ನ್ಯಾಯ ಪ್ರಶ್ನೆ...!
ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ..ಆದರೆ ಒಬ್ಬನೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು..! ಈ ತತ್ವ ಸಿದ್ದಾಂತದ ಆಧಾರದ ಮೇಲೆ ರೂಪುಗೊಂಡಿದೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ..! ಹಾಸ್ಯಾಸ್ಪದ ಅಂದ್ರೆ... ನೂರು ಜನ ಅಮಾಯಕರನ್ನು ಶಿಕ್ಷಿಸಿದರೂ ಪರವಾಗಿಲ್ಲ.. ರಾಜಕಾರಣಿಗಳನ್ನು, ಪ್ರಭಾವಿಗಳನ್ನು, ಶ್ರೀಮಂತರನ್ನು ರಕ್ಷಣೆ ಮಾಡುವುದೆ ನಮ್ಮಮೂಲೂದ್ದೇಶ ಎನ್ನುವಂತಿದೆ ನಮ್ಮ ದೇಶದ ನ್ಯಾಯಾಂಗಗಳ ವರ್ತನೆ...! ದುರ್ಬಲ ಎನಿಸುವಂತಹ ಕಾನೂನುಗಳು..ರೇಜಿಗೆ ಹುಟ್ಟಿಸುವ ನ್ಯಾಯಾಂಗದ ಮಂದಗತಿಯ ಪ್ರಕ್ರಿಯೆಗಳು.... ಮತ್ತು ಪ್ರಶ್ನಾರ್ಥಕ ಎನಿಸುವ ಅದರ ತೀರ್ಪುಗಳು.. ಒಬ್ಬ ಶ್ರೀಸಾಮಾನ್ಯನಿಗೆ ಒಬ್ಬ ಬಡವನಿಗೆ ನ್ಯಾಯವನ್ನೆ ಕೊಡಿಸಲಾಗದ ನ್ಯಾಯಾಂಗ ವ್ಯವಸ್ಥೆ ನಮಗೆ ಬೇಕೆ...? ನಮ್ಮ ದೇಶದ ಶೇಕಡ 95 ರಷ್ಟು ಜನರಿಗೆ ಸಮರ್ಪಕವಾದ ನ್ಯಾಯ ಸಿಗುತ್ತಿಲ್ಲ ಅನ್ನೊದೆ ವಾಸ್ತವ ಕಟು ಸತ್ಯ..! ಸ್ವಾತಂತ್ರ್ಯ ಬಂದು 67 ವರ್ಷಗಳೆ ಕಳೆದರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಒಂದು ಸಣ್ಣ ನ್ಯಾಯವನ್ನು ಒದಗಿಸಲಾರದಷ್ಟು ದುರ್ಬಲವೇ ನಮ್ಮ ದೇಶ...? ಜನಸಾಮಾನ್ಯರಿಗೆ ದಕ್ಕಲಾರದ ನ್ಯಾಯಾಂಗ ವ್ಯವಸ್ಥೆ ಇದ್ದರೆಷ್ಟು ಬಿಟ್ಟರೆಷ್ಟು..! ಶ್ರೀಮಂತರ, ಪ್ರಭಾವಿಗಳ ಮತ್ತು ರಾಜಕಾರಣಿಗಳ ಕಪಟ ನಾಟಕಗಳಿಗೆ ವೇದಿಕೆಯಾಗುತ್ತಿರುವ ನಮ್ಮ ನ್ಯಾಯಾಂಗದ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲವೇ...? ಒಂದು ವೇಳೆ ಸಾಧ್ಯವೇ ಇಲ್ಲ ಅನ್ನೊದಾದರೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತೆಗೆದು ಹಾಕಿ ಬಿಡೊದು ಒಳ್ಳೆದಲ್ಲವೇ...? ಶ್ರೀಮಂತರು, ರಾಜಕಾರಣಿಗಳು, ಪ್ರಭಾವಿಗಳು ತಮಗೆ ಹೇಗೆ ಬೇಕೊ ಹಾಗೆ ಮೋಜಿನ ಜೀವನ ಮಾಡಲಿ.. ಯಾರನ್ನು ಬೇಕಾದ್ರೂ ಕೊಲೆ ಮಾಡಲಿ ಯಾರನ್ನು ಬೇಕಾದ್ರೂ ಸುಲುಗೆ ಮಾಡಲಿ ಅವರನ್ನು ಯಾರು ಏನೂ ಪ್ರಶ್ನೆ ಮಾಡದೆ ಇರಲಿ... ಪ್ರಾಮಾಣಿಕರು,ಬಡವರು,ಅಸಹಾಯಕರು... ಎಲ್ಲಾ ಇದು ನಮ್ಮ ಹಣೆ ಬರಹ ಅಂತ ಕಷ್ಟ,ನಷ್ಟ,ನೋವು ಅನ್ಯಾಯ,ಅತ್ಯಾಚಾರ,ದೌರ್ಜನ್ಯ ಎಲ್ಲವನ್ನು ಸಹಿಸಿಕೊಂಡು ಬದುಕುವುದಾದರೆ ಬದುಕಲಿ ಇಲ್ಲಾ ಸಾಯಲಿ ಅಂತ ಅಂದುಕೊಳ್ಳೊದು ಒಳ್ಳೆದಲ್ಲವೇ...? ಹಾಗೆ ಮಾಡಿದರೆ ಕೊನೆ ಪಕ್ಷ ನ್ಯಾಯಾಂಗ ವ್ಯವಸ್ಥೆಯಿಂದಾಗಿ ಪೋಲಾಗುವ ಸಮಯ, ಹಣ ಎರಡು ಉಳಿತಾಯವಾಗುತ್ತವೇ ಅಲ್ಲವೇ..?
