ಕಗ್ಗಂಟು ಪತ್ತೇದಾರಿ ಕಥೆ - ಭಾಗ 3
ಇದರ ಮೊದಲ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1
ಇದರ ಎರಡನೇಯ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2
ಈ ಮೂರನೇಯ ಭಾಗ ಸ್ವಲ್ಪ ವಿಳಂಬವಾಗಿ ಬಂದದಕ್ಕೆ ಕ್ಷಮೆ ಇರಲಿ.
ವಿಕ್ರಂ ಎದ್ದು ಹೇಳಿದ "ರೀ ಬಸವರಾಜು ಬೈಕ್ ಹೊರಗೆ ತೆಗೀರಿ. ಪೋಲೀಸ್ ಸ್ಟೇಶನ್ ಗೆ ಹೋಗೋಣ"
ಬಸವರಾಜು ಒಳಗೊಳಗೆ ನಡುಗುತ್ತಾ ಹೇಳಿದ "ಸಾಹೆಬ್ರ ಬೈಕ್ ಇವತ್ತು ಸರ್ವೀಸ ಗೆ ಕೊಟ್ಟು ಬಂದೀನ್ರಿ. ಸಂಜೆ ಕೊಡ್ತೀನಿ ಅಂತಾ ಹೇಳ್ಯಾರ"
ಹಣೆ ಚಚ್ಚಿಕೊಂದ ವಿಕ್ರಂ "ಅಲ್ಲಪ್ಪಾ ನನ್ನ ಒಂದು ಮಾತು ಹೇಳೋದಲ್ವೇನು?"
"ನಾನು ನೋಡಿದಿನ್ರ್ಯ , ಮೂರು ತಿಂಗಳದಿಂದ ಖಾಲಿ ಕುಂತ ಸಾಕಾಗಿತ್ರ್ಯ , ಗಾಡಿನರ ರಿಪೇರಿಗೆ ಕೊಡುನಂತ ಇವತ್ತ ಮುಂಜೇನೆ ಕೊಟ್ಟಬಂದನ್ರಿ" ಎಂದ ಬಸವರಾಜು.
"ಇನ್ನೇನು ಮಾಡೋದು ನಡೆದು ಕೊಂಡೇ ಹೋಗೋಣ" ಎಂದು ಹೊರಟು ನಿಂತ ವಿಕ್ರಂ.
ವಿಕ್ರಂ ಆಫೀಸಿನಿಂದ ಪೋಲಿಸ್ ಸ್ಟೇಶನ್ ಬರೀ 20 ನಿಮಿಷದ ಕಾಲ್ನಡಿಗೆಯ ದೂರದಲ್ಲಿದೆ. ದಾರಿಯಲ್ಲಿ ಹೋಗುತ್ತಿದ್ದಾಗ ಸುಮ್ಮನೆ ವಿಕ್ರಂ ಬಸವರಾಜುವಿನ ಬಳಿ "ಏನ್ರಿ ಬಸವರಾಜು ಈ ಕೇಸು ಮುಗಿದ್ರೆ ಆರಾಮವಾಗಿ ನಿಮ್ಮ ಮದುವೆ ಆಗಬಹುದು." ಎಂದ.ನಾಚಿಕೊಂಡ ಬಸವರಾಜು ಮುದುಡಿಕೊಂಡು ಹೌದೆಂಬಂತೆ ತಲೆಯಾಡಿಸಿದ.
