Skip to main content

ಸುಳ್ಳುವಾರ್ತೆಗಳು

ಇಂದ shekhargowda
ಬರೆದಿದ್ದುJune 29, 2012
7ಅನಿಸಿಕೆಗಳು

 

ಶೇಶಾಂತ ಸುಳ್ಳುವಾರ್ತೆಗಳಿಗೆ ಸುಸ್ವಾಗತ !

ಓದುತ್ತಿರುವವರು ಶೇಖರ್‌ಅಣ್ಣೇಗೌಡ ಅಲಿಯಾಸ್ ಶೇಖರ್‌ಶಾಂತಾ !!!

ನಮಸ್ಕಾರ,
ಕಿಕ್ಕೇರಿ ಹೋಬ್ಳಿಯಲ್ಲಿರುವ ಚಿನ್ನೇನಹಳ್ಳಿಯೆಂಬ ಗ್ರಾಮದಲ್ಲಿಂದು ನಾಲ್ಕು ಕೋಡಿನ ಕೋಣ ಕಾಣಿಸಿಕೊಂಡಿದ್ದು, ಅಲ್ಲಿನ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಈ ವಿಷಯ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಕೂಡಾ ಭಯಬೀತರಾಗಿದ್ದಾರೆ. ಶೇಖರನು ನಿನ್ನೆ ತನ್ನ ಅತ್ತೆಯ ಊರಾದ ಚಿನ್ನೇನಹಳ್ಳಿಗೆ ಕಾಲುದಾರಿ ಮಾರ್ಗವಾಗಿ ನಡೆದು ಬರುತ್ತಿರುವಾಗ ಈ ನಾಲ್ಕು ಕೋಡಿನ ಕೋಣ ಶೇಖರನನ್ನು ತಿವಿಯಲು ಹೋದಾಗ, ಶೇಖರನು ಅದಕ್ಕೆ ತಿರುಗಿ ತೀವಿದಾಗ ಅದರ ಕೊಡೊಂದು ಮುರಿದು ಕುರೂಪಗೊಂಡಿದೆ, ಅದೀಗ ನ್ಯಾಯಾಲಯದ ಮೆಟ್ಟಿಲು ಹತ್ತಿ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಲಾಯರ್ ಗೊಣ್ಣೆಯಪ್ಪನನ್ನು ಕೇಳಿಕೊಂಡಿದೆ.

 

 

 

ನಿನ್ನೆ ರಾತ್ರಿ ಚೌಡೇನಹಳ್ಳಿಯೆಂಬ ಗ್ರಾಮದಲ್ಲಿ ಸೊಳ್ಳೆಯೊಂದು, ಸೂರಪ್ಪ ಎಂಬವವರ ದೇಹದ ರಕ್ತಕುಡಿದ ಮರುಕ್ಷಣವೇ ತನ್ನ ಆರು ಕಾಲುಗಳನ್ನು ಮೇಲೆ ಮಾಡಿ ತೀರಿಕೊಂಡಿದೆ, ಕಾರಣ ಸೂರಪ್ಪನವರಿಗೆ ಏಡ್ಸ್ ಕಾಯಿಲೆಯಿತ್ತು. ಈ ಸೊಳ್ಳೆಯ ಶವಯಾತ್ರೆಗೆ ಚೌಡೇನಹಳ್ಳಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಆರೋಗ್ಯ ಸಚಿವ ಬದನೆಕಾಯಿ ತುಂಡಪ್ಪನವರು ಸಹ ಹಾಜರಿದ್ದರು, ಪ್ರಧಾನಮಂತ್ರಿ ವಡ್ರಗಪ್ಪೆಯವರು ಶವಯಾತ್ರೆ ಕೈಗೊಳ್ಳಲು ದಿಲ್ಲಿಯಿಂದ ಇಲ್ಲಿಗೆ ಆಗಮಿಸಲು ಕುದುರೆಗಾಡಿ ಇಲ್ಲದ ಕಾರಣ, ಎತ್ತಿನಗಾಡಿಯಲ್ಲಿ ಬರುತ್ತಿದ್ದಾರೆ.

