Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

*ದಾರಿ-ರಹದಾರಿ*

ಬರೆದಿದ್ದುOctober 24, 2010
noಅನಿಸಿಕೆ

ಎಷ್ಟು ಜನ ನಡೆದಾಡಿದ್ದಾರೆ ಈ ದಾರಿಯಲ್ಲಿ?
ಒಬ್ಬೊಬ್ಬರು ಒಂದೊಂದು ಎತ್ತರಕ್ಕೆ ಬೆಳೆದಿದ್ದಾರೆ
ಹೌದು ಇದೇ ದಾರಿಯಲ್ಲಿ ಹೋದವರು ಅವರೆಲ್ಲರೂ!
ನಾನೂ ಅದೇ ದಾರಿಯಲ್ಲಿದ್ದೇನೆ!
ಎತ್ತರದ ಅನುಭವ ನನಗಾಗಿಲ್ಲ
ಇವತ್ತು ಅದೇ ದಾರಿಯಲ್ಲಿ ನಡೆಯುತ್ತೇನೆ
ನಾಳೆ ನಾಳೆಗಳಲ್ಲಿ ದಾರಿ ಬದಲಾಗುವುದಿಲ್ಲ
ನನ್ನಲ್ಲಿ ಸಂದೇಹಗಳಿವೆ!

-ಚಿತ್ತಾರ-

ಬರೆದಿದ್ದುOctober 24, 2010
noಅನಿಸಿಕೆ

ಒಮ್ಮೆ ನಿಂತಿದ್ದೆ
ಮಸಾಲೆ ಪೂರಿ ತಿನ್ನಲು
ಆಗ ಸಂಜೆಯಾಗಿತ್ತು
ಮನಸ್ಸು ಹಗುರವಾಗಿತ್ತು
ಹಾಗೆ ಕಣ್ಣಾಡಿಸಿದ್ದೆ ಸುತ್ತಲೂ
ಸಂಜೆ ಕತ್ತಲು ಸಂತೋಷ ಕೊಡುತ್ತಿತ್ತು
ಪಿಸು-ಪಿಸು ಮಾತನಾಡುತ್ತಾ
ಮೈ-ಕೈ ಸೋಕಿಸಿಕೊಳ್ಳುತ್ತಾ
ಸಾಗೋ ಜೋಡಿಹಕ್ಕಿ
ಆಕಾಶದಲ್ಲಿ ಸಾಲುಸಾಲು ಹಕ್ಕಿಗಳ ಚಿತ್ತಾರ

-ಆನಂದ-

ಬರೆದಿದ್ದುOctober 24, 2010
noಅನಿಸಿಕೆ

ಹರಿಯುವ ನದಿಯನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ
ಹಾರೋ ಹಕ್ಕಿಯ ಕಂಡು ಸಂತೋಷಪಟ್ಟಿದ್ದೇನೆ
ಕನಸಿನಲ್ಲಿ ರೆಕ್ಕೆ ಜೋಡಿಸಿಕೊಂಡು
ಹಕ್ಕಿಗಳೊಂದಿಗೆ ಪೈಪೋಟಿಗಿಳಿದಿದ್ದೇನೆ
ಎತ್ತರದ ಬೆಟ್ಟಗುಡ್ಡಗಳನ್ನು ಹತ್ತಿ ಆನಂದಪಟ್ಟಿದ್ದೇನೆ
ಸ್ವರ್ಗವೆಂದರೆ ಇದೇ ಇರಬೇಕೆಂದು ಊಹಿಸಿಕೊಂಡಿದ್ದೆ

ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..!

ಇಂದ Manjunatha HT
ಬರೆದಿದ್ದುOctober 24, 2010
8ಅನಿಸಿಕೆಗಳು

ಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ ನಂತರ, ಈ ಬರೆಯಬೇಕೆಂಬ ತುಡಿತವೇ ಅಂಥಾದ್ದು ಎಂದು ನನ್ನ ಭಾವನೆ.