ನಮಗೇನೂ ಗೊತ್ತಿಲ್ಲ ಸ್ವಾಮಿ. ಅವರು ಕೊಟ್ಟದ್ದನ್ನು ಬಿತ್ತುತ್ತೇವೆ. ಬೀಜ ಕೊಡುವವರೂ ಅವರೇ, ಸಾಲ ಕೊಡುವವರೂ ಅವರೇ, ಸಬ್ಸಿಡಿ ಕೊಡುವವರೂ ಅವರೇ, ದುಡ್ಡು ಕೊಡುವವರೂ ಅವರೇ, ಕೊನೆಗೆ ಕೊಂಡುಕೊಳ್ಳುವವರೂ ಅವರೇ. ನಮ್ಮದೇನಿದೆ ಸ್ವಾಮಿ? 'ಬಡವಾ ನೀ ಮಡಗಿದ ಹಾಗಿರು' ಅಂತಾ ಹಿರಿಯರು ಹೇಳಿದ್ದು ಸುಳ್ಳಲ್ಲ.ಮುಂದೆ ಓದು
ಕಾಳಿಂಗರಾವ್ ನಂತರ ಅನಂತಸ್ವಾಮಿ ಇದ್ದರು; ಅವರ ನಂತರ ಅಶ್ವಥ್ ಇದ್ದರು. ಈಗ ಇವರ ಸರಿಸಮಾನರಾರೂ ಸನಿಹದಲ್ಲೆಲ್ಲೂ ಕಾಣುತ್ತಿಲ್ಲ!
ಭೀಮಸೇನರಿದ್ದರು, ಗಂಗಜ್ಜಿ ಇದ್ದಳು; ಮುಂದ್ಯಾರು ಎಂಬ ಕುರುಹೂ ಸಿಗುತ್ತಿಲ್ಲ!
ರಾಜ್ ಇದ್ದರು, ವಿಷ್ಣು ಇದ್ದರು; ಅಂಬಿ ನಂತರ ಸತ್ತರೆ ಸಹಸ್ರಾರು ಜನರ ಕಣ್ಣು ಮಂಜಾಗಿಸಿ ಹೋಗಬಲ್ಲ ನಟರಾರೂ ಉಳಿಯವುದೇ ಇಲ್ಲ!
ಮುಂದೆ ಓದು
ಡಾಲರ್ಸ್ ಕಾಲನಿಯಲ್ಲಿ ಮನೆಯಿದೆ ಅಂತಾನೋ, Times of India ಕ್ಕೆ ನಿರರ್ಗಳ ಇಂಗ್ಲಿಷ್ನಲ್ಲಿ ಸಂದರ್ಶನ ಕೊಡ್ತಾರೆ ಅಂತಾನೋ, ಪಕ್ಕಾ ಹೈ-ಫೈ ಅಂತಾನೋ, ಬ್ರಾಹ್ಮಣರನ್ನು ಹಿಗ್ಗಾ-ಮುಗ್ಗಾ ಬೈತಾರೆ ಅಂತಾನೋ, ಮುಸ್ಲಿಂ ಬೆಂಬಲಿಗ ಅಂತಾನೋ ನಮಗೆಲ್ಲ ಅನಂತ ಮೂರ್ತಿ ಕಂಡರೆ ಆಗ್ತಿರಲಿಲ್ಲ. ನಲವತ್ತು ಪುಟಗಳ ಅವರ ಕಾದಂಬರಿಗೆ ಅರವತ್ತು ರೂಪಾಯಿ....ಓದುವುದಾದರೂ ಹೇಗೆ? ಅವರ ಎಲ್ಲ ಕಾದಂಬರಿ/ಕಥೆಗಳ ವಿಮರ್ಶೆಯನ್ನೂ ಓದಿಕೊಂಡಿದ್ದೇವೆ. ಇದ್ದುದರಲ್ಲೇ 'ಸೂರ್ಯನ ಕುದುರೆ' ಕಥೆ, 'ಸಂಸ್ಕಾರ' ಕಾದಂಬರಿ ಪರವಾಗಿಲ್ಲ ಎಂದು ತಿಳಿದುಕೊಂಡಿದ್ದೇವೆ. ದೇವೇಗೌಡರ ಸಖ್ಯ ಇವರಿಗ್ಯಾಕೆ, ರಾಜ್ಯಸಭೆಯ ಹಂಗು ಸಾಹಿತಿಗೇಕೆ ಎಂದು ಮೂದಲಿಸಿದ್ದೇವೆ. ಅವರ ಪ್ರಶಸ್ತಿಗಳೆಲ್ಲವೂ ವಶೀಲಿಯ ಫಲವೇ ಎಂದು ನಂಬಿದ್ದೇವೆ. 'ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಬೇಕೆಂಬ ತಲುಬು ಈ ಮುದುಕನಿಗೆ' ಎಂದು ಯಾರೋ ಎಂದಾಗ 'ಹೌದಲ್ಲ!' ಎಂದು ಹುಬ್ಬೇರಿಸಿದ್ದೇವೆ! ಮುಂದೆ ಓದು
ಕೆಲ ದಿನಗಳ ಹಿಂದೆ ವಿಕ ಭಟ್ಟರ ಪುಸ್ತಕ ಬಿಡುಗಡೆಗೆ ಬಂದಿದ್ದ ನಿನ್ನಿಂದಲೇ ಜಯಂತ್ 'ಅನಾಮಿಕರಾಗಿ ಅಂತರ್ಜಾಲದಲ್ಲಿ ಕಾಮೆಂಟ್ ಮಾಡುವರೆಲ್ಲ ಹೇಡಿಗಳು' ಅಂತಾ ಹೇಳಿಕೆ ಕೊಟ್ಟರು! ಇದರ ನಂತರ ಅವರ ಹೇಳಿಕೆಯ ಪರ-ವಿರೋಧ ಬಹಳೇ ಗಮ್ಮತ್ತಿನ ವಾದ-ವಿವಾದಗಳಾದವು. ಅದರ ನಂತರ ನಮ್ಮ ಪ್ರೀತಿಯ ಹುಡುಗಿ ನಾಗ್ತಿ 'ಬ್ಲಾಗಿಗಳಿಗೆ, ಕಮೆಂಟುದಾರರಿಗೆ ಕಡಿವಾಣ ಹಾಕುವ ಅಗತ್ಯವಿದೆ' ಎಂದು ಫರ್ಮಾನು ಹೊರಡಿಸಿದರು. ಹಾಗಾದರೆ, ಈ "ಅನಾಮಿಕ" ಸಣ್ಣವರಿಂದ ಹಿಡಿದು ಸಾಹಿತ್ಯ ಲೋಕದಲ್ಲಿ/ ಪತ್ರಿಕಾ ರಂಗದಲ್ಲಿ ಹೆಸರು ಮಾಡಿರುವವರನ್ನೂ ಬಿಡದೆ ಕಾಡುತ್ತಿದ್ದಾನೆ ಎಂದಾಯಿತು! ಮುಂದೆ ಓದು
ಝೀ ಟಿವಿಯಲ್ಲಿ ಹೊಸದೊಂದು ಕಾರ್ಯಕ್ರಮ ಶುರುವಾಗಿದೆ. 'ಬದುಕು ಜಟಕಾ ಬಂಡಿ' ಅಂತ ಹೆಸರು. ನಮ್ಮ ಮಾಳವಿಕಾ ಅವಿನಾಶ್ ನಡೆಸಿಕೊಡುವ ಈ ಕಾರ್ಯಕ್ರಮದ ನಿರ್ಮಾಪಕರು ಮಾರ್ಗರೇಟ್ ಆಳ್ವ ಮಗ. ಪ್ರೋಗ್ರಾಂನ ಕಾನ್ಸೆಪ್ಟ್ ತುಂಬಾ ಸರಳ. ನೊಂದವರನ್ನು, ಬೆಂದವರನ್ನು , ಚೂರಾದವರನ್ನು ಹಿಡಿದುಕೊಂಡು ಬಂದು ಅವರಿಂದ ಕಣ್ಣೀರು ಸುರಿಸುವದು, ಜೊತೆಯಲ್ಲಿ ಸಾಂತ್ವನ ಹೇಳುವುದು. ಇದನ್ನು ಮಾಳವಿಕಾ ಚೆನ್ನಾಗಿ ನಡೆಸಿ ಕೊಡುತ್ತಾರೆ.ಮುಂದೆ ಓದು
ನದಿಯಿಲ್ಲದ, ಶರಧಿಯಿಲ್ಲದ
ಹೊಲವಿಲ್ಲದ, ಕೆರೆ ಕರಗಿದ
ಕೊನೆಯಲ್ಲಿ,
ಮರಗಳೂ ಮರೆಯಾಗುತ್ತಿರುವ
ಬೆಂಗಳೂರೆಂಬ ಊರಿಗೆ ಮಳೆ!
