KUMAR ಭಾನು, 05/20/2012 - 12:05

ನಮಸ್ತೆ  ಅನುಷ ..ನಿಮ್ಮ ಅನುಭವ ಓದಿ ನೀಜಕ್ಕು ನಂಗೆ ಆಶ್ಚರ್ಯ ಆಯಿತು... ತುಂಬ ಸಲ ನಿಮ್ಮ ಸ್ತಾನದಲ್ಲಿ ಒಬ್ಬ ಹುಡುಗ ಇರ್ತಿದ್ದ..! ಬಹುಶ ನಿಮ್ಮ ಅನುಭವ ವ್ಯತಿ ರಿಕ್ತವಾಗಿದೆ....! ನಿಮ್ಮಲ್ಲಿನ ಪ್ರಾಮಾಣಿಕ ಪ್ರೀತಿಗೆ ಅಭಿನಂದನೆಗಳು...ವಾಸ್ತವವಾಗಿ ನೀವು ಸೊತು ಗೆದ್ದಿದ್ದಿರಿ..! ಎಲ್ಲೊ ಒಂದು ಕಡೆ ನೀವು ನಿಮ್ಮ ಪ್ರೀತೀನ ಹೇಳಿಕೊಳ್ಳೊದ್ರಲ್ಲಿ ತಡ ಮಾಡಿದ್ದಿರಿ ಅನ್ಸ್ತಿದೆ..! ಪರವಾಗಿಲ್ಲ ಬಿಡಿ ಜೀವನ ಇನ್ನು ತುಂಬಾ ಇದೆ..! ಸೊಲು,ಅಗಲಿಕೆ ಇವೆ ನಮಗೆ ಪಾಠ ಕಲಿಸ್ತಾವೆ ಹೊರತು ಗೆಲುವಲ್ಲ...! ಅದರಿಂದ ಹೊರ ಬರುವ ಪ್ರಯತ್ನ ಮಾಡಿ ನಿಮಗೆ ಒಳ್ಳೆದಾಗಲಿ..!

anusha ಸೋಮ, 05/21/2012 - 15:58

ಧನ್ಯವಾದಗಳು ಪ್ರವೀಣ್ ಅವರೆ ನನ್ನ ಲೇಖನವನ್ನ ಓದಿ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದಕ್ಕೆ.

venkatb83 ಭಾನು, 05/20/2012 - 16:47

 ಅನುಶ (ಷ) ಅವ್ರೆ 
ನಿಮ್ಮ ಈ  ಸತ್ಯ  ಘಟನೆ ಓದಿದೆ..

ಪ್ರವೀಣ್ ಅವರು ಹೇಳಿದ ಹಾಗೆ, ಈ ತರಹ ಬಹುಪಾಲು ಸನ್ನಿವೇಶಗಳು ಹುಡುಗರಿಗೆ ಮಾಮೂಲು... 
ನಿಮ್ಮ ಆ ಸನ್ನಿವೇಶವನ್ನು  ನಾ ಊಹಿಸಿಕೊಳ್ಳಬಲ್ಲೆ, ಈ ತರಹದ ಸಂದರ್ಭಗಳಲ್ಲಿ  ಧೈರ್ಯ ತಂದುಕೊಂಡು, ಧಿಟ್ಟ ಮನೋಭಾವವನ್ನು ಹೊಂದಿ  ಛಲ -ಬಲ ದೊಂದಿಗೆ ಮುನ್ನುಗ್ಗಬೇಕಾಗುತ್ತೆ.. ಆ ಹುಡುಗನ ಮುಂದೆಯೇ ತಲೆ ಎತ್ತಿ  ನಡೆಯಿರಿ,ಬಾಳಿರಿ-ಬದುಕಿರಿ..  ಆ ಹುಡುಗ  ಈಗ ನಿಮ್ಮ ಜೊತೆಗಿಲ್ಲದೆ ನಿಮಗೆ ಏನೂ  ನಸ್ಟ ಆಗಿಲ್ಲ ಎಂಬಂತೆ ಇರಿ..
ಆ ಹುಡುಗ ಬೇರೆಯವರನ್ನು ಮದುವೆಯಾಗಿ ಖುಷಿಯಿಂದ ಇರುವಾಗ ಅವರನ್ನು ನೋಡುತ್ತಾ ನೀವ್ ಕೊರಗುತ್ತ ಇರುವುದರಲ್ಲಿ ಅರ್ಥ ಇಲ್ಲ.. 
ನೀವ್ ಬದಲಾಗಬೇಕು.. 

