ಕಾಲ್ ಕಿರಿಕ್..!
ಇಡಿ ವಿಶ್ವ ವಿಸ್ತೀಣದಲ್ಲಿ ಅದೇಷ್ಟೆ ದೊಡ್ಡದಾಗಿದ್ದರೂ ಜನರ ಪಾಲಿಗದು ಚಿಕ್ಕದಾಗುತ್ತಲೆ ಇದೆ..! ಇಂದಿನ ವೇಗದ ದುನಿಯಾದಲ್ಲಿ ಜನ ಸಂಪರ್ಕಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ.ಹೀಗಾಗಿ ಮೊಬೈಲ್ ಹಾಗೂ ಇಂಟರ್ನೆಟ್ ಪ್ರಪಂಚ ಇಡಿ ಜಗತ್ತನ್ನೆ ಆಳುತ್ತಿವೆ. ಈಗ ಮನುಷ್ಯ ತಿನ್ನಲು ಆಹಾರ ಇಲ್ಲದಿದ್ದರೂ ಬದುಕಬಲ್ಲ ಆದರೆ ಮೊಬೈಲ್,ಇಂಟರ್ನೆಟ್ ಇಲ್ಲ ಅಂದ್ರೆ ಬದುಕಲಾರ. ಅದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತೆ ಅಂದ್ರೆ ಅದರ ಮೇಲೆ ನಮ್ಮೆಲ್ಲರ ಅವಲಂಬನೆ ಅದೆಷ್ಟಿರಬೇಡ..? ಮೊಬೈಲ್ ಅಂತೂ ನಮ್ಮ ದೇಹದ ಅಂಗಾಂಗಗಳೊಂದಾಗಿದೆ. ಯಾರನ್ನು ಬೇಕಾದ್ರೂ ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದು.ಆದರೆ ಸದುದ್ದೇಶಕ್ಕಾಗಿ ಅನ್ವೇಷಿಸಿದ ಈ ಟೆಕ್ನಾಲಜಿಗಳು ಇತ್ತೀಚೆಗೆ ಹಲವರ ಬದುಕನ್ನೆ ಅಸ್ತವ್ಯಸ್ತಗೊಳಿಸುತ್ತಿರುವುದು ವಿಷಾದನೀಯ.
ಮೊಬೈಲ್ ಶಾಪ್ ನಲ್ಲಿ ಒಂದು ಸುಂದರ ಹುಡುಗಿ ತನ್ನ ಮೊಬೈಲ್ ಗೆ ಕರೆನ್ಸಿ ಹಾಕಿಸಿಕೊಳ್ಳುತ್ತಾಳೆ. ಕರೆನ್ಸಿ ಹಾಕುವ ನೆಪದಲ್ಲಿ ಆ ಮೊಬೈಲ್ ಶಾಪ್ ನವನಿಗೆ ಆ ಸುಂದರ ಹುಡುಗಿಯ ನಂಬರ್ ಸಿಕ್ಕಿಬಿಡುತ್ತೆ. ಆತನೇನಾದ್ರೂ ಒಳ್ಳೆ ವ್ಯಕ್ತಿಯಾಗಿದ್ದರೆ ಅದನ್ನವನು ದುರುಪಯೋಗ ಮಾಡಿಕೊಳ್ಳಲಾರ. ಒಂದು ವೇಳೆ ಆತನಲ್ಲಿ ಬೇರೆನೊ ಕೆಟ್ಟ ಉದ್ದೇಶ ಇದ್ದಲ್ಲಿ ಖಂಡಿತ ಆತ ಆ ಹುಡುಗಿಯ ನಂಬರ್ ನ್ನು ಕೆಟ್ಟ ಉದ್ದೇಶಕ್ಕೆ ಬಳಸುತ್ತಾನೆ. ಹೀಗೆ ನಡೆದಿರೊ ಹಲವಾರು ಪ್ರಕರಣಗಳು ಹಾದಿ ರಂಪ ಬೀದಿ ರಂಪಕ್ಕೆ ಕಾರಣವಾಗಿವೆ.!ಅಷ್ಟೇ ಏಕೆ ಕೆಲವು ಅತಿರೇಕಕ್ಕೆ ಹೋಗಿ ಪ್ರಾಣವನ್ನೆ ಕಳೆದುಕೊಂಡ ಉದಾಹರಣೆಗಳು ಇವೆ. ಕೆಲವು ಪ್ರಕರಣಗಳು ಮಾತ್ರ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಾಗುತ್ತವೆ..ಆದ್ರೆ ಸಾಕಷ್ಟು ಪ್ರಕರಣಗಳಲ್ಲಿ ಮರ್ಯಾದೆಗಂಜಿ ಜನರು ದೂರು ದಾಖಲಿಸುವುದೆ ಇಲ್ಲ..! ಹೀಗಾಗಿ ಇಂತ ಪ್ರಕರಣಗಳು ಕೊನೆಗಾಣದೆ ಹೆಚ್ಚುತ್ತಲೆ ಇವೆ. ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡುವುತ್ತಿವೆ.