ನಿಜ ಬಸವರಾಜುವಿಗೆ ಲೈಫಲ್ಲಿ ಸೆಟಲ್ ಆದ ಮೇಲೆ ಮದುವೆ ಆಗೋಣ ಎಂದಿತ್ತು. ವಿಕ್ರಂ ಬಳಿ ಕೆಲಸಕ್ಕೆ ಸೇರಿದ ಮೇಲೆ ಅವನು ಒಂದರ ಹಿಂದೆ ಒಮ್ದು ಕೇಸು ರಿಜೆಕ್ಟ್ ಮಾಡುವದನ್ನು ಕಂಡು ಬೇಸತ್ತು ಹೋಗಲಿ ಒಂದೇ ಒಂದು ಕೇಸು ಮುಗಿದ ಮೇಲೆ ಆಗೋಣ ಎನ್ನುವ ಸ್ಥಿತಿಗೆ ಬಂದಾಗಿತ್ತು. ಆಗಲೇ ಊರಲ್ಲಿ ಸವಿತಾ ಎಂಬ ಹುಡುಗಿಯನ್ನು ಇಷ್ಟ ಪಟ್ಟಿದ್ದ.
ಅಂತೂ ಇಂತೂ ಪೋಲೀಸ್ ಸ್ಟೇಶನ ತಲುಪಿದರು..
"ಬನ್ನಿ ಬನ್ನಿ" ಎಂದು ಸ್ವಾಗತ ಕೋರಿದರು ಸಬ್ ಇನ್ಸ್ ಪೆಕ್ಟರ್ ಪೃಥ್ವಿರಾಜ್.
"ಹಲೋ ಪೃಥ್ವಿ ಹೇಗಿದೀರಾ?" ಎಂದು ಕೇಳಿದ ವಿಕ್ರಂ.
"ನಾನು ಬಿಡಿ ಗಟ್ಟಿ ಮುಟ್ಟಾಗಿದೀನಿ" ಎಂದು ಜೋರಾಗಿ ನಕ್ಕರು ಪೃಥ್ವಿರಾಜ್.
"ಸರ್ ಅದು ಶಾಂತೀಲಾಲರ ಕೇಸು ನಾನು ತಗೊಂಡಿದೀನಿ. ಅದರ ಡಿಟೈಲ್ಸ ಬೇಕಾಗಿತ್ತು" ಎಂದ ವಿಕ್ರಂ.
ಇದಕ್ಕಿದ್ದಂತೆಯೇ ಗಂಭೀರರಾದ ಪೃಥ್ವಿರಾಜ್ ಅಲ್ಲಾರಿ ಹೋಗಿ ಹೋಗಿ ಈ ಕೇಸು ತಗೊಂಡಿದ್ದೀರಲ್ಲ. ಏನ್ರಿ ಪ್ರೂವ್ ಮಾಡೋದಿದೆ ಇದರಲ್ಲಿ? ಇದು ಹಂಡ್ರೆಡ್ ಪರ್ಸೆಂಟ್ ಸುಸೈಡ್ ಕೇಸ್" ಎಂದು ಕೇಳಿದರು.
"ಶಾಂತಿಲಾಲರು ನಮ್ಮ ತಂದೆಯವರಿಗೆ ಪರಿಚಯ, ಅದಕ್ಕೆ ತಗೋಬೇಕಾಗಿ ಬಂತು" ಎಂದ ವಿಕ್ರಂ.
ಹಾಗೇ ನಿಟ್ಟುಸಿರು ಬಿಟ್ಟ ಪೃಥ್ವಿರಾಜ್ ಫೈಲ್ ಒಂದು ತೆಗೆದುಕೊಂಡು ಬಂದರು. ಕಾನ್ಸ್ ಸ್ಟೇಬಲ್ ಒಬ್ಬರು ಒಂದಿಷ್ಟು ವಸ್ತುಗಳನ್ನು ತಂದು ಪೃಥ್ವಿರಾಜ್ ಮುಂದಿರಿಸಿದರು.
"ಇದು ನೋಡಿ ಅನುಷಾ ಬರೆದಿಟ್ಟ ಆತ್ಮಹತ್ಯಾ ಪತ್ರ" ಎಂದು ವಿಕ್ರಂ ಕೈಗೆ ಹಾಳೆಯೊಂದನ್ನು ನೀಡಿದರು.