ಬೇಕಾದಷ್ಟು ಕೊಲೆ,ಸುಲುಗೆ,ದರೋಡೆ,ಭ್ರಷ್ಟಾಚಾರ,ಅನ್ಯಾಯ,ಅತ್ಯಾಚಾರ ಮಾಡಿದ ಪರಮ ದುರುಳನೊಬ್ಬ ಯಾವುದಾದರು ಒಂದು ಕೇಸ್ ನಲ್ಲಿ ಸಿಕ್ಕಿಕೊಂಡು ಜೈಲು ಪಾಲಾಗಿ ತನ್ನ ತೊಳ್ಬಲ ಹಣಬಲದಿಂದ ನ್ಯಾಯಾಂಗ ವ್ಯವಸ್ಥೆಯನ್ನು ಖರೀದಿಸಿ ಅರೋಪ ಮುಕ್ತನಾಗಿ ಹೊರ ಬರುವಾಗ..ನಮ್ಮ ದೇಶದ ಕಾನೂನು ಮತ್ತು ಘನ ನ್ಯಾಯಾಲಯಗಳ ಮೇಲೆ ನಂಗೆ ಅಪಾರ ವಿಶ್ವಾಸ ಇದೆ..ಸತ್ಯಕ್ಕೆ ಯಾವತ್ತಿದ್ರೂ ಜಯ ಸಿಕ್ಕೆ ಸಿಗುತ್ತೆ..ದೇವ್ರು ದೊಡ್ಡವನು...! ಅನ್ನುವಂತ ಅಣಿಮುತ್ತುಗಳನ್ನು ತನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಉದುರಿಸುತ್ತಾನಲ್ಲ....ಆಗ ಅದೆಷ್ಟು ಜನರ ರಕ್ತ ಆಕ್ರೋಷದಿಂದ ಕೊತಕೊತನೆ ಕುದಿಯುವುದಿಲ್ಲ ಹೇಳಿ...? ನ್ಯಾಯ ಬರಿ ಉಳ್ಳವರ ಪಾಲಾಗೊದಾದ್ರೆ ನ್ಯಾಯಾಂಗ ವ್ಯವಸ್ಥೆಯೆ ಬೇಡ ಬಿಡಿ.... ಬೇಕಿದ್ರೆ ರಾಜಕಾರಣಿಗಳು,ಪ್ರಭಾವಿಗಳು ಮತ್ತು ಶ್ರೀಮಂತರೆಲ್ಲಾ ಸೇರಿಕೊಂಡು ಜಂಗಲ್ ರಾಜ್ ಮಾಡಿಕೊಂಡಿರಲಿ ..!
