Skip to main content

ವಾಲ್ಕಿರೀ -2008 :ಹಿಟ್ಲರನ ಹತ್ಯಾ ಯತ್ನದ ಸಿನೆಮ ಹೇಗಿದೆ?

ಇಂದ venkatb83
ಬರೆದಿದ್ದುDecember 16, 2012
5ಅನಿಸಿಕೆಗಳು

ವಾಲ್ಕಿರೀ -2008 ಚಿತ್ರದ ಬಗ್ಗೆ  ಜಾಹೀರಾತು ಒಂದನ್ನು ದಿನ ಪತ್ರಿಕೆಯಲ್ಲಿ  ನೋಡಿ  - ಕಪ್ಪು ಬಿಳುಪಿನ  ಆ ಜಾಹೀರಾತು ಅಷ್ಟೇನು  ಹಿಡಿಸದೆ  ಈ ಚಿತ್ರ  ಯಾವ್ದೋ  ಹಳೆಯ ಕಾಲದ ವಿಷ್ಯ ವಸ್ತುವಿನ ಚಿತ್ರ ಇರಬಹದು ಎಂದು  ಆ ಬಗ್ಗೆ ಹೆಚ್ಚಿಗೆ ಗಮನ  ಹರಿಸದೆ ಸುಮ್ಮನಾದೆ...!! ಆಮೇಲೆ  ಮೊನ್ನೆ ಮೊನ್ನೇ-ಟಾಮ್  ಕ್ರೂಸ್  (ಈ ಚಿತ್ರದ  ನಟ -ಹಾಲಿವುಡ್ ನ ಖ್ಯಾತ ನಟರಲ್ಲೊಬ್ಬ)ನ ಡೀ ವಿ ಡಿ  ಕೊಂಡು  ತಂದಾಗ  ಅದರಲ್ಲಿದ್ದ  ಚಿತ್ರಗಳಲ್ಲಿ ಇದೂ ಒಂದು... ಹೇಗೂ ಇದೆಯಲ್ಲ ನೋಡುವ ಎಂದು  ಇಷ್ಟವಿಲ್ಲದ  ಇಷ್ಟದೊಡನೆ  ಚಿತ್ರ ನೋಡಲು  ಆರಂಭ ಬೋರ್ ಅನ್ನಿಸಿದರೂ , ಚಿತ್ರ ಮುಂದುವರೆಯುತ್ತಿದ್ದಂತೆ  ತದೆಕಚಿತ್ತದೊಡನೆ  ಗಲ್ಲಕ್ಕೆ ಕೈ ಆನಿಸಿ  ಪೂರ್ತಿ ಮುಗ್ಯುವವರೆಗೆ  ನೋಡಿದೆ ...!!

 ಈ ಚಿತ್ರವನ್ನು ಮತ್ತು ನಮ್ಮ  'ಕಾಲಾಪಾನಿ'-1996  ಚಿತ್ರವನ್ನು ಸರದಿಯಲಿ  ಒಂದರ ನಂತರ ಒಂದು ದಿನ ಬಿಟ್ಟು ದಿನ  ನೋಡಿದ್ದು  ಎರಡು ಚಿತ್ರಗಳೂ ವಿಪರೀತ  ಕಾಡಿದವು..  ಚಿತ್ರ ವೀಕ್ಷಣೆ ಮುಗಿಸಿ ಕೆಲ ಘಂಟೆಗಳವರೆಗೆ  ಅದೇ ಸನ್ನಿವೇಶಗಳು -ಕಣ್ ಮುಂದೆ ಕುಣಿಯುತ್ತಿದ್ದವು  ಮನಕೆ ಒಂಥರಾ ಭಾವ... ಚಿತ್ರ ವೀಕ್ಷಿಸಿ  ಮನದಲ್ಲಿ ಬಂದ  ಭಾವ ?

ಸೂಪರ್... ಸೋ ಫೈನ್ ... ಇದಪ್ಪ ಚಿತ್ರ ಎಂದರೆ.... ವಾಹ್ ವಾಹ್  ಅನ್ನದೆ ಇರದಾದೆ.....!!