"ಈ ಬರಹವನ್ನು ಅನುಷಾಳ ಕೈಬರಹದೊಂದಿಗೆ ಇಬ್ಬರು ಫಾರೆನ್ಸಿಕ್ ತಜ್ಞರು ಹೋಲಿಕೆ ಮಾಡಿ ನೂರಕ್ಕೆ ನೂರು ಹೋಲುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ." ಎಂದು ರಿಪೋರ್ಟ ಗಳನ್ನು ತೋರಿಸಿದರು.
ವಿಕ್ರಂ ಓದಿ ಹೇಳಲಾರಂಭಿಸಿದ.
"ಹೇ ಪ್ರಾಣಕಾಂತಾ,
ನಿನ್ನ ಆಗಲಿಕೆಯ ವಿರಹ ವೇದನೆಯನ್ನು ಸಹಿಸಲಾರೆ. ಇನ್ನು ಬದುಕಿ ಸಾಧಿಸುವದಾದರೂ ಏನು?
ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಕಾರಣ.
ಇಂತಿ ನಿನ್ನ
ಪ್ರಿಯತಮಾ
ಅನುಷಾ"
ಬಸವರಾಜು ತನ್ನ ಪುಟ್ಟ ಕ್ಯಾಮರಾದಲ್ಲಿ ಅದರ ಚಿತ್ರ ತೆಗೆದು ಕೊಂಡ.
"ಸರ ಈ ಪ್ರಾಣಕಾಂತಾ ಅಂದ್ರೆ ಯಾರ್ರೀ? ಇವಳsss ಭಾಯ್ ಫ್ರೆಂಡ್ ಇರಬಹುದಾ?" ಎಂದ ಬಸವರಾಜು.
"ರೀ ನಿಮಗೆ ಕನ್ನಡ ತಿಳಿಯೋದಿಲ್ವೇನ್ರಿ? ಪ್ರಾಣಕಾಂತಾ ಅಂದ್ರೆ ಗಂಡ ಅಂತಾ."
ಪತ್ರವನ್ನು ವಿಕ್ರಂ ಸೂಕ್ಷ್ಮವಾಗಿ ಗಮನಿಸಿದ. "ಹಾಳೆ ತುಂಬಾ ಹಳೆಯದು ಅನ್ನಿಸುತಿತ್ತು. ಸಹಿ ಬೇರೆಲ್ಲ ಅಕ್ಷರಗಳಿಗಿಂತ ಎದ್ದು ಕಾಣುತಿತ್ತು.
"ಈ ಸಹಿ ಕೂಡಾ ಮ್ಯಾಚ್ ಆಗ್ತಾ ಇದೆಯಾ?" ಎಂದು ಪೃಥ್ವಿಯವರನ್ನು ಕೇಳಿದ ವಿಕ್ರಂ.
"ಹುಂ ಇವಳ ಪಾಸ್ ಪೋರ್ಟ್ ನಲ್ಲಿನ ಸಹಿಗೆ ಮ್ಯಾಚ್ ಆಗ್ತಾ ಇದೆ." ಎಂದ ಪೃಥ್ವಿ ಇದು ಅನುಷಾ ಅತ್ಮಹತ್ಯೆಗೆ ಬಳಸಿದ್ದು ಎಂದು ಹಗ್ಗವೊಂದನ್ನು ಕೊಟ್ಟರು.
ಬಿಳಿಯ ಬಣ್ಣದ ಹಗ್ಗ. ಮಧ್ಯೆ ತುಂಡಾಗಿದ್ದು ಕಬ್ಬಿಣದ ಕೊಂಡಿಯಿಂದ ಜೋಡಿಸಲಾಗಿತ್ತು.
ಎಫ್ ಐ ಆರ್ (FIR) ಓದಿದ ವಿಕ್ರಂ ಅದರಲ್ಲಿನ ಕೆಲವು ಅಂಶಗಳನ್ನು ಬರೆದುಕೊಳ್ಳಲು ಬಸವರಾಜುಗೆ ಬರೆದುಕೊಳ್ಳಲು ಸೂಚಿಸಿದ.