 

ಇಂದು ಮುಂಜಾವ ಹೆಮ್ಮನಹಳ್ಳಿಯಲ್ಲಿ ಕೋಳಿಯೊಂದು ದೀಡಿರನೇ ಕಾಣಿಸಿಕೊಂಡು, ನನ್ನನ್ನು ತಿಂದು ಅರಗಿಸಿಕೊಳ್ಳಿರಿ ಎಂದು ಹೆಮ್ಮನಹಳ್ಳಿ ಜನರಿಗೆ ಸವಾಲಾಕಿದೆ. ಈ ಸವಾಲನ್ನು ಹಗುರವಾಗಿ ತೆಗೆದುಕೊಂಡ ಎಕ್ಕಡಪ್ಪ, ಅ ಕೋಳಿಯನ್ನು ತಿಂದು ಅದನ್ನು ಅರಗಿಸಿಕೊಳ್ಳಲಾಗದೆ, ಅವನಿಗೆ ಹಿಂದೆ-ಮುಂದೆ ಹಾಗೂ ಚಿಕನ್‌ಗುನ್ಯಾ ಕಾಣಿಸಿಕೊಂಡಿದ್ದು, ಯಮಪಾದ ಸೇರಲು ಈಗಲೋ-ಆಗಲೋ ಎಂದು ಸಮಯ ದೂಡುತ್ತಿದ್ದಾನೆ.

 

ಇಂದು, ಮಟ ಮಟ ಮಧ್ಯಾಹ್ನ ತೆಂಡೆಕೆರೆ ಹತ್ತಿರ ಮೈಸೂರಿಗೆ ಹೋಗುತ್ತಿದ ಐರಾವತ ಬಸ್ಸಿಗೆ ರಭಸವಾಗಿ ಬಂದ ಸೊಳ್ಳೆಯೊಂದು ಡಿಕ್ಕಿ ಹೊಡೆದಿದೆ. ಸೊಳ್ಳೆಯು ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಮೂರು ಪಲ್ಟಿ ಹೊಡೆದು ಪಕ್ಕದಲ್ಲಿದ್ದ ತಿಪ್ಪೆಗುಂಡಿಗೆ ಬಿದ್ದಿದೆ, ಅದೃಷ್ಟವಶಾತ್ ಅದರಲ್ಲಿದ್ದ ಜನರಿಗೆ ಯಾವುದೇ ತೊಂದರೆಯಾಗಿಲ್ಲ.

 

ಚಿತ್ರರಂಗದಲ್ಲಿಂದು ಬೆಳಿಗ್ಗೆ ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ದನ್ ನಡುವೆ ಭಯಂಕರ ಜಗಳವಾಗಿ, ಇನ್ನೂ ಮುಂದೆ ನಾವು ಒಟ್ಟಿಗೆ ನಟಿಸುವುದಿಲ್ಲವೆಂದು ಪಣತೊಟ್ಟಿದ್ದಾರೆ.

 