ಯಾವುದೇ ದೇಶದಲ್ಲಾದರೂ ಕೂಡ ನ್ಯಾಯಾಂಗದ ವ್ಯವಸ್ಥೆ ಹೇಗಿರಬೇಕೆಂದರೆ ವರ್ಷದಿಂದ ವರ್ಷಕ್ಕೆ ಅಪರಾಧಗಳ ಸಂಖ್ಯೆ ಕಡಿಮೆಯಾಗುವಂತಿರಬೇಕು..! ಖಡಕ್ಕಾದ ನ್ಯಾಯಾಂಗದ ವ್ಯವಸ್ಥೆ ಇದ್ದಲ್ಲಿ ಅಪರಾಧಗಳು ಸಹಜವಾಗಿ ಕಡಿಮೆಯಾಗುತ್ತವೆ.. ಆದ್ರೆ ನಮ್ಮ ದೇಶದಲ್ಲಿ ಅದು ಸಾಧ್ಯವಾಗಿದೆಯಾ....? ಹಾಗಿದ್ದಲ್ಲಿ ನಮ್ಮ ಘನ ನ್ಯಾಯಾಲಯಗಳು ನಮ್ಮ ದೇಶದ ಪ್ರಜೆಗಳಿಗೆ ಎನು ಸಂದೇಶ ಕೊಡುತ್ತಿವೆ...? ಒಬ್ಬ ಅಪರಾಧಿಯು ತನ್ನ ಅಪರಾಧವನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಒಮ್ಮೆ ಅರಗಿಸಿಕೊಂಡನೆಂದರೆ..ಆತ ಮತ್ತೆ ಹತ್ತು ಅಪರಾಧ ಮಾಡಲು ಹಿಂಜರಿಯಲಾರ... ಅಷ್ಟೆ ಏಕೆ ನೂರಾರು ಜನರಿಗೆ ಅಪರಾಧ ಮಾಡಲು ಮಾದರಿಯೂ ಆಗಬಲ್ಲ...! ಹಾಗಾದಲ್ಲಿ ಸಮಾಜದ ಸುಧಾರಣೆ ಇನ್ನೆಲ್ಲಿಂದ ಸಾಧ್ಯ...? ನ್ಯಾಯಾಲಯದ ತೀರ್ಪುಗಳು ಸಮಾಜಕ್ಕೆ ಮಾದರಿಯಾಗಿರಬೇಕೆ ಹೊರತು ಮಾರಕವಾಗಬಾರದು..! ಅಂದ ಹಾಗೆ ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳು ಸಮಾಜಕ್ಕೆ ಮಾದರಿ ಅನ್ನಿಸುವಂತಿದೆಯಾ...? ಘನತೆವೆತ್ತ ನ್ಯಾಯಾಂಗವು ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು..!
ಸಾಲುಗಳು
- Add new comment
- 1045 views
ಅನಿಸಿಕೆಗಳು
ತುಂಬಾ ಉತ್ತಮ ಚಿಂತನೆ ಪ್ರವೀಣ್
ತುಂಬಾ ಉತ್ತಮ ಚಿಂತನೆ ಪ್ರವೀಣ್ ಅವರೇ,
ಯಾರ ಬಳಿ ಹಣವಿದೆಯೋ ಅವರಿಗೆ ಒಂದು ಶಕ್ತಿ ಇರುತ್ತದೆ. ಅದೇನೆಂದರೆ ಯಾವುದೇ ವ್ಯವಸ್ಥೆಯ ಪ್ರತಿಭಾವಂತರನ್ನು ಉಪಯೋಗಿಸುವ ಶಕ್ತಿ. ಅಂದರೆ ಕಾನೂನಲ್ಲಿ ಪಳಗಿದ ಉತ್ತಮ ಲಾಯರ್ ಹಾಗೂ ಲಂಚದ ಮೂಲಕ ಕಾರ್ಯ ಸಾಧಿಸುವ ಶಕ್ತಿ. ಬಹುಶಃ ಅದಕ್ಕೆ ಈ ರೀತಿ ನ್ಯಾಯಾಂಗ ಚಾಪೆ ಕೆಳಗೆ ತೂರಿದರೆ ಅವರು ರಂಗೋಲಿ ಕೆಳಗೆ ತೂರಲು ಸಾಧ್ಯವಾಗುತ್ತಿರುವದು.
ಖಂಡಿತ ಸರ್.... ನಿಮ್ಮ ಅನಿಸಿಕೆ
ಖಂಡಿತ ಸರ್.... ನಿಮ್ಮ ಅನಿಸಿಕೆ ಸರಿಯಾಗಿದೆ. ಅದಕ್ಕೆ ನ್ಯಾಯಾಂಗದ ವ್ಯವಸ್ತೆ ಬದಲಾಗಬೇಕು. ಧನ್ಯವಾದಗಳು..!