ಕಥೆ : 

 2 ನೆ ಮಹಾಯುದ್ಧ ಸಂದರ್ಭದಲಿ  ಹಿಟ್ಲರ್  ಯುದ್ಧ ತಯಾರಿ ಗೆಲ್ಲುವ ಇರಾದೆಯಲ್ಲಿದ್ದರೆ  ಅವನ ಆಶಾ ಭಂಗವಾಗಿ   ಮಿತ್ರ ಪಡೆಗಳು  ಯುದ್ಧ ಗೆಲ್ಲುತ್ತ  ಮುಂದೆ ಸಾಗಿ ಬರುತ್ತಿರಲು   ಹಿಟ್ಲರನ ಸೇನೆಯ  ಕೆಲವರಿಗೆ  ಈ ಯುದ್ಧ  ಸೋತು ಹಿಟ್ಲರ್ ಮಾಡಿದ ತಪ್ಪುಗಳಿಗೆ  ತಾವ್ ಜವಾಬ್ಧಾರಿ ಆಗಿ ಶಿಕ್ಷೆಗೆ ಗುರಿ ಆಗುವ ಭಾವ... ಅದ್ಕೆ ಮೊದಲೇ  ಸೇನಾ ಧಂಗೆ ಎಬ್ಬಿಸಿ ಹಿಟ್ಲರ್ ಪದ ಚ್ಯುತಿ ಇಲ್ಲವೇ ಹತ್ಯ ಮಾಡಿ ದೇಶವನ್ನು ತಮ್ ಕೈ ವಶ  ಮಾಡಿಕೊಳ್ಳುವ ಇರಾದೆ...

ಹಲವು ತಪ್ಪುಗಳಿಗೆ ಕಾರಣ ಆಗಿ  ದೇಶದ ಸಂಕಷ್ಟಕ್ಕೆ ಕಾರಣ ಆದ   ಹಿಟ್ಲರನ  ಹತ್ಯೆಗೆ ಕೆಲ ಮಿಲಿಟರಿ ಉನ್ನತ ಅಧಿಕಾರಿಗಳು   ಸಂಚು ರೂಪಿಸುವರು.. ಅದರ ಮುಂದಾಳತ್ವ ಕರ್ನಲ್ ಕಾಸ್ ವ್ಯಾನ್ ಸ್ಟಫಾನ್ ಬರ್ಗ್   (Colonel Claus von Stauffenberg)ದು.

ಆದರೆ ಹಿಟ್ಲರ್ನನ್ನು   ದ್ವೇಷಿಸುವ  ಹಲವು ಜನ  ಇರುವ ಹಾಗೆ  ಅವನನ್ನು ರಕ್ಷಿಸಲು ಸಹಾ  ಹಲವು ಜನ ಇರುವರು..

ಆವರೆಲ್ಲರ  ಧ್ರುಸ್ತಿಗೆ ಬೀಳದೆ  ಸಂಶಯ ಬಾರದಂತೆ  ಈ ಯತ್ನದ  ಸಫಲತೆಗೆ ಯತ್ನಿಸುವ  ಇವರಿಗೆ 108 ವಿಘ್ನಗಳು... 

ಅಲ್ಲದೆ ಈ ಯತ್ನ  ವಿಫಲ ಆದರೆ  ಆಗುವ  ಅಪಾಯ , ವಿಪ್ಲವದ ಚಿಂತೆ..

ಹಲವು ಜನರಿಗೆ ಸಾಕ್ಷಾತ್ ದೈವ ಸಮಾನ ಕೆಲವರಿಗೆ  ದೆವ್ವ ಆಗಿರುವ   ಫುಹರರ್(fuhrar ) -ಹಿಟ್ಲರ್ನನ್ನು  ಸಾಯಿಸುವದು ಅಸ್ಟು  ಸುಲಭ  ಸಾಧ್ಯವೇ? ಈ ವಿಷಯವನ್ನು ಕೆಲವೇ ಆಪ್ತರಿಗೆ  ಹೇಳಿ-ಸಂಚು ರೂಪಿಸಿ ರಹಸ್ಯವಾಗಿ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಹಲವು ಅಡೆ  ತಡೆಗಳು. ಅಪಾಯದ ಸನ್ನಿವೇಶಗಳು.. ಕರ್ನಲ್ ಮತ್ತು ತಂಡ  ಪಕ್ಕಾ ಪ್ಲಾನ್ ಮಾಡಿ ಕರಾರುವಾಕಾಗಿ ಗ್ರಹ್ಸಿ ಈ  'ಅಪರೇಷನ್  ವಾಲ್ಕಿರಿ' ಗೆ ಸಜ್ಜು ಆಗುವರು..

