Skip to main content

ಗುಬ್ಬಿಯಂಥ ಜೀವಾ

ಇಂದ Madhav Kulkarni
ಬರೆದಿದ್ದುJune 30, 2017
noಅನಿಸಿಕೆ

ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
 
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
 
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ

ಪರಿಸ್ಥಿತಿ

ಇಂದ SANTOSH KHARVI
ಬರೆದಿದ್ದುMay 14, 2017
noಅನಿಸಿಕೆ

ಕರೆಂಟಿಲ್ಲದ ಬಡವನೆದೆಯ 

ಗೂಡಲ್ಲಿ ಇದ್ದ ಹಣತೆಯ ಕದ್ದಿದ್ದರೂ, 

ದೂರು ನೀಡಲು ಯೋಗ್ಯತೆಯಿಲ್ಲ... 

ಏಕೆಂದರೆ ಹಣತೆಯೇ ನನ್ನದಲ್ಲ...

                            - ಸ.Kha.

ಮುಡಿಪು

ಇಂದ SANTOSH KHARVI
ಬರೆದಿದ್ದುMay 14, 2017
noಅನಿಸಿಕೆ

 

ಎದೆಯ ಬಂಜರು ಭೂಮಿಯಲ್ಲಿ

ಕನಸ ಬೀಜ ಬಿತ್ತಿ

ಹೂವೊಂದ ಬೆಳೆಸಿದ್ದೆ. 

ಯಾರೋ ಬಂದು ಹೂವ ಕಿತ್ತರು... 

ಏಕೆಂದು ಕೇಳಿದರೆ 

ದೇವರ ಮುಡಿಗೆಂದರು... 

ಎದೆಯ ಭೂಮಿ ಮತ್ತೆ ಬಂಜರು...

                             - ಸ.Kha.