ಪ್ಯಾರ್ಗೆ ಆಗ್-ಬಿಟ್ಟೈತೆ'
ಗೋವಿಂದಾಯ ನಮಃ ಚಿತ್ರದ ಹಾಡು 'ಪ್ಯಾರ್ಗೆ ಆಗ್-ಬಿಟ್ಟೈತೆ' ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ…ಕೊಲವೆರಿ ಡಿ ರೆಕಾರ್ಡ್ ಬ್ರೇಕ್ ಮಾಡುತ್ತೆ ಎಂದು ಟ್ವೀಟರ್, ಫೇಸ್ ಬುಕ್ ನಲ್ಲಿ ಕನ್ನಡ ಅಭಿಮಾನಿಗಳು ಪಂಥ ಕಟ್ಟುತ್ತಿದ್ದಾರೆ.
ಇತ್ತ ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಃ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ :-)
ಓವರ್ ಟು ಧೋನಿ ಬಾಯ್ಸ್…. :-)
ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ
ಮೂರು ದಿನ ಆಡ್ತಾ ಇಲ್ಲ… ನಮ್ದುಕ್ಕೆ…
ಒಂದ್ ಮ್ಯಾಚ್ ಗೆಲ್ತಾ ಇಲ್ಲ… ನಮ್ದುಕ್ಕೆ…
ಮರ್ಯಾದೆನೇ ಹಾಳಾಗ್-ಹೋಗೈತೆ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…
ವರ್ಡ್-ದು ಕಪ್ಪು ನಮ್ದು ಗೆದ್ರೂ… ನಮ್ದು ಫ್ಯಾನ್ಸು ಯಾಕೋ ಇಂದು…ಕ್ಯಾಕರ್ಸಿ… ಉಗಿತವ್ರೆ…
ನಿಮ್ದುಕ್ಕೆ ವೇಷ್ಟ್ ಫೇಲೋ ಅಂತಾ ಅವ್ರೆ…
ಉಗಿಯೋ ಗಿಗ್ಯೋ ನಕ್ಕೊಜಿ…
ಸುಮ್ಕೇ ಮ್ಯಾಚು ದೇಖೋಜಿ….
ನಮ್ದುಕ್ಕೆ ನಿಮ್… ವಿಷ್ ಮಾಂಗ್ತಾ ಹೈ….
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ
ಜಾದೂ ಗೀದೂ ಆಗಿಬಿಟ್ಟಿ… ಏಕ್ ಮ್ಯಾಚ್ ಗೆದ್ದುಬಿಟ್ರೆ… ಸಚಿನ್ ನೂರು ಹೊಡ್ದುಬಿಡಪ್ಪಾ….
ನಿನ್ಮುಂದೆ… ಜನಾ ಎಲ್ಲಾ ಮರ್ತುಬಿಡ್ತಾರೆ
ಅಲ್ಲಿಗಂಟ ನೀವ್ ಕಾಯ್ರಿ…
ಮೀಡ್ಯಾ ಥೂ ಥೂ ಅಂತೈತಿ…
ಒಂದು ಮ್ಯಾಚು ಗೆದ್ಕಂಡ್-ಬರೋದೇ…
ನಕ್ಕೋ… ನಕ್ಕೋ……
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ
ಮೂರು ದಿನ ಆಡ್ತಾ ಇಲ್ಲ… ನಮ್ದುಕ್ಕೆ…
ಒಂದ್ ಮ್ಯಾಚ್ ಗೆಲ್ತಾ ಇಲ್ಲ… ನಮ್ದುಕ್ಕೆ…