ಇದಕ್ಕೆ ಪರಿಹಾರವೇನು..?
ಕೇಂದ್ರ ಸರ್ಕಾರ ಇಂತಹ ಪ್ರಕರಣಗಳಿಗೆ ಸಂಬಂದಪಟ್ಟಹಾಗೆ ಕೆಲವು ಕಾನೂನು ರೂಪಿಸಿದೆ..! ತೊಂದರೆ ಏನಪ್ಪ ಅಂದ್ರೆ ಪೀಡಿತರು ಪೋಲಿಸ್ ಠಾಣೆ ಹೋಗಿ ದೂರು ದಾಖಲಿಸಬೇಕಾಗಿರೊದು..! ಸಾಕಷ್ಟು ಜನರು ಪೋಲಿಸ್ ಠಾಣೆಗೆ ಹೋಗುವ ಸಹವಾಸನೇ ಬೇಡ ಅಂತ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ. ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವುದನ್ನೆ ಸರಳ ಮಾಡಬೇಕು. ಪೋನ್ ಕಾಲ್ ನಿಂದ ತೊಂದರೆ ಅನುಭವಿಸೊ ಪೀಡಿತರು ತಮ್ಮ ಮೊಬೈಲ್ ನಿಂದ ಕೇವಲ ಒಂದು ಎಸ್ ಎಮ್ ಎಸ್ ಮಾಡುವುದರ ಮೂಲಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಬೇಕು.ದೂರು ದಾಖಲಾದ ಮೇಲೆ ಪೀಡಿತರ ನಂಬರ್ ಗೆ ಬಂದಿರೊ ಅಪಾದೀತರ ಕಾಲ್ ನ್ನು ಅಥವಾ ಮೇಸೆಜ್ ನ್ನು ಕೂಲಂಕುಶವಾಗಿ ಪೋಲಿಸ್ ನವರು ಪರಿಶೀಲನೆ ಮಾಡಬೇಕು.. ದೂರಿನಲ್ಲಿ ನಿಜವಾಗ್ಲೂ ಹುರುಳು ಕಂಡು ಬಂದಲ್ಲಿ ಅಪಾದೀತರನ್ನು ಪೋಲಿಸ್ ಠಾಣೆ ಗೆ ಕರೆಸಿ ಬೆಂಡೆತ್ತಬೇಕು.ಹಾಗೇಯೆ ಶಿಕ್ಷೆಗೆ ಗುರಿಪಡಿಸಬೇಕು. ತೀರ ಅನಿವಾರ್ಯ ಸಂದರ್ಬಗಳಲ್ಲಿ ಮಾತ್ರ ಪೀಡಿತರನ್ನು ಪೋಲಿಸ್ ಠಾಣೆಗೆ ಕರೆಯಿಸಿ ಮಾಹಿತಿ ಪಡೆದುಕೊಳ್ಳಬೇಕು..! ಹೀಗೆ ಬಿಗಿಯಾದ ಕ್ರಮವನ್ನು ಕೈಗೊಂಡಲ್ಲಿ ಕಾಲ್ ಕಿರಿಕ್ ಗಳು ಕಡಿಮೆಯಾಗುತ್ತವೆ. ಸ್ನೇಹಿತರೆ ಈ ಬಗ್ಗೆ ನಾನು ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ.ನೋಡೊಣ ಮುಂದೇನಾಗುತ್ತೆ ಅಂತಾ..?
ಸಾಲುಗಳು
- Add new comment
- 962 views
ಅನಿಸಿಕೆಗಳು
ಸರ್, ನೀವು ಪತ್ಯ ಬರೆಯುವಾಗ ನನ್ನ
ಸರ್, ನೀವು ಪತ್ಯ ಬರೆಯುವಾಗ ನನ್ನ ಕೆಲವಂಶ ಗಮನದಲ್ಲಿಟ್ಟುಕೊಳ್ಳುತ್ತೀರಾ?
