ಫಾರ್ಮುಲಾ..............??????!!!!!!!!!!!!!
ಭಾರತ ಚಿತ್ರರಂಗ
ನೂರರ ಸಂಭ್ರಮ
ಆಚರಿಸುತ್ತಿದೆ,
ಸಾವಿರಕ್ಕೂ ಹೆಚ್ಚು
ಸಿನಿಮಾ ನೋಡಿದ ನನಗೆ,
ಸಿನಿಮಾ ಮಾಡುವ
FORMULA ಗೊತ್ತಾಗಿದೆ .
ಮಾಡಲು ಸಿನಿಮಾ ಕಮರ್ಷಿಯಲ್,
ಬೇಕಾಗುತ್ತೆ ಈ ಕೆಳಗಿನ ಮೆಟೆರಿಯಲ್ .
ಕಾಡಲ್ಲಿ ಕ್ಲೈಮಾಕ್ಸ್
ರೋಡಲ್ಲಿ ರೋಮ್ಯಾನ್ಸ್
ಬೀಚಲ್ಲಿ ನಟನಟಿಯರ ಅರೆ ಬೆತ್ತಲೆ
ಮಂಚದ ಮೇಲೆ ಮುತ್ತಿನ ಸುರಿಮಳೆ
ಒಂದೆರೆಡು ಐಟಂ ಸಾಂಗು
ಜೊತೆಗೆ ಒಂದಿಷ್ಟು ಪೋಲಿ ಡೈಲಾಗು
ಮುಖ್ಯವಾಗಿ,
ನಾಯಕ ಆರ್ಭಟಿಸುತ್ತಿರಬೇಕು
ನಾಯಕಿ ಬಿಚ್ಚಮ್ಮಳಾಗಿರಬೇಕು.
ಅಳಿಸುವ ಪಾತ್ರ ಇರಬಾರದು
ಕಾಮುಖರ ಪಾತ್ರ ಮರೆಯಬಾರದು
ಕೊನೆಯದಾಗಿ ,
ಕಥೆ ಆಗಬೇಕು ನಾಪತ್ತೆ
ಸಂದೇಶ ಇರದಿದ್ದರೂ ನಡೆಯುತ್ತೆ
ಇವು , ಹಿಟ್ ಸಿನಿಮಾ
ತೆಗೆಯಲು ಬೇಕಿರುವ
ಹನ್ನೆರೆಡು ಸೂತ್ರಗಳು ,
ಇವುಗಳಲ್ಲಿ ಒಂದು
ಕಮ್ಮಿಯಾದರೂ ಒಪ್ಪುವುದಿಲ್ಲ
ಅಭಿಮಾನಿ ದೇವರುಗಳು (?)
ಸಾಲುಗಳು
- Add new comment
- 341 views
ಅನಿಸಿಕೆಗಳು
super
super