ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತೆ)
ಹಾಡಿದವರು: ಸೋನುನಿಗಮ್
ಗೀತೆ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಚಿತ್ರ: ಗೆಳೆಯ
ಈ ಸಂಜೆ ಯಾಕಾಗಿದೆ ನೀನಿಲ್ಲದೆ... ಈ ಸಂಜೆ ಯಾಕಾಗಿದೆ?
ಈ ಸಂತೆ ಸಾಕಾಗಿದೆ ನೀನಿಲ್ಲದೆ... ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ... ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ.... ಈ ಸಂಜೆ ಯಾಕಾಗಿದೆ?
ಲಾ ಲಾ ಲಾ ಲಾ.... ಲಾ ಲಾ ಲಾ ಲಾ
ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ.... ಈ ಜೀವ ಕಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ... ಈ ಸಂಜೆ ಯಾಕಾಗಿದೆ?
ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ...ಈ ಗಾಯ ಹಸಿಯಾಗಿದೆ
ಈ ಸಂಜೆ ಯಾಕಾಗಿದೆ ನೀನಿಲ್ಲದೆ..ಈ ಸಂಜೆ ಯಾಕಾಗಿದೆ?
ಈ ಸಂತೆ ಸಾಕಾಗಿದೆ ನೀನಿಲ್ಲದೆ..ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ... ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ.... ಈ ಸಂಜೆ ಯಾಕಾಗಿದೆ?
ಸಾಲುಗಳು
- Add new comment
- 4470 views
ಅನಿಸಿಕೆಗಳು
Re: ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತ
Rajesh avare....
eradane charaNadalli......tangaaLiya pisumaatige mrigavaagide nanna kshana alla......tangaaLiya pisumatige yugavaagide nanna kshana annisutte......
Re: ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತ
ರಾಜೇಶಯವರೇ,
ಒಂದನೇ ಚರಣದಲ್ಲಿ :
ಮಜ "ನೋಡಿದೆ" -- ಬದಲು "ನೋಡಿವೆ" ಆಗಬೇಕು.
ಮತ್ತು
ಪಿಸುಮಾತಿಗೆ "ಮೃಗವಾಗಿದೆ" -- ಬದಲು "ಯುಗವಾಗಿದೆ" ಆಗಬೇಕು.
ಎರಡನೆ ಚರಣದಲ್ಲಿ :
ಅದು "ನೋಡುವ" ಉಸಿರಿಲ್ಲದೇ -- ಬದಲು "ಊದುವ" ಆಗಬೇಕು.
Re: ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತ
ಎರಡನೆ ಚರಣದಲ್ಲಿ:
"ಅದು ನೋಡುವ" -- ಬದಲು "ಅದನೂದುವ" ಆಗಬೇಕು
Re: ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತ
ಧನ್ಯವಾದಗಳು ಮಹಾನ್ ವಿಸ್ಮಯ ಹಾಗೂ ಸಿದ್ಧಲಿಂಗಯ್ಯ ಅವರಿಗೆ. ಸರಿಪಡಿಸಲಾಗಿದೆ.
Re: ಈ ಸಂಜೆ ಯಾಕಾಗಿದೆ ನೀನಿಲ್ಲದೆ - ಗೆಳೆಯ ಸಿನಿಮಾ ಹಾಡಿನ ಲಿರಿಕ್ಸ್ (ಗೀತ
ಮಸ್ತ್ ಹಾಡು.... ಒಳ್ಳೆಯ ಚಿತ್ರೀಕರಣ......
ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ.....
http://noorarumaatu.blogspot.com/2007/10/geleya-youthful-venture.html
e sanje yakhagide ninillade e
e sanje yakhagide ninillade
e maona sakagide
hi eradu mathu thumba estha vagide ninillade sanje yake beku
ಇ ಸನ್ಜೆ ಯಕಗಿದೆ ನಿನಿಲ್ಲದೆ ಇ
ಇ ಸನ್ಜೆ ಯಕಗಿದೆ ನಿನಿಲ್ಲದೆ ಇ ಮ್ಹೊನ ಯಕೆ ಇಗಿದೆ
ಸನ್ಜೆ ನಿನಿಲ್ಲದೆ ಬನ್ದರೆ ಅದು ಸನ್ಜೆನೆಲ್ಲಸನ್ಜೆ ಬನ್ದರೆ ತನೆ ಬೆಲಗ್ಗೆ ಆಗುವುದು
ಮಗಾ ಹರೀಶಾ, ಎನ್ಲಾ ಇದು? ಕನ್ನಡನ
ಮಗಾ ಹರೀಶಾ, ಎನ್ಲಾ ಇದು? ಕನ್ನಡನ ಕಗ್ಗೊಲೆ ಮಾಡ್ಬಿಟ್ಟಿದೀಯಾ??!! ಸ್ವಲ್ಪ ಕರುಣೆ ತೋರಿಸು ಗುರುವೆ!!
ಧನ್ಯವಾದಗಳು
ಧನ್ಯವಾದಗಳು
super song
super song