Skip to main content

ಇತ್ತೀಚಿನ ಅನಿಸಿಕೆಗಳು

ಜೀವನ ನಿಜವಾಗಿಯೂ ಸರಳವೇ ಆದರೆ ಅದನ್ನು ನಾವೇ ಕಾಂಪ್ಲಿಕೇಟ್ ಮಾಡೋದು .ನಾವು ದಿನವನ್ನು ನೆನಪಿದುವುದು ಕಷ್ಟ. ಕ್ಷಣಗಳನ್ನು ನಾವು ನೆನಪಿಟ್ಟುಕೊಳ್ಳುವುದು  ಸುಲಭ. ಜೀವನವನ್ನು ಸಂತೋಷದಿಂದ ಇಡುವುದು ನಮ್ಮ ಕೈಯಲ್ಲೇ ಇದೆ. ಆದ್ದರಿಂದ ಇಂದಿನ ದಿನ ನಮ್ಮದೇ. ಖುಷಿಯಾಗಿ ಇರಿ. ಜೀವನದ  ಮಹತ್ವವನ್ನು ಅರಿಯಿರಿ.

ಈಗಿನ ಕಾಲದ ಎಲ್ಲಾರಿಗೂ ಅರ್ಥ ಆಗಿದೆ ಈ ವೇಲ್ಲಾ 

ಸಾವು ಬೇರೆಲ್ಲೊ ಸಂಭವಿಸಿದಾಗ ಅಷ್ಟು ನೋವಾಗದೇನೋ. ಅದು ನಮ್ಮ ನಮ್ಮ ಮನೆಯೊಳಗೇ ಸಂಭವಿಸಿದಾಗ, ಅದೂ ಹೊತ್ತು ಹೆತ್ತು ಸಾಕಿ ಬೆಳೆಸಿದ ತಾಯಿ! ನೆನೆದಾಗಲೇ ಕರುಳು ಕಿತ್ತು ಬರುತ್ತದೆ. ನನ್ನ ಅಮ್ಮ ಮರಣಿಸಿದ ಬಳಿಕ ಪುಚ್ಚೇರಿಗೆ ಹೋಗೋದೆ ಕಡಿಮೆ. ಯಾವತ್ತೋ ಒಮ್ಮೆ ಅಷ್ಟೇ
ಅಮ್ಮಾ ಅಂದರೆ ಅಮ್ಮನೇ ನನಗೆ ಆ ಅನುಭವ ಇದೆ.

ಕ್ಷಮಿಸಿ ಇಲ್ಲಿ ತಪ್ಪಾಗಿದೆ."  ಪುರಾಣ ಕಾಲದಲ್ಲಿ ದ್ರೌಪತಿಗೆ ಮದುವೆ ಮಾಡುವಾಗ" ಎಂದು ಓದಿಕೊಳ್ಳಿ.

ಪ್ರಜಾ ಪ್ರಭುತ್ವದಲ್ಲಿ ವಾಕ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ನೀವು ಹೇಳಿದಂತೆ ಕಾಯಿದೆ ತಂದರೆ ತಪ್ಪಾಗುವುದಿಲ್ಲವೆ? ಆದರೆ ಪ್ರತಿಯೊಬ್ಬ ಮನುಷ್ಯ ಸ್ವಾತಂತ್ರ್ಯ ಇದೆ ಎಂದು ಸ್ವೇಶ್ಚಾಚಾರಿಯಾಗಿ ನಡೆದುಕೊಳ್ಳುವುದು ತಪ್ಪು. ಅರಿತು ಮಾತಾಡಿದರೆ ಎಲ್ಲರಿಗು ಒಳ್ಳೆಯದು. ದೇವಸ್ಥಾನಕ್ಕೆ ಹೋದ ಮಾತ್ರವೇ ಸಚ್ಛಾರಿತ್ರರೆ? ದೇವರು ಎಲ್ಲಾ ಕಡೆಯೂ ಇದ್ದಾನೆ. ದೇವರ ಹೆಸರಲ್ಲಿ ದುಡ್ಡು ಮಾಡುತ್ತಿರುವ ಈ ಕಾಲದಲ್ಲಿ ಆರತಿ ತಟ್ಟೆಗೆ ಬೀಳುವ ಕಾಣಿಕೆಯ ಮೇಲೆ ಪೂಜೆ, ಪ್ರಸಾದ ನೀಡುವ ದೇವಸ್ಥಾನಗಳು ನಾಯಿ ಕೊಡೆಯಂತೆ ಹುಟ್ಟಿಕೊಳ್ಳುತ್ತಿರುವಾಗ, ಅಲ್ಲಿ ಪ್ರಶಾಂತತೆ ಹೋಗಿ ಏರು ಸ್ವರದಲ್ಲಿ ಟೇಪ ರಿಕಾಡಿ೯ನ ಹಾಡುಗಳು ಮನದಲ್ಲಿರುವ ಮಂತ್ರ ಮರೆತು, ಭಕ್ತಿಯ ಬದಲಾಗಿ ಯಾಂತ್ರಿಕವಾಗಿ ಕೈ ಮುಗಿದು ಬರುವಂತಾಗುತ್ತಿದೆಯಲ್ಲ ಸ್ವಾಮಿ! ಇದರ ಬದಲು ಮನೆಯಲ್ಲೇ ಕುಳಿತು ಭಕ್ತಿಯಿಂದ ದೇವರ ನಾಮ ಸ್ಮರಣೆ ಮಾಡಿ ನಮಸ್ಕಾರ ಮಾಡುವುದು ಸರಿಯಲ್ಲವೆ? ನಂಬಿಕೆ, ಭಕ್ತಿ ಯಾರು ಹೇಳಿ ಕೊಟ್ಟರೆ ಬರುವುದಲ್ಲ, ಅವರಲ್ಲೆ ಹುಟ್ಟಬೇಕು. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸುಧಾರಣೆ ಆದರೆ ಒಳಿತಲ್ಲವೆ?