ಇಂದು ಸಂಜೆ ಹೆಲಿಕಾಪ್ಟರ್‌ರೊಂದು ಕೆ.ಆರ್.ಪೇಟೆ ಹತ್ತಿರ ಸೊಳ್ಳೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸೊಳ್ಳೆಯ ಶರೀರವೆಲ್ಲ ಪೂರ್ತಿ ನಜ್ಜುಗುಜ್ಜಾಗಿದೆ. ಇದಕ್ಕೆ ಕಾರಣವೆನೆಂದು ಪೈಲಟ್‌ನನ್ನು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರವಿದು:-
ಪೈಲಟ್: ನಾನು ಮನೆಯಲಿಲ್ಲದ ಸಮಯ ನೋಡಿಕೊಂಡು, ಈ ಸೊಳ್ಳೆಯು ನನ್ನ ಹೆಂಡತಿ ಶರೀರದ ರಕ್ತವನ್ನು ಕುಡಿದು ಕುಡಿದು, ಹಿಡಿಂಬೆ ತರಹ ಇದ್ದ ನನ್ನ ಹೆಂಡತಿಯನ್ನು ವಣಕೆ ಕಡ್ಡಿಯ ತರಹ ಮಾಡಿದೆ. ನಾನು ಅ ಸೊಳ್ಳೆಗೆ ಮೂರು ಬಾರಿ ಎಚ್ಚರಿಸಿದ್ದೆ, ಅದರೆ ಅ ಸೊಳ್ಳೆಯು ನನ್ನ ಮಾತು ಕೇಳದೆ ಅದರ ಕೆಲಸವನ್ನು ಪುನಾರವರ್ತಿಸಿತು. ಇವತ್ತು ನನ್ನ ಅದೃಷ್ಟದಂತೆ ಈ ಸೊಳ್ಳೆಯು ತನ್ನ ಸ್ನೇಹಿತರ ಜೊತೆಗೂಡಿ ಒಂದು ಏಡ್ಸ್ ಹತ್ತಿಸಿಕೊಂಡಿರುವ ಮಹಿಳೆಯ, ದೇಹದ ರಕ್ತವನ್ನು ಕುಡಿದು ಎಂಜಾಯ್ ಮಾಡಿಕೊಂಡು ಅಡ್ಡ ದಾರಿಯಲ್ಲಿ ಬರುತ್ತಿದ್ದಾಗ ಸಮಯ ಸಾಧಿಸಿ ಸೊಳ್ಳೆಗೆ ಗುದ್ದಿ ಸಾಯಿಸಿಬಿಟ್ಟೆ. ಈ ಮಾತು ಕೇಳುತ್ತಲೇ ಸ್ಥಳಕ್ಕೆ ಆಗಮಿಸಿದ ಕೆ. ಆರ್.ಪೇಟೆ ತಾಲ್ಲೋಕಿನ ವರಿಷ್ಠ ಫೋಲೀಸ್ ಅಧಿಕಾರಿ ಮಿಸ್ಟರ್ ಹೆಜ್ಜೇನಿನವರು, ಪೈನಟ್‌ನನ್ನು ಆರೆಸ್ಟ್ ಮಾಡಿ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಿದ್ದಾಗ, ನಮ್ಮ ಕ್ಯಾಮರಮೆನ್ ಮಿಸ್ಟರ್ ಶೇಖರ್ ಕಾರಣವೆನೆಂದು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಹೇಳಿಕೆಯಿದು:-
ಫೋಲೀಸ್: ಒಂದು ಸೊಳ್ಳೆಯನ್ನು, ಅದೂ ಹೆಲಿಕಾಪ್ಟರ್‌ನಲ್ಲಿ ಗುದ್ದಿ ಸಾಯಿಸುವುದು ಮಹಾಪರಾಧ, ಸೊಳ್ಳೆಯನ್ನು ಯಾರು ಇದವರೆಗೂ ಆಕ್ಸಿಡೆಂಟ್ ಮಾಡಿದ್ದಾಗಲಿ ಅಥವಾ ಗುದ್ದಿದ್ದಾಗಲೀ ಯಾವುದೇ ಪುರಾವೆಗಳಿಲ್ಲ. ಅಂತದ್ರಲ್ಲಿ ಈ ಪೈಲಟ್ ತನ್ನ ಸೇಡು ತೀರಿಸಿಕೊಳ್ಳಲು ಹೆಲಿಕಾಪ್ಟರ್‌ನಲ್ಲಿ ಗುದ್ದಿರುವುದು ಕಾನೂನು ಬಾಹಿರ. ಸೊಳ್ಳೆಗಳನ್ನು ಕೈಯಿಂದ ಹಿಡಿದು ಹೊಸಕಿ ಹಾಕಬೇಕು ಎಂದು ನಮ್ಮ ಅಖಿಲ ಭಾರತೀಯ ಸೊಳ್ಳೆಸಂಗಡಿಗರ ಸಂವಿಧಾನದಲ್ಲಿದೆ. ಆದರೆ ಈ ಪೈಲಟ್ ಅ ಕಾನೂನು ಬಳಸದೇ ಈ ರೀತಿ ಗುದ್ದಿರುವುದರಿಂದ ನಾನು ಅವನಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ
1 ಲಕ್ಷ ದಂಡವನ್ನು ವಿಧಿಸುತ್ತಿದ್ದೇನೆ. ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು.

