Skip to main content

ಯಾರಿಗೆ ಹೇಳೊಣ ನಮ್ಮ Problemಮು???

ಬರೆದಿದ್ದುJuly 4, 2012
3ಅನಿಸಿಕೆಗಳು
[img_assist|nid=22578|title=ಯಾರಿಗೆ ಹೇಳೊಣ ನಮ್ಮ Problemಮು???|desc=|link=node|align=middle|width=130|height=110]   

ಎಲ್ಲೋ ಹಳಸಿದ ವಾಸನೆ ಬರ್ತಾ ಇದ್ಯಲ್ವ??? ನಿಮಗೆ ಬರ್ತಾ ಇಲ್ವ??? Correct ಆಗಿ
Observe ಮಾಡಿ ಬರ್ತಾ ಇದೆ. ಬೆಂಗಳೂರಿಂದ ಶುರವಾಗಿದ್ದು. ಈಗ ಎಲ್ಲಾ ಕಡೆ ಹರಡಿ
ಕೊಂಡಿದೆ, ನಮ್ಮ ದೆಹಲಿಗೂ ಆಗಾಗ ಈ ವಾಸನೆ ಹರಡಿಕೊಂಡು ದಿಲ್ಲಿ ನಾಯಕರಿಗೆ ತಲೆನೋವು
ತರ್ತಾ ಇರುತ್ತೆ. ಕಳೆದ ೪ ವರ್ಷದಿಂದ ಮೆಲ್ಲಗೆ ಶುರುವಾಗಿದ್ದು ಕಳೆದ ೪ ದಿವಸಗಳಿಂದ
ಮೂಗು ಬಿಟ್ಕೊಂಡು ಕೂರೊದೇ ಕಷ್ಟ ಆಗಿದೆ ಅಂದ್ರೆ..... ಅಬ್ಬ!.
     ಇಷ್ಟು ಹೇಳೊವಾಗ್ಲೆ ನಿಮಗೆಲ್ಲ ಗೊತ್ತಾಗಿರ ಬಹುದು ನಾನು ಯಾವ ವಿಷ್ಯ
ಮಾತಾಡ್ತಿದಿನಿ ಅಂತ. ೪ ವರ್ಷದ ಹಿಂದೆ ಅತ್ತು ಕರೆದು ಮಾಡಿದಿಕ್ಕೆ ಕನಿಕರ ತೋರಿಸಿ ನಾವೆ
ಓಟು ಹಾಕಿ ಬೇಳೆಸಿದ್ದು. ಈವಾಗ ಏನಾಯ್ತು? "ಮಾಡಿದ್ದುಣ್ಣೊ ಮಹರಾಯ" ಅನ್ನೊತರ ಬಕ್ರ
ಆಗಿದ್ದೇ ಬಂತು ನಮ್ಮ ಹಣೆ ಬರಹಕ್ಕೆ.
ಇದು ಒಂದು Sample ಅಷ್ಟೆ, ನಾವಾಗೆ ನಿರ್ಮಿಸಿಕೋಂಡಿರೊ ಅನೇಕ ಸಮಸ್ಯೆಗಳು ಇನ್ನು ಇವೆ. Simple ಆಗಿ ಸ್ವಲ್ಪ ಯೊಚ್ನೆ ಮಾಡೊಣ
ಮನುಷ್ಯ ಸಮಾಜಮುಖಿಯಾಗಿ ಬೆಳೀತ ಇರೊದು ಕಮ್ಮಿ ಆಗ್ತಾ ಇದ್ಯ? ದೊಡ್ಡವರಾಗೋ ತನಕ ಅಪ್ಪ ಅಮ್ಮ ಅಂದರೆ ಕೆಲಸದೋರು, ಆಮೇಲೆ ವೃದ್ದಾಶ್ರಮ್ಮಕ್ಕೆ ಸಾಗುಹಾಕೋ ವಸ್ತುಗಳ? ಸಂಬಂಧಗಳ ಜಾಗವನ್ನ ದುಡ್ಡು ಆಕ್ರಮಿಸಿ ಕೊಂಡಿದ್ಯ? ಶಿಕ್ಷಣ ಅನ್ನೊದು ಹಣ ಸಂಪಾದಿಸೋ ಯಂತ್ರಗಳನ್ನ ಸಮಾಜಕ್ಕೆ ಕೊಡ್ತಾ ಇದ್ಯ? ಮನಸ್ಸಿನ ಭಾವನೆಗಳು ಸಿನೆಮಾಗಳಿಗೆ ಮಾತ್ರ ಮೀಸಲಸರಕಾರಿ ಉದ್ಯೋಗ, ರಾಜಕೀಯ ಅನ್ನೊದು ಲಂಚ ತೆಗೊಳೊದಕ್ಕೆ License ಇದ್ದ ಹಾಗ? ಟಿ.ವಿ. ಧಾರವಾಹಿಗಳು, Breaking Newsಗಳು ಮಕ್ಕಳ ಮನಸ್ಸು ಹಾಳು ಮಾಡೋ ಅಥವ ಮನೆ ಒಡೆಯೊದಿಕ್ಕೆ ಇರೋ ದಾರಿಗಳ?
ಮೇಲಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿತಾ ಇದೆಯೆ ವಿನಃ ಉತ್ತರ ಹುಡುಕೊ ಪ್ರಯತ್ನ ನಾವು ಮಾಡ್ತಾ ಇಲ್ಲ. ಇದಿಷ್ಟೆ ಅಲ್ಲ, ನಮ್ಮ ಬದುಕು ತರಹದ ಎಷ್ಟೋ ಪ್ರಶ್ನೆಗಳನ್ನ  ಪ್ರತಿ ದಿನ ಪ್ರತಿ ಕ್ಷಣ ಕೆನ್ನೆಗೆ ಬಾರಿಸಿ ಉತ್ತರವನ್ನ ಕೇಳ್ತಾ ಇದೆ.
ಆದರೆ....
  ನಮಗೆ ಉತ್ತರಗಳು ಬೇಡ, ಸಮಸ್ಯೆಗೆ ಪರಿಹಾರಗಳು ಬೇಡ, ಮನಸ್ಸಿಗೆ ಹಿತವೆನಿಸೊ ಸುಳ್ಳೀನ ಸಮಜಾಯಿಶಿಗೆ ತೃಪ್ತಿ ಪಡ್ಕೊಳೊ ನಾವು ಉತ್ತರ ಹುಡುಕುವ ಗೋಜಿಗೆ ಹೊಗಲ್ಲ ಅಂತ ನನಗೆ ಅನ್ನಿಸ್ತಾ ಇದೆ. ನಿಮಗೆ?????????