ನಮ್ಮ ಊರಲ್ಲಿ ಒಬ್ಬ ಬಟ್ರು ಕೆಲ ವರ್ಷದ ಹಿಂದೆ Idea ಸಿಮ್ ಮಾರಾಟ ಮಾಡುತ್ತಿದ್ದರು. ಆಗ ನಮ್ಮ ಊರ ಚಾಲಿಪೋಲಿ ತರುಣ ಅವರಿಂದ ಕನಿಷ್ಟ ಇಪ್ಪತ್ತು ಸಿಮ್ ಪಡೆದಿದ್ದ. ಕೇವಲ ಫೋಟೋ ಓಟರ್ ಐಡಿ ಜೆರಾಕ್ಷಿಗೇ ಅವರು ಅದೆಷ್ಟೋ ಸಿಮ್ ಕೊಡುತ್ತಿದ್ದರು. ಸಿಮ್ಮಿನ ಬೆಲೆಗಿಂತ ಅಧಿಕ ಟಾಕ್ಟೈಮ್ ಐಡಿಯಾ ದವರ ಕೊಡುಗೆಯಾಗಿತ್ತು. ಟಾಕ್ಟೈಮ್ ಮುಗಿದ ಕೂಡಲೇ ಮತ್ತೊಂದು ಸಿಮ್ ಹಾಕುವುದು ಆಗಿನ ಅನೇಕರ ಕ್ರಮವೇ ಆಗಿತ್ತು. ನನಗೆ ಈಗ ಇರುವ ಡೌಟ್ ಏನೆಂದರೆ ಈ ರೀತಿಯ ಯಾರದೋ ಹೆಸರಿನಲ್ಲಿ ಇನ್ಯಾರದೋ ಕಯ್ಯಲ್ಲಿ ಈಗ ಎಷ್ಟು ಲಕ್ಷ ಸಿಮ್ ಇರಬಹುದು?
ಇದಕ್ಕೆ ಬಹಳ ಸುಲಭ ರೀತಿಯ ಪರಿಹಾರ ಏನು?
ಸದ್ಯಕ್ಕೆ ನಾವು ಆಧಾರ್ ಜೆರಾಕ್ಸ್ ಮತ್ತು ಫೊಟೊ ಕೊಟ್ಟರೆ ನಮಗೆ ಸಿಮ್ ಕೊಡ್ತಾರೆ. ಫೋನ್ ಮೂಲಕ ಪರಿಶೀಲನೆ ನಡೆಸ್ತಾರೆ. ಮೊನ್ನೆ ಮೊನ್ನೆ ನಾನೇ ಒಂದು ಹೆಣ್ಮಗಳಿಗೆ ಸಿಮ್ ತಂದುಕೊಟ್ಟಿದ್ದೆ. ಅವಳದೇ ಆಧಾರ್ ಅವಳದೇ ಫೋಟೋ. ಫಾರಂ ಗೆ ಸೈನ್ ಮಾತ್ರ ನಾನು ಹಾಕಿದ್ದು!
ನಮ್ಮ ದೇಶದಲ್ಲಿ ಪೋಸ್ಟಲ್ ಡಿಪಾರ್ಟ್ಮೆಂಟ್ ಈಗಲೂ ಜೀವಂತವಿದೆಯಲ್ಲ?
ಎಲ್ಲ ಸಿಮ್ ಹೋಲ್ಡರುಗಳ ವಿಳಾಸ ಪರಿಶೀಲನೆಯನ್ನು ಅಂಚೆ ಮೂಲಕ ಮಾಡಲಿ. ಇದರಿಂದ ಸರಕಾರಕ್ಕೆ ನಷ್ಟ ಆಗುತ್ತದೆಯೇ! ಆ ಖರ್ಚನ್ನು ಸಿಮ್ ಪಡೆದಾತ ಭರಿಸಲಿ.
ಈ ಅಂಶ ನಿಮಗೆ ಓಕೆ ಅನಿಸಿದರೆ ಮೋದೀಜಿಗೆ ಬರೆಯುತ್ತೀರಾ ಪ್ಲೀಸ್,
ಖಂಡಿತ ಸರ್..! ನಿಮ್ಮ ಸಲಹೆ
ಖಂಡಿತ ಸರ್..! ನಿಮ್ಮ ಸಲಹೆ ಗಮನದಲ್ಲಿಟ್ಟು ಪ್ರಯತ್ನಿಸುತ್ತೇನೆ.ಧನ್ಯವಾದಗಳು..!
ಥ್ಯಾಂಕ್ಸ್ ಸರ್.
ಥ್ಯಾಂಕ್ಸ್ ಸರ್.
ಹಾಗೆನೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿಯಲ್ಲಿ ಗ್ರಾಮಾಭಿವೃದ್ಧಿ ಮಾಡಲು ಶ್ರಿಯುತ ಪಿಎಂ ರವರು ಮನ ಮಾಡಲಿ. ಕೃಷಿ ತಜ್ಞರಿಂದ ತರಬೇತಿ ಪಡೆದ ರೈತ ಮಾತ್ರ ಉತ್ತಮ ಬೆಳೆ ಬೆಳೆಯಬಲ್ಲ.
ತಮಗೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಕಾರ್ಯವೈಖರಿ, ಮತ್ತು ಅದರಿಂದ ನಮ್ಮ ಜಿಲ್ಲೆಯ ರೈತರು ಪಡೆದಿರುವ ಲಾಭ ಇವೆಲ್ಲ ತಿಳಿದಿರಬಹುದು.
ರೈತನ ಜ್ಞಾನಿಯಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಹಕಾರ ಅತೀ ಅಗತ್ಯ.