 

ದೇಶದಲ್ಲಿಂದು ಎಲ್ಲ ತರಹದ ಬ್ಲೇಡ್‌ಗಳು ಒಗ್ಗಟಾಗಿ ಮುಷ್ಕರ ಹೂಡಿವೆ. ಕಾರಣ? ಮೊದಲು ನಾವು ಗಡ್ಡ ಕತ್ತರಿಸುವಾಗ ಒಬ್ಬರ ಕೆನ್ನೆಯಿಂದ ಇನ್ನೊಬ್ಬರ ಕೆನ್ನೆಗೆ ರಕ್ತವನ್ನು ಅಂಟಿಸುತ್ತಿದ್ದವು, ಇದರಿಂದ ಏಡ್ಸ್ ಎಂಬ ಮಹಾಮಾರಿ ರೋಗವನ್ನು ಹರಡುತ್ತಿದ್ದವು, ಆದರೆ ಇದೀಗ ಕ್ಷೌರಿಕರು ಒಂದು ಬಾರಿ ಕೆರೆದ ಬ್ಲೇಡನ್ನು ತಿಪ್ಪೆಗುಡ್ಡಿಗೆ ಎಸೆಯುವುದರಿಂದ ಜನತೆಗೆ ಏಡ್ಸ್ ಹರಡಿಸಲು ಆಗುತ್ತಿಲ್ಲ, ದಯವಿಟ್ಟು ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಎಲ್ಲ ಬ್ಲೇಡಗಳ ಪರವಾಗಿ ಅಧ್ಯಕ್ಷತೆ ವಹಿಸಿದ್ದ ಮಿಸ್ಟರ್ ಬದನೆಕಾಯವರು, ಆರೋಗ್ಯ ಮಂತ್ರಿ ಶ್ರೀಮಾನ್ಯ ಚಾಕುರವರಿಗೆ ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ.

 

ಇದೀಗ ಹವಾಮಾನ ವರದಿ
ಕೆ.ಆರ್.ಪೇಟೆ ತಾಲ್ಲೋಕಿನ ಪುಕ್ಕಲು ಎಂಬ ಗ್ರಾಮದಲ್ಲಿ, ಸಿಡಿಲೊಂದು ಬಡಿದು ರೈತ ಮೃತ್ಯುಪಡಲಿಲ್ಲ, ಕಾರಣ ಸಿಡಿಲು ಬಡಿದ ಸ್ಥಳದಿಂದ ರೈತ ದೂರವಿದ್ದ. ಕರ್ನಾಟಕದಲ್ಲಿಂದು ಎಡಬಿಡದೆ ಧಾರಾಕಾರವಾಗಿ ಸುರಿದ ಮಳೆಯಿಂದ, ಹಳ್ಳಕೊಳ್ಳಗಳು, ನದಿಗಳು ಹಾಗೂ ಕೆರೆಬಾವಿಗಳಲ್ಲಿದ್ದ ನೀರು ಖಾಲಿಯಾಗಿದೆ. ಇಷ್ಟೊಂದು ಮಳೆ ಬೀಳಲು ಮೋಡದಲ್ಲಿ ನೀರಿಲ್ಲದ ಕಾರಣ, ಇಲ್ಲಿಯ ನೀರನ್ನು ಬಡ್ಡಿಗೆ ಅಥವಾ ಸಾಲವಾಗಿ ಪಡೆದಿರಬಹುದೆಂದು ಇಲ್ಲಿಯ ಜನರ ಹೇಳಿಕೆಯಾಗಿದೆ. ಮಾಯನಗರಿ ಮುಂಬೈನಲ್ಲಿ ಮಳೆ ಬೀಳದ ಕಾರಣ, ಸೆಖೆಯನ್ನು ತಾಳಲಾರದೆ ಅಲ್ಲಿನ ಜನರು ಸಮುದ್ರ ನೀರನ್ನೇ ತಮ್ಮ ಮೈಕೈಗೆ ಎರಚಿಕೊಳ್ಳುತ್ತಿರುವ ದೃಶ್ಯ ಅಲ್ಲಲ್ಲೇ ಕಾಣಬರುತ್ತಿದೆ.

