ಬಾರದಿರುವ ಕೆಲಸವನ್ನು ಮಾಡುವವನು ಮೂರ್ಖ.....


ಬರುವ ಕೆಲಸವನ್ನು ಮಾಡದೆ ಕೂರುವವನು ಸೋಮಾರಿ.......


ವಿನಯ್_ಜಿ's picture

ಅಂತೂ ಬಹು ನಿರೀಕ್ಷೆಯ "ಅಣ್ಣಾ ಬಾಂಡ್" ಚಿತ್ರ ಮೇ ೧ ರಂದು ರಾಜ್ಯದ, ಹೊರರಾಜ್ಯದ ಮತ್ತು ವಿದೇಶಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಬಹುನಿರೀಕ್ಷೆಯೊಂದಿಗೆ ಚಿತ್ರ ನೋಡ ಹೊರಟ ಅಭಿಮಾನಿ ಪ್ರಭುಗಳಿಗೆ "ದುನಿಯಾ" ಸೂರಿ ಭಾರಿ ನಿರಾಶೆ ಮಾಡಿಬಿಟ್ಟಿದ್ದಾರೆ. ಅಂತೂ "ಜಾಕಿ" ಚಿತ್ರದ ನಂತರದ ಅತಿನಿರೀಕ್ಷೆಯೋ, "ಬಾಂಡ್" ಹೆಸರ ಪ್ರಭಾವವೋ..., "ಅಣ್ಣಾ ಬಾಂಡ್" ಎಲ್ಲವನ್ನು ತಲೆಕೆಳಗು ಮಾಡಿಬಿಟ್ಟಿದೆ...!

ತ್ರಿನೇತ್ರ's picture

ಇದು ಕನ್ನಡ ಪ್ರೇಮವೇ...?


ಈ ನಮ್ಮ ಕನ್ನಡ ಭಾಷೆಯನ್ನು ಬೆಳೆಸಿ ಉದ್ಧಾರ ಮಾಡುವ ನಮ್ಮ ಪ್ರಯತ್ನ ಎತ್ತ ಸಾಗುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಒಂದಂತೂ ನಿಜ... ಅದೆಂದರೆ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಪರಬಾಷಾ ಪ್ರೇಮ ಹೆಚ್ಚಾಗುತ್ತಿರುವುದು ಮತ್ತು ಕೀಳು ದರ್ಜೆಯ ಸಾಹಿತ್ಯ ಮತ್ತು ಹಾಸ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು. ಇದಕ್ಕೆ ಇತ್ತೀಚಿಗೆ ಬಿಡುಗಡೆಯಾದ ಒಂದು ಚಿತ್ರದ ಹಾಡು... "ಪ್ಯಾರ್ ಗೇ..." ಅದೇನೋ ಆಗ್ಬಿಟ್ಟೈತಂತೆ.... ಮುಂದೆ ಹೇಳಲೂ ಅಸಹ್ಯವಾಗುವಷ್ಟರ ಮಟ್ಟಿಗೆ ಕೆಟ್ಟ ಸಾಹಿತ್ಯ ಬರೆದು ಹಾಸ್ಯದ ಹೆಸರಿನಲ್ಲಿ ಒಂದು ಜನಾಂಗದ ಆಡು ಭಾಷೆಯನ್ನು ಸಾಧ್ಯವಾದಷ್ಟೂ ತೆಗಳಿ ಹೀಯಾಳಿಸಿ ಅಪಮಾನ ಮಾಡುವ ರೀತಿಯಲ್ಲಿ ಹಾಡಿಸಲಾಗಿದೆ ಆ ಹಾಡನ್ನು. ಈ ರೀತಿ ನಮ್ಮದೇ ಭಾಷೆಯನ್ನು ಯಾರಾದರೂ ಅವಹೇಳನಕಾರೀ ರೀತಿಯಲ್ಲಿ ಹೀಯಾಳಿಸಿ ಮಾತಾಡಿದರೆ ನಮಗೆ ಎಷ್ಟು ಸಹಿಲಾಗದೋ ಅಷ್ಟೇ ಕೋಪ ಅವರಿಗೂ ಬರುತ್ತದೆ ಎಂದು ಅರಿತಿರಲಿಲ್ಲ ಎಂದು ಕಾಣುತ್ತದೆ ಆ ಹಾಡಿನ ಕರ್ತರು.