ಮರ್ಯಾದೆನೇ ಹಾಳಾಗ್-ಹೋಗೈತೆ…
ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ
ಸಾಲುಗಳು
- Add new comment
- 936 views
ಅನಿಸಿಕೆಗಳು
ಲೊಕೇಶ್ ಅವರೇ, ನಾನು ಹೀಗೆ
ಲೊಕೇಶ್ ಅವರೇ, ನಾನು ಹೀಗೆ ಹೇಳುತ್ತಿದ್ದೇನೆಂದು ದಯವಿಟ್ಟು ತಪ್ಪು ತಿಳಿಯಬೇಡಿ. ಆ "ಪ್ಯಾರ್ ಗೇ ಆಗ್ಬಿಟ್ಟೈತೆ" ಗೀತೆ ನಿಜವಾಗಿಯೂ ಒಂದು ಕೀಳು ಅಭಿರುಚಿಯ ಕೆಳ ಮಟ್ಟದ ಹಾಡು. ಇಂತಹಾ ಹಾಡನ್ನು ಅದು ಹೇಗೆ ಮೆಚ್ಚುತ್ತಿದ್ದಾರೋ ನಮ್ಮ ಕನ್ನಡ ಅಭಿಮಾನಿಗಳು ನನಗಂತೂ ಅರ್ಥವಾಗುತ್ತಿಲ್ಲ. ಈ ಹಾಡಿನಲ್ಲಿ ಒಂದು ಸಮುದಾಯದ ಜನರು ಆಡುವ ಭಾಷೆಯನ್ನು ಅವಹೇಳನಕಾರೀ ರೀತಿಯಲ್ಲಿ ಪ್ರಯೋಗಿಸಿ ಹಾಡಿಸಲಾಗಿದೆ. ಈ ರೀತಿ ನಮ್ಮದೇ ಭಾಷೆಯನ್ನು ಯಾರಾದರೂ ಅವಹೇಳನಕಾರೀ ರೀತಿಯಲ್ಲಿ ಹೀಯಾಳಿಸಿ ಮಾತಾಡಿದರೆ ನಮಗೆ ಎಷ್ಟು ಸಹಿಲಾಗದೋ ಅಷ್ಟೇ ಕೋಪ ಅವರಿಗೂ ಬರುತ್ತದೆ ಎಂದು ಅರಿತಿರಲಿಲ್ಲ ಎಂದು ಕಾಣುತ್ತದೆ ಆ ಹಾಡಿನ ಕರ್ತರು. ಇಂತಹಾ ವಿದ್ಯಮಾನಗಳಿಂದ ಒಂದು ಕೋಮಿನ ಜನರ ಮನಸ್ಸು ಕೆಟ್ಟಲ್ಲಿ ಕೋಮು ಗಲಭೆ ಆಗಿ ಜನಸಾಮಾನ್ಯರ ಶಾಂತಿಗೆ ಭಂಗ ಬಂದರೂ ಆಶ್ಚರ್ಯವಿಲ್ಲ. ಅವರು ಈ ಹಾಡನ್ನು ಕೇಳಿಸಿಕೊಂಡೂ ಕೇಳದವರಂತೆ ಕಿವಿ ಮುಚ್ಚಿಕೊಂಡು ಸಹಿಸಿಕೊಂಡಿರುವುದರಿಂದ ಸಧ್ಯ ಆರೀತಿಯ ವಾತಾವರಣ ಉಂಟಾಗಲಿಲ್ಲ...! ಹಾಗೆ ಆಗುವುದೂ ಬೇಡ. ಬಹಳ ಹಿಂದಿನಿಂದಲೂ ಈ ತಾಣದಲ್ಲಿ ಉತ್ತಮ ಕವನ ಲೇಖನಗಳನ್ನು ನೀಡುತ್ತಿರುವ ತಮಗೆ ಈ ರೀತಿಯ ಲೇಖನಗಳು ಒಪ್ಪುವುದಿಲ್ಲ. ಆದ್ದರಿಂದ ನಿಮ್ಮ ಅಣಕು ಹಾಡಿನಲ್ಲಿರುವ ಹಾಸ್ಯ ಮೆಚ್ಚುವಂತಿದ್ದರೂ ಅದರಲ್ಲಿನ ವ್ಯಂಗ್ಯ ನನಗಂತೂ ಇಷ್ಟವಾಗಲಿಲ್ಲ. ದಯಮಾಡಿ ನನ್ನ ಬಿಚ್ಚು ಮನಸ್ಸಿನ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ. -ತ್ರಿನೇತ್ರ.
ಸರಿಯಾಗಿ ಹೇಳಿದ್ದೀರಿ ತ್ರಿನೇತ್ರರ
ಸರಿಯಾಗಿ ಹೇಳಿದ್ದೀರಿ ತ್ರಿನೇತ್ರರವರೇ... ಇದರೊಂದಿಗೆ, ಅಂತಹ ಆಡುಭಾಷೆಯಾಡುವವರುಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದೂ ಕೂಡ ಪರೋಕ್ಷವಾಗಿ ಅವಹೇಳನಮಾಡಲಾಗಿದೆ. ಏಕೆ, ಇತರೆ ಕೋಮುಗಳಲ್ಲಿ ಮಕ್ಕಳ ಸಂಖ್ಯೆಗೇನು ಕಡಿಮೆಯೇ???ಹಾಡಿನ ರಾಗ, ಸಾಹಿತ್ಯ ಎರಡೂ ಕೂಡ ಮನಮುಟ್ಟುವಂತಿಲ್ಲ. ಆಡುಭಾಷೆಗಳಕುರಿತು ಅಣಕು ಹೊಸತಲ್ಲ. ಎಲ್ಲಾ ರೀತಿಯ ಆಡುಭಾಷೆಗಳನ್ನೂಕೂಡ ಅಣಕಿಸುವುದು ನಮಗೆ ತಿಳಿದಿದ್ದೇ.. ಅದು ಕನ್ನಡದ ವಿವಿಧ ನಮೂನೆಗಳಿರಬಹುದುಅಥವಾ ಈ ಹಾಡಿನಲ್ಲಿ ಬಳಸಲಾದ ಆಡುಭಾಷೆಯಾಗಿರಬಹುದು.ಆದರೆ, ಎಲ್ಲವೂ ಒಂದು ಪರಿಮಿತಿಯೊಳಗೆ ಚೆಂದ..ಮಿತಿಮೀರಿದರೆ ಎಲ್ಲವೂಅಸಹ್ಯ, ಕೊಳಕು ಎನಿಸಿಬಿಡುತ್ತದೆ...ಇದು ನನ್ನ ವೈಯಕ್ತಿಕ ಅಭಿಪ್ರಾಯ. ಧನ್ಯವಾದಗಳೊಂದಿಗೆ,ಜ್ಯೋತಿ.
ನನ್ನ ಮನಸ್ಸಿನ ಸ್ಪಷ್ಟ
ನನ್ನ ಮನಸ್ಸಿನ ಸ್ಪಷ್ಟ ಅಭಿಪ್ರಾಯಕ್ಕೆ ಧನಿಗೂದಡಿಸಿ ಸಹಮತಿ ಸೂಚಿಸಿರುವ ತಮಗೆ ಧನ್ಯವಾದಗಳು ಜ್ಯೋತಿಯರೇ...!
ತಪ್ಪು ಮಾಡಿ ಅದು ತಪ್ಪೆಂದು ಬೇರೆಯವರಿಂದ ತಿಳಿದ ಮೇಲೆ ಅಯ್ಯೋ ತಪ್ಪಾಗಿ ಹೋಯಿತಲ್ಲಾ ಎಂದು ಕೊರಗುವುದರ ಬದಲು ತಪ್ಪು ಎಂದು ಅರಿತಮೇಲಾದರೂ ಅದನ್ನು ತಿದ್ದಿಕೊಂಡು ನಡೆದಲ್ಲಿ ಅದಕ್ಕಿಂತಾ ಉತ್ತಮ ಯಾವುದೂ ಇಲ್ಲ ಎನ್ನುವುದು ನನ್ನ ಅನಿಸಿಕೆ. ಹಾಗೇ ಒಬ್ಬರಿಗೆ ತಪ್ಪಾಗಿ ಕಾಣುವುದು ಮತ್ತೊಬ್ಬರಿಗೆ ಸರಿಯಾಗಿರಬಹುದು, ನಮಗೆ ಅಸಹ್ಯವಾಗಿ ಕರ್ಣ ಕಠೋರವೆನ್ನಿಸಿರುವ ಇಂತಹಾ ಹಾಡನ್ನು ಮೆಚ್ಚಿ ಹೊಗಳಿರುವ ಲಕ್ಷಾಂತರ ನಮ್ಮದೇ ಕನ್ನಡಿಗರಿಗೆ ಕರ್ಣ ಮಧುರವೆನ್ನಿಸುತ್ತಿರಬಹುದು. ಸರಿಯಾಗಿ ಕನ್ನಡವನ್ನು ಓದಿ, ಬರೆಯಲು ಅರ್ಥ ಮಾಡಿಕೊಳ್ಳಲೂ ಬಾರದ ನಮ್ಮ ಅದೆಷ್ಟೋ ಕನ್ನಡಿಗರಿಗೆ ಆ ಪರಭಾಷಾ ಹಾಡುಗಳಾದ ಹಿಂದೆ \"ರಾ.. ರಾ...\" ಎನ್ನುತ್ತಾ ಕುಣಿದು ಕುಪ್ಪಳಿಸುತ್ತಿದ್ದ ನಮ್ಮ ಜನ ಇಂದು \"ಕೊಲವೆರಿ...ಕೊಲವೆರಿ...\" ಎನ್ನುತ್ತಿದ್ದಾರೆ.....! ಈ ಹಾಡಿನ ಅರ್ಥ ಅದೆಷ್ಟು ಜನರಿಗೆ ಆಗಿರುವುದೋ ನನಗಂತೂ ತಿಳಿಯದು ಆದರೂ ಯಾರೋ ಹಾಡಿದರೆಂದು ತಾವೂ ಕಾಲು ಕುಣಿಸುತ್ತಾ ತಾಳ ಹಾಕುತ್ತಾ ಅದರ ಪ್ರಚಂಡ ಯಶಸ್ಸಿಗೆ ನಮ್ಮದೂ ಒಂದು ಓಟು ಎಂಬಂತೆ ಬಹಳಷ್ಟು ಕನ್ನಡಿಗರು ತಮ್ಮ ಮನೆಯಲ್ಲೂ ಹಾಡಿಸುತ್ತಿದ್ದಾರೆ ಗುಂಗುನಿಸುತ್ತಿದ್ದಾರೆ.
