Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ನಿರ್ಜೀವ ಜಂತು

ಬರೆದಿದ್ದುOctober 23, 2010
noಅನಿಸಿಕೆ

"Life sucks"
ಜೀವ ಹೀರುತ್ತೆ-ಯಾಂತ್ರಿಕ ಬದುಕು
ಜನರ ಜೀವ ಹಿಂಡುತ್ತೆ,
ನಾವು ನಾವಾಗದೆ
ನಾವು ಬೇರೆಯಾಗಬೇಕೆಂಬ ಹಂಬಲ ಇದಕ್ಕೆ ಕಾರಣ
ನಮ್ಮದು, ನಮ್ಮವರು ಮರೆತು ಹೋದರೆ ಹೀಗಾಗುತ್ತೆ\
ಬದಲಾಗಬೇಕು ನಿಜ!
ನಮ್ಮನ್ನು ಮರೆಯುವಂತಹ ಬದಲಾವಣೆಯಲ್ಲ
ನಾವು ಬಂದ ದಾರಿ ಮರೆಯುವುದಲ್ಲ

ಬಯಕೆಯೆಂಬ ತೊರೆ

ಬರೆದಿದ್ದುOctober 23, 2010
2ಅನಿಸಿಕೆಗಳು

ನಾನಿಲ್ಲದೆ ಜಗವಿಲ್ಲ
ನಾನಿಲ್ಲದೆ ಚೈತನ್ಯವಿಲ್ಲ
ಎಲ್ಲರಲ್ಲೂ ಹರಿವೆ ಕಣ್ಣಿಗೆ ಕಾಣದೆ
ನನ್ನದೇ ಮಸಲತ್ತು ಯಾರನ್ನೂ ಬಿಡದೆ\\

ನನ್ನ ಅಣತಿಯಂತೆ ಎಲ್ಲವೂ
ನಾನೇ ಕಾರಣ ಎಲ್ಲಕೂ
ನಿದ್ದೆಯಲ್ಲಾ, ಎಚ್ಚರದಲ್ಲೂ
ಕಾಡುವೆ ಗುರಿಯ ತಲುಪುವರೆಗೂ\\