ಪಿಸುಮಾತು's picture

ದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ನಮ್ಮೂರಾದ ಮುಂಗಳಿಮನೆಗೆ ಇರುವ ಹದಿನೈದು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು.

praveen.kulkarni's picture

ಮೊನ್ನೆ ಗೆಳೆಯನ ಮದುವೆಗೆ ಗುಲಬರ್ಗಾಕ್ಕೆ ಹೋಗಿದ್ದೆ.ಅಲ್ಲೊಬ್ಬ ಹಳೆಯ ಗೆಳೆಯ ಸಿಕ್ಕಿದ್ದ.ಅದು ಇದು ಮಾತಾಡಿ ನಮ್ಮಿಬ್ಬರ ಮಾತುಕತೆ ಮದುವೆ ವಿಷಯಕ್ಕೆ ತಿರುಗಿತು.ಅವನು ನನಗಿಂತ ಸ್ವಲ್ಪ ದೊಡ್ಡವನೇ ಆದ್ದರಿಂದ ಸಹಜವಾಗಿ ನಾ ಕೇಳಿದೆ ಮದುವೆ ಯಾವಾಗಾಯ್ತು ಅಂತ...ಅವನು ಮುಖ ಸಪ್ಪೆ ಮಾಡ್ಕೊಂಡು ನಮಗ್ಯಾರು ಮದುವೆ ಆಗ್ತಾರೆ ಪ್ರವೀಣ್... ನಿಂಗೊತ್ತಲ್ಲ ನಾನು ಮಾಡೋದು ವ್ಯವಸಾಯ ಅಂತಾ...ಇವತ್ತಿನ ಹುಡುಗಿರು ನಮ್ಮ ಕಡೆ ತಿರುಗಿಯೂ ನೋಡಲ್ಲ ಮದುವೆ ವಿಷಯ ತುಂಬಾ ದೂರದ ಮಾತು ಅಂದ.ಅವನ ಮಾತು ಕೇಳಿ ನಾನು ಅವಕ್ಕಾದೆ.ಏಕೆಂದರೆ ಅವನಿಗೆ ಇದ್ದಿದ್ದು ಬರೋಬ್ಬರಿ ಹನ್ನೆರಡು ಎಕರೆ ಹೊಲ.ಏನಿಲ್ಲ ಅಂದರು ಒಂದು ಎಕರೆಗೆ ತಲಾ ಆರೇಳು ಲಕ್ಷ ಬರುತ್ತೆ .ಹಾಗಾದರೆ ಅವನು ಲಕ್ಷಾಧಿಪತಿ.

Narasimha Rao's picture

ದಿನವೂ ದೇವರ ಪೂಜೆಗೆಂದು ಮನೆಯ ಹಿಂದೆಯಿರುವ ಗಿಡದಲ್ಲಿ ಹೂ ಕೀಳುವುದು ನನ್ನ ಅಭ್ಯಾಸ. ಕಳೆದ ಕೆಲವು ವರ್ಷಗಳಿಂದಲೂ ಇದು ನನ್ನ ಪ್ರತಿ ದಿನದ ಬೆಳಗಿನ ಮತ್ತು ಇಷ್ಟವಾದ ಕೆಲಸ. ಇರುವುದು ಒಂದೇ ಗಿಡವಾದರೂ ಸಾಕಷ್ಟು ಹೂ ಬಿಡುತ್ತದೆ. ಕೆಲವೂಮ್ಮೆ ಮನೆಗೆ ಹೂ ಕೂಡುವವಳು "ಕೈ" ಕೂಟ್ಟಾಗಲಂತು ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ಅಂದ ಹಾಗೆ ಯಾವ ಹೂವಿನ ಗಿಡ ಎಂದು ಕೇಳಲು ಮರೆತಿದ್ದೆ...."ಕೆಂಪು ದಾಸವಾಳದ ಗಿಡ".