ನಮ್ಮ ಕನ್ನಡ ಸಿನಿಮಾದಲ್ಲಿ ಬೇರೆ ಭಾಷೆಯ ಹಾಡುಗಳನ್ನು ಹಾಕಿ ಹಾಡಿಸುವಂತೆ ನಮ್ಮ ಯಾವ ನೆರೆ ರಾಜ್ಯದವರು ತಮ್ಮ ಚಿತ್ರಗಳಲ್ಲಿ ಕನ್ನಡ ಹಾಡು ಹೇಳಿಸಿ, ಕೇಳಿ ಮೆಚ್ಚುತ್ತಾರೆ ಎಂಬುದು ಕನ್ನಡಿಗರಿಗೆ ತಿಳಿಯದ ವಿಚಾರವೇನಲ್ಲ....! ಸಂಗೀತಕ್ಕೆ ಭಾಷೆಯ ತಾರತಮ್ಯ ಇರಬಾರದು ನಿಜ ಆದರೆ \"ನಮ್ಮ ಭಾಷೆ-ನಮ್ಮ ನಾಡು-ನಮ್ಮ ಉದ್ಧಾರ\" ಕ್ಕೆ ಮೊದಲ ಆಧ್ಯತೆ ಇರಬೇಕು ಎಂಬುದನ್ನು ಮರೆತು ಪರಭಾಷಾ ವ್ಯಾಮೋಹದಿಂದ ಬೇರಾವುದೋ ಭಾಷೆಯನ್ನು ಉದ್ಧರಿಸ ಹೊರಡುವುದು ಸ್ವಜನ ಪಕ್ಷಪಾತ, ಸ್ವ-ಭಾಷಾ ದ್ರೋಹವಾಗುತ್ತೆ. ಅವರವರ ಭಾವಕ್ಕೆ ಅವರವರ ಬಕುತಿಗೆ.. ಎಂಬಂತೆ ಮೆಚ್ಚುವುದು ಬಿಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ತಪ್ಪಾಗಿದ್ದರೂ ಅದು ಸರಿಯೆಂದು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಈ ಪರಿಸ್ಥಿತಿ ಬಂದೊದಗಿರುವುದು ಕನ್ನಡ ನಾಡಿಗೆ ಕನ್ನಡ ಭಾಷೆಯ ಪ್ರಗತಿ ಮತ್ತು ಶ್ರೇಯೋಭಿವೃದ್ಧಿಗೆ ಬಂದಿರುವ ಧೌರ್ಭಾಗ್ಯ....! ಇದನ್ನು ಆದಷ್ಟೂ ಸರಿಪಡಿಸುವ ನಿಟ್ಟಿನಲ್ಲಿ ಇಂದಿನಿಂದಲೇ ನಮ್ಮ ಕನ್ನಡ ನಿರ್ಮಾಪಕರು ನಿರ್ಧೇಶಕರು, ಗೀತ ರಚನಾಕಾರರು ಸಂಗೀತ ಸಂಯೋಜಕರು ಕಲಾವಿಧರು ಪ್ರೇಕ್ಷಕರು ಎಲ್ಲರೂ ಪ್ರಯತ್ನಿಸದ ಹೊರತು ನಮ್ಮ ಕನ್ನಡ ಬೆಳೆಯುವುದಿಲ್ಲ ಎಂದು ನನ್ನ ಅನಿಸಿಕೆ. -ತ್ರಿನೇತ್ರ.
