Skip to main content

ಕಡಲು—ನನ್ನೊಡಲು

ಇಂದ SaumyaSimha
ಬರೆದಿದ್ದುJuly 29, 2017
noಅನಿಸಿಕೆ

ನೀರಿಗಿಳಿಯುವ ಮುನ್ನ ಮೊಗದಲ್ಲಿತ್ತು ಮಂಂದಹಾಸ|
ಮಾಡಬೇಕಿತ್ತು ಸಾಹಸˌಸಾವಿನೊಡನೆ ಸರಸ|
ತಕ್ಷಣ ಕಣ್ಬಿಟ್ಟೆ ಕಾಣುತಿಹೆ ವಿಜ್ಞಾನವೆಂಂಬ ಸಾಗರ|
ಇಲ್ಲಿ ನಿಂಂತು ನಿನ್ನಲ್ಲಿ ವಿಜ್ಞಾಪನೆ — ಬೇಕು ನಿನ್ನ ಕರುಣೆ ಅಪಾರ||

ಅಮ್ಮಾ ನೀ ಡಿಫೆರೆಂಟ್

ಇಂದ Madhav Kulkarni
ಬರೆದಿದ್ದುJune 30, 2017
1ಅನಿಸಿಕೆ

ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ

ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"

ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
“ಮಳೆ ನಿಲ್ಲುವವರೆಗೆ ತಡೆದು
 ಬರಬಾರದಿತ್ತೇ ಕಮಂಗಿ"

ಗುಬ್ಬಿಯಂಥ ಜೀವಾ

ಇಂದ Madhav Kulkarni
ಬರೆದಿದ್ದುJune 30, 2017
noಅನಿಸಿಕೆ

ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
 
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
 
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