ಒಂದು ಅಪಾಯಕಾರಿ ಸನ್ನಿವೇಶದಲ್ಲಿ  'ಒಕ್ಕಣ್ಣ' ಆಗುವ ಟಾಮ್  ಕ್ರೂಸ್ -ಈ ಕಾರ್ಯಕ್ಕೆ ನಾಯಕ..!! ಹಿಟ್ಲರನ ಮೇಲಿನ ಹತ್ಯ ಪ್ರಯತ್ನ  ಯಶಸ್ವಿ ಆಯಿತೆ? ವಿಫಲವೇ ?

ಕ್ಲೈಮಾಕ್ಸ್  ಮುಂಚಿನ  ಈ ಸನ್ನಿವೇಶ  ಹೃದಯ ಬಡಿತವನ್ನು ಹೆಚ್ಚು ಮಾಡುವುದು ಕೇವಲ ಕರ್ನಲ್ ಗೆ ಮಾತ್ರ ಅಲ್ಲ--ನಮಗೂ....!! ಹೇಗೆ?

ಚಿತ್ರ ವೀಕ್ಷಿಸಿ...!! ಈ ಚಿತ್ರ ಅಂದು ನಡೆದ ನಿಜ ಘಟನೆಯೊಂದರ  ಚಿತ್ರ ರೂಪ...ಅಂದಿನ  ಎಲ್ಲ ಸನ್ನಿವೇಶಗಳನ್ನು -ವೇಷ ಭೂಷಣ-ಹಾವ ಭಾವ-ಯುದ್ಧ-ವಿಮಾನಗಳು- ಇತ್ಯಾದಿ ಎಲ್ಲವನ್ನು ಆದಸ್ತು ಸಹಜವಾಗಿ  ನಿರ್ಮಿಸಿ ಚಿತ್ರ ತೆಗೆದಿರುವರು..

ಕಪ್ಪು ಬಿಳುಪು-ಕಲರ್  ಛಾಯಾಗ್ರಹಣ  ಚಿತ್ರವನ್ನು ಆದಸ್ಟು  ಸಹಜವಾಗಿಸಿದೆ ಹಿತ ಅನ್ನಿಸುವುದು ,ಚಿತ್ರದಲ್ಲಿ ಕಲರ್ ಅಂತ ಇದ್ದು  ಹಲವು ಬಾರಿ ಕಣ್ಣಿಗೆ ಬಿದ್ರೆ ಅದು ಸ್ವ್ವಸ್ತಿಕ್ ಚಿಹ್ನೆ..!!

ನಟನೆ-ನಿರ್ಮಾಣ-ನಿರ್ದೆಶನ-ಪ್ರಸಾದನ,ಛಾಯಾಗ್ರಹಣ,ಬಹುತೇಕ ಎಲ್ಲ ವಿಭಾಗಗಳಲ್ಲಿ  ಅತ್ಯುತ್ತಮ  ಕೆಲಸ.. ಟಾಮ್  ಕ್ರೂಸ್ -ನಟನೆ - ಹಲವು ಪಾತ್ರಧಾರಿಗಳ ಭಾಷ  ಉಚ್ಚಾರಣೆ ಅಚ್ಚರಿಗೊಳಿಸುವುದು .