 

ಇದೀಗ ಕ್ರಿಡಾಂಗಣ ವರದಿ
ಕ್ರಿಕೆಟ್ 20-20ಯಲ್ಲಿ ಭಾರತೀಯ ಆಟಗಾರರು ಚೆನ್ನಾಗಿ ಅಡುತ್ತಿರುವುದರಿಂದ, ಇನ್ನು ಮುಂದೆ ಅವರ ಸಂಬಳದಲ್ಲಿ ಶೇಕಡಾ 50%ರಷ್ಟು ಕಡಿತ ಮಾಡಲು ಭಾರತೀಯ ಕ್ರಿಕೆಟ್ ಕೌನ್ಸಿಲ್ ಮಂತ್ರಿ ಶ್ರೀಮಾನ್ಯ ಬಚ್‌ಬಾಯಿಯವರು ನಿರ್ಣಯಿಸಿದ್ದಾರೆ.  ಈ ವರ್ಷ ನಡೆದ ಒಲಿಂಪಿಕ್ಸ್ ಕ್ರೀಡೆಯಲ್ಲಿ
ಎಲ್ಲ ಭಾರತೀಯ ಆಟಗಾರರು, ಒಂದು ಪದಕವನ್ನೂ ಗೆಲ್ಲದೆ ಸೋತಿರುವುದರಿಂದ, ಇನ್ನೂ ಮುಂದೆ ಅವರೆಲ್ಲ ಹಳ್ಳಿ ಪ್ರದೇಶಗಳಿಗೆ ಹೋಗಿ ಅಲ್ಲಿನ ಹಟ್ಲುಗದ್ದೆಯನ್ನು ತುಳಿದು ಗದ್ದೆ ನಾಟಿ ಮಾಡಲು ರೈತರಿಗೆ ಸಹಾಯ ಮಾಡಬೇಕೆಂದು ಕ್ರೀಡೆ ಮಂತ್ರಿ ಶ್ರೀಮಾನ್ಯ ಮುಸ್ರೂಳ್ಳಿಯವರು ಆಜ್ಞೆ ಹೊರಡಿಸಿದ್ದಾರೆ. ಇಂದು ಬೆಳಿಗ್ಗೆ ದೆಹಲಿಯಲ್ಲಿ ಒಂದು ಕಿಲೋಮೀಟರ್ ಓಟದ ಪಂದ್ಯದಲ್ಲಿ ಅಮೇರಿಕ ಮೂಲವಾಸಿ 90ವರ್ಷದ ಮುದುಕಿಯೊಬ್ಬಳು
ವಿಜಯಿಯಾಗಿರುವುದು ದೇಶದ ಎಲ್ಲ ಜನರನ್ನು ಬೆಚ್ಚಿಬೀಳುಸುವಂತೆ ಮಾಡಿದೆ. ಕಾರಣ ಓಟದಲ್ಲಿ ಭಾಗವಹಿಸಿದವರಲ್ಲಿ ಈ ಮುದುಕಿಯನ್ನು ಬಿಟ್ಟು , ಎಲ್ಲ ಕ್ರೀಡಾಪಟುಗಳು ಮಧ್ಯಪ್ರಾಯದವರು.

 