ಬಾಲ ಚಂದ್ರ's picture

ವಿಸ್ಮಯ ಬಳಗವಿಸ್ಮಯ ಬಳಗಸನ್ ಎರಡು ಸಾವಿರದ ಹನ್ನೊಂದನೇ ಇಸ್ವಿಯ ಮೇ ಹದಿನಾಲ್ಕು ಶನಿವಾರ ಮಧ್ಯಾಹ್ನ ಎರಡು ಘಂಟೆಗೆ ಒದಗಿದ ಶುಭಲಗ್ನದಲ್ಲಿ ನಡೆದ ಘಟನೆಯು ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದೇನೂ ಅಲ್ಲದಿದ್ದರೂ ತೆಗೆದು ಹಾಕುವಂತದ್ದೂ ಅಲ್ಲ ಬಿಡಿ.


ಅಂದು ಬಸವನಗುಡಿಯಲ್ಲಿರುವ ಕಹಳೆ ಬಂಡೆಯ ಉದ್ಯಾನವನದ ಮೃತ್ತಿಕೆಯು ಕನ್ನಡಗರಡಿಯಾಳುಗಳ ಪಾದಸ್ಪರ್ಶದಿಂದ ಪುಳಕಿತವಾಯಿತು.


ಅಲ್ಲೇ ಶಿಲಾರೂಪದಲ್ಲಿ ನೆಲಸಿರುವ ಡಿ.ವಿ.ಗುಂಡಪ್ಪನವರ ಪ್ರತಿಮೆಯ ಕಣ್ಣಿನಿಂದ ಆನಂದಾಶ್ರುಗಳು ಹೊಮ್ಮಿದವೂ, ಅದನ್ನು ಅವರು ಕನ್ನಡಕ ತೆಗೆದು ತಮ್ಮ ಹೆಗಲಿನಲ್ಲಿದ್ದ ಅಂಗವಸ್ತ್ರದಿಂದ ಒರೆಸಿಕೊಂಡರೂ ಎಂದು ಪ್ರತ್ಯಕ್ಷದರ್ಶಿಗಳ ಅಂಬೋಣ.

ಕೆಎಲ್ಕೆ's picture

ಹೀಗೆ ಅಲೆದಾಡುತ್ತಾ...ವಿಸ್ಮಯನಗರಿಯ ಹಳೆಯ ರಸ್ತೆಗಳನ್ನೆಲ್ಲ ಸುತ್ತಿ ಬಂದೆ.
ಶಿವಕುಮಾರರ ಅಧ್ಭುತ ಕಥೆ, ಚಿತ್ರವಿಮರ್ಶೆ.....ಬಾಲಚಂದ್ರರ ತೊಡೆತಟ್ಟಿ ಯುದ್ಧಕ್ಕೆ ನಿಂತು, ಕೆಲ ಬುದ್ಧಿಗೇಡಿಗಳನ್ನು ಓಡಿಸುವ ಸಾಹಸ......ಶ್ರೀನಿವಾಸರ ಮದುವೆ, ವಿಸ್ಮಯ ಪುಸ್ತಕದ ಕೊಡುಗೆ  ......ಭಯಂಕರ ಲಹರಿಯಲ್ಲಿ ದಿನಕ್ಕೆರಡು ಲೇಖನ ಬರೆದು ಬಿಸಾಡಿದ ಉಮಾಶಂಕರ.....ಅದ್ಯಾವುದೋ ದೇಶದಲ್ಲಿರುವ ದುಂಡು ಮುಖದ, ಅಷ್ಟೇ ಚೆನ್ನಾಗಿ ಬರೆಯುವ ಅಚ್ಚು ಹೆಗಡೆ.......ತೇಜಸ್ವಿನಿ ಹೆಗಡೆ........ಕೆ.ಮೂರ್ತಿಗಳು........ಪಾರ್ವತಿ ಜಿ.ಆರ್...... ರಥಿ ಹಾಗೂ ಸಾರಥಿ ರಾಜೇಶ್ ಹೆಗಡೆ.... 