nenapugale sogasu, nimmanthe navu thuba kolahalavanne ebbisthidvi classnalli.

aadre yarigu naave thappu madiddu annodu gotthagada reethi maintain madthidvi.

nenesikondre mai navireluttade.

ಸ್ವಾಮಿ ಗಾಂಧಿ ಮನೆತನದವರು ಏನು ಮಾಡಿದರೂ ಸರಿ.  ಯಾರಿಗಿದೆ ಅವರ ವಿರುದ್ಧ ಮಾತಾಡೊ ಗುಂಡಿಗೆ ಕಾಂಗ್ರೆಸ್ ನಲ್ಲಿ. ಕಾಂಗ್ರೆಸ್ ಈಗ ತಲೆ ಎತ್ತಿರೋದೆ ಸೋನಿಯಾ ಗಾಂಧಿ ಬಂದ ಮೇಲೆ. ಆದುದರಿಂದ ಎಲ್ಲರೂ ಗಾಂಧಿನೆ! ಬೇರೆಯವರ ಮಾತು ಕಿವಿಗೆ ಬೀಳೋದಿಲ್ಲ. ನಮ್ಮಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಂಡನ ಮನೆತನಕ್ಕೆ ಸೇರಿಕೊಳ್ಳುತ್ತಾರೆ. ಅವರಲ್ಲಿ ಹಾಗಿಲ್ವೇನೊ ಬಿಡಿ. ಸದ್ಯ ದೇಶ ಕಾಪಾಡೋಕೆ ಮೋದಿ ಮಹಾಷಯರು ಬಂದಿದಾರೆ.  ಅವರು ಗಾಂಧಿ ಅಂತಾದರೂ ಹೇಳಿಕೊಳ್ಳಲಿ ಅಥವಾ ವಾದ್ರಾ ಅಂತಾದರೂ ಹೇಳಿಕೊಳ್ಳಲಿ.  ಇದರಿಂದ  ದೇಶಕ್ಕೆ ಯಾವ ನಷ್ಟನೂ ಇಲ್ಲ.

ರಾಜ ರತ್ನಂ ಅವರಿಗೆ ದೇವರ ಬಗ್ಗೆ ವಣ೯ನೆ ಮಾಡಿದರೆ, ಮಾತಾಡಿದರೆ ತುಂಬಾ ಕೋಪ ಅನಿಸುತ್ಯದೆ. ಅದಕೆ ಮೂಗಿನ ತುದಿಗೆ ಕೋಪ ನನಗೆ ಅಂತ ತಮ್ಮ ಕವನದಲ್ಲಿ ಬರೆದಿದ್ದಾರೆ. ದೇವರ ಬಗ್ಗೆ ಮಾತಾಡುವವರು ಮುಂದೆ ಬಂದರೆ ಕೋಪ ನನಗೆ  ತುಂಬಾ ಮಾಮಿ೯ಕವಾಗಿದೆ. ಇದು ಅಸಹಾಯಕತೆಯೊ ಅಥವಾ ನಾಸ್ತಿಕತೆಯೊ? ಇರಬೇಕು.