ಲೇಖಕರು

Manoranjan Noo…

ನಾನೊಬ್ಬ ಹವ್ಯಾಸಿ ಬರಹಗಾರ...ಸಮಯ ಸಿಕ್ಕಾಗೆಲ್ಲ Internet ನಲ್ಲಿ ಏನಾದ್ರೂ ತದುಕಾಡ್ತಾ ಇರ್ತಿನಿ , ಇಲ್ಲಾಂದ್ರೆ ಹಾಡು ಕೇಳೋದು, ಅದು ಇಲ್ಲಾಂದ್ರೆ ನನ್ನದೇ ಕಲ್ಪನಾ ಲೋಕದಲ್ಲಿ ಏನಾದ್ರೂ ಹೊಸತನ್ನ ಮಾಡ್ಕೆಕು ಅಂತ ಅದರಲ್ಲೇ ಮುಳುಗಿರೋದು. ಜೊತೆಗೆ ಪುಸ್ತಕ ಹಿಡ್ಕೊಂಡು ಏನಾದ್ರು ಗೀಚಬೇಕು ಅನ್ನೋ ಹವ್ಯಾಸ ನಂದು.

ಅನಿಸಿಕೆಗಳು

Jyothi Subrahmanya ಗುರು, 07/05/2012 - 10:37

ಮನೋರಂಜನ್ ರವರೇ, ವಿಸ್ಮಯದ ಕುಟುಂಬಕ್ಕೆ ಸ್ವಾಗತ.

ಪ್ರಸ್ತುತ ಸಮಾಜದ ಕುರಿತು ಸರಿಯಾಗಿ ಬರೆದಿದ್ದೀರಾ.  ನಿಮಗೆ ಮೂಡಿದ ಈ ಪ್ರಶ್ನೆಗಳೇ ಮನಸ್ಸಾಕ್ಷಿ ಇರುವ ಅದೆಷ್ಟೋ ಜನರಿಗೆ

ಮೂಡುತ್ತವೆ.  ಆದ್ರೆ ಒಬ್ಬರಿಂದ ಅಥ್ವಾ ಕೆಲ ಬೆರಳೆಣಿಕೆಯ ಜನರಿಂದ ಇಡೀ ಸಮಾಜದ ಬದಲಾವಣೆ ಕಷ್ಟ.  ಆದ್ರೂ 