ಚಿತ್ರ ನೋಡಿ ಮುಗಿಸಿದ  ಮೇಲೆ  ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ  ಇದ್ದು  ಅಂತ್ಯ  ಕಣ್ಣಾಲಿ ತುಂಬಿಸುವುದು... ಚಿತ್ರ ನೋಡಿದ ಮೇಲೆ  ನಮ್ಮ ದೇಶದ  ಸ್ವಾತಂತ್ಯ್ರ  ಸಂಗ್ರಾಮದ ಸಮಯದಲಿ ಕೆಲ ಹುತಾತ್ಮರಾದವರ  ಸನ್ನಿವೇಶಗಳು ಘಟನೆಗಳು  ನೆನಪಿಗೆ ಬಂದರೆ  ಅಚ್ಚರಿ ಇಲ್ಲ....!!

 

ಹಿಟ್ಲರ್ ಮೇಲೆ ಹತ್ಯ ಪ್ರಯತ್ನ  ಹೇಗೆ? ಏನಾಯ್ತು? ಎಂದು ಕಣ್ಣಾರೆ ಕಾಣಲು ಚಿತ್ರ  ನೋಡಿ.. ನೋಡಲೇಬೇಕಾದ -ಚಿತ್ರ....

>>>ಮುಜುಗರದ  ದೃಶ್ಯಗಳು ಅಷ್ಟಾಗಿ ಇಲ್ಲ..!!

ಆದರೂ ಮನೆ ಮಂದಿ  ಎಲ್ಲ  ಒಟ್ಟಾಗಿ  ಕುಳಿತು ನೋಡಲು ರೆಕಮಂಡ್ ಮಾಡೋಲ್ಲ..    ಏಕಾಂಗಿಯಾಗಿ ನೋಡಿದರೆ  ಚಿತ್ರ ಹೆಚ್ಚು ಆಪ್ತವಾದೀತು ಎನಿಸುತ್ತಿದೆ..

 

ಚಿತ್ರ ಮೂಲ:

http://http://www.screenhead.com/wp-content/uploads/2008/09/valkyrie_final1sheet1.jpg

http://s3.media.squarespace.com/production/465215/5307878/wp-content/uploads/2009/01/val-8.png

http://www.tribute.ca/tribute_objects/images/movies/Valkyrie/valkyrie5.jpg

ಐ ಎಂ ಡಿ  ಬಿ  ನನ್ನ ವಿಮರ್ಶೆ:

http://imdb my review:http://www.imdb.com/title/tt0985699/reviews-445

ಐ ಎಂ ಡಿ  ಬಿ : 

http://www.imdb.com/title/tt0985699/

ವೀಡಿಯೊ ಟ್ರೇಲರ್ :

http://www.youtube.com/watch?v=FHtCaVtryiE

ವಿಕಿಪೀಡಿಯ  ಲಿಂಕ್:

http://en.wikipedia.org/wiki/Valkyrie_(film)

ಹಿಟ್ಲರ್ ಹತ್ಯ ಯತ್ನದ ಬಗ್ಗೆ ಇದ್ವರ್ಗು ಬಂದ  ಚಿತ್ರಗಳು-ಧಾರವಾಹಿಗಳು:

http://en.wikipedia.org/wiki/20_July_plot#Films_and_television

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ರಾಜೇಶ ಹೆಗಡೆ ಭಾನು, 12/16/2012 - 22:59

ತುಂಬಾ ಚೆನ್ನಾಗಿದೆ ನಿಮ್ಮ ವಿಮರ್ಶೆ ವೆಂಕಟೇಶ್. ನಾನೂ ಕೂಡಾ ನಿಮ್ಮ ಹಾಗೆ ಹಾಲಿವುಡ್ ಮೂವಿ ಫ್ಯಾನ್. ಈ ಚಿತ್ರ ಇದುವರೆಗೂ ನೋಡಿರಲಿಲ್ಲ. ಆದರೆ ನಿಮ್ಮ ವಿಮರ್ಶೆ ಓದಿದ ಮೇಲೆ ನೋಡುವ ಕುತೂಹಲ ಮೂಡಿದೆ. ಲೈಫ್ ಈಸ್ ಬ್ಯೂಟಿಫುಲ್ ಎಂಬ ಸಿನಿಮಾ ನೋಡಿ ಅದು ಕೂಡಾ ತುಂಬಾ ಚೆನ್ನಾಗಿದೆ.