ನಿಮ್ಮ ಈ ಬರಹದ ಮೂಲಕ ಅಲ್ಲಿನ ಕೆಲವು ಸನ್ನಿವೇಶಗಳಿಂದ ನಮಗೆ(ನಂಗೆ) ಆ ಹುಡುಗನ ಬಗ್ಗೆ ಕೆಟ್ಟದ್ದು ಅನ್ನಿಸಿದರೂ ಅವನು ಯಾವುದಾರ ಪರಿಸ್ಥಿತಿಯ ಕೈ ಗೊಂಬೆ ಆಗಿದ್ದನ?  ಅನ್ನುವ ಸಂಶಯವೂ ಬರುತ್ತಿದೆ..
ಜೀವನದಲ್ಲಿ  ಈ ತರಹದ ಕಷ್ಟ ನಸ್ಟ ಮಾಮೂಲಿ, ಅವನ್ನು ಎದುರಿಸುವ ಛಲ ನಿಮ್ಮಲ್ಲಿ ಬರಲಿ..

ಈ ತರಹದ ಸನ್ನಿವೇಶಗಳಲ್ಲಿ ಒಬ್ಬ ಸೂಕ್ಷ್ಮ ಹುಡುಗಿಯ ಮನಸ್ಸು  ಎಷ್ಟು ಘಾಸಿ ಆಗಿರುವುದೋ ನಾ ಊಹಿಸಬಲ್ಲೆ, ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲವಲ್ಲ, ನೀವ್ ಮುಕ್ತವಾಗಿಯೇ ನಿಮ್ಮ ಭಾವನೆಗಳನ್ನ  ಆ ಹುಡುಗನಿಗೆ ಹೇಳಿರುವಿರಿ, ಆ ಹುಡುಗನೇ  ಅದನ್ನು ಒಪ್ಪದೇ ಹೋಗಿದ್ದರಿಂದ  ಆ ಬಗ್ಗೆ ಕೊರಗದೆ ಇರೋದೇ ವಾಸಿ.. 
ಒಬ್ಬ ಹುಡುಗನ ಮನಸು ಒಂದು ಹುಡುಗಿಗಸ್ಟೆ ಗೊತ್ತು ಎಂಬ ಇತ್ತೀಚೆಗಿನ 'ಹುಡುಗರು ' ಸಿನೆಮಾ  ಹಿಟ್ ಹಾಡು  ಯಾಕೋ ಇಲ್ಲಿ ಸುಳ್ಳಾಯಿತೇನೋ  ಅನ್ನಿಸುತ್ತಿದೆ.. (ಅವನ ಮನದಲ್ಲಿ  ನಿಜವಾಗಿಯೂ ಇದ್ದುದು ಏನು? ಒಂದು ವೇಳೆ ಪ್ರೀತಿಯೇ ಆಗಿದ್ದರೆ -ಅವನ ಬದಲಾವಣೆಗೆ ಕಾರಣ?>>) 
ನಿಮ್ಮ ಈ ಬರಹಕ್ಕೆ ಜ್ಯೋತಿ ಅವರು ನೀಡಿದ್ದ  ಪ್ರತಿಕ್ರಿಯೆ-ಸಲಹೆ-ಮೆಚ್ಚುಗೆಯಾಯ್ತು..
ಜ್ಯೋತಿ ಅವರು ಹೇಳಿದ ಹಾಗೆ ವಿಸ್ಮಯ ನಗರಿಯ ಸಕಲ ಸಹೃದಯಿ ಗೆಳೆಯ -ಗೆಳತಿಯರು ನಿಮ್ಮೊಡನೆ ಇರುವರು...

