Skip to main content

ಅಮ್ಮಂದಿರೇ ನಿಮ್ಮ ಆರೋಗ್ಯದೆಡೆಗೂ ಇರಲಿ ತುಸು ಕಾಳಜಿ..!

ಇಂದ radhika bhat
ಬರೆದಿದ್ದುOctober 3, 2013
1ಅನಿಸಿಕೆ

ದಿನವಿಡೀ ಅಸಹನೆ... ಗೋಡೆಗೆ ತಲೆ ಚಚ್ಚಿಕೊಳ್ಳುವಷ್ಟು ಕೋಪ..ಉಮ್ಮಳಿಸಿ ಬರುವ ಅಳು ನಂಗ್ಯಾರೂ ಇಲ್ಲ ನಾನು ಒಂಟಿ ಅನ್ನೋ ಫೀಲಿಂಗ್ ಆಕೆ ಇದೆಲ್ಲದರಿಂದ ಹೈರಾಣಾಗಿ ಹೋಗಿದ್ದಳು. ಹೊರೆಯಮತೆ ಕೂತಿರುವ ಕೆಲಸ ಮನದಲ್ಲಿ ಹೊರೆಯಾದ ನೋವು ಮಾತು ಮಾತಿಗೂ ಸಿಡುಕು..ತನ್ನ ಕಾರಣವಿಲ್ಲದ ಹತಾಶೆಗಳಿಗೆ ಕಾರಣ ಹುಡುಕ ಹೋಗಿ ಮತ್ತಷ್ಟು ದೃತಿಗೆಟ್ಟು ಕಂಗಾಲಾಗಿ ಹೋಗಿದ್ದಳು..ನನಗೆ ವಯಸ್ಸಾಗುತ್ತಾ ಬಂತು. ಗಂಡ-ಮಕ್ಕಳು ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಸುರಕ್ಷಿತ ಬಾವ ಆಕೆಯೊಳಗೆ ಬೇರೂರ ತೊಡಗಿತ್ತು..

 ಇವೆಲ್ಲವೂ ಆಗಿದ್ದು ಕತ್ತಲ ಕರಾಳ ರಾತ್ರಿಯಲ್ಲಿ ಕಳೆದು ಹೋದ ನಿದ್ದೆಗಾಗಿ ಆಕೆ ಪೇಚಾಡುತ್ತಿದ್ದ ಸಮಯದಲ್ಲಿ.. ತನ್ನೊಳಗೆ ಏನೋ ಬದಲಾವಣೆಯಾಗುತ್ತಿದೆ ತಾನೀಗ ಆರೋಗ್ಯದೆಡೆಗೆ ಗಮನ ಕೊಡಬೇಕು ನೆಮ್ಮದಿಯಾಗಿರಲು ಪ್ರಯತ್ನಿಸಬೇಕೆಂಬ ಅರಿವು ಆಕೆಗಿಲ್ಲ. ಮಕ್ಕಳ ನೆಮ್ಮದಿಯಷ್ಟೇ ಆಕೆಯ ಅರಿವಿಗೆ ಬಂದಿದ್ದು. ನಿದ್ದೆಯಲ್ಲಿ ಕೆಮ್ಮಿದ ಮಗನನ್ನೆಬ್ಬಿಸಿ ಕಷಾಯ ನೀಡುವ ಆಕೆ ತಾನು ಕಳೆದುಕೊಂಡ ನೆಮ್ಮದಿಯನ್ನು ಅರಿಯದೇ ಹೋದಳು.. ಇಷ್ಟಕ್ಕೂ ಆಕೆಗಾದ ಸಮಸ್ಯೆ ಏನು? ಮಕ್ಕಳು ಕೈಮೀರಿ ಹೋದರೆ/ ಗಂಡ ಕಡೆಗಾಣಿಸಿದನೆ? ಯಾವುದೂ ಅಲ್ಲ. ಅದು ಆಕೆಯ ಆರೋಗ್ಯದಲ್ಲಾದ ಏರು ಪೇರು.