ಇವೆಲ್ಲ ಕನ್ನಡಕ್ಕೆ ಡಬ್ಬಿಂಗ್ ಆಗಿ ಬರುತ್ತಿದ್ದರೆ ಎಷ್ಟು ಚೆನ್ನಾಗಿರುತಿತ್ತು ಅಲ್ವಾ?

K.M.Vishwanath ಸೋಮ, 12/17/2012 - 13:53

ನಿಮ್ಮ   ಮಾತು ಸತ್ಯ   ಆ ಸಿನಿಮಾಗಳೆ ಹಾಗೆ ಸರ್ 

ಅವು ನಮ್ಮ ಕನ್ನಡ ಹಿಂದಿ ಭಾಷೆಯವರ ತರಹ ಯಾವುದು ಕದಿಯಲ್ಲಾ ಸ್ವತ:   ಮಾಡುತ್ತಾರೆ 

 

ನಿಮ್ಮ  ಈ ಹವ್ಯಾಸ ಮುಂದುವರೆಸಿ ಉತ್ತಮ 

venkatb83 ಸೋಮ, 12/17/2012 - 17:47

ಪ್ರಿಯ  ನಿರ್ವಾಹಕರಾದ ಶ್ರೀ ಯುತ  ರಾಜೇಶ್ ಅವ್ರೆ  ನೀವ್  ಹೇಳಿದ್ದು  ಈ ಚಿತ್ರದ ಬಗ್ಗೆ ಅನ್ನಿಸುತ್ತೆ

http://www.imdb.com/title/tt0118799/

ಅದನ್ನು ಇನ್ನು ನೊಡಿಲ್ಲ ಖಂಡಿತ ನೋಡುವೆ ಆ ಬಗ್ಗೆ ಬರೆಯುವೆ..

ನಾ ಇದ್ವರ್ಗೂ ನೋಡಿದ ಚಿತ್ರಗಳು  ಅನೇಕ (ಕನ್ನಡ -ಹಿಂದಿ,ತೆಲುಗು-ಆಂಗ್ಲ-ಥಾಯ್-ಕೊರಿಯನ್ ಭಾಷಾ  ಚಿತ್ರಗಳು)..ನೋಡುವುದಕ್ಕೆ ಪಟ್ಟಿ ಮಾಡಿದ  ಡೌನ್ಲೋಡ್  ಮಾಡಬೇಕಾದ ಚಿತ್ರಗಳೂ ಅನೇಕ ಇವೆ..!
ಅವುಗಳ ಬಗ್ಗೆ  ಕಾಲಾನುಕ್ರಮದಲ್ಲಿ  ಒಂದರ ನಂತರ  ಒಂದು ಬರೆವೆ..
ಆ ಬಗ್ಗೆ ಪ್ರತ್ಯೇಕವಾಗಿ  ಒಂದು ಬ್ಲಾಗ್ ಮಾಡಿ  ಸೇರಿಸುವ ಇರಾದೆಯೂ  ಇದೆ..ನೋಡುವ..
ನಿಮಗೂ ನನ್ ಹಾಗೆ ಚಿತ್ರಗಳನ್ನು  ನೋಡುವ ಹವ್ಯಾಸ  ಇರುವುದು ಕೇಳಿ ಖುಷಿ ಆಯ್ತು..ಒಂಥರಾ ಸಮಾನ ಮನಸ್ಕರು  ಜೊತೆಯಾದ ಹಾಗಾಯ್ತು..!!
ಹೊಸತಾದ  ವಿಸ್ಮಯನಗರಿ  ವಿನ್ಯಾಸದ  ಜೊತೆಗೆ  ಬದಲಾದ ನಿಮ್ಮ ವೇಷ (ಮೀಸೆ ಜೊತೆ)ದ ಚಿತ್ರ ನೋಡಿ  ಅರೆ ಕ್ಷಣ  ಇದ್ಯಾರಪ್ಪ ಎಂದು  ಯೋಚಿಸಿದೆ..!!
ಚೆನ್ನಾಗಿದೆ...
>>> ಪೀ ಎಸ ವಯ್  ಗ್ಯಾಂಗ್ನಮ್  ಹಾಡು  ನಿಮ್ಮ ಮಗಳಿಗೆ  ಬಹು    ಪ್ರಿಯ ಎಂದು ಕೇಳಿ  ಅಚ್ಚರಿ ಆಯ್ತು..!!
ಎಲ್ಲೋ ಯಾರೋ ಹಾಡಿ  ಕುಣಿದ ವಿದೇಶಿ ಹಾಡು  ಜಗತ್ತಿನೆಲ್ಲೆಡೆ ಎಲ್ಲರಿಗೂ  ಇಷ್ಟ ಆಗೋದು...!! 
ತಮ್ಮ ಪ್ರತಿಕ್ರಿಯೆಗೆ  ನನ್ನಿ 
ಶುಭವಾಗಲಿ.
\|/  