ಯೋಗರಾಜ್ ಭಟ್ ಬಳಿ ಕೆಲಸ ಮಾಡಿರುವ
ಯೋಗರಾಜ್ ಭಟ್ ಬಳಿ ಕೆಲಸ ಮಾಡಿರುವ ಪವನ್ ಒಡೆಯರ್ ತಮ್ಮ ಚೊಚ್ಚಲ ಚಿತ್ರದ ಮೂಲಕ ಭರವಸೆ ಮೂಡಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರಿದ್ದರೂ ಎಲ್ಲೂ ಗೊಂದಲ ಮೂಡದಂತೆ ತೆರೆಗೆ ತಂದಿದ್ದಾರೆ. ನಮಸ್ಕಾರ ತ್ರಿನೇತ್ರ ಮತ್ತು ಜ್ಯೋತಿ ಅವರಿಗೆ. ತಾವು ನನ್ನ ಸಣ್ಣ ಲೇಖನ ಮತ್ತು ಕವನಗಳನ್ನೂ ನೋಡಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
[img_assist|nid=22012|title=ಪವನ್ ಒಡೆಯರ್ ನನ್ನ ಗೆಳೆಯ|desc=|link=node|align=none|width=624|height=468][img_assist|nid=22014|title=ಪವನ್ ಒಡೆಯರ್ ನನ್ನ ಗೆಳೆಯ|desc=|link=node|align=left|width=624|height=468]
ಲೋಕೇಶ್ ಅವರೇ, ತಧನ್ಯವಾದಗಳು ತಮ್ಮ
ಲೋಕೇಶ್ ಅವರೇ, ತಧನ್ಯವಾದಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ.
ಅವರು ತಮ್ಮ ಮಿತ್ರರೆಂದು ತಿಳಿಸಿದ್ದೀರಿ ಅಂದಮೇಲೆ ಇಂತಹಾ ಉದಯೋನ್ಮುಖ ಪ್ರತಿಭಾಶಾಲಿ ಮಿತ್ರರಿಗೆ ತಮ್ಮಂತಾ ಮಿತ್ರರೇ ಉತ್ತಮ ಸಲಹೆಗಳನ್ನು ನೀಡಿ ಈ ರಂಗದಲ್ಲಿ ಇನ್ನೂ ಹೆಚ್ಚು ಹೆಸರು ಗಳಿಸುವಂತೆ ಮಾಡಬಹುದು.
ತಾವು ದಯಮಾಡಿ ಮೇಲು ನೋಟಕ್ಕೆ ಮತ್ತು ಕೇಳುವುದಕ್ಕೆ ಒಂದು ರೀತಿ ಚೆನ್ನಾಗಿದೆ ಎನ್ನಿಸಿದರೂ ಕಾಲಕ್ರಮೇಣ ಅದರೊಳಗೆ ಸತ್ವವಿಲ್ಲದೇ ಮೂಲೆಗುಂಪಾಗುವುದು ಖಂಡಿತಾ ಆದ್ದರಿಂದ ಇನ್ನು ಮುಂದೆ ತಾತ್ಕಾಲಿಕ ಮನೋರಂಜನೆ ನೀಡಿ ಜನರನ್ನು ರಂಜಿಸುವ ಇಂತಹಾ ಸಾಹಿತ್ಯದ ಬದಲು ಕನ್ನಡದ ಸಿರಿ-ಸೊಗಡನ್ನು ಕನ್ನಡಿಗರ ಸಹೃದಯತೆ ಹೊಂದಿಕೊಂಡು ಬಾಳುವ ಪರಿ ಇತ್ಯಾದಿಗಳನ್ನು ಮೆರೆವ ನೂರಾರು ವರುಷ ಕರ್ಣ ಮಧುರವಾಗಿ ಕೇಳುಗರ ಮನದಲ್ಲಿ ಉಳಿಯುವಂತಾ ಅರ್ಥಪೂರ್ಣ ಸಾಹಿತ್ಯ ಹೊಂದಿದ ಗೀತೆಗಳನ್ನು ಕೊಡಬೇಕೆಂದು ಸಹೃದಯ ಕನ್ನಡಾಭಿಮಾನಿಗಳೆಲ್ಲರ ಪರವಾಗಿ ಕೇಳಿಕೊಳ್ಳುತ್ತೀರೆಂದು ಭಾವಿಸುತ್ತೇನೆ. -ತ್ರಿನೇತ್ರ.