ಉಮಾಶಂಕರ ಬಿ.ಎಸ್ ಪಿಸುಮಾತು

ಏನೂ?!!?? ನನಗೂ ಗೊತ್ತಾಗುತ್ತಿಲ್ಲ. ಅದರಲ್ಲೂ ಗೋಹತ್ಯೆ ನಿಷೇದ ಕಾಯ್ದೆ ಮಂಡಿಸುವ ಮೊದಲು ಮತ್ತು ವಿದೇಯಕದ ನಂತರ ನಮ್ಮ "ಪ್ರಗತಿಪರರು" ಮೈ ಪರಚಿಕೊಳ್ಳುವುದನ್ನು ನೋಡಿದರೆ ಹೀಗನ್ನಿಸುವುದೂ ನ್ಯಾಯವೇ. ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಮುಸಲ್ಮಾನರೇ "ಬೇರೆಯವರ ಮನಸ್ಸಿಗೆ ನೋವಾಗುವುದಾದರೆ ನಮಗೆ ಅದರ ಮಾಂಸವೇ ಬೇಡ, ಬಿಡಿ" ಎಂದು ಸುಮ್ಮನಿರುವಾಗ ಮಧ್ಯದಲ್ಲಿ ಇವರ ಒಗ್ಗರಣೆ ಯಾಕೆ? ಅನ್ನುವುದು ಯಾವತ್ತಿಗೂ ಅರ್ಥವಾಗದಿರುವ ಯಕ್ಷ ಪ್ರಶ್ನೆ..

ಮುಂದೆ ಓದು

ಡೈರೆಕ್ಟ್


 


ಸ್ನೇಹಿತ : ನನ್ನ ತಾತ ೯೬ ವರ್ಷ ಬದುಕಿದ್ದರು. ಅವರ ಆ ಇಳಿವಯಸಿನಲ್ಲು ಗ್ಲಾಸ್ ಬಳಸುತ್ತಿರಲಿಲ್ಲವಂತೆ. !

ಪುಂಡ : ಹೌದು ಕೇಳಿದ್ದೀನಿ..... ಬಾಟಲಿಯಿಂದ ಡೈರೆಕ್ಟಾಗಿ ಕುಡಿತಾ ಇದ್ರಂತೆ !!


ಮುಂದೆ ಓದು

ಹೌದು! ಇದು ನನ್ನನ್ನು ಬಹಳವಾಗಿ ಕಾಡುತ್ತಿರುವ ಬಹುಕಾಲದ ಉತ್ತರ ಸಿಗದ ಪ್ರಶ್ನೆ! ಅದ್ರಲ್ಲೂ ಮೊನ್ನೆ ನಡೆದ ಬೆಂಗಳೂರಿನ ಕಟ್ಟಡವೊಂದರ ಅಗ್ನಿದುರಂತದ ವರದಿಗಳನ್ನು ವೀಕ್ಷಿಸುತ್ತಿದ್ದಾಗ...!!????


ಅಲ್ಲಿಂದ ವರದಿಮಾಡುತ್ತಿದ್ದ ವರದಿಗಾರರು ಬಳಸುತ್ತಿದ್ದ ವಾಕ್ಯಗಳು ಆ ಸುದ್ದಿಯ ತೀವ್ರತೆಗಿಂತ ವಾಕರಿಕೆ ಬರಿಸುವಂತಿದ್ದದ್ದು ಇಂದಿನ ನ್ಯೂಸ್ ಚಾನೆಲ್'ಗಳು ವಿಕೃತ ಮನಸ್ಸಿನವೇನೋ ಎಂದು ಯಾರಿಗಾದರೂ ಅನ್ನಿಸಲು ಸಾಧ್ಯ.

ಮುಂದೆ ಓದು

ನಿಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ'  ಆಲದ ಮರವಾಗಿದ್ದೇನೆ.

ವಿಶಾಲ ಆಲದಮರ 'ಗತಕಾಲವಿಶಾಲ ಆಲದಮರ 'ಗತಕಾಲ

ಮುಂದೆ ಓದು

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.


"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ


"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ. ಮುಂದೆ ಓದು

ಮಾನವ ಮೂಲತಹಃ ಸಂಘ ಜೀವಿ. ಅವನಿಗೆ ತನ್ನದೇ ಆದ ಬಂಧು, ಬಳಗಗಳು, ಸಂಬಧಗಳು, ಭಾವಬಂಧಗಳು ಅವನು ಹುಟ್ಟಿನಿಂದ ಸಾಯುವವರೆಗೂ ಇದ್ದೇ ಇರುತ್ತವೆ. ಅದರಲ್ಲೂ ಅವನು ತನ್ನ ಮೂಲ ಜಾಗವನ್ನು (ಊರನ್ನು) ಬಿಟ್ಟು ಪರ-ಊರಿಗೋ, ಪರ-ದೇಶಕ್ಕೋ ಹೋದರಂತೂ ತಾನು, ತನ್ನವರು, ತನ್ನ ನೆಲ, ಜಲ ಇವುಗಳ ಬಗ್ಗೆ, ಅವುಗಳ ನೆನಪಿನ ಬಗ್ಗೆ ಕಾಡುತ್ತಾ ಇರೋದು ಸಹಜವೇ. ಆ ಕಾಡುವಿಕೆ ಕೆಲಸಾರಿ ಹೆಚ್ಚಾಗಿ 'ಡಿಪ್ರೆಶನ್' ತಲುಪುವ ಸಾಧ್ಯತೆಯೂ ಇಲ್ಲದಿಲ್ಲ.

ಮುಂದೆ ಓದು

ಎಕ್ಸಾಮ್ ಟೈಮ್‍


ವೆಂಕಮ್ಮ : ರೀ ಸಾವಿತ್ರಮ್ಮ, ಎಕ್ಸಾಮ್ ಟೈಮ್‍ನಲ್ಲಿ ನನ್ ಮಗ್ಳು ಟಿವಿ, ಫೋನು, ಮೊಬೈಲು, ಕಂಪ್ಯೂಟರು ಯಾವುದನ್ನೂ ಮುಟ್ಟಲ್ಲಾರೀ......


ಸಾವಿತ್ರಮ್ಮ : ಅದೇನ್ ಮಹಾ ಬಿಡಿ ವೆಂಕಮ್ನೊರೇ, ನನ್ ಮಗಾ ಪುಸ್ತಕಾನೇ ಮುಟ್ಟಲ್ಲ !!


ಐಡೆಂಡಿಟಿ

ಮುಂದೆ ಓದು

ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content