Skip to main content

ನೆನಪೇ ಓ ನೆನಪೇ....

ಇಂದ sowmya.sanu
ಬರೆದಿದ್ದುAugust 9, 2010
1ಅನಿಸಿಕೆ

 ನೆನಪೇ ನೀ ನೆನಪಾಗಿ ನೆನಪಿಸುತ್ತ ನೆನಪನ್ನ
ನೆನಪು ಉಳಿಯಲಿ ನೆನೆ ನೆನೆಯುತ್ತ
ಆ ನೆನಪುಗಳು ನೆನಪಿಸಿದ ನೆನಪನ್ನು
ನೆನಪಿಸುವುದೇ ಈ ನೆನಪು......

ವಾಸ್ತವದ ಕಲ್ಪನೆ.........

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

 "ಕಲ್ಪನೆಯಲ್ಲೂ ಕಂಡ
   ಅರಿಯದ ಹಾಗೆ ಮೂಡಿರುವೆ ನೀ
ವಾಸ್ತವದಲ್ಲೂ ಕಾಣದೆ
    ಮರೆಯಾಗಿರುವೆ ನೀ
ಪರಿಚಯ ಇಲ್ಲದಿದ್ದರು
    ಪರಿಚಯದ ಭಾವ ಮೂಡಿರಲ್ಲು
ವಾಸ್ತವವು,ಕಲ್ಪನೆಯಲ್ಲೂ ಮೂಡದ
    ಕಲ್ಪನೆ ಎಂದಂತಾಗಿದೆ"

ಮಾಯೆ.....!

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

 ಕನಸಲ್ಲಿ ಕಾಣಲು ಹೋದೆ
    ಮರೆಯದೆ ನೀನು
ನನಸಲ್ಲೂ  ಕಾಣಲು ಹೋದೆ
    ಕಾಣಲಿಲ್ಲ ನೀನು
ಹುಡುಕುತ್ತ ಹುಡುಕುತ್ತ ಹೋದೆ....ನಾನು
     ಉಳಿಸಲಿಲ್ಲ ನೀ ಯಾವ ಛಾಯೆಯನ್ನು....

ನಿನಗಾಗಿ.......

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

 ಬರೆಯಲು ನಾ ಈ
  ಕವಿತೆಯ ನಿನಗಾಗಿ.......
ಓದಲು ಕವಿತೆಯ ನೀ
  ಮರೆತೆ ನೀ ನನ್ನನ್ನು
ಓದುತ್ತಾ ಮರೆಯಾಗಿ........ 

ಕಣ್ಣಂಚಿನ......ಮಾತು....

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

 ನಿನ್ನ ಕಣ್ಣಂಚಿನಲ್ಲಿ ತುಂಬಿರುವಾ
   ನೂರು ಮಾತುಗಳನ್ನು
   ನಾ ಅರಿತೆನು ನಿನ್ನ ಕಂಗಳಲ್ಲಿ ಇಂದು
ನಿನ್ನ ಕಣ್ಣಂಚಿನಲ್ಲಿ ತುಂಬಿರುವಾ
    ನೂರು ಭಾವನೆಗಳನ್ನು
    ನಾ ಕಂಡೆನು ನಿನ್ನ ಕಣ್ಣಗಳಲ್ಲಿ ಮಿಂದು
ನಿನ್ನ ಈ ಕಣ್ಣಿನ ಬಾಣಕ್ಕೆ
   ನನ್ನ ಈ ಮನವು ಮರೆಯಾಗಿದೆ ಇಂದು.......