ವಿ.ಎಂ.ಶ್ರೀನಿವಾಸ ಪಿಸುಮಾತು

ವರುಗಳು ನಡೆದು ಬರುತ್ತಿದ್ದರೆ ಸಾಕ್ಷಾತ್ ದೇವರು ಬಂದ ಹಾಗೆ ಅವರ ಭಕ್ತರಿಗೆ.! ಅವರಿಗಾಗಿ ಪ್ರಾಣಕೊಡಲು ಸಿದ್ಧರಾಗಿಬಿಡುತ್ತಾರೆ ಈ ಭಕ್ತರು . ಯಾರ ಮನೆಯಲ್ಲೂ ಅವರದೇ ಪೋಟೋ. ಮನದಲ್ಲೂ..! ಯಾವುದೇ ಸರ್ಕಾರ ಬರಲಿ ಅದು, ಸಂವಿಧಾನಕ್ಕೆ ಬಧ್ದವಾಗಿರುತ್ತದೋ ಇಲ್ಲವೋ ತಿಳಿಯದು ಆದರೆ ಅವರುಗಳಿಗೆ ಮಾತ್ರ ಪ್ರಥಮ ಆದ್ಯತೆ. ಅವರು ಅಂದ್ರೆ ಯಾರು.. ಅಂದ್ಕೋತಿದ್ದೀರಾ.? ಮತ್ತ್ಯಾರು ಅಲ್ಲ..ಮುಂದೆ ಓದು

23ವರ್ಷಕ್ಕೆ ವಿಧಿವಶರಾದ ಭಗತ್ ಸಿಂಗ್ ರಂತಹ ಹೋರಾಟಗಾರ ಇವತ್ತಿಗೂ ನಮಗೆ ಪ್ರಸ್ತುತವಾಗುತ್ತಾರೆ, ಯುವಕರಿಗೆ ಆದರ್ಶವಾಗುತ್ತಾರೆ. ಆದರೆ 80 ವರ್ಷಕ್ಕೂ ಮೇಲ್ಪಟ್ಟು 'ಗೌಡ'ಸ್ತಿಕೆ ಮಾಡುವವರು ಹೋರಾಟಗಾರರು ಎನಿಸುವುದೇ ಇಲ್ಲ. ಅವತ್ತಿನ ಹೋರಾಟಗಾರರ ಬಗ್ಗೆ ಗೌರವಗಳಿದ್ದರೆ, ಇವತ್ತಿನ ಹೋರಾಟಗಾರರ ಬಗ್ಗೆ ಅನುಮಾನಗಳಿವೆ. ಅಸಲಿಗೆ ಈ ಹೋರಾಟ ಅಂದರೇನು..? ಈ ಹೋರಾಟಗಾರರು ಯಾರು..?ಮುಂದೆ ಓದು

ವಿಸ್ಮಯ ನಗರಿಯ ಓದುಗರಲ್ಲಿ ಒಂದು ಮನವಿ. 1988 ರಿಂದ ನಾನು ಡಾ.ವಿಷ್ಣುವಿನ ಬಹುದೊಡ್ಡ ಅಭಿಮಾನಿ. ಈಗೇನಾದರೂ ಅವರ ಬಗ್ಗೆ ಲೇಖನ ಬರೆದರೆ ಅದು ಮುಖವಾಣಿ ಆಗಿಬಿಡುವ ಸಂಭವವೇ ಜಾಸ್ತಿ. ಈ ಕಾರಣದಿಂದಲೇ ಅವರ ಬಗ್ಗೆ ನನಗೇನನಿಸುತ್ತೆ ಅನ್ನುವುದಕ್ಕಿಂತ ಮುಖ್ಯವಾಗಿ ನಿಜ ಅರ್ಥದಲ್ಲಿ ವಿಷ್ಣು ಏನಾಗಿದ್ದರು ಎಂಬುದನ್ನು ತಿಳಿಸಲು ಹೊರಟಿದ್ದೇನೆ. ಅವರ ಮತ್ತು ನನ್ನ ಮೊದಲ ಬೇಟಿ, ಅವರೊಂದಿಗೆ ನನ್ನ ಮಾತುಕತೆ, ವಿಷ್ಣು ಸೇನಾ ಸಮಿತಿಯಲ್ಲಿರುವ ನನ್ನ ಇನ್ನಿತರ ಸ್ನೇಹಿತರೊಂದಿಗೆ ಅವರಾಡಿದ್ದ ಅಂತರಾತ್ಮದ ಮಾತುಗಳು ಇವೇ ಮೊದಲಾದಂತಹ ಕೆಲವು ವಿಷಯಗಳನ್ನು ನಾನು ಇಲ್ಲಿ ದಾಖಲಿಸ ಹೊರಟಿದ್ದೇನೆ. ಜನನಾಯಕ ಸಿನಿಮಾ ನೋಡಿದಾಗಿನಿಂದ ನಾನು ಅವರ ಅಪ್ಟಟ ಅಭಿಮಾನಿ. ಜಗತ್ತಿನಲ್ಲಿ ಮತ್ತ್ಯಾರನ್ನು ಆ ಮಟ್ಟದಲ್ಲಿ ಪ್ರೀತಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಾನು ಅವರನ್ನು ಪ್ರೀತಿಸುತ್ತಿದ್ದೆ. ಮುಂದೆ ಓದು