ಪಿಸುಮಾತು's picture

 ಡಬ್ಬಿಂಗ್ಡಬ್ಬಿಂಗ್ "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಡ" ಎಂದು ಶುರುವಾದ ಹೋರಾಟ ಹಲವು ವರ್ಷಗಳ ತರುವಾಯ ಇಂದು "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಎಂಬ ಹೋರಾಟವಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಕಾಲ ಬದಲಾಗಿದ್ದರೂ, ಹೋರಾಟಗಳ ದಿಕ್ಕೇ ಬದಲಾಗಿದ್ದರೂ, ಹೋರಾಟಗಾರರೂ ಬದಲಾಗಿದ್ದರೂ ಸಹ "ಕನ್ನಡದ ಉಳಿವು" ಎಂಬ ಪೆಡಂಭೂತ ಮಾತ್ರ ಹಾಗೆಯೇ ಉಳಿದುಕೊಂಡಿರುವುದು ದುರ್ದೈವವೇ ಸರಿ.

ರಾಜೇಶ ಹೆಗಡೆ's picture

ನಮಸ್ಕಾರ ಆತ್ಮೀಯ ವಿಸ್ಮಯ ಪ್ರಜೆಗಳೇ ಹಾಗೂ ಅನಾಮಿಕ ಓದುಗರೇ,

ಇಂದು ಅಂತರ್ಜಾಲದಲ್ಲಿ ಕನ್ನಡ ಬಳಸಲು ವಿಸ್ಮಯ ನಗರಿಯ ಜೊತೆಗೆ ಇನ್ನೆರಡು ಹೊಸ ಕಾರಣಗಳಿವೆ. ಇನ್ನೆರಡು ಕನ್ನಡ ತಾಣಗಳನ್ನು ಸಹೃದಯಿಗಳಾದ ನಿಮಗೆ ಅರ್ಪಿಸುತ್ತಿದ್ದೇನೆ.

ವಿಸ್ಮಯ ನಗರಿಗೆ ನೀಡಿದಂತೆ ಈ ತಾಣಗಳಿಗೂ ಬೆಂಬಲ ಸಿಕ್ಕೀತು ಎಂಬುದು ನನ್ನ ನಂಬಿಕೆ.

ತಾಣಗಳು ಹೀಗಿವೆ.

ವಿಸ್ಮಯ ಸೂಚನಾ ಫಲಕ

ಇನ್ನೆರಡು ಕನ್ನಡ ತಾಣಗಳು ನಿಮ್ಮ ವಿಸ್ಮಯ ಸಾಫ್ಟವೇರ್ ಅವರಿಂದ

ವಿಸ್ಮಯ ಕೀಲಿಮಣೆ - ಕನ್ನಡ ಟೈಪಿಂಗ್ ತಾಣ - www.vismayakeelimane.com

ವಿಸ್ಮಯ ಢಂಗುರ - ಕನ್ನಡ ಕ್ಲಾಸಿಫೈಡ್ ತಾಣ - www.vismayadangura.com

ಇಂದೆ ಭೇಟಿ ಕೊಡಿ.

8713 ಲೇಖನಗಳು, ಚಿತ್ರಗಳು
ನಿಮ್ಮ ಅನುಭವ, ಭಾವನೆ, ಜ್ಞಾನವನ್ನು ಹಂಚಿಕೊಳ್ಳಿ. ವಿಸ್ಮಯ ನಗರಿಯಲ್ಲಿ ಬರೆಯುವದರ ಮೂಲಕ. ಬರೆಯುವ ಮೊದಲು ವಿಸ್ಮಯ ನಗರಿ ಲೇಖನ ಬರೆಯಲು ನಿಯಮಗಳು ಓದಲು ಮರೆಯದಿರಿ.
ವಿಸ್ಮಯ ಹಾಸ್ಯ
ವಿಸ್ಮಯ ಸಮೀಕ್ಷೆ
ನೀವು ಅಮೀರ್ ಖಾನ್ ಅವರ ಸತ್ಯಮೇವ ಜಯತೆ ಕಾರ್ಯಕ್ರಮ ನೋಡಿದ್ದೀರಾ?:
ವಿಸ್ಮಯ ನಗರಿ ಹೆಬ್ಬಾಗಿಲು
ವಿಸ್ಮಯ ವಿಮರ್ಶೆ
ವಿಸ್ಮಯ ಕವನ
ವಿಸ್ಮಯ ಸಂದೇಶಗಳು

