ಕೆಲ ದಿನಗಳ ಹಿಂದೆ, ಹೀಗೆಯೇ ಕಛೇರಿಯ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಬಂದ ಒಂದು ಮೂರೇ ಸಾಲಿನಲ್ಲಿದ್ದ ಮಿಂಚಂಚೆ ನನ್ನ ಗಮನ ಸೆಳೆಯಿತು. "ಸಾರ್, ನಮಸ್ಕಾರ, ನಾನು.......... ಕಛೇರಿಯ ಕೆಲಸದ ಮೇಲೆ ದುಬೈಗೆ ಬರುತ್ತಿದ್ದೇನೆ.ಮುಂದೆ ಓದು
ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು
ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು
ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ ಕೆಲಸಗಳನ್ನೆಲ್ಲಾ
ತರಾತುರಿಯಲ್ಲಿ ಮುಗಿಸಿದೆ. ಅದಾಗಲೇ ತಡವಾಗಿ ಬಿಟ್ಟಿತ್ತು, ಆತುರಾತುರವಾಗಿ ನನ್ನ
ಕಾರನ್ನು ಪಾರ್ಕಿಂಗ್ನಲ್ಲಿ ಹಾಕಿ, ಟ್ಯಾಕ್ಸಿ ಹಿಡ್ಕೊಂಡು, ಆ ಪಾಕಿಸ್ತಾನಿ ಟ್ಯಾಕ್ಸಿ
ಮುಂದೆ ಓದು
1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು.ಮುಂದೆ ಓದು
ಶುಕ್ರ, 22/01/2010 - 22:37 - Manjunatha HT
ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು. ಅಪ್ಪ ಸ್ವಭಾವತಹ ಮುಂಗೋಪಿ ಹಾಗೂ ಸದಾ ಸಿಡುಕು ಬುದ್ಧಿ, ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು.ಮುಂದೆ ಓದು
ಇಂದು ವಿಶ್ವ ಅಪ್ಪನ ದಿನ. ಈ ಸಂದರ್ಭಕ್ಕಾಗಿ ಈ ಲೇಖನ.
ನಮ್ಮ ಮನೆಯಲ್ಲಿ ನಾವು ನಾಲ್ಕು ಜನ ಮಕ್ಕಳು, ಇಬ್ಬರು ಅಕ್ಕಂದಿರು, ನಾನು, ನನ್ನ ಪುಟ್ಟ ತಮ್ಮ. ಅಪ್ಪ ಅಮ್ಮನನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಮ್ಮನಿಗೆ ದಾದಿಯ ಕೆಲಸ ಸಿಕ್ಕ ನಂತರವಂತೂ ಅವರನ್ನು ನೆರಳಿನಂತೆ ಕಾಯ್ದು, ಅವರ ಕೆಲಸದಲ್ಲಿ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಯಾವಾಗಲೂ ಮನೆಯಲ್ಲಿ ಇಂಥದ್ದು ಇಲ್ಲ ಅನ್ನಬಾರದು ಎನ್ನುವ ರೀತಿಯಲ್ಲಿ ಮನೆಯ ಅಗತ್ಯಗಳನ್ನು ಪೂರೈಸಲು ಯತ್ನಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಒಂದು ಜಾಗದಲ್ಲಿಟ್ಟರೆ ಅದು ಅಲ್ಲಿಯೇ ಇರಬೇಕು, ಅವರಿಗೆ ಬೇಕೆಂದಾಗ ಥಟ್ಟನೆ ಕೈಗೆ ಸಿಗಬೇಕು, ಆ ರೀತಿ ಇರುವಂತೆ ನಮ್ಮನ್ನು ಯಾವಾಗಲೂ ತಿದ್ದುತ್ತಿದ್ದರು. ಅವರ ಆ ಶಿಸ್ತು ಇಂದಿಗೂ ಅನುಕರಣೀಯ. ಮುಂದೆ ಓದು
| ಹೊಳೆನರಸೀಪುರ ಮಂಜುನಾಥ | |
| ಈಗಿರುವ ಸ್ಥಳ: ಯುನೈಟದ್ ಅರಬ್ ಎಮಿರೇಟ್ಸ್ | |
| ನನ್ನ ಬಗ್ಗೆ ಹುಟ್ಟಿದ್ದು ಮೈಸೂರಿನಲ್ಲಿ, ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ. ಓದಿದ್ದು ಬೆಳೆದಿದ್ದು ಪದವೀಧರನಾಗಿದ್ದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ. ಆದರೆ ಜೀವನದ ನದಿಯಲ್ಲಿ ಈಜುವುದ ಕಲಿತು ಧೃಡವಾಗಿ ನಿಂತದ್ದು, ಹೇಮಾವತಿಯ ದಡದಲ್ಲಿ, ಹೊಳೆ ನರಸೀಪುರದಲ್ಲಿ, ಹಲವಾರು ವರ್ಷಗಳು ಬೆಂಗಳೂರೆಂಬ ಬೆಂಗಳೂರಲ್ಲಿ ದುಡಿದು ಈಗ ಸಧ್ಯಕ್ಕೆ ಸ... | |
| ಇವರ ವಿಸ್ಮಯ ಪುಟ | |