"ಅನುಷಾಳು ಕುಡಿದ ಹಾಗೆ ಅನಿಸುತಿತ್ತು ಅಂತಾ ಇಲ್ಲಿ ಬರೆದಿದ್ದಾರಲ್ಲ" ಕೇಳಿದ ವಿಕ್ರಂ.
"ಹೌದು ಅವಳ ಹೊಟ್ಟೆಯಲ್ಲಿ ಆಲ್ಕೋಹಾಲ್ ಇತ್ತು ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಸಹ ಬಂದಿದೆ. ಆದ್ರೆ ಮೈಮೇಲೆ ಇನ್ನಾವ ಗಾಯವೂ ಇಲ್ಲ. ಸಾವು ಕೂಡಾ ಬರೀ ನೇಣಿನ ಹಗ್ಗದಿಂದಲೇ ಆಗಿದೆ ಅನ್ನುವದು ಡಾಕ್ಟರ್ ಅಭಿಪ್ರಾಯ. ಆಕೆಯನ್ನು ಗಂಡ ಶೋಷಿಸುತ್ತಿದ್ದ ಅನ್ನುವದಕ್ಕೆ ಯಾವ ಪುರಾವೆಯೂ ಇಲ್ಲ. ಗಂಡ ಹೆಂಡತಿ ಇಬ್ಬರೂ ಚೆನ್ನಾಗಿದ್ದರು ಅನ್ನುವದು ಸ್ನೇಹಿತರ ಅಭಿಪ್ರಾಯ. ಅವಳ ಮೊಬೈಲಿನಲ್ಲೂ ಯಾವ ಕಾಲ್ ಸಹ ಇಲ್ಲ. ಕೊನೆಯ ಕಾಲ್ ಕೂಡಾ ಚಂದ್ರಹಾಸನದೇ." ಎಂದರು ಪೃಥ್ವಿರಾಜ್..
ಪೃಥ್ವಿರಾಜ್ ಗೆ ಧನ್ಯವಾದ ಹೇಳಿ ಇಬ್ಬರು ಹೊರಟರು. ಹೊರಗೆ ಹೋಗುತ್ತಿದ್ದಂತೆಯೇ ಬಸವರಾಜು ಹೇಳಿದ "ಸಾಹೆಬ್ರೆ ನಂಗss ಇದ್ರಾಗ ಆಕಿ ಗಂಡ ಚಂದ್ರಹಾಸನ ಕುತಂತ್ರ ಐತಿ ಅಂತಾ ಅನ್ಸ್ತೈತ್ರಿ." ಅಂದ.
ಸ್ವಲ್ಪ ದೂರ ನಡೆಯುವಷ್ಟರಲ್ಲಿ "ಸರss ಇಲ್ಲೇ ಹತ್ರ ಗ್ಯಾರೇಜ್ ಐತ್ರಿ. ಬೈಕ್ ಆದ್ರ ತಗೊಂಡು ಬರೋಣೇನ್ರಿ" ಕೇಳಿದ ಬಸವರಾಜು.
ಸರಿ ಎಂದ ವಿಕ್ರಂ.
...ಇಬ್ಬರೂ ಬೈಕ್ ಮೇಲೆ ಚಂದ್ರಹಾಸನ ಮನೆ ಕಡೆಗೆ ಹೊರಟಿದ್ದರು. ರಾತ್ರಿ 7ಕ್ಕೆ ಬರುವಂತೆ ತಿಳಿಸಿದ್ದ ಚಂದ್ರಹಾಸ.
ಚಂದ್ರಹಾಸನ ಮನೆ ಹುಡುಕುವದು ಅಷ್ಟು ಕಷ್ಟ ಆಗಲಿಲ್ಲ. ತುಂಬಾ ಭವ್ಯವಾದ ಬಂಗಲೆ. ಆಗರ್ಭ ಶ್ರೀಮಂತರೇ ಸರಿ. ಚಂದ್ರಹಾಸ ಬನ್ನಿ ಕುಳಿತುಕೊಳ್ಳಿ ಎಂದು ಸನ್ನೆ ಮಾಡಿದ.