 ಒಬ್ಬ ಸ್ತ್ರೀ ಹರೆಯಕ್ಕೆ ಬರುವಾಗ ಆಕೆಯ ದೇಹದಲ್ಲಾಗುವ ಹಾರ್ಮೋನ್ ವೈಪರಿತ್ಯದಿಂದಾಗಿ ಆಕೆಯ ನಡವಳಿಕೆಯಲ್ಲಿ ಬದಲಾವಣೆಗಳುಂಟಾಗುತ್ತವೆ. ಅಸುರಕ್ಷಿತ ಭಾವ ಆಕೆಯನ್ನು ಕಾಡುತ್ತದೆ, ಒಂದು ರೀತಿಯ ಡಿಪ್ರೆಶನ್‌ಗೆ ಒಳಪಡುತ್ತಾಳೆ. ಕಾರಣವಿಲ್ಲದೆ ಅಲುತ್ತಾಳೆ,ಉದ್ರಿಕ್ತಗೊಳ್ಳುತ್ತಾಳೆ, ಅಂತರ್ಮುಖಿಯಾಗುತ್ತಾಳೆ. ಇದೇ ರೀತಿಯ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಸಮಸ್ಯೆಗಳು ಆಕೆಯ ಋತುಬಂಧದ ಸಮಯದಲ್ಲೂ ನಡೆಯುತ್ತದೆ.

 ಸ್ತ್ರೀಯ ಮುಟ್ಟು ನಿಲ್ಲುವ ಸಂದರ್ಭ ಅಂದರೆ ಆಕೆಯ ೩೯ ರಿಂದ ೪೫ರ ಪ್ರಾಯಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳಾಗುತ್ತದೆ ಅದಕ್ಕೆ ವೈದ್ಯಕೀಯ ಭಾಷೆಯಲ್ಲಿ ಪೆರಿಮೆನೊಪಾಸ್ ಎಂದು ಹೆಸರು. ಮೆನೋಪಾಸ್ ನಿಲ್ಲುವ ಸಂದರ್ಭವೇ ಈ ಪೆರಿಮೆನೋಪಾಸ್. ಇಂತಹ ಸಂದರ್ಭದಲ್ಲಿ ತೀವ್ರ ರಕ್ತ ಸ್ರಾವ, ಅನಿಯಮಿತ ಮುಟ್ಟು ನಿಂದಾಗಿ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುವುದರೊಂದಿಗೆ ರೊಗ ನಿರೊಧಕ ಶಕ್ತಿ ಕಡಿಮೆಯಾಗಿ ರೊಗಿ ತೀವ್ರತರದ ಅನೀಮಿಯಾ ಕಾಯಿಲೆಗೆ ಗುರಿಯಾಗಬಹುದು. ದೇಹದಲ್ಲಾಗುವ ಇಂತಹ ವೈಪರಿತ್ಯದಿಂದಾಗಿ ಆಕೆಯ ಮಾನಸಿಕ ಸ್ಥಿತಿ ಹದಗೆಡುವುದರೊಂದಿಗೆ ಈ ಮೇಲೆ ಹೇಳಿದಂತಹ ಯೋಚನೆಗಳು ಆಕೆಯನ್ನು ಕ್ಷೆಭೆಗೀಡು ಮಾಡಬಹುದು. 

ಇತ್ತೀಚಿನ ಒಂದು ಅಧ್ಯಯನದಲ್ಲಿ ತಿಳಿದು ಬಂದಂತೆ ಸ್ತ್ರೀಯರಲ್ಲಿ ಶೇಖಡಾ ೭೦ ರಷ್ಟು ಮಂದಿ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ಮೆನೋಪಾಸ್ ಹಾಗು ಪೆರಿಮೆನೋಪಾಸ್ ಸಂದರ್ಭದಲ್ಲಿ ತೀವ್ರತರ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಇಂತಹ ಸಮಸ್ಯೆಗಳಿಂದ ನೀವೂ ಬಳಲುತ್ತದ್ದಿರಾದರೆ ನೆನಪಿಡಿ ನಿಮ್ಮ ಆರೋಗ್ಯದತ್ತ ಗಮನ ಕೊಡಿ ಸೂಕ್ತ ತಜ್ಞರಿಂದ ಸಲಹೆ ಪಡೆಯಿರಿ ತುಸು ಸಮಯವನ್ನು ಪ್ರಶಾಮತ ಸ್ಥಳದಲ್ಲಿ ಕಳೆಯಿರಿ. ಸದಾ ಉಲ್ಲಸಿತರಾಗಿರಲು ಪ್ರಯತ್ನಿಸಿ. 

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

ಗಂಗರತ್ನ.ಕೆ.ಎಂ. ಗುರು, 11/21/2013 - 16:59

ಹೌದು ಅಮ್ಮಂದಿರ ಬಗ್ಗೆ ನಾವು ಕಾಳಜಿ ವಹಿಸುವುದು ಮುಖ್ಯ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.