 

 

 

venkatb83 ಸೋಮ, 12/17/2012 - 17:51

ವಿಶ್ವನಾಥ್ ಅವ್ರೆ-

ನೀವ್ ಹೇಳಿದ್ದು ಸತ್ಯದ ಮಾತು..
ಪ್ರಭಾವದಿಂದ  ಪ್ರೇರಣೆಯಿಂದ  ಚಿತ್ರ ನಿರ್ಮಾಣ ಓಕೆ.. ಆದರೆ  ಎ ಟು ಜೆಡ್  ಭಟ್ಟಿ ಇಳಿಸುವ  ಚಿತ್ರ ನಿರ್ಮಾಣಕ್ಕೆ  ನನ್ನ ಅಸಹನೆ ಇದೆ...
ರಿಮೇಕ್ ಚಿತ್ರಗಳನ್ನು ನಮ್ಮವರು ಮಾಡುವ ಪರಿ ನೋಡಿ:
ಅಲ್ಲಿ ಅವರು ಹಾಕಿದ ಸೆಟ್ಟು,ಬಟ್ಟೆ-ಕೇಶ ವಿನ್ಯಾಸ ,ಸಂಗೀತ ,ನೃತ್ಯವನ್ನು  ಕಾಪಿ ಮಾಡುವರು:(((
ಅದಕಿಂತ ಹೆಚ್ಚಾಗಿ  ಹಲವು ಚಿತ್ರಗಳನ್ನು ಕಾಪಿ ಮಾಡಿ  ಅವಮಾನ ಮಾಡುವುದು  ಉಂಟು...
ಹಾಗಂತ  ಕನ್ನಡ ಚಿತ್ರಗಳು  ಕೆಟ್ಟವೇನಲ್ಲ  ,ಒಳ್ಳೆ ಚಿತ್ರಗಳು  ನಿರ್ದೇಶಕರು  ಈ ಕಾಪಿ ಕ್ಯಾಟ್ ಗಳ ಮಧ್ಯೆ ಸಿಕ್ಕಿ ನರಳುತ್ತಿರುವರು..ಮಂಕಾಗಿರುವರು...
ನಾ ನೋಡುವ ಚಿತ್ರಗಳಲ್ಲಿ ಕನ್ನಡಕ್ಕೆ  ಮೊದಲ ಆದ್ಯತೆ..ಪ್ರಾಶಸ್ತ್ಯ ..
ತಮ್ಮ ಆತ್ಮೀಯ  ಪ್ರತಿಕ್ರಿಯೆಗೆ ನನ್ನಿ  
ಶುಭವಾಗಲಿ..
\|/
venkatb83 ಸೋಮ, 12/17/2012 - 17:52

ರಾಜೇಶ್ ಅವ್ರೆ-ನನ್ನ ಮಾರುತ್ತ್ರದಲಿ ಒಂದು ತಪ್ಪಿದೆ: 

ಅದು ನಿಮ್ಮ ಮಗನಿಗೆ  ಎಂದು ಆಗಬೇಕಿತ್ತು..!!(ಮಗಳು ಆಗಿದೆ)..
ಅಜಾಗರುಕತೆಗೆ ಕ್ಶಮೆ ಇರಲಿ...
\।/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.