ನನ್ನ ಪ್ರಕಾರ ಇಲ್ಲಿ ಆಗಬೇಕಾದ
ನನ್ನ ಪ್ರಕಾರ ಇಲ್ಲಿ ಆಗಬೇಕಾದ ತ್ವರಿತ ಬದಲಾವಣೆ
1ಭಾರತದ ಸರ್ವ ಪ್ರಜೆಗಳ ಮತ್ತು ಇಲ್ಲಿನ ಜಲ ನೆಲ ಪ್ರಾಣಿ ಪಕ್ಷಿ ಇತ್ಯಾದಿಗಳ ರಕ್ಷಣೆಯ ಹಿತದೃಷ್ಟಿಯಿಂದ ಜಾತಿ ಬೇಧ ಇಲ್ಲದೆ ಭಾರತದ ಪ್ರತಿಯೊಬ್ಬನಿಗು ಒಂದೇ ಮಗು ಇದನ್ನು ಕಡ್ಡಾಯಗೊಳಿಸಬೇಕು. ಕಾನೂನು ಮೀರಿ ಎರಡನೇ ಮಗುವನ್ನು ಪಡೆದಾತ ಮಾಸಿಕ ದಂಡ ಸರಕಾರಕ್ಕೆ ಪಾವತಿಸುತ್ತ ಇರಬೇಕು. ಮೂರನೇ ಮಗು ಆದಲ್ಲಿ ಅದರ ಅಮ್ಮನನ್ನು ಜೈಲಿನಲ್ಲಿ ಹಾಕಬೇಕು.
2 ಈ ದೇಶದ ಪ್ರತಿಯೊಬ್ಬನಿಗು ಸಮಾನ ಕಾನೂನು ಸಮಾನ ಹಕ್ಕು ಜೊತೆಗೆ ಸಮಾನವಾದ ಬಾಧ್ಯತೆಯೂ ಇರಬೇಕು
ಬಾಧ್ಯತೆಯನ್ನು ತಪ್ಪಿ ನಡೆದಾತ ಯಾವ ಜಾತಿ ಎಂಬುದನ್ನು ನೋಡದೆ ಆತನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು
3 ನೂರು ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ವಹಿವಾಟು ನಡೆಸುವವರು ಚೆಕ್ ಮುಂತಾದ ಬ್ಯಾಂಕಿಂಗ್ ದಾಖಲೆ ಮೂಲಕವೇ ವ್ಯವಹರಿಸಬೇಕು.
4 ಕುಡುಕರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಮತ್ತು ಮಾಸಿಕ 500ರುಪಾಯಿಗಳನ್ನು ಅವರು ಸರಕಾರಕ್ಕೆ ತುಂಬಬೇಕು.
5 ಜಾತಿ ಯಾವುದೇ ಇರಲಿ ಆತ ಬಡವನಾಗಿದ್ದರೆ ಆತನಿಗೆ ವಿಶೇಷ ಸವಲತ್ತಿಗೆ ಅರ್ಹತೆ ನೀಡಬೇಕು.
6 ಇನ್ನೂ ಅನೇಕ ಇವೆ. ಆದರೆ ಸದ್ಯಕ್ಕೆ ಇಷ್ಟು ಮಾಡಲಿ. ಮಾಡಿಯಾರೇ? ಖಂಡಿತಾ ಮಾಡಲ್ಲ. ಯಾಕೆಂದರೆ
ಫಮೋರಿಯನ್ ಆಗಲಿ ಡಾಮನ್ ಮನ್ ಆಗಲಿ ಜರ್ಮನ್ ಶೆಪರ್ಡ್ ಆಗಲಿ ಬೀದಿ ನಾಯಿಯೇ ಆಗಲಿ ಅದು ಬೌಭೌ ಎಂದೇ ಬೊಗಳುವುದು
ಏಕೆಂದರೆ ನಾಯಿ ಎಂದ ಮೇಲೆ ಎಲ್ಲವೂ ನಾಯಿಯೇ ಅಲ್ಲವೆ?
ಮಾನ್ಯರೆ ನಿಮ್ಮ ಸಲಹೆಗಳು
ಮಾನ್ಯರೆ ನಿಮ್ಮ ಸಲಹೆಗಳು ಉಪಯುಕ್ತವಾಗಿವೆ..! ನಿರಾಸೆ ಬೇಡ..ಬದಲಾವಣೆ ಜಗದ ನಿಯಮ. ಇವತ್ತಲ್ಲ ನಾಳೆಯಾದ್ರೂ ಎಲ್ಲರಿಗೂ ಒಳ್ಳೆ ಕಾಲ ಬಂದೆ ಬರ್ತೈತೆ...ಧನ್ಯವಾದಗಳೊಂದಿಗೆ ಪ್ರವೀಣ್..!