ಆಶಾವಾದಿಗಳಾಗಿ ಉತ್ತರವನ್ನು ಹುಡುಕೋಣ ಅಲ್ವೇ?  ರಾಜಕೀಯ ಅನ್ನೋದು ಕುರ್ಚಿಗಾಗಿ ನಡೀತಾ ಇರೋ 

ಆಧುನಿಕ ಮಹಾಭಾರತ ಆಗಿಬಿಟ್ಟಿದೆ.  ಮಹಾಭಾರತದ ದುರ್ಯೋಧನನಿಗಾದ್ರೂ ತನ್ನ ಪ್ರಜೆಗಳ ಬಗ್ಗೆ ಕಳಕಳಿಯಿತ್ತು

ಆದ್ರೆ ನಮ್ಮ ಹಾಳು ರಾಜಕಾರಣಿಗಳಿಗೆ, ಕುರ್ಚಿ, ಹಣ, ಅಧಿಕಾರ ಇವಿಷ್ಟು ಬಿಟ್ಟು ಬೇರೇನೂ ಕಾಣ್ತಾ ಇಲ್ಲ.  ಕೊನೇ ಪಕ್ಷ

ಮನುಷ್ಯನಿಗಿರಬೇಕಾದ ನಾಚಿಕೆ, ಮಾನ ಮರ್ಯಾದೆ ಕೂಡ ಲವಲೇಶವೂ ಇಲ್ಲದಾಗಿಬಿಟ್ಟಿದೆ.  ಏನೇನೋ ಆಗಿ

ಯಾರ್ಯಾರೋ ಸಾಯ್ತಾರೆ, ಆದ್ರೆ ಇಂಥ ಜನಗಳು ಬೇರೆಯವ್ರ ಸಮಾಧಿ ಮೇಲೆ ಅಧಿಕಾರ ಸ್ಥಾಪಿಸಿಕೊಂಡು

ಹಾಯಾಗಿಯೇ ಇದ್ದಾರೆ.  ಮನಸಿನ ಬದಲಾವಣೆ, ನೈತಿಕತೆ, ಮೌಲ್ಯಯುತ ಶಿಕ್ಷಣ, ಮಾನವೀಯ ಗುಣಗಳಿಗೆ 

ಪ್ರಾಮುಖ್ಯತೆ ಕೊಡದ ಹೊರತು ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕೋಕೆ ಅಸಾಧ್ಯ.. ಕೆಲವೊಮ್ಮೆ ಕೆಲ ಪ್ರಶ್ನೆಗಳು

ಪ್ರಶ್ನೆಗಳಾಗಿಯೇ ಉಳಿದು ಬಿಡ್ತವೆ ಉತ್ತರ ಹುಡುಕೋಕೆ ಹೊರಟವರನ್ನ ಜನ ಕಾಲೆಳೆದು ಬೀಳಿಸಿ ಬಿಡ್ತಾರೆ.

ಆದ್ರೂ ವಿಸ್ಮಯದಲ್ಲಿ ಕೆಲವೇ ಕೆಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ನಮ್ಮನ್ನ ನಾವು ಒಮ್ಮೆ

ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದೀರಾ, ನಿಮ್ಮ ಪ್ರಯತ್ನ ಹೀಗೇ ಸಾಗಲಿ, ನಿಮ್ಮಿಂದ ಇನ್ನೂ ಹೆಚ್ಚಿನ

ಲೇಖನಗಳು ಹೊರಹೊಮ್ಮಲಿ.

 

ವಂದನೆಗಳೊಂದಿಗೆ,

ಜ್ಯೋತಿ.