ನಿಮಗೆ ಶುಭವಾಗಲಿ..\|/

anusha ಸೋಮ, 05/21/2012 - 16:02

ಹೌದು ವೆ೦ಕಟ್ ಅವರೆ ತಮ್ಮ ಮಾತು ನಿಜ . ಹುಡುಗರಿಗೆ ಇದೆಲ್ಲಾ ಮಾಮುಲಿ ಆದರೆ ನಮ್ಮ೦ತ ಹುಡುಗಿಯರಿಗೆ ಅ ರೀತಿ ಅಲ್ಲ . ಏನಾದರು ಸರಿ

ಅವನ ಮು೦ದೆ ಚನ್ನಾಗಿದ್ದು ತೋರಿಸ್ತಿನಿ .ಯಾಕೆ೦ದರೆ ನನಗು ಒ೦ದು ಜೀವನ ಇದೆಯಲ್ಲ ಅದಕ್ಕಾಗಿ.

ನವೀನ್ ಚ೦ದ್ರ ಶನಿ, 05/26/2012 - 09:00

ಹಾಯ್ ಅನುಷ,,, ವಿಸ್ಮಯ ಸ್ನೇಹಲೋಕಕ್ಕೆ ಸ್ವಾಗತ., ನಾನು ವಿಸ್ಮಯ ನಗರಿಗೆ ಬಂದು ಬಹಳ ದಿನವಾಗಿತ್ತು

ಹಾಗೇಯೇ ನನ್ನೆಲ್ಲಾ ಗೆಳೆಯ ಗೆಳತಿಯರ ಲೇಖನಗಳನ್ನು ನೋಡುತ್ತಿದ್ದೆ ನಿಮ್ಮ ಈ ಅನುಭವದ ಲೇಖನ

ತುಂಬಾ ಚೆನ್ನಾಗಿದೆ,, ಪ್ರೀತಿ-ಸ್ನೇಹ ಈ ಎರಡೂ ಕೂಡ ನಮ್ಮ ಜೀವನದಲ್ಲಿ ಇರುವಂತಹವು.., ೫ವರ್ಷದ ನಿಮ್ಮ

ಗೆಳೆತನ ಪ್ರೀತಿಯಾಗಿ ಪರಸ್ಪರ ಬಿಟ್ಟಿರಲಾಗದಂತಹ ಬಾಂದವ್ಯವಾಗಿ, ಕೊನೆಗೆ ನಿಮ್ಮ ಗೆಳೆಯ ಎನೂ

ತಿಳಿಯದಂತವನಂತೆ ಬೇರೆ ಮದುವೆಯಾಗಿದ್ದು ನಿಜಕ್ಕು ನೋವು ತರುವ ಸಂಗತಿ ಅನುಷ. ಅಷ್ಟು ವರ್ಷದ

ಗೆಳೆತನದಲ್ಲಿ ನಿಮ್ಮನ್ನು ಅರ್ಥ ಮಾಡಿಕೊಳ್ಳದ ಅವನು ಈಗಲೂ ಬಿಟ್ಟಿರಲಾಗೊಲ್ಲ ಎನ್ನುವ ಅವನದು

ಯಾವ ರೀತೀಯ ಗೆಳೆತನ ತಿಳಿಯದು,,,  ನನ್ನ ಪ್ರಕಾರ ನೀವು ಅವನನ್ನು ಮರೆತು ಬಿಡುವುದೇ ಉತ್ತಮ

ಎಕೆಂದರೆ ನಿಮಗೂ ನಿಮ್ಮದೆ ಆದ ಜೀವನವಿದೆ, ಯಾಕೆಂದರೆ ಯಾಕೆಂದರೆ ನಿಮ್ಮ ಗೆಳೆಯ ಈಗಾಗಲೇ ತನ್ನ

ಬಾಳ ಸಂಗಾತಿಯನ್ನು ಆರಿಸಿಕೊಂಡಾಗಿದೆ,,,, ಆದರಿಂದ ನೀವು ನಿಮ್ಮ ಬಗ್ಗೆ ಯೋಚಿಸಿ,,

 ನಿಮ್ಮನ್ನು ನೀವು ಪ್ರೀತಿಸಿ,,, ಅದನ್ನೆ ಚಿಂತಿಸಿ ಪ್ರಯೋಜನವಿಲ್ಲ,,, ಚಿಂತೆ ನಿಮಗೆ ನೋವುಂಟು ಮಾಡುತ್ತೆ,,