ಅರ್ಧ ಗಂಟೆಯ ಮಳೆಗೆ ರಸ್ತೆಯಲ್ಲೇ
ನದಿ, ದಡಗುಂಟ ವಾಹನಗಳ ಸಾಗರ
ಜೊತೆಗೆ,
ಕಾರೊಳಗಿನ ಮೌನದಲ್ಲೂ ಕೇಳದ ಗುಡುಗು
ಮಿಂಚಿನ ಬೆಳಕಲ್ಲೂ ಕಾಣದ ಕುರುಡು
ಕ್ರಿಕೆಟ್ ಪಂದ್ಯದ ಕೊನೆಯ ಓವರಿನಲ್ಲಿ
ನೆಚ್ಚಿನ ಧಾರಾವಾಹಿಯ ನಡುವಲ್ಲಿ
ಸರಿಯಾಗಿ,
ಕರೆಂಟಿಲ್ಲ, ಕುಡಿಯಲು ನೀರಿಲ್ಲ
ಮರ ಉರುಳಲು ಮಳೆಯೇ ಬೇಕೇ?
ಮಳೆಯಾದ ಮರುದಿನ
ಬೆಳ್ಳಂಬೆಳಿಗ್ಗೆ ರಣ ಬಿಸಿಲು
ಮುಂದೆ ಓದು
ಅನೇಕರಿಗೆ ಮಾಡುವ ಸಾಮರ್ಥ್ಯವೇ ಇರುವುದಿಲ್ಲ, ಅವರನ್ನು ಬಿಟ್ಟುಬಿಡಿ. ಇನ್ನು ಕೆಲವರಿಗೆ ಮಾಡಬಹುದು;ಮಾಡಬೇಕು ಎಂದಿರುತ್ತದೆ ಆದರೆ ಮಾಡುವುದಿಲ್ಲ. ಅಂದುಕೊಂಡದ್ದನ್ನು ಮಾಡುವುದಿದೆಯಲ್ಲ ಅದು ಒಬ್ಬಿಬ್ಬರು ಮಾತ್ರ. ಅವರ ಸಾಲಿನಲ್ಲಿ ವಿಸ್ಮಯದ ರಾಜೇಶ್ ಹೆಗಡೆ ನಿಲ್ಲುತ್ತಾರೆ. ನನಗೆ ಅವರೊಂದು ವಿಸ್ಮಯ!
ಮುಂಜಾನೆ ಕುತ್ತಿಗೆಯ ನೆರಿಗೆಗಳ ನಡುವಿಂದ ಪೌಡರಿನ ಕಮಟು ವಾಸನೆ
ರಾತ್ರಿ ಮೆದುಳಿನ ಪದರಗಳ ನಡುವಿಂದ ಸಾರಾಯಿಯ ಘಾಟು ವಾಸನೆ
ಬಸ್ಸು ತಿರುವಿದಂತೆಲ್ಲ ಕುಂತವರಿಗೂ, ನಿಂತವರಿಗೂ, ಮಲಗಿದವರೆಲ್ಲರಿಗೂ ಅಮಲು.
ತುಂಬಿದ ಕೊಡ ಮಾತ್ರ ತುಳುಕುವುದಿಲ್ಲ, ಬೆರಳಿನ ಸಂದಿಯಲ್ಲಿ ಸಿಕ್ಕಿಸಿಕೊಂಡಿರುವ ಬ್ಲೇಡಿನ ಹಾಗೆ
ಮೈಬೆವರಿಗಂಟಿದ ಮುದುಕನ ಜನಿವಾರಕ್ಕೂ, ಬಸ್ಸಿನ ಕಂಬಿಗೆ ತಡಸುವ ಯುವಕನ ತಾಯತಕ್ಕೂ ಒಂದೇ ಬೇಗೆ
ಡಾನಮ್ಮ ಶ್ರೀಮಂತ ಇಂಡಿಯಾ ಹಾಗು ಬಡ ಭಾರತದಲ್ಲಿ ಜಾತ್ಯತೀತರೆನ್ನಿಸಿಕೊಳ್ಳಲು ಅಫ್ಜಲ್ ಗುರುವನ್ನು ಗಲ್ಲಿಗೆರಿಸುವದನ್ನು ವಿರೋಧಿಸಿ, ಮುಂಬೈ ದಾಳಿಯನ್ನು ಮಾಮೂಲಿ ವಿಷಯವೆಂದು ತಳ್ಳಿ ಹಾಕಿದರಾಯಿತು. ಅದೇರೀತಿ, ರೆಡ್ಡಿಗಳ ಶ್ರೀಮಂತ ಹಾಗೂ ಕನ್ನಡಿಗರ ಬಡ ಕರ್ನಾಟಕದಲ್ಲಿ ನಿಮಗೆ 'ಬುಧ್ಧಿಜೀವಿ' ಎನ್ನಿಸಿಕೊಳ್ಳಬೇಕೆ -ಹಾಗಾದರೆ ನೀವು ಭೈರಪ್ಪನವರನ್ನು ಬೈದರೆ ಸಾಕು.
ಮುಂದೆ ಓದು