ಸಿ.ಅಶ್ವತ್ಸಿ.ಅಶ್ವತ್ನು ಬರೀಬೇಕು ಎಂಬುದೇ ತಿಳೀತಿಲ್ಲ. ಅಷ್ಟೊಂದು ಭಾವುಕವಾಗಿದೆ ಮನಸ್ಸು. ಸಿ. ಅಶ್ವತ್ ಇನ್ನಿಲ್ಲ ಅಂತ ಸುದ್ದಿ ಕೇಳಿದ ತಕ್ಷಣ ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿಬಿಟ್ಟಿದೆ. ಹೆತ್ತವರನ್ನೇ ಕಳೆದುಕೊಂಡುಬಿಟ್ಟೆನೇನೋ ಎಂಬಷ್ಟು ಸಂಕಟವಾಗ್ತಿದೆ. ನನಗೆ ಸುಮಾರಾಗಿ ಸಂಗೀತ ಬಗ್ಗೆ ತಿಳಿದಾಗಿನಿಂದಲೂ ನಾನು ಅವರ ಅಭಿಮಾನಿ. ನನಗೆ ಯಾವುದೆ ರೀತಿಯ ಕಷ್ಟ, ಸಮಸ್ಯೆ, ನೋವು ಎದುರಾದರೂ ಒಂಟಿಯಾಗಿ ಕೂತು ಅಶ್ವತ್ ರವರ ಹಾಡುಗಳನ್ನು ಕೇಳುತ್ತಿದ್ದೆ. ನಾನು ಯಾವ ಮಟ್ಟಕ್ಕೆ ಅವರನ್ನು ಅವಲಂಬಿಸಿದ್ದೆನೆಂದರೆ ಕೇಳಬೇಕೆನಿಸಿದಾಗ ಅವರ ಹಾಡುಗಳು ಸಿಗಲಿಲ್ಲ ಅಂದರೆ ಸಾಕು ಆ ಹಾಡು ಬರುತ್ತಿಲ್ಲವಾದುದರಿಂದಲೇ ನನಗೆ ಈ ಕಷ್ಟ ಇದೆ ಅಂತ ನಿರ್ಧರಿಸಿಬಿಡುತ್ತಿದ್ದೆ. ಮುಂದೆ ಓದು

ಸಾವನ್ನು ಕಣ್ಣಾರೆ ಕಂಡು, ಸಾಯುವ ಹೊತ್ತಲ್ಲಿ ಈಗ ನಾನು ಯಾವ ರೀತಿ ಸಾಯಬಹುದು ಅಂತ ಯೋಚಿಸಿ, ಕೊನೆಗೆ ಕಿಂಚಿತ್ ಸಮಯ ಪ್ರಜ್ಣೆಯ ಸಹಾಯದಿಂದ ಸಾವಿಂದ ಪಾರಾಗಿ ಬಂದು ಈ ಲೇಖನ ಬರೆಯುತ್ತಿದ್ದೇನೆ. ಈ ಲೇಖನದ ಮೂಲಕ ಏನನ್ನೋ ಹೇಳಬೇಕು ಎಂಬ ಉದ್ದೇಶ ನನಗಿಲ್ಲ ಆದರೆ ಖಂಡಿತ ಇದನ್ನು ಹಂಚಿಕೊಳ್ಳೋ ಉದ್ದೇಶವಂತೂ ಇದೆ.

ಮುಂದೆ ಓದು

1)." ಕನ್ನಡ ಹೀರೋಗಳೆಲ್ಲ, ತೆಲುಗು ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ, ಕನ್ನಡ ನಿರ್ಮಾಪಕರು ಇತ್ತೀಚೆಗೆ ಹೊಸ ಕಥೆಗಳನ್ನು ಹುಡುಕುವ ಬದಲು, ಪ್ರತಿ ಶುಕ್ರವಾರ ಹೈದರಾಬಾದಿಗೆ ಬಂದು, ಹೊಸ ತೆಲುಗು ಸಿನಿಮಾಗಳನ್ನು ನೋಡ್ತಾ ಕಾಲ ಕಳೆಯುತ್ತಿದ್ದಾರೆ."
http://telugu.andhracafe.com/index.php?m=show&id=26372#top_page ಮುಂದೆ ಓದು

ಲೀಲಾವತಿ: ಲೀಲಾವತಿಲೀಲಾವತಿ: ಲೀಲಾವತಿ
ತ್ತೀಚೆಗೆ ಕುವೆಂಪು ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದರ ಸಾರಥಿ ರವಿಬೆಳಗೆರೆ, ಪ್ರಾಯೋಜಕರು ಈಟಿವಿ ವಾಹಿನಿ. ಮುಖ್ಯ ಅತಿಥಿಗಳು, ಸಿನಿತಾರೆ ಲೀಲಾವತಿಯವರು, ವಿನೋದ್ ರಾಜ್ ಹಾಗೂ ಸುಧಾರಾಣಿ ಮತ್ತು ಹಿರಿಯ ನಿರ್ದೇಶಕರಾದ ಶಿವಶಂಕರಪ್ಪನವರು. ಕಾರ್ಯಕ್ರಮದ ಹೆಸರು: ಎಂದೂ ಮರೆಯದ ಹಾಡು. ಮುಂದೆ ಓದು