"ಆ ಮುದುಕನಿಗೆ ಅರಳು-ಮರುಳು. ಈ ಆತ್ಮಹತ್ಯೆಯನ್ನು ಕೊಲೆ ಅನ್ನುತ್ತಿದ್ದಾನೆ. " ಎಂದ.
"ಆ ದಿನ ಏನಾಯ್ತು ಅಂತಾ ವಿವರವಾಗಿ ತಿಳಿಸ್ತೀರಾ" ಎಂದು ಕೇಳಿದ ವಿಕ್ರಂ.
"ಅನುಷಾ ಅಂದು ಕರುಳಿನ ಕಣ್ಣೀರು ಸಿನಿಮಾಗೆ ಹೋಗೋಣ ಎಂದಿದ್ದಳು. ನಾನೂ ಸಹ ಓಕೆ ಎಂದಿದ್ದೆ. ಕನ್ನಿಕಾ ಚಿತ್ರಮಂದಿರದಲ್ಲಿ 6 ಗಂಟೆ ಶೋಗೆ ಟಿಕೆಟ್ ಸಹ ಬುಕ್ ಮಾಡಿದ್ದೆ. ಅವಳು ಅಂದು 5.30 ಕ್ಕೆ ಬಂದು ಕಾಯುತ್ತಿದ್ದಳು. ಆದರೆ ಅಂದು ರಾತ್ರಿ 8 ಗಂಟೆಗೆ ಅರ್ಜೆಂಟ್ ಕೆಲಸ ಮುಗಿಸಬೇಕಿತ್ತು. ಆದ್ದರಿಂದ ನಾನು ಬರುವದು 9 ಗಂಟೆ ಆಗುತ್ತೆ ಅದಕ್ಕೆ ವಾಪಸ್ ಮನೆಗೆ ಹೋಗುವಂತೆ ತಿಳಿಸಿದೆ. ರಾತ್ರಿ ನಾನು ಮನೆಗೆ ಬಂದಾಗ ಬಾಗಿಲು ತೆರೆದೇ ಇತ್ತು. ಅವಳು ರೂಮಿನಲ್ಲಿ ಫ್ಯಾನಿಗೆ ನೇತಾಡುತ್ತಿದ್ದಳು. ನಾನು ಅವಳನ್ನು ಇಳಿಸಿದೆ. ಅವಳ ಜೀವ ಹೋಗಿತ್ತು" ಎಂದು ಮುಗಿಸಿದ ಚಂದ್ರಹಾಸ. ಅಷ್ಟು ಹೇಳುವಷ್ಟರಲ್ಲಿ ಆತನ ಕಣ್ಣು ಕಣ್ಣೀರಿನಿಂದ ತುಂಬಿತ್ತು.
ವಿಕ್ರಂ "ಅನುಷಾಗೆ ಮದ್ಯ ಕುಡಿಯುವ ಅಭ್ಯಾಸವಿತ್ತೇ? ಅವಳ ಹೊಟ್ಟೆಯಲ್ಲಿ ಆಲ್ಕೋಹಾಲ್ ಸಿಕ್ಕಿದೆ"
"ಇಲ್ಲ ನನ್ನ ಅನುಷಾ ಕುಡಿಯುತ್ತಿರಲಿಲ್ಲ. ಬಹುಶಃ ಕೆಮ್ಮಿನ ಔಷದಿ ತೆಗೆದುಕೊಂಡಿರಬಹುದು" ಹೇಳಿದ ಚಂದ್ರಹಾಸ.
ವಿಕ್ರಂ "ತಮ್ಮಿಬ್ಬರ ಮಧ್ಯೆ ಜಗಳ ಏನಾದ್ರೂ ಆಗಿತ್ತೇ?" ಎಂದು ಕೇಳಿದ.