ವಿಸ್ಮಯ ಪ್ರಜೆಗಳು ಪ್ರಪಂಚಾದ್ಯಂತ ಕನ್ನಡಿಗರಿಗೆ ಕಳುಹಿಸಿರುವ ಸಂದೇಶಗಳು ಇಲ್ಲಿವೆ. ಓದಿ. ನೀವೂ ಕೂಡಾ ಸಂದೇಶಗಳನ್ನು ಬರೆಯಬಹುದು.

  • ಜಯ ಕರ್ನಾಟಕ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ... ಜೈ ಭುವನೇಶ್ವರಿ .......
  • ಕನ್ನಡವೇ ಸತ್ಯಾ ಕನ್ನಡವೇ ನಿತ್ಯಾ
  • ಹೌದು ಬದುಕಲ್ಲಿ ಕಾಯುತ್ತಾ ಕೂತರೆ ಏನೂ ದಕ್ಕಿಸಿಕೊಳ್ಳೂಕ್ಕಾಗಲ್ಲ ನಮ್ಮಿಷ್ಟದಂತೆ ಬದುಕಬೇಕು ಅನ್ನೋ ಆಸೆ ಇರೋರು ಅದನ್ನ ಛಲದಿಂದ ಹುಡುಕಿ ಹಿಡುಕೋಬೇಕು . ನಿಮ್ಮ ದಾರಿ ಸ್ವಷ್ಟವಾಗಿದೆ.
  • ಕನ್ನಡವೇ ಸತ್ಯ-ನಿತ್ಯ...........
  • **************
  • ನಮಗೆ ಎನು ಇಗ ಎದಿಯೊ ಅದರೆಲ್ಲೆ ಸ೦ತೊಶ ಕನಬೆಕು.ನಮಗೆ ಎನು ಎಲ್ಲಒ ಅದನ್ನು ನೆನಿಸಿಕೊ೦ದು ದು೦ಕ್ಕ ಪದಭಾರದು.ನುವು ವಗಲೆ ಸ೦ಥಶದಿ೦ದ ಎರಬಉದು.
  • ನಮಗೆ ಎನು ಇಗ ಎದಿಯೊ ಅದರೆಲ್ಲೆ ಸ೦ತೊಶ ಕನಬೆಕು.ನಮಗೆ ಎನು ಎಲ್ಲಒ ಅದನ್ನು ನೆನಿಸಿಕೊ೦ದು ದು೦ಕ್ಕ ಪದಭಾರದು.ಅವಗಲೆ ಸ೦ಥಶದಿ೦ದ ಎರಬಉದು.
ವಿಸ್ಮಯ ನಗರಿ ತಾಣದಲ್ಲಿ ಎಲ್ಲ ಕಡೆ ನೇರ ಕನ್ನಡ ಟೈಪಿಂಗ್ ಸೌಲಭ್ಯ ಇದೆ. ಇದಕ್ಕೆ F9 ಕೀಲಿ ಒತ್ತಿ ಅಥವಾ ಕನ್ನಡ ಟೈಪಿಂಗ್ ಅನ್ನು ಡ್ರಾಪ್ ಡೌನ್ ಅಲ್ಲಿ ಆಯ್ಕೆ ಮಾಡಿ. ವಿಸ್ಮಯ ಕೀಲಿಮಣೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿ.
ವಿಸ್ಮಯ ಹುಡುಕಾಟ
ವಿಸ್ಮಯ ಜಾಹೀರಾತು
ವಿಸ್ಮಯ ಸಹಾಯ