ಈ ಪಂದ್ಯವನ್ನು ವೀಕ್ಷಿಸುತ್ತಿದ್ದ ಕ್ರೀಡಾಪ್ರೀಯ ಶೇಖರನು ಇದರಲ್ಲಿ ಏನೋ ಮೋಸವಿದೆಯೆಂದು ಕೊಟ್ಟ ವರದಿಯ ಪ್ರಕಾರ, ಅಲ್ಲಿನ ಮುಖ್ಯಮಂತ್ರಿ ಶ್ರೀಮತಿ ಶಾಂತಶೇಖರ್‌ಗೌಡರವರು ಡಾಕ್ಟರೊಬ್ಬರನ್ನು ಕರೆಸಿ, ಈ ಮುದುಕಿಯ ರಕ್ತವನ್ನು ಪರಿಶೀಲಿಸಿದಾಗ ಬಂದ ರಿಪೋರ್ಟ್‌ನಲ್ಲಿ,
ಅ ಮುದುಕಿಯು ಓಟಕ್ಕೆ ಮೊದಲು ಚಿರತೆಯ ಮೂತ್ರ ಕುಡಿದಿರುವುದು ಅವಳ ದೇಹದ ರಕ್ತದಲ್ಲಿ ಕಂಡುಬಂದಿದೆ.
ಇದಕ್ಕೆ ಕಾರಣವನೆಂದು ಅ ಮುದುಕಿಯನ್ನು ಬೆದರಿಸಿ ಕೇಳಿದಾಗ ನನಗೆ ತುಂಬಾ ದಿವಸಗಳಿಂದ ಓಟದ ಪಂದ್ಯದಲ್ಲಿ ಓಡಿ ಪ್ರಶಸ್ತಿ ಗೆಲ್ಲಬೇಕೆಂದು ಆಸೆಯಿತ್ತು, ಆದರೆ ಈ ವಯಸ್ಸಿನಲ್ಲಿ ಒಡುವುದಕ್ಕೆ ಅಷ್ಟು ತಾಕತ್ತದರೂ ಎಲ್ಲಿ ಬರಬೇಕು ಎಂದೆಣಿಸಿ ನಾನು ಒಬ್ಬ ಜ್ಯೋತಿಷಿ ಹತ್ತಿರ ಹೋಗಿ ಇದಕ್ಕೆ ಪರಿಹಾರವನ್ನು ಕೇಳಿದೆ, ಅದಕ್ಕೆ ಅ ಜ್ಯೋತಿಷಿ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಚಿರತೆ, ನೀನು ಚಿರತೆಯ ಮೂತ್ರ ಸೇವಿಸಿದರೆ ಚಿರತೆಯ ವೇಗದಲ್ಲಿಯೇ ಓಡುವೆ, ಎಂದು ಹೇಳಿ 2 ಲೀಟರ್ ಚಿರತೆ ಮೂತ್ರವನ್ನು ಕುಡಿಸಿಬಿಟ್ಟ ಎಂದು ತನ್ನ ತಪ್ಪನ್ನು ಓಪ್ಪಿಕೊಂಡಿದ್ದಾಳೆ.

ಇಲ್ಲಿಗೆ ನನ್ನ ವಾರ್ತಾ ಪ್ರಸಾರ ಮುಕ್ತಾಯವಾಯ್ತು ನಮಸ್ಕಾರ.

ಲೇಖಕರು

shekhargowda

ನನ್ನ ಬಗ್ಗೆ ಹೇಳಬೇಕೆಂದರೆ...ನಾನೊಬ್ಬ ರೈತನ ಮಗ.
ಓದಿರುವುದು ಎಸ್ ಎಸ್ ಎಲ್ ಸಿ. ಕೆ.ಆರ್. ಪೇಟೆ, ಮಂಡ್ಯ.
ಈಗ ಇರುವುದು ಮುಂಬೈನಲ್ಲಿ.

ಅನಿಸಿಕೆಗಳು

pavu ಸೋಮ, 07/02/2012 - 13:37

ನಿಮ್ಮ ಸುಳ್ಳು ವಾರ್ತೆಗಳು ತುಂಬಾ ಚೆನ್ನಾಗಿದೆ.

shekhargowda ಗುರು, 09/05/2013 - 17:47

thanks... ri..

 

ಶೇಖರ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/06/2012 - 19:49

ಧನ್ಯವಾದಗಳು

lokesh ಮಂಗಳ, 07/17/2012 - 16:32

ತುಂಬಾ ಚೆನ್ನಾಗಿದೆ. ಸುಳ್ಳು ವಾರ್ತೆಗಳು

ರವಿಶಾಂತ್ ಶನಿ, 07/21/2012 - 13:53

ಸುಳ್ಳೇ ಸುಳ್ಳೂ ಈ ಭೂಮಿಮ್ಯಾಲೆ ಎಲ್ಲಾ ಸುಳ್ಳು.


ತುಂಬಾ ಚೆನ್ನಾಗಿದೆ.

n satheesh ಗುರು, 08/09/2012 - 16:19

ನಾನು ಇದನ್ನು ೮ ವರ್ಶಗಲ ಹಿನ್ದೆ ಊದಿದ್ದೆ 

shannu ಸೋಮ, 06/08/2015 - 14:03

very nice sir i am also  k r pet 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.