ಅದಕ್ಕೆ ಚಂದ್ರಹಾಸ ಹೇಳಿದ "ಇಲ್ಲ ಹಾಗೇನೂ ಆಗಿರಲಿಲ್ಲ. ನನ್ನ ಅನುಷಾ ತುಂಬಾ ಸೂಕ್ಷ್ಮ ಮನಸ್ಸಿನವಳು ನಾನು ಬರಲಿಲ್ಲ ಅಂತಾ ಬೇಸರವಾಗಿ ಹೀಗೆ ಮಾಡಿಕೊಂಡಿದ್ದಾಳೆ. ನನಗೆ ಯಾರ ಮೇಲೂ ಸಂಶಯವಿಲ್ಲ. ಆತುರ ಪಟ್ಟು ಅನುಷಾ ನನ್ನ ಬಿಟ್ಟು ಹೊರಟು ಹೋದಳು" ಎಂದು ಅಳತೊಡಗಿದ.
ಈಗ ಜಾಗ ಖಾಲಿ ಮಾಡುವದು ಸರಿಯೆನಿಸಿ ವಿಕ್ರಂ ಥ್ಯಾಂಕ್ಸ್ ಹೇಳಿ ಹೊರಟ.
ರೂಮಿನ ಕಡೆಗೆ ಹೋಗುತ್ತಿದ್ದಾಗ ಬಸವರಾಜು ವಿಕ್ರಂಗೆ ಕೇಳಿದ "ಏನಂತಿರ್ರಿ ಸರsss?"
"ಚಂದಹಾಸ ಸತ್ಯ ಹೇಳುತ್ತಿಲ್ಲ ಅದು ಮಾತ್ರ ನಿಜ. ನೋಡೋಣ. ನಾಳೆ ಎಲ್ಲಾ ವಿವರ ಸಂಗ್ರಹಿಸೋಣ. ಆಗ ಗೊತ್ತಾಗುತ್ತೆ ಸತ್ಯ ಏನು ಅಂತಾ" ಎಂದು ಹೇಳಿದ.
ವಿಕ್ರಂಗೆ ಏಕೆ ಹೀಗೆ ಅನಿಸಿತು ಅಂತಾ ತಿಳಿಯದ ಬಸವರಾಜು ಸುಮ್ಮನೆ ತಲೆಯಾಡಿಸಿದ.
ಈ ಕಥೆಯ ಮುಂದಿನ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 4
ಸಾಲುಗಳು
- Add new comment
- 5267 views
ಅನಿಸಿಕೆಗಳು
ನಮಸ್ಕಾರ ರಾಜೇಶ ಹೆಗಡೆ
ನಮಸ್ಕಾರ ರಾಜೇಶ ಹೆಗಡೆ ಅವರಿಗೆ,
ಕಗ್ಗಂಟು - ಪತ್ತೇದಾರಿ ಕಥೆ ತುಂಬಾ ಚೆನ್ನಾಗಿ ಮೂಡಿ ಬರುತಿದೆ,
ಮುಂದಿನ ಭಾಗ ಬೇಗ ಬರಲಿ, and its very interesting :)
ಧನ್ಯವಾದಗಳು ಅಶ್ವಿನಿ
ಧನ್ಯವಾದಗಳು ಅಶ್ವಿನಿ ಅವರೇ,
ಖಂಡಿತ ಮುಂದಿನ ಭಾಗ ಬೇಗ ಬರಲಿದೆ. ನಿರೀಕ್ಷಿಸಿ. :)
ಪ್ರಿಯ ರಾಜೇಶ ಹೆಗಡೆಯವರೆ, ನಿಮ್ಮ
ಪ್ರಿಯ ರಾಜೇಶ ಹೆಗಡೆಯವರೆ,
ನಿಮ್ಮ ಕಥೆ ತುಂಬಾ ಚೆನ್ನಾಗಿ ಬರುತಿದೆ, ಆದರೆ ತುಂಬಾ ತಡವಾಗಿ & ತುಂಬಾ ಕಡಿಮೆ ಬರುತಿದೆ. ದಯವಿಟ್ಟು ಆದಷ್ಟು ಬೇಗ, ಸ್ವಲ್ಪ ಕಥೆಯನ್ನು ಹಿಗ್ಗಿಸಿ ಪ್ರಕಟಿಸಿ.