ತ್ರಿನೇತ್ರ ಗುರು, 07/05/2012 - 12:35

ವಿಸ್ಮಯ ನಗರಿಗೆ ಸ್ವಾಗತ.. ಜ್ಯೋತಿ ಯವರು ಅಭಿಪ್ರಾಯಿಸಿರುವಂತೆ ನಿಮ್ಮ ಲೇಖನದಲ್ಲಿ ವ್ಯಕ್ತಪಡಿಸಿರುವ ಸಾಮಾಜಿಕ ಕಳಕಳಿ ಎದ್ದುಕಾಣುತ್ತದೆ. ಇತ್ತೀಚಿನ ಈ ಎಲ್ಲಾ ವಿಚಾರಗಳೂ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಅದು ಪೂರ್ಣವಾಗಿ ತುಂಬಿ ಬಂದು ಕಟ್ಟೆ ಹೊಡೆಯುವ ಕಾಲ ಇನ್ನೂ ಸನ್ನಿಹಿತವಾಗಿಲ್ಲ ಎನ್ನಿಸುತ್ತದೆ. ಅದಕ್ಕೇ ನಾವು ನಮ್ಮ ಕಣ್ಣೆದುರೇ ದಿನ ನಿತ್ಯ ನಡೆಯುತ್ತಿರುವ ಈ ಆವಾಂತರಗಳು ಅತ್ಯಾಚಾರಗಳು ಇತ್ಯಾದಿ ಎಲ್ಲಾ ನೋಡಿಯೂ ನೋಡದವರಂತೆ ಸುಮ್ಮನಿರುವುದೇ ಕಾರಣ.. ಇಂತಹಾ ಸಮ ಮನಸ್ಕ ಚಿಂತಕರು ಸಮಾಜದ ಹಿತ ಬಯಸುವವರು ಎಲ್ಲಾ ಒಗ್ಗೂಡಿ ಈ ಎಲ್ಲಾ ಅವ್ಯವಸ್ಥೆಗಳ ವಿರುದ್ಧ ಧನಿಯೆತ್ತಿ ಅಟ್ಟಾಡಿಸಿಕೊಂಡು ಹೊಡೆಯುವ ಆ ಒಂದು ದಿನ ಕಂಡಿತಾ ಬಂದೇ ಬರುತ್ತದೆಂಬ ಆಶಾವಾದ ದಿಂದ ಕಾದು ನೋಡೋಣಾ ಅಂತಹಾ ದಿನ ಬಂದಾಗ ನಾವೂ ಕೈ ಜೋಡಿಸೋಣಾ ಅಲ್ಲವೇ.. ಇದೇ ರೀತಿಯ ಲೇಖನ ಮತ್ತು ಅಭಿಪ್ರಾಯಗಳನ್ನು ನೋಡಿ ಓದಿ..


ಕಣ್ಣಿದ್ದೂ ಕುರುಡರು... ಕಿವಿಯಿದ್ದೂ ಕಿವುಡರು... ಆಗಿರಬೇಕೇ...?


ಹೀಗಿದೆ ನಮ್ಮ ನಾಗರೀಕತೆ ಮತ್ತು ವಿಕಾಸ....!


ಇದು ಕನ್ನಡ ಪ್ರೇಮ ಮತ್ತು ಅಭಿವೃದ್ಧಿಯೇ...?


 
http://www.vismayanagari.com/vismaya11/node/22294#comment-19913 -

ಎಲ್ಲೆಲ್ಲೂ ಜಾತಿ ರಾಜಕೀಯ...!

http://www.vismayanagari.com/vismaya11/node/22294#comment-19900 -ಅವರವರ ಭಾವಕ್ಕೆ ಅವರವರ ಬಕುತಿಗೆ...


 


 Manoranjan Noo… ಶುಕ್ರ, 07/06/2012 - 19:30

ತ್ರಿನೇತ್ರ ಹಾಗು ಜ್ಯೊತಿ ಅವರೆ ನಿಮ್ಮ ಅನಿಸಿಕೆಗಳಿಗೆ
ಧನ್ಯವಾದಗಳು. ರೀತಿಯ ಮತ್ತಷ್ಟು
ವಿಷಯಗಳ ಬಗ್ಗೆ ನಾನು ಮತ್ತೆ
ಇನ್ನೊಂದು ಲೇಖನದಂದಿಗೆ ಹಿಂದಿರುಗುತ್ತೆನೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ನನ್ನ ಬ್ಲಾಗ್
ವಿಷಯಗಳನ್ನ ನೇರವಾಗಿ ಇಲ್ಲಿ ಕಾಪಿ-ಪೇಷ್ಟ್ ಮಾಡಲು ಆಗುತ್ತಿಲ್ಲ.
ಆದ್ದರಿಂದ ನೇರವಾಗಿ ಇಲ್ಲಿಯೇ ಬರೆಯುವ
ಯೋಚನೆಯಲ್ಲಿದ್ದೆನೆ.

ನೀವು ನನ್ನ ಬ್ಲಾಗ್ ಕೂಡ
ವೀಕ್ಷಿಸ ಬಹುದು

 

www.mussanjemaathu.co.cc

ಮತ್ತೊಮ್ಮೆ ಧನ್ಯವಾದಗಳೊಂದಿಗೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.