ದೇವರು ಅಂದರೆ ಅಗೋಚರ ಶಕ್ತಿ.  ಪ್ರತಿಯೊಂದು ಜೀವಿಯಲ್ಲೂ ಈ ಶಕ್ತಿ ಇದ್ದೇ ಇದೆ.   ಜಗತ್ತು ಮುಂದುವರಿಯುತ್ತಿರುವುದೇ ಈ ಶಕ್ತಿಯಿಂದ.  ಅದೇ ಜೀವಾತ್ಮ ಪರಮಾತ್ಮ. ಎಂತ ವೇಳೆಯಲ್ಲೇ ಆಗಲಿ ನಮ್ಮೊಳಗೊಂದು ಶಕ್ತಿ ಜಾಗೃತವಾಗಿ ಮುನ್ನಡೆಸುತ್ತದೆಯಲ್ಲ ಅದೇ ದೇವರು.  ಅದೇ ನಂಬಿಕೆ, ಛಲ, sixthsence, ಮನಸ್ಸು, ಆತ್ಮ ಏನು ಬೇಕಾದರೂ ಅಂದುಕೊಳ್ಳಬಹುದು. ಅವರವರ ಭಾವನೆಗೆ ಬಿಟ್ಟಿದ್ದು.  ಆದರೆ ಈ ಅಗೋಚರ ಶಕ್ತಿ ಯಿಲ್ಲದೆ ಜಗತ್ತು ನಡೆಯೋಕೆ ಸಾಧ್ಯ ಇಲ್ಲ.

ನಿಮ್ಮ ಅತ್ಮವಿಶ್ವಾಸಕ್ಕೆ ನನ್ನ ವಂದನೆ.

         ದೇವರಿಗೆ ಪ್ರಾಣಿ ಬಲಿ ಕೊಡುವುದನ್ನು ಕಣ್ಣಾರೆ ಕಂಡವಳು ನಾನು. ಕಾರಣ ನಾನು ಅಪ್ಪಟ ಸಸ್ಯಾಹಾರಿ ಆದರೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕೆಲಸದ ನಿಮಿತ್ತ ಸುಮಾರು ಎರಡೂವರೆ ವಷ೯ ಇದ್ದೆ. ಅಲ್ಲಿಯ ಒಂದು ದೇವಸ್ಥಾನದಲ್ಲಿ ಪ್ರತಿ ವಷ೯ ವಿಜೃಂಭಣೆಯಿಂದ ಪೂಜೆ ನಡೀತಾ ಇತ್ತು.  ಈ ಪೂಜೆಗೆ ಮನೆಯಲ್ಲಿ ಇರುವ ಪ್ರತಿಯೊಬ್ಬರ ಹೆಸರಲ್ಲಿ ಒಂದು ಕೋಳಿ ಬಲಿ ಕೊಡುವ ಪದ್ದತಿ. ನಾನು ಗೊತ್ತಿಲ್ಲದೆ ಹೋಗಿ ಆ ದೃಶ್ಯ ಕಂಡು, ಆ ಕೋಳಿಗಳ ಆಕೃಂದನ ನಿಜಕ್ಕೂ ಸಂಕಟ ತರಿಸಿತು. ರಾಶಿ ರಾಶಿ ಕೋಳಿಗಳ ಮಾರಣ.  ದೇವರ ಹೆಸರಲ್ಲಿ ಪಾಪ ಒಂದು ಜೀವ ಹತ್ಯೆ ಮಾಡೋದು ತಪ್ಪು.  ಈ ಪದ್ದತಿ ನಿಲ್ಲಿಸ ಬೇಕು.

     ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇಲ್ಲಿ ಅಮ್ಮನ ಸಾವು ಹೇಗೆ ಬಂತು, ಅದೇ ಖಾಯಿಲೆಯಿಂದ ನಾ ಹೇಗೆ ಬದುಕುಳಿದೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ನೋವು ಕಾಡುತ್ತಿತ್ತು. ಹಂಚಿಕೊಂಡೆ. ಛಲವನ್ನು ಪ್ರತಿಯೊಬ್ಬ ರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ.

ಮೇಡಮ್ ಬೇಸರಿಸಿಕೊಳ್ಳಬೇಡಿ. ಸಾವು ನೋವುಗಳು ಎಲ್ಲರಿಗೂ ಸಾಮಾನ್ಯ. ಸಾವಿಗಿಂತ ಯಾತನಾಮಯವೆಂದರೆ ಅವಮಾನಗಳು. ನೀವು ತುಂಬಾ ಸಾಧನೆ ಮಾಡಿದ್ದೀರಿ. ಧನ್ಯವಾದಗಳು