ಧನ್ಯವಾದಗಳು ಹ್ಯಾರಿ (?)
ಧನ್ಯವಾದಗಳು ಹ್ಯಾರಿ (?) ಅವರೇ,
ಖಂಡಿತ ಮುಂದಿನ ಭಾಗ ಆದಷ್ಟು ಬೇಗ ಬರೆಯುತ್ತೇನೆ. ಸ್ವಲ್ಪ ಜಾಸ್ತಿ ಬರೆಯುತ್ತೇನೆ. :)
ರಾಜೇಶ್, ತುಂಬಾ ಚೆನ್ನಾಗಿದೆ...
ರಾಜೇಶ್,
ತುಂಬಾ ಚೆನ್ನಾಗಿದೆ... ಮುಂದುವರಿಸಿ, ಈ ಕಗ್ಗಂಟು ಬಿಡಿಸಲು ಇನ್ನು ಎಷ್ಟು ದಿನಕಾಯಬೇಕು ನಾವು.ನನಗೆ ಬಸವರಾಜುವಿನ ಪಾತ್ರ ಅವನ ಮುಗ್ಧತೆ ಬಹಳ ಹಿಡಿಸಿತು..
ಧನ್ಯವಾದಗಳೊಂದಿಗೆ..
ವಂದನೆಗಳು
ಓದುಗರು
ಕುವೈಟ್..
ಹೆಸರೇ ಹೇಳುತ್ತಿದೆಯಲ್ಲವೇ ಈ
ಹೆಸರೇ ಹೇಳುತ್ತಿದೆಯಲ್ಲವೇ ಈ ರಹಸ್ಯ ಬಿಡಿಸುವದು ಕಷ್ಟ ಕಗ್ಗಂಟು ಅಂತಾ. :D ತಮಾಷೆಗೆ ಹಾಗೆಂದೆ.
ಕ್ಷಮಿಸಿ, ಇತರ ಕೆಲಸಗಳ ಒತ್ತಡ ಜಾಸ್ತಿ ಇರುವದರಿಂದ ಬೇಗ ಬರೆಯಲು ಸಾಧ್ಯವಾಗಲಿಲ್ಲ. ಮುಂದಿನ ಭಾಗ ಬೇಗ ಬರಲಿದೆ. ನಿರೀಕ್ಷಿಸಿ.
ಹಾಯ್ ಸಾರ್. ತಡವಾಯಿತು ಅಂತ ಹೇಳೋಣ
ಹಾಯ್ ಸಾರ್.
ತಡವಾಯಿತು ಅಂತ ಹೇಳೋಣ ಅಂದ್ರೆ " Full Kelsa" ಅನ್ನೋ ನಾಮಫಲಕ ಅಡ್ಡಬರುತ್ತೆಯಾದ್ದರಿಂದ ಅದನ್ನು ಬದಿಗಿಡುತ್ತೇನೆ. ಕಥೆ, ತನ್ನ ಸೊಗಸಾದ ನಿರೂಪಣೆಯಿಂದ ನಿರೀಕ್ಷೆಗೂ ಮೀರಿದ ಕುತೂಹಲ ಕಾಯ್ದುಕೊಂಡು ಬರುತ್ತಿದೆ. ಒಂದೇ ಸಂಚಿಕೆಗೆ ಮುಗಿದುಹೋಗಬಾರದಾ ಎನ್ನುವ ಸ್ವಾರ್ಥ ಕೆಲವೊಮ್ಮೆ ಕುತೂಹಲ ತಡೆಯಲಾಗದೇ ಮೂಡಿದರೂ, " Full Kelsa" ಕ್ಕೋಸ್ಕರ ಸುಮ್ಮನಾಗುತ್ತೇನೆ.