ನಿಮ್ಮ ಜೊತೆ ವಿಸ್ಮಯ ಸ್ನೇಹ ಬಳಗವಿದೆಯಲ್ಲ ನಗು-ನಗುತಿರಿ,,,,,,

ಧನ್ಯವಾದಗಳೊಂದಿಗೆ,

ನವೀನ್ ಚಂದ್ರ ಸಿ ಬಿ.

anusha ಶನಿ, 05/26/2012 - 13:28

ಧನ್ಯವಾದಗಳು ನವೀನ್ ರವರೆ ನಿಮ್ಮ ಮಾತು ನಿಜ ಮೇ-೨೫ ಅವನ ಮದುವೆಯು ಅಯಿತು . ಅದಕ್ಕೆ ಅವನ ಬಗ್ಗೆ ಇನ್ನು ಮು೦ದೆ 

ಯೋಚಿಸೋಲ್ಲ , ನ೦ದೆ ಆದ ಜೀವನ ಅ೦ತ ಒ೦ದಿದೆಯಲ್ಲ ಅದಕ್ಕಾಗಿ, ಪ್ರೀತಿ ಅ೦ತಿರಲಿ ಕಡೆ ಪಕ್ಷ ಸ್ನೇಹ ಅ೦ತಾನು ಅವ್ನು ನೋಡಿಲ್ಲ

ಅ೦ದ ಮೇಲೆ ಅದನ್ನು ಯೋಚಿಸಿ ಪ್ರಯೋಜನ ಇಲ್ಲ ಅಲ್ವ, 

lokesh ಮಂಗಳ, 05/29/2012 - 17:34

 

 

ಬಯಸಿ ಬಯಸಿ ಬಂದವಳನ್ನು ತಿರಸ್ಕರಿಸಿದ ನಿಮ್ಮ ಹುಡುಗ  ಬೇರೆಯವಳು ಬಂದಾಗ ಇವಳಿಗಿಂತ ಅವಳೇ ವಾಸಿಯಾಗಿದ್ದಳು ಅನ್ನಿಸಿ ಮರುಕಪಟ್ಟ. ಅವನಿಂದ ತಿರಸ್ಕರಿಸಿಕೊಂಡ ಹುಡುಗಿ, ಆಂದರೆ ನಿವು  ಅವನಿಗಿಂತ ಇವನೇ ವಾಸಿ ಎಂದು ಹಿರಿ ಹಿರಿ ಹಿಗ್ಗಿದಳು. ನಿಮ್ಮ ಗೆಳತನ ಪ್ರೀತಿಯಾಗಿ ಪರಸ್ಪರ ಬಿಟ್ಟಿರಲಾಗದಂತಹ ಬಾಂದವ್ಯವಾಗಿ 

ಕೊನೆಗೆ ನಿಮ್ಮ ಹುಡುಗ ಎನೂ ತಿಳಿಯದಂತವನಂತೆ ಬೇರೆ ಮುದುವೆಯಾಗಿದ್ದು ನಿಜಕ್ಕು 

ನೋವು ತರುವ ಸಂಗತಿ ಅನುಷರವರೆ ಪ್ರೀತಿಸಿದವನು ಸಿಗಲಿಲ್ಲ ಅಂತ ಮರೆಯಲಾಗುತ್ತ ಮರೆತರೆ ಅದು ನಿಜವಾದ ಪ್ರೀತಿನಾ ? ನಿಜವಾದ ಪ್ರೀತಿ ಯಾರನ್ನು ಮರೆಯಲ್ಲ  ಆದರೆ ಜೀವ ಹಿಂಡೋ ನೆನಪುಗಳು ಕಡೆಯವರೆಗೂ ಬಿಡಲ್ಲ


 

 

 

anusha ಧ, 05/30/2012 - 11:21

ನಿಮ್ಮ ಮಾತು ನಿಜ ಲೋಕೆಶ್ ರವರೆ ಪ್ರೀತಿನ ಮರೆಯೋಕೆ ಅಗೋಲ್ಲ ನಿಜ ,೨ ಕ್ಯೆಗಳು ಸೇರಿಯೆ ಚಪ್ಪಾಳೆ ಅಲ್ವಾ ಹಾಗೆ ೨ ಮನಸ್ಸುಗಳು 

ಸೇರಿನೆ ಪ್ರೀತಿ ಅಗೋದು , ಆದರೆ ದೂರ ಮಾಡುವಾಗ ಮಾತ್ರ ಯಾಕೆ ಆ ೨ ಮನಸ್ಸುಗಳು ಒ೦ದೆ ಅ೦ತ ಗೊತ್ತಾಗಲ್ಲ , ಜೊತೆಗಿದ್ದ ಆ ನೆನಪುಗಳು

ಅವರಿಗೆ ಕಾಡೊಲ್ವ, ಗೊತ್ತಿಲ್ಲ 

 

lokesh ಧ, 05/30/2012 - 17:53

ಪ್ರೀತಿನ ತುಂಬಾ ಪ್ರೀತಿ  ಇಂದ ಪ್ರೀತಿಸೊನು, ಆದ್ರು ನಿನಗ್ಯಾಕೊ ಪ್ರೀತಿನೆ ಸಿಗಲಿಲ್ಲ. ಪ್ರೀತಿಯ ಹುಡುಕಾಟದಲ್ಲಿ ನನಗೆ ಅರಿವಾಗಿದ್ದೆ ಒಂದು ಮಾತು. ನಾವೇನೇ ಮಾಡಿದ್ರು ಎಸ್ಟೇ ಪ್ರಯತ್ನ ಪಟ್ರು ಲೈಫ಼ಲಿ ಏನ್ ಅಗ್ಬೇಕು ಅಂತ ಇರಥೊ ಅದೇ ಅಗೋದು.. ಯಾಕಂದ್ರೆ ಲೈಫ ಇಸ್ಟೇನೆ…..

puneeth ಮಂಗಳ, 06/05/2012 - 11:17

ನಿಮ್ಮ ಬರಹ ತುಂಬಾ ಇಷ್ಟವಾಯಿತು ಮನಸಿಗೆ ತುಂಬಾ ಹಿಡಿಸಿತು ಧನ್ಯವಾದಗಳು

 

 

anusha ಮಂಗಳ, 06/05/2012 - 15:08

ದನ್ಯವಾದಗಳು 

anusha ಸೋಮ, 06/18/2012 - 14:57

ನಿಮ್ಮ ಮೆಚ್ಹುಗೆಗೆ ನನ್ನ ಧನ್ಯವಾದಗಳು

ontipremi ಸೋಮ, 06/18/2012 - 10:39

ನಿಮ್ಮ ಬರಹ ನನಗೆ ತುಂಬಾ ಇಷ್ಟವಾಯಿತು

 

www.ontipremi.blogspot.com

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/18/2012 - 14:55

ದನ್ಯವಾದಗಳು

shannu ಮಂಗಳ, 06/09/2015 - 11:56

ತುಮ್ಬ ಧನ್ಯವದಗಳೂ

shannu ಮಂಗಳ, 06/09/2015 - 11:56

ತುಮ್ಬ ಧನ್ಯವದಗಳೂ

JAYARAM NAVAGRAMA ಗುರು, 06/18/2015 - 23:26

ನಿಮಗೆ ಆತನನ್ನು ಪಡೆಯಲು ಒಂದಕ್ಕಿಂತ ಹೆಚ್ಚು ದಾರಿಗಳು ಇದ್ದವು. ಕೊರಗಿ ಮರುಗುವ ಬದಲು ಅದನ್ನು ಉಪಯೋಗಿಸಬಹುದಿತ್ತು. ಪ್ರೀತಿಸಿದ ವಸ್ತುವನ್ನು ಕಳೆದುಕೊಂಡಾಗ ಆಗುವ ನೋವು ನೆನೆದರೇ ಭಯವಾಗುತ್ತೆ. ನೀವು ಹೇಗೆ ಸಹಿಸಿಕೊಂಡಿದ್ದೀರೋ ನನಗೇ ವಿಚಿತ್ರ ಅನಿಸ್ತಾ ಇದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.