ಧನ್ಯವಾದಗಳೊಂದಿಗೆ.
ಹಾಯ್ ಶ್ರೀನಿವಾಸ್, ಧನ್ಯವಾದಗಳು
ಹಾಯ್ ಶ್ರೀನಿವಾಸ್,
ಧನ್ಯವಾದಗಳು :)
ಹೂಂ ಕೆಲಸದ ಒತ್ತಡ ಜಾಸ್ತಿ ಇದೆ ಅದಕ್ಕೆ ಲೇಟಾಗಿ ಬರೆಯ ಬೇಕಾಗಿ ಬಂತು. :(
ಮುಂದಿನ ಭಾಗ ಬೇಗ ಬರಲಿದೆ ನಿರೀಕ್ಷಿಸಿ. :)
ಮುಂದ??? ಬೇಗ ಬರಿರಲ್ಲ...
ಮುಂದ??? ಬೇಗ ಬರಿರಲ್ಲ...
:) ಚಿಕ್ಕದಾಗಿ ಚೊಕ್ಕವಾಗಿದೆ. ಬರಹ ಮುಂದುವರೆಸಿ...
ಮುಂದ??? ಬೇಗ ಬರೀರಲ್ಲ...
ಮುಂದ??? ಬೇಗ ಬರೀರಲ್ಲ...
:) ಚಿಕ್ಕದಾಗಿ ಚೊಕ್ಕವಾಗಿದೆ. ಬರಹ ಮುಂದುವರೆಸಿ...
ಗುರುವೇ ರಾಜೇಶ
ಗುರುವೇ ರಾಜೇಶ ಹೆಗ್ಡೆಯವರೇ...
ನಿಮಗಂತು ದೊಡ್ಡ ನಮಸ್ಕಾರ ಕಣ್ರೀ...!
ಯಾಕೆ ಗೊತ್ತಾ... ಎಂದಿನಂತೆ ನಿಮ್ಮ ಅತಿ ಕೆಟ್ಟ 'ಪತ್ತೇದಾರಿ'!?! ಕಥೆಯ ಮುಂದಿನ ಭಾಗದ ಪತ್ತೆಯೇ ಇಲ್ಲದಿರುವುದು. 'ಬದುಕು ಇಲ್ಲದ ಬಡಗಿ ಮಗಿನ ತಿಗ ಕೆತ್ತಿದ' ಹಾಗೆ ಇಂತಹ ಗೊತ್ತು ಗುರಿಯಿಲ್ಲದ ಕಥೆಗಳನ್ನು ಬರೆಯೋದ ಬಿಟ್ಟು ನಿಮಗೆ ಒಳ್ಳೆಯದಾಗುವಂತಹ ಬೇರೇನಾದರೂ ಕೆಲಸವನ್ನು ಮಾಡಿ ಹಾಗೂ ಗೌರವಾನ್ವಿತ 'ವಿಸ್ಮಯನಗರಿ' ಓದುಗರನ್ನು ರಕ್ಷಿಸಿ.
ನಾನು ಪಳಗಿದ ಕಥೆಗಾರ ಅಲ್ಲವೆಂದು
ನಾನು ಪಳಗಿದ ಕಥೆಗಾರ ಅಲ್ಲವೆಂದು ಆರಂಭದಲ್ಲೇ ಹೇಳಿದ್ದೇನೆ.ನಿಮಗೆ ನನ್ನ ಈ ಕಥೆ ಇಷ್ಟವಾಗದಿದ್ದರೆ ದಯವಿಟ್ಟು ಓದಬೇಡಿ.
ಇದರ ಮುಂದಿನ ಭಾಗ ಅತಿಶೀಘ್ರವಾಗಿ ಪ್ರಕಟವಾಗಲಿದೆ.
ಆಫೀಸಿನ ಕೆಲಸ ತುಂಬಾ ಇರುವದರಿಂದ ತಡವಾಗುತ್ತಿದೆ. :(